Horoscope Today: ದಿನ ಭವಿಷ್ಯ ಫೆಬ್ರವರಿ 17- ಈ ರಾಶಿಗೆ ಪರಶಿವನ ಮಹಾಕೃಪೆ
ಕೆಲವು ರಾಶಿಗಳಿಗೆ ಫೆಬ್ರವರಿ 17 ಬಹಳ ವಿಶೇಷವಾದ ದಿನವಾಗಿದೆ. ಈ ದಿನ ಯಶಸ್ಸಿನ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಆರ್ಥಿಕ ಲಾಭಗಳು, ವೃತ್ತಿ ಪ್ರಗತಿ ಮತ್ತು ಸಂತೋಷ ಪಡೆಯುವ ಸಾಧ್ಯತೆಗಳಿವೆ. ನಿಮ್ಮ ರಾಶಿ ಈ ಪಟ್ಟಿಯಲ್ಲಿ ಸೇರಿದ್ದರೆ, ಈ ದಿನವು ನಿಮಗೆ ತುಂಬಾ ಶುಭವಾಗಿದೆ. ಹಾಗಾದರೆ ಫೆಬ್ರವರಿ 17 ಸೋಮವಾರ ಯಾವ ರಾಶಿಯವರು ಅದೃಷ್ಟಶಾಲಿಗಳು? ಯಾವ ರಾಶಿಯವರ ಮೇಲೆ ಶಿವದೇವನ ಆಶೀರ್ವಾದವಿದೆ? 12 ರಾಶಿಗಳಲ್ಲಿ ಅದೃಷ್ಟ ರಾಶಿ ಯಾವುದು? ಎಂದು ತಿಳಿಯೋಣ.
ಮೇಷ ರಾಶಿ
ಈ ದಿನ ಮೇಷ ರಾಶಿಯವರಿಗೆ ಮಿಶ್ರವಾಗಿರುತ್ತದೆ. ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚಾಗಲಿದೆ. ಕೌಟುಂಬಿಕ ಸಮಸ್ಯೆ ಬಗೆಹರಿಯಲಿದೆ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಆತ್ಮವಿಶ್ವಾಸ ದ್ವಿಗುಣವಾಗಲಿದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಶಿಕ್ಷಣ ಕ್ಷೇತ್ರದಲ್ಲಿನ ಪ್ರಯತ್ನಗಳು ಫಲಪ್ರದವಾಗುತ್ತವೆ. ಬೆಳಿಗ್ಗೆ ಶಿವ ಮಂತ್ರವನ್ನು ಪಠಿಸಿ. ಬಿಲ್ವಪತ್ರೆಯನ್ನು ಇಟ್ಟು ಪೂಜಿಸಿ.

ವೃಷಭ ರಾಶಿ
ಹಣಕಾಸಿನ ವಿಷಯಗಳಲ್ಲಿ ಅಪಾಯಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ವಿರೋಧಿಗಳು ಸೋಲುತ್ತಾರೆ. ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಆರೋಗ್ಯದ ಬಗ್ಗೆ ಜಾಗೃತರಾಗಿರಿ. ಕುಟುಂಬದ ಪ್ರತಿಷ್ಠೆ ಹೆಚ್ಚಾಗುತ್ತದೆ. ಆರ್ಥಿಕ ಜೀವನ ಬಲಗೊಳ್ಳುತ್ತದೆ. ಬೆಳಿಗ್ಗೆ ಶಿವ ಮಂತ್ರವನ್ನು ಪಠಿಸಿ. ಬಡವರಿಗೆ ದಾನ ಮಾಡಿ.
ಮಿಥುನ ರಾಶಿ
ಮಿಥುನ ರಾಶಿಯವರು ಮಾಡಿದ ಕಾರ್ಯಗಳು ಯಶಸ್ವಿಯಾಗುತ್ತದೆ. ಮಾಡಿದ ಪ್ರಯತ್ನಗಳು ಸಾರ್ಥಕವಾಗುತ್ತವೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಸಂಬಂಧಗಳಲ್ಲಿ ಆತ್ಮೀಯತೆ ಇರುವುದು. ಲಾಭದಲ್ಲಿ ಇಳಿಕೆಯಾಗಬಹುದು. ಪರಿಹಾರವಾಗಿ ದಾನ ಕಾರ್ಯಗಳಲ್ಲಿ ಭಾಗಿಯಾಗಿ. ಬೆಳಿಗ್ಗೆ ಹಸುವಿಗೆ ಹಸಿರು ಮೇವು ತಿನ್ನಿಸಿ ಪೂಜಿಸಿ.
ಕರ್ಕಾಟಕ ರಾಶಿ
ಕಟಕ ರಾಶಿಯವರಿಗೆ ಈ ದಿನ ಉತ್ತಮವಾಗಿದೆ. ನಿಮಗೆ ಕೆಲಸದ ಒತ್ತಡ ಹೆಚ್ಚಾಗಲಿದೆ. ನಿಮ್ಮ ಸಹೋದರ ಸಹೋದರಿಯರ ಆರೋಗ್ಯದ ಬಗ್ಗೆ ನೀವು ಚಿಂತೆ ಮಾಡಬಹುದು. ಕೆಲಸದ ಸ್ಥಳದಲ್ಲಿ ಒತ್ತಡವನ್ನು ಎದುರಿಸಬಹುದು. ಈ ದಿನ ಮನಸ್ಸು ಚಂಚಲವಾಗಿ ಇರುತ್ತದೆ. ನಿಮ್ಮ ಮಾತನ್ನು ನಿಯಂತ್ರಿಸಿ. ದಾಂಪತ್ಯ ಜೀವನದಲ್ಲಿ ಒತ್ತಡ ಇರುತ್ತದೆ. ಸಂಪತ್ತಿನಲ್ಲಿ ಹೆಚ್ಚಳವಾಗಬಹುದು.
ಸಿಂಹ ರಾಶಿ
ಫೆಬ್ರವರಿ 17 ಸಿಂಹ ರಾಶಿಯ ಜನರಿಗೆ ಬಹಳ ವಿಶೇಷವಾದ ದಿನವಾಗಿದೆ. ಈ ದಿನ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚು. ಉದ್ಯೋಗದಲ್ಲಿರುವವರಿಗೆ ಬಡ್ತಿ, ಸಂಬಳ ಹೆಚ್ಚಳದ ಒಳ್ಳೆಯ ಸುದ್ದಿ ಸಿಗಬಹುದು. ವ್ಯಾಪಾರ ಮಾಡುವವರಿಗೂ ಈ ದಿನ ಪ್ರಯೋಜನಕಾರಿಯಾಗಲಿದೆ. ಕುಟುಂಬದಲ್ಲಿ ನಿಮಗೆ ಕೆಲವು ಒಳ್ಳೆಯ ಸುದ್ದಿಗಳು ಸಿಗಬಹುದು. ಅದು ನಿಮ್ಮ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ನೀವು ಆತ್ಮವಿಶ್ವಾಸ ಮತ್ತು ಶಕ್ತಿಯಿಂದ ತುಂಬಿರುತ್ತೀರಿ. ಇದರಿಂದಾಗಿ ನಿಮ್ಮ ಕೆಲಸ ಬೇಗನೆ ಪೂರ್ಣಗೊಳ್ಳುತ್ತದೆ.
ಕನ್ಯಾ ರಾಶಿ
ನಿಮ್ಮ ಸಂಗಾತಿಯಿಂದ ನಿಮಗೆ ಬೆಂಬಲ ಸಿಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಹಣಕಾಸಿನ ವಿಷಯಗಳಲ್ಲಿ ಅಪಾಯಗಳನ್ನು ತೆಗೆದುಕೊಳ್ಳಬೇಡಿ. ಸಂಬಂಧಿಕರಿಂದ ಒತ್ತಡ ಎದುರಾಗಬಹುದು. ಬೆಳಿಗ್ಗೆ ಹಸುವಿಗೆ ಹಸಿರು ಮೇವು ನೀಡಿ ಪೂಜಿಸಿ.
ತುಲಾ ರಾಶಿ
ಹಣಕಾಸಿನ ವಿಷಯಗಳಲ್ಲಿ ಒತ್ತಡ ಇರುತ್ತದೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಇದು ಕೆಲಸದ ಕ್ಷೇತ್ರದಲ್ಲಿ ಹೆಚ್ಚಾಗಬಹುದು. ನಿಮ್ಮ ಗುರುವಿನಿಂದ ನಿಮಗೆ ಬೆಂಬಲ ಸಿಗುತ್ತದೆ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ವಾಹನ ಖರೀದಿ ಮಾಡಬಹುದು. ನಿಮಗೆ ಸರ್ಕಾರದಿಂದ ಹಣದ ಬೆಂಬಲ ಸಿಗುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಫೆಬ್ರವರಿ 17 ಆರ್ಥಿಕ ದೃಷ್ಟಿಯಿಂದ ತುಂಬಾ ಉತ್ತಮವಾಗಿರುತ್ತದೆ. ಅದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ದಿನ ನಿಮಗೆ ಶುಭವಾಗಿರುತ್ತದೆ. ಕೆಟ್ಟ ಚಟಗಳಿಮದ ದೂರವಾಗುವಿರಿ. ಕುಟುಂಬ ಜೀವನದಲ್ಲಿಯೂ ಸಂತೋಷದ ವಾತಾವರಣವಿರುತ್ತದೆ. ಮನೆಯಲ್ಲಿ ಕೆಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಸಾಧ್ಯತೆ ಇದೆ.
ಧನು ರಾಶಿ
ಧನು ರಾಶಿಯವರಿಗೆ ಈ ದಿನ ತುಂಬಾ ಅದೃಷ್ಟದಾಯಕವಾಗಿದೆ. ಈ ದಿನ ಅದೃಷ್ಟ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನೀವು ಯಾವುದೇ ಪರೀಕ್ಷೆ ಅಥವಾ ಸಂದರ್ಶನಕ್ಕೆ ತಯಾರಿ ನಡೆಸುತ್ತಿದ್ದರೆ, ಈ ದಿನ ಯಶಸ್ಸು ಸಿಗುವ ಸಾಧ್ಯತೆಯಿದೆ. ವ್ಯಾಪಾರಿಗಳು ಇದ್ದಕ್ಕಿದ್ದಂತೆ ದೊಡ್ಡ ಲಾಭವನ್ನು ಪಡೆಯಬಹುದು. ಕೆಲವು ಹಳೆಯ ಹೂಡಿಕೆಯಿಂದಲೂ ಉತ್ತಮ ಲಾಭ ಪಡೆಯುವ ಸಾಧ್ಯತೆಗಳಿವೆ. ಕುಟುಂಬದಲ್ಲಿ ಕೆಲವು ಒಳ್ಳೆಯ ಸುದ್ದಿಗಳು ಬರಬಹುದು. ಅದು ಮನಸ್ಸಿನಲ್ಲಿ ಸಂತೋಷ ಮತ್ತು ಉತ್ಸಾಹವನ್ನು ತರುತ್ತದೆ.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನ ಉತ್ತಮವಾಗಿಲ್ಲ. ಹಣಕಾಸಿನ ವಿಷಯಗಳಲ್ಲಿ ಅಪಾಯಗಳನ್ನು ತೆಗೆದುಕೊಳ್ಳಬೇಡಿ. ಕುಟುಂಬದ ಸದಸ್ಯರಿಂದ ನಿಮಗೆ ಒತ್ತಡ ಎದುರಾಗಬಹುದು. ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ಬೆಳಿಗ್ಗೆ ಸೂರ್ಯನನ್ನು ಪೂಜಿಸಿ ಸಂಕಷ್ಟ ನಿವಾರಣೆಗೆ ಶಿವ ಮಂತ್ರವನ್ನು ಪಠಿಸಿ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಫೆಬ್ರವರಿ 17 ಹೊಸ ಆರಂಭಕ್ಕೆ ಉತ್ತಮ ದಿನವಾಗಿದೆ. ನೀವು ಹೊಸ ವ್ಯವಹಾರ ಅಥವಾ ಯೋಜನೆಯನ್ನು ಪ್ರಾರಂಭಿಸಲು ಬಯಸಿದರೆ, ಈ ಸಮಯ ನಿಮಗೆ ಅನುಕೂಲಕರವಾಗಿರುತ್ತದೆ. ಸಿಲುಕಿಕೊಂಡಿರುವ ಹಣವನ್ನು ಮರಳಿ ಪಡೆಯಬಹುದು ಮತ್ತು ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣವಿರುತ್ತದೆ.
ಮೀನ ರಾಶಿ
ಫೆಬ್ರವರಿ 17 ಮೀನ ರಾಶಿಯ ಜನರಿಗೆ ತುಂಬಾ ಒಳ್ಳೆಯ ದಿನವಾಗಿದೆ. ಒಂದು ಕನಸನ್ನು ನನಸಾಗಿಸುವ ಸಮಯ ಬಂದಿದೆ. ನೀವು ಪ್ರವಾಸವನ್ನು ಯೋಜಿಸುತ್ತಿದ್ದರೆ, ಈ ಪ್ರವಾಸ ಪ್ರಯೋಜನಕಾರಿಯಾಗಿರುತ್ತದೆ. ನೀವು ಕೆಲಸದಲ್ಲಿ ಹೊಸ ಜವಾಬ್ದಾರಿಗಳನ್ನು ಪಡೆಯಬಹುದು. ಇದು ವೃತ್ತಿಜೀವನದ ಪ್ರಗತಿಗೆ ಕಾರಣವಾಗುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಈ ದಿನ ಉತ್ತಮವಾಗಿರುತ್ತದೆ. ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚಾಗಲಿದೆ. ನಿಮ್ಮ ಸಂಗಾತಿಯಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications