Horoscope Today: ದಿನ ಭವಿಷ್ಯ ಫೆಬ್ರವರಿ 26- ಈ ರಾಶಿಗೆ ಪರಶಿವನ ಕೃಪೆಯಿಂದ ಇಷ್ಟಾರ್ಥ ಪ್ರಾಪ್ತಿ

ಫೆಬ್ರವರಿ 26 ಮಹಾಶಿವರಾತ್ರಿ ಆಚರಿಸಲಾಗುತ್ತದೆ. ಈ ದಿನ ಶುಭ ಯೋಗಗಳು ರೂಪಗೊಳ್ಳುತ್ತವೆ. ಈ ಯೋಗಗಳ ಶುಭ ಫಲದಿಂದಾಗಿ ಕೆಲ ರಾಶಿಯವರಿಗೆ ವ್ಯವಹಾರ, ಉದ್ಯೋಗ, ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಕೆಲ ರಾಶಿಗಳು ಈ ದಿನದ ಅದೃಷ್ಟ ರಾಶಿಗಳಾಗಿವೆ. ಹಾಗಾದರೆ ಈ ದಿನ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.

ಮೇಷ ರಾಶಿ

ಫೆಬ್ರವರಿ 26 ಮಹಾಶಿವರಾತ್ರಿ ಮೇಷ ರಾಶಿಯವರಿಗೆ ಉತ್ತಮ ಫಲ ನೀಡಲಿದೆ. ಗ್ರಹಗಳ ಸ್ಥಾನ ಉತ್ತಮವಾಗಿದ್ದು ಸಕಲೈಶ್ವರ್ಯ ಪ್ರಾಪ್ತಿಯಾಗಲಿದೆ. ಬುದ್ಧಿವಂತಿಕೆಯಿಂದ ಮಾಡಿದ ಕೆಲಸ ಸದಾ ನಿಮ್ಮ ಕೈ ಹಿಡಿಯಲಿದೆ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ಈ ದಿನ ಉಪವಾಸವನ್ನು ಮಾಡಿ ಶಿವನ ಆರಾಧನೆ ಮಾಡಿ.

Daily horoscope february 26th know today predictions for 12 zodiac signs

ವೃಷಭ ರಾಶಿ

ವೃಷಭ ರಾಶಿಯವರಿಗೆ ಈ ದಿನ ಉತ್ತಮವಾಗಿದೆ. ಈ ದಿನ ನೀವು ಆರ್ಥಿಕ ಅಪಾಯಗಳನ್ನು ತೆಗೆದುಕೊಳ್ಳಬಾರದು. ಪರಶಿವನ ಆಶೀರ್ವಾದದಿಂದ ರಾಜಕೀಯ ಆಕಾಂಕ್ಷೆಗಳು ಈಡೇರುತ್ತವೆ. ಸಂಬಂಧಗಳಲ್ಲಿ ಸಂತೋಷ ನೆಲೆಸಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರಯತ್ನಗಳು ಫಲಪ್ರದವಾಗುತ್ತವೆ. ಈ ದಿನ ಬಡವನಿಗೆ ಬಟ್ಟೆ ದಾನ ಮಾಡಿ. ಇದು ಶಿವ ಮೆಚ್ಚುಗೆಯನ್ನು ಪಡೆಯುತ್ತದೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಫೆಬ್ರವರಿ 26 ಮಹಾಶಿವರಾತ್ರಿಯಂದು ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಹಣದ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಸ್ನೇಹ ಸಂಬಂಧಗಳು ಗಾಢವಾಗುತ್ತವೆ. ದಾಂಪತ್ಯ ಜೀವನದಲ್ಲಿ ಸಂತೋಷ ನೆಲೆಸಲಿದೆ. ನಿಮ್ಮ ಎಲ್ಲಾ ಕಷ್ಟ ಸಮಯದಲ್ಲೂ ಸಂಗಾತಿಯಿಂದ ಸಹಕಾರ ಸಿಗಲಿದೆ.

ಕರ್ಕಾಟಕ ರಾಶಿ

ಫೆಬ್ರವರಿ 26 ಮಹಾಶಿವರಾತ್ರಿಯಂದು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಈ ದಿನ ರೂಪಗೊಳ್ಳುವ ಶಶ ಹಾಗೂ ಮಾಲವ್ಯ ಯೋಗಗಳು ನಿಮಗೆ ಉತ್ತಮ ಫಲ ನೀಡುತ್ತವೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಸಮಾಜದಲ್ಲಿ ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಆಹ್ಲಾದಕರ ಪ್ರಯಾಣಕ್ಕೆ ಅವಕಾಶಗಳು ದೊರೆಯುತ್ತವೆ. ಆಸ್ತಿ ವಿಷಯಗಳಲ್ಲಿ ಒತ್ತಡ ದೂರವಾಗಲಿದೆ.

ಸಿಂಹ ರಾಶಿ

ಈ ದಿನ ನಿಮ್ಮ ಮಾತನ್ನು ನಿಯಂತ್ರಿಸಿ. ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಿಸಲಿದೆ. ಸಾಲಗಳಿಂದ ಮುಕ್ತರಾಗುವಿರಿ. ಪರಶಿವನ ದೆಸೆಯಿಂದ ಮತ್ತೊಬ್ಬರಿಗೆ ನೀವು ಸಾಲ ನೀಡುವಂತಾಗುವಿರಿ. ಉದ್ಯೋಗದಲ್ಲಿ ಅನುಕೂಲಕರ ವಾತಾವರಣ ಇರಲಿದೆ. ಇಂದು 'ಓಂ ನಮ: ಶಿವಾಯ್' ಎಂದು ಜಪಿಸಿ. ಇದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಫೆಬ್ರವರಿ 26 ಒತ್ತಡದಿಂದ ದೂರವಾಗುವ ದಿನ. ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳು ಇಂದು ದೂರವಾಗಲಿದೆ. ಆರ್ಥಿಕ ವಿಷಯಗಳಲ್ಲಿ ಸುಧಾರಣೆ ಕಂಡುಬರಲಿದೆ. ದಾಂಪತ್ಯ ಜೀವನದಲ್ಲಿ ಮನಸ್ತಾಪ ದೂರವಾಗಲಿದೆ. ಆರ್ಥಿಕ ಜೀವನ ಉತ್ತಮ ಸ್ಥಿತಿಯಲ್ಲಿ ಇರುತ್ತದೆ.

ತುಲಾ ರಾಶಿ

ತುಲಾ ರಾಶಿಯವರು ಫೆಬ್ರವರಿ 26ರಂದು ವ್ಯವಹಾರದಲ್ಲಿ ಯಶಸ್ಸು ಕಾಣುವಿರಿ. ಈ ದಿನ ಮಾಡುವ ಉಪವಾಸ ಪರಶಿವನನ್ನು ಮೆಚ್ಚಿಸಲಿದೆ. ನಿಮ್ಮ ಎಲ್ಲಾ ಒತ್ತಡ ದೂರವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಅನಗತ್ಯವಾಗಿ ಓಡಾಡಬೇಕಾಗಬಹುದು. ಎಲ್ಲಾ ಕೆಟ್ಟ ಚಟಗಳಿಂದ ಮುಕ್ತರಾಗುವಿರಿ.

ವೃಶ್ಚಿಕ ರಾಶಿ

ಫೆಬ್ರವರಿ 26 ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲವನ್ನು ನೀಡುತ್ತದೆ. ಈ ದಿನ ಮಾಡಿದ ಸಾಮಾಜಮುಖಿ ಕಾರ್ಯಗಳು ನಿಮ್ಮನ್ನು ಕೊನೆಯವರೆಗೂ ಕೈ ಹಿಡಿಯಲಿವೆ. ಜಾತಕದಲ್ಲಿ ಗ್ರಹಗಳ ಸ್ಥಾನ ಅದ್ಭುತವಾಗಿದೆ. ಹೀಗಾಗಿ ಈ ದಿನ ವ್ಯವಹಾರ ಹಾಗೂ ವ್ಯಪಾರದಲ್ಲಿ ಲಾಭ ಸಿಗುವುದು. ಸಾಮಾಜಿಕ ಕಾರ್ಯಗಳಲ್ಲಿ ಪ್ರಗತಿ ಕಂಡುಬರಲಿದೆ.

ಧನು ರಾಶಿ

ಧನು ರಾಶಿಯವರಿಗೆ ಮಹಾಶಿವರಾತ್ರಿ ಉತ್ತಮ ಫಲಗಳನ್ನು ನೀಡಲಿದೆ. ಫೆಬ್ರವರಿ 26ರಂದು ಜಾತಕದಲ್ಲಿ ಗ್ರಹಗಳು ಸ್ಥಾನ ಉತ್ತಮವಾಗಿದೆ. ಎಲ್ಲಾ ಕೆಲಸದಲ್ಲಿ ನೀವಂದುಕೊಂಡ ಫಲ ಸಿಗಲಿದೆ. ಮೇಲಾಧಿಕಾರಿಯ ಮೆಚ್ಚುಗೆಯನ್ನು ನೀವು ಪಡೆಯುವಿರಿ. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ.

ಮಕರ ರಾಶಿ

ಮಕರ ರಾಶಿಯವರಿಗೆ ಈ ದಿನ ಅದ್ಭುತವಾಗಿದೆ. ಮಹಾಶಿವರಾತ್ರಿಯ ಈ ದಿನ ನಿಮ್ಮ ಮೇಲೆ ಪರಶಿವನ ಕೃಪೆ ಇರಲಿದೆ. ಇಂದು ಎಲ್ಲಾ ಸಮಸ್ಯೆಗಳ ನಿವಾರಣೆಗೆಂದು ಉಪವಾಸ ಮಾಡುವುದು ಉತ್ತಮ ಫಲ ನೀಡಲಿದೆ. ವ್ಯಾಪಾರ, ವ್ಯವಹಾರ ಪ್ರಗತಿಗಾಗಿ ಪ್ರಾರ್ಥನೆ ಶಿವನ ಮಾಡಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಈ ದಿನ ತುಂಬಾ ಉತ್ತಮವಾಗಿದೆ. ಮಹಾಶಿವರಾತ್ರಿಯಂದು ನೀವು ಮಾಡುವ ಉತ್ತಮ ಕಾರ್ಯಗಳು ಸದಾ ನಿಮ್ಮನ್ನು ಕಾಪಾಡಲಿವೆ. ಈ ದಿನ ಉದ್ಯೋಗದಲ್ಲಿ ಪ್ರಗತಿ, ಆತ್ಮವಿಶ್ವಾಸ ಹೆಚ್ಚಾಗಲಿದೆ. ಬುದ್ಧಿವಂತಿಕೆಯಿಂದ ಮಾಡಿದ ಕೆಲಸ ಪೂರ್ಣಗೊಳ್ಳುತ್ತದೆ. ಕೌಟುಂಬಿಕ ಒತ್ತಡ ದೂರವಾಗಲಿದೆ. ಸಂಬಂಧಗಳಲ್ಲಿ ಆತ್ಮೀಯತೆ ಇರಲಿದೆ. ಈ ದಿನ ಶಿವನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದರೆ ತುಂಬಾ ಒಳ್ಳೆಯದು.

ಮೀನ ರಾಶಿ

ಮೀನ ರಾಶಿಯವರಿಗೆ ಫೆಬ್ರವರಿ 26 ಶಿವರಾತ್ರಿಯಂದು ಪರಶಿವನ ಆಶೀರ್ವಾದ ಪ್ರಾಪ್ತಿಯಾಗಲಿದೆ. ನಿಮ್ಮ ಸನ್ನಡತೆ, ಸದ್ಗುಣ ಪರಶಿವನನ್ನು ಮೆಚ್ಚಿಸಲಿದೆ. ಶಿವರಾತ್ರಿಯಂದು ಗ್ರಹಗಳ ಸ್ಥಾನ ನಿಮಗೆ ಅನುಕೂಲವಾಗಿವೆ. ಈ ದಿನ ನೀವು ಮಾಡುವ ಶಿವನ ಧ್ಯಾನ, ಆರಾಧನೆ ನಿಮ್ಮನ್ನು ಎಲ್ಲಾ ಸಂದರ್ಭದಲ್ಲೂ ಕೈಹಿಡಿಯಲಿದೆ. ವ್ಯವಹಾರ ಖ್ಯಾತಿ, ಆರ್ಥಿಕ ಅಭಿವೃದ್ಧಿ ಕಂಡು ಬರಲಿದೆ. ಈ ದಿನ ಉಪವಾಸ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳು ಸಿಗಲಿದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+