Horoscope Today: ದಿನ ಭವಿಷ್ಯ ಜನವರಿ 28; ಈ ರಾಶಿಗೆ ಶನಿಯಿಂದ ಶ್ರೀಮಂತಿಕೆ, ಐಷಾರಾಮಿ ಜೀವನ

ಜನವರಿ 28 ಮಂಗಳವಾರ ಮಾಘ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯಂದು 12 ರಾಶಿಗಳ ಭವಿಷ್ಯವನ್ನು ತಿಳಿಯೋಣ. ಈ ದಿನಾಂಕದಂದು ಶುಭ ಯೋಗ ಮತ್ತು ಮೂಲ ನಕ್ಷತ್ರದ ವಿಶೇಷ ಸಂಯೋಜನೆ ರೂಪುಗೊಳ್ಳುತ್ತಿದೆ. ಯಾವುದೇ ಶುಭ ಕೆಲಸ ಮಾಡುವುದನ್ನು ತಪ್ಪಿಸಲು ರಾಹುಕಾಲದ ಸಮಯ ಮಧ್ಯಾಹ್ನ 3:26 ರಿಂದ ಸಂಜೆ 4:53ವರೆಗೆ ಇರುತ್ತದೆ. ಹಾಗಾದರೆ ಈ ದಿನ ಶನಿ ದೇವನ ಆಶೀರ್ವಾದ ಪಡೆಯುವ ರಾಶಿಗಳು ಯಾವುವು? ಈ ದಿನದ ಅದೃಷ್ಟ ರಾಶಿಗಳು ಯಾವುವು ಎಂದು ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಈ ದಿನ ಶುಭವಾಗುವುದು. ಆರ್ಥಿಕ ಸಹಾಯ ಸಿಗಲಿದೆ. ವೃತ್ತಿಯಲ್ಲಿ ಬೆಳವಣಿಗೆ, ಹೊಸ ಯೋಜನೆಗಳು ನಿಮ್ಮ ಕೈ ಹಿಡಿಯಲಿದೆ. ಸೃಜನಾತ್ಮಕ ಕಾರ್ಯಗಳು ನಿಮ್ಮನ್ನು ಕೊನೆವರೆಗೂ ಕಾಪಾಡುತ್ತವೆ. ಮನೆ ಜವಾಬ್ದಾರಿ ಹೆಚ್ಚಾಗುವುದು. ಸ್ಥಳ ಬದಲಾವಣೆಯ ಸಾಧ್ಯತೆ ಇದೆ. ಸಂಬಂಧಗಳಲ್ಲಿ ಆತ್ಮೀಯತೆ ಇರುವುದು. ಶಿಕ್ಷಣ ಕ್ಷೇತ್ರದಲ್ಲಿನ ಪ್ರಯತ್ನಗಳು ಫಲಪ್ರದವಾಗುತ್ತವೆ. ಬೆಳಿಗ್ಗೆ ಶನಿ ಮಂತ್ರವನ್ನು ಪಠಿಸಿ ಕಷ್ಟಗಳನ್ನು ಸುಟ್ಟು ಹಾಕಿ.

astrology dina bhavishya january 28 12 zodiac signs today prediction

ವೃಷಭ ರಾಶಿ

ವೃಷಭ ರಾಶಿಯವರಿಗೆ ಜನವರಿ 28 ಶುಭವಾಗಿರುವುದಿಲ್ಲ. ನೀವು ಕೆಲವು ಕೌಟುಂಬಿಕ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಮಾತಿನಲ್ಲಿ ಮಾಧುರ್ಯ ಇರುತ್ತದೆ. ನಿಮ್ಮ ಮಕ್ಕಳ ಕಾರಣದಿಂದಾಗಿ ನೀವು ಚಿಂತೆಗೊಳಗಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಹಣಕಾಸಿನ ಬೆಂಬಲ ದೊರೆಯಲಿದೆ. ಬೆಳಿಗ್ಗೆ ಸೂರ್ಯ ಮಂತ್ರವನ್ನು ಪಠಿಸಿ. ಬಡವರಿಗೆ ದಾನ ಮಾಡಿ.

ಮಿಥುನ ರಾಶಿ

ಜನವರಿ 28 ಮಿಥುನ ರಾಶಿಯವರಿಗೆ ಮಂಗಳಕರವಾಗಿದೆ. ಆಹ್ಲಾದಕರ ಪ್ರಯಾಣದ ಸಾಧ್ಯತೆಗಳಿವೆ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಹಣಕಾಸಿನ ವಿಷಯಗಳಲ್ಲಿ ಸುಧಾರಣೆ ಕಂಡುಬರಲಿದೆ. ಕೆಲಸದಲ್ಲಿ ಕಡಿಮೆ ಲಾಭ ಇರಬಹುದು. ಆದರೆ ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ಬೆಳಿಗ್ಗೆ ಹಸುವಿಗೆ ಹಸಿರು ಮೇವು ನೀಡಿ. ಅಗತ್ಯ ಇರುವವರಿಗೆ ಆಹಾರ ನೀಡಿ.

ಕರ್ಕಾಟಕ ರಾಶಿ

ಕಟಕ ರಾಶಿಯವರ ರಾಜಕೀಯ ಆಕಾಂಕ್ಷೆಗಳು ಈಡೇರುತ್ತವೆ. ಕುಟುಂಬದಲ್ಲಿ ವಾತಾವರಣ ಆಹ್ಲಾದಕರವಾಗಿರುತ್ತದೆ. ಅನಗತ್ಯವಾಗಿ ಓಡಾಡಬೇಕಾಗುತ್ತದೆ. ನಿಮ್ಮ ಮಾತನ್ನು ನಿಯಂತ್ರಿಸಿ. ಸಂಪತ್ತಿನಲ್ಲಿ ಹೆಚ್ಚಳವಾಗಲಿದೆ. ಬೆಳಿಗ್ಗೆ ಶನಿ ಮಂತ್ರವನ್ನು ಪಠಿಸಿ. ಶಿವಲಿಂಗದ ಮೇಲೆ ಬಿಲ್ವಪತ್ರೆ ಇಟ್ಟು ಕಷ್ಟಗಳ ನಿವಾರಣೆ ಪೂಜಿಸಿ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಜನವರಿ 28 ಶುಭ ದಿನವಾಗಿದೆ. ವ್ಯವಹಾರದಲ್ಲಿ ಹೆಚ್ಚಳ ಕಂಡುಬರಲಿದೆ. ಸರ್ಕಾರದಿಂದ ಹಣಕಾಸಿನ ಬೆಂಬಲ ಪಡೆಯುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ರಾಜಕೀಯ ಮಹತ್ವಾಕಾಂಕ್ಷೆಗಳು ಯಶಸ್ವಿಯಾಗುವ ಸಾಧ್ಯತೆಯಿದೆ. ಬೆಳಿಗ್ಗೆ ಹನುಮಾನ ಚಾಲೀಸ್ ಪಠಿಸಿ. ಹಸುವಿಗೆ ಆಹಾರ ನೀಡಿ. ಕಷ್ಟಗಳ ನಿವಾರಣೆ ಮನೆ ದೇವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಜನವರಿ 28 ಅದ್ಭುತವಾಗಿದೆ. ಈ ದಿನದ ಅದೃಷ್ಟ ರಾಶಿಗಳಲ್ಲಿ ಕನ್ಯಾ ರಾಶಿಯೂ ಒಂದು. ಕೆಲಸದಲ್ಲಿ ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಫಲಪ್ರದವಾಗುತ್ತವೆ. ಜೀವನದಲ್ಲಿ ಬರುವ ಕಷ್ಟಗಳ ನಿವಾರಣೆಗೆ ಬೆಳಿಗ್ಗೆ ಶನಿ ದೇವರನ್ನು ಪೂಜಿಸಿ.

ತುಲಾ ರಾಶಿ

ತುಲಾ ರಾಶಿಯವರಿಗೆ ಈ ದಿನ ಮಿಶ್ರ ಫಲ ನೀಡಲಿದೆ. ತುಲಾ ರಾಶಿಯ ರಾಜಕೀಯ ಆಕಾಂಕ್ಷೆಗಳು ಈಡೇರುತ್ತವೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಮನಸ್ಸು ತೊಂದರೆಗೊಳಗಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಶತ್ರು ನಾಶಕ್ಕಾಗಿ ಶನಿ ದೇವರನ್ನು ಪೂಜಿಸಿ, ಹನುಮನ ದೇವಸ್ಥಾನಕ್ಕೆ ಹೋಗಿ ತುಪ್ಪದ ದೀಪ ಬೆಳಗಿಸಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಜನವರಿ 28 ಉತ್ತಮ ಫಲ ನೀಡಲಿದೆ. ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗುವುದು. ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಬೆಳಿಗ್ಗೆ ಹನುಮಾನ್ ಚಾಲೀಸಾ ಪಠಿಸಿ. ಕೋತಿಗೆ ಹಣ್ಣು ನೀಡಿ. ಕಷ್ಟಗಳು ನಿವಾರಣೆಯಾಗುತ್ತವೆ.

ಧನು ರಾಶಿ

ಧನು ರಾಶಿಯವರು ಈ ದಿನದ ಅದೃಷ್ಟ ರಾಶಿಯವರಾಗಿದ್ದಾರೆ. ಆಂಜನೇಯನ ಆಶೀರ್ವಾದದಿಂದ ಈ ದಿನ ಸಂಪತ್ತು, ಖ್ಯಾತಿಯಲ್ಲಿ ಹೆಚ್ಚಳವಾಗುತ್ತದೆ. ಆತ್ಮಗೌರವ ಹೆಚ್ಚಾಗುತ್ತದೆ. ನಿಮ್ಮ ಪ್ರಯತ್ನಗಳು ಫಲಪ್ರದವಾಗುತ್ತವೆ ಮತ್ತು ನೀವು ಆರ್ಥಿಕ ಯಶಸ್ಸನ್ನು ಸಾಧಿಸುವಿರಿ. ವ್ಯಾಪಾರ ಪ್ರಯತ್ನಗಳು ಫಲಪ್ರದವಾಗುತ್ತವೆ. ಹೆತ್ತವರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಡಿ. ಕ್ಷಟಗಳ ನಿವಾರಣೆ ಹಸಿದ ಪ್ರಾಣಿಗಳಿಗೆ ಆಹಾರ ನೀಡಿ.

ಮಕರ ರಾಶಿ

ಮಕರ ರಾಶಿಯವರಿಗೆ ಈ ದಿನ ಉತ್ತಮವಾಗಿಲ್ಲ. ನಿಮ್ಮ ಅಧಿಕಾರಿ ಅಥವಾ ಕುಟುಂಬದ ಮುಖ್ಯಸ್ಥರಿಂದ ನೀವು ಒತ್ತಡವನ್ನು ಎದುರಿಸಬಹುದು. ಮನಸ್ಸು ತೊಂದರೆಗೊಳಗಾಗಬಹುದು. ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ಶನಿಯ ಮಂತ್ರವನ್ನು ಪಠಿಸಿ. ಜೀವನದ ಸುಖಮಯವಾಗಿರಲು ಆಂಜನೇಯನನ್ನು ಪೂಜಿಸಿ.

ಕುಂಭ ರಾಶಿ

ಕುಂಭ ರಾಶೀಯವರಿಗೆ ಈ ದಿನ ಮಿಶ್ರವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಹಣಕಾಸಿನ ವಿಷಯಗಳಲ್ಲಿ ಹೆಚ್ಚಿನ ಖರ್ಚು ಇರುತ್ತದೆ. ನಿಮ್ಮ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ನೀವು ಚಿಂತಿತರಾಗಿರುತ್ತೀರಿ. ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ಬೆಳಿಗ್ಗೆ, ನಿಮ್ಮ ಪೋಷಕರು ಹಾಗೂ ದೇವರ ಆಶೀರ್ವಾದ ಪಡೆದು ಮನೆಯಿಂದ ಹೊರಡಿ, ಶನಿ ದೇವನಿಗೆ ಪೂಜೆ ಸಲ್ಲಿಸಿ, ಹನುಮನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ.

ಮೀನ ರಾಶಿ

ಮೀನ ರಾಶಿಯವರಿಗೆ ಜನವರಿ 28 ಉತ್ತಮವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ನಿಮ್ಮ ಮಾತನ್ನು ಎಲ್ಲರೂ ಕೇಳುತ್ತಾರೆ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಆಗಬಹುದು. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಬೆಳಿಗ್ಗೆ ಹಸುವಿಗೆ ಆಹಾರ ತಿನ್ನಿಸಿ. ಬೆಳಿಗ್ಗೆ ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ, ಪೂಜೆ ಮಾಡಿ. ಆಂಜನೇಯನ ಆಶೀರ್ವಾದದಿಂದ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರು ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+