Horoscope Today: ದಿನ ಭವಿಷ್ಯ ಮಾರ್ಚ್ 23- ಈ ರಾಶಿಯ ಕಷ್ಟಗಳಿಗೆ ಪರಿಹಾರ ಸಿಗುವುದು ಖಚಿತ

ಮಾರ್ಚ್ 23 ಕೆಲವು ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಈ ಸಮಯದಲ್ಲಿ ಗ್ರಹಗಳ ಚಲನೆಯು ಕೆಲ ರಾಶಿಗಳಿಗೆ ಶುಭ ತರುತ್ತದೆ. ಇದರಿಂದಾಗಿ ವೃತ್ತಿ ಅವಕಾಶಗಳು, ಸಂಪತ್ತು ಮತ್ತು ವೈಯಕ್ತಿಕ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. ಕೆಲವರಿಗೆ ಹೊಸ ಕೆಲಸ ಅಥವಾ ಬಡ್ತಿ ಸಿಗಬಹುದು. ಇನ್ನು ಕೆಲವರಿಗೆ ಹಣ ಮರಳಿ ಸಿಗುವ ಸಾಧ್ಯತೆ ಇದೆ. ವ್ಯವಹಾರ, ಪ್ರೀತಿ ಮತ್ತು ಕುಟುಂಬ ಜೀವನದಲ್ಲೂ ಉತ್ತಮ ಬದಲಾವಣೆಗಳು ಕಂಡುಬರುತ್ತವೆ. ಈ ದಿನ ರಾಹುಕಾಲ ಸಂಜೆ 4:58 ರಿಂದ ಸಂಜೆ 6:30ರವರೆಗೆ ಇರುತ್ತದೆ. ಈ ದಿನ ಯಾವ ರಾಶಿಯವರ ಮೇಲೆ ಸೂರ್ಯದೇವನ ಆಶೀರ್ವಾದ ಇದೆ, 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.

ಮೇಷ ರಾಶಿ

ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ನಿಮ್ಮ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ನಿಮ್ಮ ಚಿಂತೆಗೆ ಪರಿಹಾರ ಸಿಗಲಿದೆ. ಮಕ್ಕಳ ಬಗೆಗಿನ ಜವಾಬ್ದಾರಿ ಕಡಿಮೆಯಾಗುವುದು. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ. ಸಂಬಂಧಿಕರು ಸ್ನೇಹಿತರೊಂದಿಗೆ ಈ ದಿನವನ್ನು ಆನಂದಿಸುವರು. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಇಂದು ಪರಿಹಾರ ಸಿಗಲಿದೆ.

astrology dina bhavishya march 23 12 zodiac signs today prediction

ವೃಷಭ ರಾಶಿ

ಶುಭ ಅಥವಾ ಮದುವೆ ಕಾರ್ಯಕ್ರಮಗಳು ಮನೆಯಲ್ಲಿ ನಡೆಯಲಿವೆ. ನಿಮ್ಮ ಸಂಗಾತಿಯಿಂದ ನಿಮಗೆ ಹಣದ ಬೆಂಬಲ ಸಿಗುತ್ತದೆ. ನಿಮ್ಮ ಕೆಲಸದಲ್ಲಿ ನಿಮ್ಮ ಹೆಸರು ಎಲ್ಲಡೆ ಹರಡಲಿದೆ. ನಿಮ್ಮ ಕೆಲಸದ ಬಗ್ಗೆ ಪ್ರಶಂಸೆ ವ್ಯಕ್ತವಾಗಲಿದೆ. ಮನೆ ಖರೀದಿ ಮಾಡುವ ಕನಸು ನನಸಾಗಲಿದೆ. ನಿಮ್ಮ ನಿರ್ಧಾರಗಳಿಗೆ ಕುಟುಂಬ ಹಾಗೂ ಸಂಗಾತಿಯ ಸಹಕಾರ ಇರುತ್ತದೆ.

ಮಿಥುನ ರಾಶಿ

ಬುದ್ಧಿಮತ್ತೆಯಿಂದ ಮಾಡಿದ ಕೆಲಸ ಪೂರ್ಣಗೊಳ್ಳುತ್ತದೆ. ಸರ್ಕಾರದಿಂದ ಬೆಂಬಲ ದೊರೆಯಲಿದೆ. ಮಕ್ಕಳ ಬಗೆಗಿನ ಜವಾಬ್ದಾರಿ ಪೂರ್ಣಗೊಳ್ಳುತ್ತದೆ. ಹೆಚ್ಚಿನ ಶ್ರಮ ಇರುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹಸುವಿಗೆ ಹಸಿರು ಮೇವು ಅಥವಾ ಆಹಾರವನ್ನು ನೀಡಿ. ಇಂದು ಸೂರ್ಯ ಮಂತ್ರವನ್ನು ಪಠಿಸಿ.

ಕರ್ಕಾಟಕ ರಾಶಿ

ಈ ದಿನ ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸಿ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹೊರಗಿನ ಆಹಾರ ಸೇವನೆ ತಪ್ಪಿಸಿ. ನಿಮ್ಮ ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗಲು ಹೆಚ್ಚು ಶ್ರಮಿಸಬೇಕು. ಕೆಲಸದಲ್ಲಿ ಉನ್ನತ ಅಧಿಕಾರಿಗಳು ನಿಮ್ಮನ್ನು ವರ್ಗಾವಣೆ ಮಾಡಬಹುದು. ಮನೆಯಲ್ಲಿ ಅಶಾಂತಿ ನೆಲೆಗೊಳ್ಳು ಸಾಧ್ಯತೆ ಇದೆ. ನೆರೆಹೊರೆಯವರಿಂದ ನೀವು ಒತ್ತಡವನ್ನು ಎದುರಿಸಬಹುದು.

ಸಿಂಹ ರಾಶಿ

ವಿರೋಧಿಗಳು ನಿಮ್ಮನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಸಂಗಾತಿಯಿಂದ ಒಳ್ಲೆಯ ಸುದ್ದಿ ಕೇಳಬಹುದು. ಶೈಕ್ಷಣಿಕ ಸ್ಪರ್ಧೆಯ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಉತ್ತಮ ಫಲ ನೀಡುತ್ತವೆ. ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸೂರ್ಯ ಮಂತ್ರವನ್ನು ಪಠಿಸಿ.

ಕನ್ಯಾ ರಾಶಿ

ಈ ದಿನ ನಿಮ್ಮ ಸಂಪತ್ತು ಮತ್ತು ಖ್ಯಾತಿಯಲ್ಲಿ ಹೆಚ್ಚಳವಾಗಲಿದೆ. ಬುದ್ಧಿವಂತಿಕೆಯಿಂದ ಮಾಡಿದ ಕೆಲಸ ಪೂರ್ಣಗೊಳ್ಳುತ್ತದೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ನಿಮ್ಮ ಕುಟುಂಬದಿಂದ ನಿಮಗೆ ಬೆಂಬಲ ಸಿಗುತ್ತದೆ. ಸರ್ಕಾರದಿಂದ ಬೆಂಬಲ ಸಿಗಲಿದೆ. ಈ ದಿನ ಸೂರ್ಯ ಮಂತ್ರವನ್ನು ಪಠಿಸಿ.

ತುಲಾ ರಾಶಿ

ಈ ದಿನ ತುಲಾ ರಾಶಿಯವರಿಗೆ ಶುಭವಾಗಿದೆ. ಕುಟುಂಬದ ಪ್ರತಿಷ್ಠೆ ಹೆಚ್ಚಾಗಲು ನೀವು ಶ್ರಮಿಸಬೇಕು. ಬಂಧು ಮಿತ್ರರೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ. ನಿಮ್ಮ ಮನಸ್ಸು ಪ್ರಸನ್ನವಾಗಿರುತ್ತದೆ. ವ್ಯವಹಾರದಲ್ಲಿ ವಿಸ್ತರಣೆ ಇರುತ್ತದೆ. ಸಂಗಾತಿಯೊಂದಿಗಿನ ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ಈ ದಿನ ಶನಿ ಮಂತ್ರವನ್ನು ಪಠಿಸಿ. ಬಡವರಿಗೆ ಅಕ್ಕಿಯನ್ನು ದಾನ ಮಾಡಿ.

ವೃಶ್ಚಿಕ ರಾಶಿ

ಈ ದಿನ ನಿಮ್ಮ ಆರ್ಥಿಕ ಜೀವನ ಸುಧಾರಿಸಲಿದೆ. ಮುಂಬರುವ ದಿನದಲ್ಲಿ ಹಣಕಾಸಿನ ತೊಂದರೆಗಳು ನಿಮಗಾಗುವುದಿಲ್ಲ. ಆರ್ಥಿಕ ಜೀವನ ಪ್ರಬಲವಾಗಿರುತ್ತದೆ. ನಿಮ್ಮ ಸಹೋದರ ಅಥವಾ ಸಹೋದರಿಯಿಂದ ನಿಮ್ಮ ಕೆಲಸದಲ್ಲಿ ಸಹಕಾರ ಇರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ತೋರಬೇಡಿ.

ಧನು ರಾಶಿ

ಧನು ರಾಶಿಯವರಿಗೆ ಈ ದಿನ ವ್ಯವಹಾರ ಖ್ಯಾತಿ ಹೆಚ್ಚಾಗುತ್ತದೆ. ಸಣ್ಣಪುಟ್ಟ ವಿಷಯಗಳಿಗೆ ವಾದ ಮಾಡಬೇಡಿ. ಪ್ರಗತಿಯ ಹಾದಿ ಸುಗಮವಾಗುತ್ತದೆ. ಕುಟುಂಬ ಜೀವನದಲ್ಲಿ ಒತ್ತಡ ಕಡಿಮೆ ಮಾಡಲು ತಾಳ್ಮೆಯಿಂದ ಇರಿ. ಸೃಜನಶೀಲ ಪ್ರಯತ್ನಗಳು ನಿಮ್ಮ ಕೈ ಹಿಡಿಯಲಿವೆ. ಈ ದಿನ ಸೂರ್ಯ ದೇವನನ್ನು ಪೂಜಿಸಿ.

ಮಕರ ರಾಶಿ

ಕುಟುಂಬ ಮತ್ತು ವ್ಯವಹಾರ ವಿಷಯಗಳಲ್ಲಿ ನೀವು ತುಂಬಾ ಬುದ್ಧಿವಂತರಾಗಿರುತ್ತೀರಿ. ಈ ದಿನ ಪ್ರವಾಸ ಕೈಗೊಳ್ಳಬಹುದು. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ನೀವು ಕಳೆಯುವಿರಿ. ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ಬೆಳಿಗ್ಗೆ ಸೂರ್ಯ ದೇವನನ್ನು ಪೂಜಿಸಿ. ಸಂಜೆ ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ.

ನಿಮ್ಮ ವೃತ್ತಿಜೀವನದಲ್ಲಿ ನಿಮಗೆ ದೊಡ್ಡ ಅವಕಾಶ ಸಿಗಬಹುದು ಮತ್ತು ಉದ್ಯೋಗಿಗಳಿಗೆ ಬಡ್ತಿ ಅಥವಾ ಸಂಬಳ ಹೆಚ್ಚಳದ ಒಳ್ಳೆಯ ಸುದ್ದಿ ಸಿಗಬಹುದು. ವ್ಯಾಪಾರ ಮಾಡುತ್ತಿರುವವರಿಗೆ ಹೊಸ ಗ್ರಾಹಕರು ಅಥವಾ ಒಪ್ಪಂದಗಳು ಸಿಗುವ ಸಾಧ್ಯತೆಯಿದೆ. ಇದಲ್ಲದೆ, ಕುಟುಂಬ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ ಮತ್ತು ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚಾಗುತ್ತದೆ.

ಕುಂಭ ರಾಶಿ

ಆರ್ಥಿಕ ವಿಷಯಗಳು ಸುಧಾರಿಸುತ್ತವೆ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಕುಟುಂಬ ಜೀವನ ಸಂತೋಷದಿಂದ ಕೂಡಿರುತ್ತದೆ. ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ಈ ದಿನ ಮಾಡಿದ ಪ್ರಯಾಣ ಅಥವಾ ಪ್ರವಾಸ ಆಹ್ಲಾದಕರವಾಗಿರುತ್ತದೆ. ಹಸಿದವರಿಗೆ ಆಹಾರ ನೀಡಿ. ಶನಿ ದೇವರನ್ನು ಪೂಜಿಸಿ. ಸಂಜೆ ಶನಿ ದೇವಸ್ಥಾನಕ್ಕೆ ಹೋಗಿ ಎಣ್ಣೆ ದೀಪ ಹಚ್ಚಿ.

ಮೀನ ರಾಶಿ

ಮೀನ ರಾಶಿಯವರಿಗೆ ಈ ದಿನ ಉತ್ತಮವಾಗಿದೆ. ನಿಮ್ಮವರಿಂದ ನಿಮಗೆ ಬೇಸರವಾಗುತ್ತದೆ. ನಿಮ್ಮ ಸ್ನೇಹಿತರಿಂದ ಸಹಕಾರ ಸಿಗುವುದಿಲ್ಲ. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹುಡುಕಲು ನಿಮಗೆ ಸಾಧ್ಯವಾಗುವುದಿಲ್ಲ. ಮನಸ್ಸು ಚಿಂತೆಗೊಳಗಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಹಸುಗಳ ಸೇವೆ ಮಾಡಿದರೆ, ನಿಮಗೆ ವಿಶೇಷ ಆಶೀರ್ವಾದಗಳು ಸಿಗುತ್ತವೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+