Horoscope Today: ದಿನ ಭವಿಷ್ಯ ಮಾರ್ಚ್ 11- ಈ ರಾಶಿಯವರಿಗೆ ಹನುಮನಂತೆ ಶಕ್ತಿ, ಸಂಪತ್ತಿನ ಸುಯೋಗ
ಮಾರ್ಚ್ 11 ಮಂಗಳವಾರ ವಿಶೇಷವಾಗಿದೆ. ಯಾವುದೇ ಶುಭ ಕೆಲಸ ಮಾಡದಿರುವ ಸಮಯ ಅಂದರೆ ರಾಹುಕಾಲದ ಸಮಯ ಮಧ್ಯಾಹ್ನ 3:29 ರಿಂದ ಸಂಜೆ 4:59ರವರೆಗೆ ಇರುತ್ತದೆ. ಈ ದಿನ ಕೆಲ ರಾಶಿಯವರಿಗೆ ಅದ್ಭುತವಾಗಿರುತ್ತದೆ. ಹಾಗಾದರೆ ಈ ದಿನ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.
ಮೇಷ ರಾಶಿ
ಮಾರ್ಚ್ 11 ಮಂಗಳವಾರ ಮೇಷ ರಾಶಿಯವರಿಗೆ ವಿಶೇಷವಾಗಿರುತ್ತದೆ. ಈ ದಿನ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಮನೆ ಬದಲಾವಣೆಯ ಸಾಧ್ಯತೆ ಇದೆ. ಸಂಬಂಧಗಳಲ್ಲಿ ಆತ್ಮೀಯತೆ ಹೆಚ್ಚಾಗಲಿದೆ. ದೇವರು ಹಾಗೂ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ. ಬೆಳಿಗ್ಗೆ ಹನುಮಾನ್ ಚಾಲೀಸ ಪಠಿಸಿ. ಸಂಕಷ್ಟಗಳ ನಿವಾರಣೆಗೆ ಶನಿ ದೇವರಿಗೆ ದೀಪವನ್ನು ಹಚ್ಚಿ ಭಕ್ತಿಯಿಂದ ಪ್ರಾರ್ಥನೆ ಮಾಡಿ.

ವೃಷಭ ರಾಶಿ
ವೃಷಭ ರಾಶಿಯವರು ದೈರ್ಯಶಾಲಿಗಳು. ಕೆಲವು ಕೌಟುಂಬಿಕ ಸಮಸ್ಯೆಗಳನ್ನು ಯಾರಿಗೂ ನೋವಾಗದಂತೆ ಎದುರಿಸುವ ಶಕ್ತಿ ಅವರಲ್ಲಿದೆ. ಮಾತಿನಲ್ಲಿ ಮಾಧುರ್ಯ ಇರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನು ನೂರು ಬಾರಿ ಯೋಚಿಸಿ. ಯಾರಿಗೂ ನಂಬಿ ಹಣವನ್ನು ನೀಡಬೇಡಿ.
ಮಿಥುನ ರಾಶಿ
ಮಿಥುನ ರಾಶಿಯವರು ತಾಳ್ಮೆಯುಳ್ಳ ಸ್ವಭಾವದವರಾಗಿರುತ್ತಾರೆ. ಆಹ್ಲಾದಕರ ಪ್ರಯಾಣದ ಸಾಧ್ಯತೆಗಳಿವೆ. ಕುಟುಂಬ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. ಹಣಕಾಸಿನ ವಿಷಯಗಳಲ್ಲಿ ಸುಧಾರಣೆ ಕಂಡುಬರಲಿದೆ. ಹಸುವಿಗೆ ಹಸಿರು ಮೇವು ನೀಡುವುದು ಈ ದಿನ ನಿಮಗೆ ಶುಭ ಫಲಗಳನ್ನು ನೀಡುತ್ತದೆ.
ಕರ್ಕಾಟಕ ರಾಶಿ
ಆರ್ಥಿಕ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ರಾಜಕೀಯಕ್ಕೆ ಸೇರುವ ನಿಮ್ಮ ಆಸೆ ಈಡೇರುತ್ತವೆ. ಕುಟುಂಬದಲ್ಲಿ ವಾತಾವರಣ ಆಹ್ಲಾದಕರವಾಗಿರುತ್ತದೆ. ನಿಮ್ಮ ಮಾತನ್ನು ಹಾಗೂ ಕೋಪವನ್ನು ನಿಯಂತ್ರಿಸಿ. ಬೆಳಿಗ್ಗೆ ಹನುಮಾನ ಚಾಲೀಸ್ ಪಠಿಸಿ. ಸಮಸ್ಯೆಗಳ ಪರಿಹಾರಕ್ಕಾಗಿ ಬಡವರಿಗೆ ದಾನ ಮಾಡಿ.
ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯ ದಿನವಾಗಿರುತ್ತದೆ. ಉದ್ಯೋಗವನ್ನು ಹುಡುಕುತ್ತಿರುವವರು ಅಥವಾ ಉದ್ಯೋಗವನ್ನು ಬದಲಾಯಿಸಲು ಪ್ರಯತ್ನಿಸುತ್ತಿರುವವರಿಗೆ ಇಂದು ಕೆಲವು ಸಕಾರಾತ್ಮಕ ಸುದ್ದಿಗಳು ಸಿಗುತ್ತವೆ. ನಿಮ್ಮ ಪ್ರಯತ್ನಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ದಿನ ಉತ್ತಮವಾಗಿದೆ. ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಹುದ್ದೆಯಲ್ಲಿ ಲಾಭ ಪಡೆಯುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ದಾಂಪತ್ಯದಲ್ಲಿ ಪ್ರೀತಿ ಹೆಚ್ಚಾಗಲಿದೆ. ನೆಮ್ಮದಿಯ ಜೀವನವನ್ನು ನೀವು ನಡೆಸುವಿರಿ.
ಇಂದು ವ್ಯವಹಾರದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಪ್ರತಿಫಲ ಸಿಗುತ್ತದೆ. ನಿಮ್ಮ ಸಹೋದ್ಯೋಗಿಗಳಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುವುದು. ಇದರಿಂದ ನಿಮ್ಮ ಕೆಲಸವನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ನಿಮ್ಮ ಬಾಸ್ ನ ಮನಸ್ಥಿತಿ ಚೆನ್ನಾಗಿರುತ್ತದೆ. ಈ ಕಾರಣದಿಂದಾಗಿ ನೀವು ರಜೆ ಕೇಳಿದರೆ ರಜೆ ಸಿಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ದಿನ ಮಂಗಳಕರವಾಗಿದೆ. ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಶೈಕ್ಷಣಿಕ ಸ್ಪರ್ಧೆಯ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಫಲಪ್ರದವಾಗುತ್ತವೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನ ಅದ್ಭುತವಾಗಿದೆ. ಈ ದಿನ ನೀವು ಮಾಡಿದ ಯಾವುದೇ ಕೆಲಸ ದುಪ್ಪಟ್ಟು ಲಾಭ ತಂದುಕೊಡಲಿದೆ. ಮನಸ್ಸು ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಬೆಳಿಗ್ಗೆ ಅಗತ್ಯ ಇರುವವರಿಗೆ ಆಹಾರ ನೀಡಿ. ಜೀವನದಲ್ಲಿ ಬರುವ ಅಡೆತಡೆಗಳ ನಿವಾರಣೆಗೆ ಹನುಮಾನ್ ಚಾಲೀಸ್ ಪಠಿಸಿ.
ವೃಶ್ಚಿಕ ರಾಶಿ
ಮಕ್ಕಳ ಬಗೆಗಿನ ಜವಾಬ್ದಾರಿ ಪೂರ್ಣಗೊಳ್ಳುತ್ತದೆ. ನಿಮ್ಮ ಸಂಗಾತಿಯಿಂದ ನಿಮಗೆ ಬೆಂಬಲ ಸಿಗುತ್ತದೆ. ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಬೆಳಿಗ್ಗೆ ಹನುಮಾನ್ ಚಾಲೀಸಾ ಪಠಿಸಿ. ಕೋತಿಗೆ ಬಾಳೆಹಣ್ಣು ಅಥವಾ ಬೆಲ್ಲ ಮತ್ತು ಬೇಳೆಯನ್ನು ತಿನ್ನಿಸಿ.
ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಸಮನ್ವಯವನ್ನು ಕಾಪಾಡಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಅವರಿಂದ ನಿರೀಕ್ಷಿತ ಬೆಂಬಲವನ್ನು ಸಹ ಪಡೆಯುತ್ತೀರಿ. ಒಳ್ಳೆಯ ವಿಷಯವೆಂದರೆ ಕೆಲಸದ ಜೊತೆಗೆ ನಾಳೆ ನೀವು ಸ್ನೇಹಿತರೊಂದಿಗೆ ಕೆಲವು ಮೋಜಿನ ಕ್ಷಣಗಳನ್ನು ಕಳೆಯಬಹುದು.
ಧನು ರಾಶಿ
ಧನು ರಾಶಿಯವರಿಗೆ ಈ ದಿನ ಉತ್ತಮವಾಗಿದೆ. ಸಂಪತ್ತು ನಿಧಾನವಾಗಿ ಹೆಚ್ಚಳವಾಗುತ್ತದೆ. ಆತ್ಮಗೌರವ ಹೆಚ್ಚಾಗುತ್ತದೆ. ನಿಮ್ಮ ಪ್ರಯತ್ನಗಳು ಫಲಪ್ರದವಾಗುತ್ತವೆ ಮತ್ತು ನೀವು ಆರ್ಥಿಕ ಯಶಸ್ಸನ್ನು ಸಾಧಿಸುವಿರಿ. ವ್ಯಾಪಾರ ಪ್ರಯತ್ನಗಳು ಫಲಪ್ರದವಾಗುತ್ತವೆ. ಗಾಯಗೊಂಡ ಯಾವುದೇ ಜಾನುವಾರುಗಳಿಗೆ ಚಿಕಿತ್ಸೆ ನೀಡಿ ಮತ್ತು ಹಸುವಿಗೆ ಆಹಾರ ನೀಡಿದರೆ ನಿಮ್ಮ ದಾಂಪತ್ಯ ಕಲಹಗಳು ದೂರವಾಗುತ್ತವೆ.
ಮಕರ ರಾಶಿ
ಮಕರ ರಾಶಿಯವರಿಗೆ ಮಾರ್ಚ್ 11 ಮಿಶ್ರ ಫಲವನ್ನು ನೀಡುತ್ತದೆ. ಈ ರಾಶಿಯವ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಂದುಕೊಂಡ ಫಲ ಪಡೆಯುತ್ತಾರೆ. ಉದ್ಯೋಗದಲ್ಲಿ ಮೇಲಾಧಿಕಾರಿ ಅಥವಾ ಮನೆಯ ಮುಖ್ಯಸ್ಥರಿಂದ ಅನುಭವಿಸುವ ಒತ್ತಡವನ್ನು ಎದುರಿಸಬೇಕಾಗುತ್ತದೆ. ಇದರಿಂದ ಮನಸ್ಸು ಇನ್ನೂ ತೊಂದರೆಗೊಳಗಾಗಬಹುದು. ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ದೀರ್ಘ ಪ್ರಯಾಣದ ಸಾಧ್ಯತೆಗಳಿವೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ದಿನ ಒತ್ತಡದಿಂದ ಕೂಡಿರುತ್ತದೆ. ಹಣಕಾಸಿನ ವಿಷಯಗಳಲ್ಲಿ ಹೆಚ್ಚಿನ ಖರ್ಚು ಇರುತ್ತದೆ. ನಿಮ್ಮ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ನೀವು ಚಿಂತಿತರಾಗಬಹುದು. ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ಬೆಳಿಗ್ಗೆ ತಂದೆಯಿಂದ ಆಶೀರ್ವಾದ ಪಡೆದ ನಂತರವಷ್ಟೇ ಮನೆಯಿಂದ ಹೊರಡಿ. ಈ ದಿನ ಸಂಕಷ್ಟ ನಿವಾರಕ ಹನುಮಂತನಿಗೆ ಮಾಡಿದ ಪೂಜೆ ಉತ್ತಮ ಫಲವನ್ನು ನೀಡುತ್ತದೆ.
ಮೀನ ರಾಶಿ
ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಮೀನ ರಾಶಿಯ ವಿದ್ಯಾರ್ಥಿಗಳಿಗೆ ಈ ದಿನ ಅದ್ಭುತವಾಗಿದೆ. ಶಾಲಾ ಕಾಲೇಜಿನಲ್ಲಿ ಗೌರವ ಹೆಚ್ಚಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಆಗಬಹುದು. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ.
ಹಣಕಾಸಿನ ವಿಷಯಗಳಲ್ಲಿ ಇಂದು ನಿಮಗೆ ಎಲ್ಲಿಂದಲಾದರೂ ಹಠಾತ್ ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇರುತ್ತದೆ. ವ್ಯಾಪಾರ ಮಾಡುವವರಿಗೆ ತುಂಬಾ ಒಳ್ಳೆಯ ದಿನ. ನೀವು ಬಹಳಷ್ಟು ಹಣವನ್ನು ಗಳಿಸುತ್ತೀರಿ. ನಿಮ್ಮ ಕುಟುಂಬ ಜೀವನದಲ್ಲಿಯೂ ಸಹ, ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಸಂತೋಷ ಮತ್ತು ಸಾಮರಸ್ಯ ಇರುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರು ಮಾಹಿತಿಯನ್ನು ಆಧರಿಸಿದೆ. ನಮ್ಮ ಏಕೈಕ ಉದ್ದೇಶ ಮಾಹಿತಿ ನೀಡುವುದು ಆಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications