Horoscope Today: ದಿನ ಭವಿಷ್ಯ ಮಾರ್ಚ್ 26- ಈ ರಾಶಿಗೆ ವಿಘ್ನವಿನಾಯಕನ ಅನುಗ್ರಹದಿಂದ ಸಕಲ ಇಷ್ಟಾರ್ಥ ಸಿದ್ಧಿ
ಮಾರ್ಚ್ 26 ಬುಧವಾರ ಚೈತ್ರ ಮಾಸದ ದ್ವಾದಶಿ ತಿಥಿ. ಈ ದಿನ ವಿಘ್ನವಿನಾಯಕನನ್ನು ಪೂಜಿಸಲಾಗುತ್ತದೆ. ರಾಹುಕಾಲ ಮಧ್ಯಾಹ್ನ 1:55 ರಿಂದ ಮಧ್ಯಾಹ್ನ 3:26ರವರೆಗೆ ಇದೆ. ಈ ದಿನ ಸಿದ್ಧಿ ಯೋಗ ಸೇರಿದಂತೆ ಅನೇಕ ಶುಭ ಯೋಗಗಳು ರೂಪಗೊಳ್ಳುತ್ತವೆ. ಇದರಿಂದಾಗಿ ಕೆಲ ರಾಶಿಯವರಿಗೆ ಬಡ್ತಿ, ಉದ್ಯೋಗ ಅಥವಾ ಆರ್ಥಿಕ ಲಾಭದ ಅವಕಾಶ ಸಿಗಬಹುದು. ಹಾಗಾದರೆ ಈ ದಿನ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.
ಮೇಷ ರಾಶಿ
ನಿಮ್ಮ ಮನೆಗೆ ಬಡವರು, ಭಿಕ್ಷುಕರು ಬಂದರೆ ಬರಿಗೈಯಲ್ಲಿ ಕಳುಹಿಸಬೇಡಿ. ಯಾರನ್ನಾದರು ಅವಮಾನಿಸುವುದು ನಿಮಗೆ ಶುಭವಲ್ಲ. ನಿಮ್ಮ ಜೀವನದಲ್ಲಿ ಎಲ್ಲಾ ಸಮಸ್ಯೆಗಳು ದೂರವಾಗಲಿವೆ. ಆದರೆ ಅದು ನೀವು ಮಾಡುವ ಪೂಣ್ಯದ ಕಾರ್ಯಗಳಿಂದ ಮಾತ್ರ ಸಾಧ್ಯ. ಹೀಗಾಗಿ ಧಾರ್ಮಿಕ ಕಾರ್ಯಗಳಲ್ಲಿ, ದೇವಸ್ಥಾನ ನಿರ್ಮಾಣ, ದಾನ ಮಾಡುವಂತಹ ಶುಭ ಕಾರ್ಯಗಳಲ್ಲಿ ಭಾಗಿಯಾಗುವುದು ಶುಭ ಫಲವನ್ನು ನೀಡಲಿದೆ.

ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಮಾರ್ಚ್ 26 ಹೊಸ ಆರಂಭ ಮಾಡಲು ಸರಿಯಾದ ಸಮಯವಾಗಿದೆ. ನೀವು ಹೊಸ ವ್ಯವಹಾರ ಅಥವಾ ಯೋಜನೆಯನ್ನು ಪ್ರಾರಂಭಿಸಲು ಬಯಸಿದರೆ ಈ ಸಮಯ ನಿಮಗೆ ತುಂಬಾ ಒಳ್ಳೆಯದಾಗಿರುತ್ತದೆ. ಈ ದಿನ ನಿಮಗೆ ಹಣಕಾಸಿನ ಲಾಭದ ಸೂಚನೆಗಳಿವೆ. ಹಳೆಯ ಹೂಡಿಕೆಗಳು ಸಹ ಪ್ರಯೋಜನಗಳನ್ನು ನೀಡಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುವುದು. ಸಂಬಂಧಗಳು ಸಿಹಿಯಾಗುತ್ತವೆ.
ಮಿಥುನ ರಾಶಿ
ಕೆಲಸದಲ್ಲಿ ನಿಮ್ಮ ಗಮನ ಬೇರೆಡೆ ಸೆಳೆಯುವ ವ್ಯಕ್ತಿಗಳಿಂದ ದೂರವಿರಿ. ನಿಮ್ಮ ಮನಸ್ಸು ಚಂಚಲಗೊಳ್ಳದಂತೆ ನೋಡಿಕೊಳ್ಳಿ. ಶತ್ರುಕಾಟದಿಂದ ಮೇಲಾಧಿಕಾರಿಗಳು ನಿಮ್ಮ ಮೇಲೆ ಕೋಪಗೊಳ್ಳಬಹುದು. ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಕೆಲಸದ ಪ್ರದೇಶವನ್ನು ವಿಸ್ತರಿಸಲು ಮಾಡಿದ ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ.
ಕರ್ಕಾಟಕ ರಾಶಿ
ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಮೋಸ ಹೋಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನಿಮ್ಮ ತಂದೆಯಿಂದ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಲಹೆಯನ್ನು ಪಡೆಯಿರಿ. ಕುಟುಂಬ ಜೀವನ ಸಂತೋಷದಿಂದ ಕೂಡಿರುತ್ತದೆ. ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಬಹುನಿರೀಕ್ಷಿತ ಕೆಲಸಗಳು ಪೂರ್ಣಗೊಳ್ಳುತ್ತವೆ.
ಸಿಂಹ ರಾಶಿ
ಮಾರ್ಚ್ 26 ಸಿಂಹ ರಾಶಿಯ ಜನರಿಗೆ ಯಶಸ್ಸಿನ ದಿನವಾಗಿದೆ. ನೀವು ಉದ್ಯೋಗದಲ್ಲಿದ್ದರೆ ಬಡ್ತಿ ಅಥವಾ ಸಂಬಳ ಹೆಚ್ಚಳದ ಸಾಧ್ಯತೆಗಳಿವೆ. ವ್ಯಾಪಾರ ಮಾಡುವವರು ಹೊಸ ಗ್ರಾಹಕರನ್ನು ಪಡೆಯಬಹುದು. ಅದು ಅವರ ಲಾಭವನ್ನು ಹೆಚ್ಚಿಸುತ್ತದೆ. ಈ ದಿನ ಮಾಡಿದ ಕಠಿಣ ಪರಿಶ್ರಮ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಅದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ನಿಮ್ಮ ಸಂಬಂಧಿಕರಿಂದ ನಿಮಗೆ ಒಳ್ಳೆಯ ಸುದ್ದಿ ಬರಬಹುದು. ನಿಮ್ಮ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳುವಿರಿ. ನಿಮ್ಮಿಂದ ಕುಟುಂಬಸ್ಥರು ಸಂತೋಷದಿಂದ ಇರುತ್ತಾರೆ. ನಿಮ್ಮ ಕೆಲಸಗಳಿಗೆ ತಕ್ಕ ಪ್ರತಿಫಲ ಸಿಗಲಿದೆ.
ಕನ್ಯಾ ರಾಶಿ
ಕುಟುಂಬ ಜೀವನದಲ್ಲಿ ಒತ್ತಡ ಉಂಟಾಗಲಿದೆ. ಹಣಕಾಸಿನ ವಿಷಯಗಳಲ್ಲಿ ಅಪಾಯಗಳನ್ನು ತೆಗೆದುಕೊಳ್ಳಬೇಡಿ. ವಿರೋಧಿಗಳು ಸೋಲುತ್ತಾರೆ. ನಿಮ್ಮ ಮಕ್ಕಳ ಕಾರಣದಿಂದಾಗಿ ನೀವು ಚಿಂತೆ ಮಾಡುತ್ತಲೇ ಇರುತ್ತೀರಿ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ತುಲಾ ರಾಶಿ
ವ್ಯಾಪಾರ ಚಟುವಟಿಕೆಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಇರುತ್ತದೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ನಿಮ್ಮ ಸಂಬಂಧಿಕರಿಂದ ನೀವು ಒತ್ತಡವನ್ನು ಎದುರಿಸಬಹುದು. ತಪ್ಪು ನಿರ್ಧಾರ ನೋವಿನಿಂದ ಕೂಡಿರುತ್ತದೆ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಬಿಳಿ ಬಟ್ಟೆಗಳನ್ನು ದಾನ ಮಾಡಿ.
ಈ ದಿನ ನಿಮ್ಮ ಉದ್ಯೋಗ ಸ್ಥಳದಲ್ಲಿ ನಿಮಗೆ ಒಂದು ವಿಶೇಷವಾದ ಅವಕಾಶ ಕಾದಿದೆ. ನಿಮ್ಮ ಶತ್ರುಗಳು ನಿಮ್ಮ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ. ನಿಮ್ಮ ಎಲ್ಲಾ ಕೆಲಸಗಳು ಅವರಿಂದ ಪೂರ್ಣಗೊಳ್ಳುತ್ತವೆ. ನಿಮ್ಮದೇ ಆದ ಆದಾಯದ ಹೊಸ ಉದ್ಯೋಗವನ್ನು ನೀವು ಆರಂಭಿಸಬಹುದು. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರದ ದಿನ ಇದಾಗಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ದಿನ ತುಂಬಾ ಶುಭವಾಗಿರಲಿದೆ. ಅದೃಷ್ಟ ಸಂಪೂರ್ಣವಾಗಿ ನಿಮ್ಮ ಕಡೆ ಇರುತ್ತದೆ. ಪೂರ್ಣಗೊಳ್ಳದ ಕೆಲಸಗಳು ಬೇಗನೆ ಪೂರ್ಣಗೊಳ್ಳುತ್ತವೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ವ್ಯವಹಾರದಲ್ಲಿ ನಿಮಗೆ ಹೊಸ ಅವಕಾಶಗಳು ಸಿಗಲಿವೆ. ನೀವು ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ಈ ದಿನ ನಿಮಗೆ ಪ್ರಯೋಜನಕಾರಿಯಾಗಲಿದೆ. ಕುಟುಂಬ ಜೀವನದಲ್ಲಿಯೂ ಸಂತೋಷ ಇರುವುದು.
ಧನು ರಾಶಿ
ಧನು ರಾಶಿಯವರಿಗೆ ತಮ್ಮ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಸಿಗಲಿವೆ. ಉದ್ಯೋಗ ಹುಡುಕುತ್ತಿರುವವರಿಗೆ ಈ ದಿನ ಕೆಲವು ಒಳ್ಳೆಯ ಸುದ್ದಿಗಳು ಬರಲಿದೆ. ವ್ಯಾಪಾರ ಮಾಡುವವರಿಗೂ ಸಹ ಭಾರಿ ಲಾಭದ ಸಾಧ್ಯತೆಗಳಿವೆ. ಅಲ್ಲದೆ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳುವುದು. ನಿಮ್ಮ ಪ್ರೀತಿಯ ಜೀವನವೂ ಸುಧಾರಿಸುತ್ತದೆ. ಈ ದಿನ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ.
ಮಕರ ರಾಶಿ
ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ನೀವು ನಿಮ್ಮ ಮಾತನ್ನು ನಿಯಂತ್ರಿಸಬೇಕಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ದೈಹಿಕ ತೊಂದರೆ ಉಂಟಾಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ಗಂಡ-ಹೆಂಡತಿಯ ಸಂಬಂಧದಲ್ಲಿ ಮನಸ್ತಾಪಗಳು ಉಂಟಾದರೆ ಎಚ್ಚರಿಕೆಯಿಂದ ಇರಿ.
ಕುಂಭ ರಾಶಿ
ಮಾರ್ಚ್ 26 ಕುಂಭ ರಾಶಿಯವರಿಗೆ ಪ್ರಗತಿಯ ಹೊಸ ಮಾರ್ಗಗಳು ತೆರೆಯುತ್ತದೆ. ಉದ್ಯೋಗಿಗಳಿಗೆ ಬಡ್ತಿ ಅಥವಾ ಹೊಸ ಉದ್ಯೋಗಗಳಿಗೆ ಉತ್ತಮ ಕೊಡುಗೆಗಳು ಸಿಗಬಹುದು. ವ್ಯವಹಾರದಲ್ಲಿ ಹೊಸ ಪಾಲುದಾರಿಕೆಗಳ ಸಾಧ್ಯತೆಗಳಿವೆ. ಅದು ಭವಿಷ್ಯದಲ್ಲಿ ಪ್ರಯೋಜನಗಳನ್ನು ತರುತ್ತದೆ. ಈ ದಿನ ಹೊಸ ಯೋಜನೆಗಳಲ್ಲಿ ಕೆಲಸ ಮಾಡುವುದರಿಂದ ಯಶಸ್ಸು ಸಿಗುವ ಸಾಧ್ಯತೆ ಇದೆ.
ಮೀನ ರಾಶಿ
ಆಧ್ಯಾತ್ಮಿಕ ಪ್ರಯಾಣಕ್ಕೆ ಅವಕಾಶ ಸಿಗಲಿದೆ. ದೇವರ ಆರಾಧನೆ ನಿಮ್ಮ ಮನಸ್ಸಿಗೆ ನೆಮ್ಮದಿ ನೀಡಲಿದೆ. ಪ್ರವಾಸದ ಸಾಧ್ಯತೆ ಇದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಆರೋಗ್ಯದ ಬಗ್ಗೆ ಜಾಗೃತರಾಗಿರುವುದು ಅಗತ್ಯ. ನಿಮ್ಮ ನೆರೆಹೊರೆಯವರೊಂದಿಗೆ ಜಗಳವಾಡಬೇಡಿ ಅಥವಾ ವಾದ ಮಾಡಬೇಡಿ. ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications