Horoscope Today: ದಿನ ಭವಿಷ್ಯ ಫೆಬ್ರವರಿ 12- ಈ ರಾಶಿಯ ವಿಘ್ನಗಳೆಲ್ಲವೂ ದೂರ
ಫೆಬ್ರವರಿ 12 ಬುಧವಾರ ರಾತ್ರಿ 10:03ಕ್ಕೆ ಗ್ರಹಗಳ ರಾಜ ಸೂರ್ಯನು ಶನಿಯ ರಾಶಿಯಾದ ಕುಂಭ ರಾಶಿಯಲ್ಲಿ ಸಾಗುತ್ತಾನೆ. ಇಂದು ಪೂರ್ಣಿಮಾ ತಿಥಿಯಿದ್ದು ಈ ದಿನದಂದು ದಾನಕ್ಕೆ ವಿಶೇಷ ಮಹತ್ವವಿದೆ. ಹಾಗಾದರೆ 12 ರಾಶಿಗಳಿಗೆ ಈ ದಿನ ಹೇಗಿರುತ್ತದೆ? ಫೆಬ್ರವರಿ 12ರ ಜಾತಕದಲ್ಲಿ ಏನಿದೆ? ರಾಶಿಯ ಪ್ರಕಾರ ಪರಿಹಾರಗಳನ್ನು ತಿಳಿಯೋಣ.
ಮೇಷ ರಾಶಿ
ಈ ದಿನ ಮೇಷ ರಾಶಿಯವರಿಗೆ ತುಂಬಾ ವಿಶೇಷವಾಗಿ ಇರುವುದಿಲ್ಲ. ಮನಸ್ಸು ಚಂಚಲವಾಗಿರುತ್ತದೆ. ಆಸ್ತಿಯಲ್ಲಿ ಹೆಚ್ಚಳವಾಗಲಿದೆ. ವ್ಯವಹಾರ ಖ್ಯಾತಿ ಹೆಚ್ಚುವುದು. ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಬುಧವಾರ ಬೆಳಿಗ್ಗೆ ಶನೇಶನ ಮಂತ್ರವನ್ನು ಪಠಿಸಿ. ದಾನ ಕಾರ್ಯಗಳನ್ನು ಮಾಡುವುದು ವಿಶೇಷ ಫಲ ನೀಡುತ್ತದೆ.

ವೃಷಭ ರಾಶಿ
ಉದ್ಯೋಗದಲ್ಲಿ ಪ್ರಗತಿಯ ಹಾದಿ ಸುಗಮವಾಗುತ್ತದೆ. ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ಶಿಕ್ಷಣದಿಂದಾಗಿ ಒತ್ತಡಕ್ಕೊಳಗಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಜೀವನದಲ್ಲಿ ಸುಖಕರ ಜೀವನವನ್ನು ನೀವು ನಡೆಸುವಿರಿ. ನಿಮ್ಮ ಎಲ್ಲಾ ಸಮಸ್ಯೆಗಳು ಬಗೆ ಹರಿಯಲಿವೆ. ಇಂದು ಗಣೇಶನ ದೇವಸ್ಥಾನಕ್ಕೆ ಹೋಗಿ ತುಪ್ಪದ ದೀಪ ಹಚ್ಚಿ.
ಮಿಥುನ ರಾಶಿ
ಬುದ್ಧಿಮತ್ತೆಯಿಂದ ಮಾಡಿದ ಕೆಲಸ ಪೂರ್ಣಗೊಳ್ಳುತ್ತದೆ. ಶಾಂತವಾಗಿರಿ ಮತ್ತು ಆಧ್ಯಾತ್ಮಿಕತೆಯ ಸಹಾಯ ಪಡೆಯಿರಿ. ನಿಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿರಿ. ಎಲ್ಲಾ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ನಿಮ್ಮ ಆತ್ಮೀಯರಿಂದ ನಿಮಗೆ ಸಹಾಯ ಸಿಗಲಿದೆ. ಸಾಲ ನೀಡಿದ ಹಣ ವಾಪಸ್ ಬರಲಿದೆ. ಇಂದು ಗಣೇಶನ ದೇವಸ್ಥಾನಕ್ಕೆ ಹೋಗಿ ತುಪ್ಪದ ದೀಪ ಹಚ್ಚಿ.
ಕರ್ಕಾಟಕ ರಾಶಿ
ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ. ಸಂಪತ್ತು, ಗೌರವ ಮತ್ತು ಖ್ಯಾತಿಯಲ್ಲಿ ಹೆಚ್ಚಳವಾಗುತ್ತದೆ. ಆರ್ಥಿಕ ಲಾಭ ಉಂಟಾಗಬಹುದು. ನಿಮ್ಮ ಧಾರ್ಮಿಕ ಶಿಕ್ಷಕರಿಂದ ನಿಮಗೆ ಬೆಂಬಲ ಸಿಗುತ್ತದೆ. ನಿಮಗೆ ಸ್ನೇಹಿತರಿಂದಲೂ ಬೆಂಬಲ ಸಿಗಲಿದೆ. ಈ ದಿನ ನಿಮ್ಮ ಸಂಬಂಧಿಕರು ಅಥವಾ ಸ್ನೇಹಿತರ ಶುಭ ಸಮಾರಂಭದಲ್ಲಿ ಭಾಗವಹಿಸಬಹುದು. ಬೆಳಿಗ್ಗೆ ದಾನ ಕಾರ್ಯಗಳಲ್ಲಿ ಭಾಗಿಯಾಗಿ.
ಸಿಂಹ ರಾಶಿ
ಸಿಂಹ ರಾಶಿಯವರ ಆತ್ಮೀವಿಶ್ವಾಸ ಹೆಚ್ಚಾಗಲಿದೆ. ನಿಮಗೆ ಉನ್ನತ ಅಧಿಕಾರಿಗಳಿಂದ ಬೆಂಬಲ ಸಿಗುವುದು. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಆರ್ಥಿಕ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಲು ಎಲ್ಲಾ ಸಾಧ್ಯತೆಗಳಿವೆ. ಬೆಳಿಗ್ಗೆ ದಾನ ಕಾರ್ಯಗಳಲ್ಲಿ ಭಾಗಿಯಾಗಿ.
ಕನ್ಯಾ ರಾಶಿ
ನಿಮ್ಮ ಮಾತಿನಲ್ಲಿ ಮಾಧುರ್ಯ ಇರುವುದು. ಹಣ ಖರ್ಚಾಗಲಿದೆ. ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಕುಟುಂಬ ಕೆಲಸಗಳಲ್ಲಿ ನಿರತರಾಗಿರುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಯಾವುದೇ ಕೆಲಸ ನಿಮ್ಮ ಕೈ ಬಿಡುವುದಿಲ್ಲ.
ತುಲಾ ರಾಶಿ
ಪ್ರಗತಿಗೆ ಅವಕಾಶಗಳು ದೊರೆಯಲಿವೆ. ನಿಮ್ಮ ಮಾತನ್ನು ನಿಯಂತ್ರಿಸಿ. ಸಂಪತ್ತು, ಖ್ಯಾತಿ ಹೆಚ್ಚಳವಾಗುತ್ತದೆ. ಶೈಕ್ಷಣಿಕ ಸ್ಪರ್ಧೆಯ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಫಲಪ್ರದವಾಗುತ್ತವೆ. ವಾಹನ ಖರೀದಿಗೆ ತುಂಬಾ ಒಳ್ಳೆಯ ದಿನ. ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವುದು ತುಂಬಾ ಒಳ್ಳೆಯ ಫಲ ನೀಡಲಿದೆ. ಬಿಳಿ ಬಟ್ಟೆಗಳನ್ನು ದಾನ ಮಾಡಿ.
ವೃಶ್ಚಿಕ ರಾಶಿ
ವ್ಯಾಪಾರದಲ್ಲಿ ತುಂಬಾ ಓಡಾಟ ಇರುತ್ತದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ವ್ಯಾಪಾರ ಪ್ರಯತ್ನಗಳು ಫಲಪ್ರದವಾಗುತ್ತವೆ. ಜನರು ನಿಮ್ಮ ಸ್ವಭಾವದ ಕಡೆಗೆ ಆಕರ್ಷಿತರಾಗುತ್ತಾರೆ. ನಿಮಗೆ ಸರ್ಕಾರದಿಂದ ಬೆಂಬಲ ಸಿಗುವುದು. ಕುಟುಂಬದಲ್ಲಿ ಕೆಲವು ವಿವಾಹ ಸಮಾರಂಭಗಳು ನಡೆಯಲಿವೆ. ನೀವು ಗೃಹೋಪಯೋಗಿ ವಸ್ತುಗಳು ಮತ್ತು ಸರಕುಗಳನ್ನು ಖರೀದಿಸಬಹುದು. ಹನುಮಾನ್ ಚಾಲೀಸಾ, ಶನಿ ಮಂತ್ರವನ್ನು ಪಠಿಸಿ.
ಧನು ರಾಶಿ
ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಮಕ್ಕಳ ಜವಾಬ್ದಾರಿಗಳು ಹೆಚ್ಚಾಗುತ್ತವೆ. ನಿಮ್ಮ ಅತ್ತೆ-ಮಾವರಿಂದ ನಿಮಗೆ ಬೆಂಬಲ ಸಿಗುತ್ತದೆ. ಯಾವುದೇ ಕೆಲಸವನ್ನು ಪೂರ್ಣಗೊಳಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆರ್ಥಿಕ ಜೀವನ ಉತ್ತಮವಾಗಿರುತ್ತದೆ. ಸಹಾಯ ಮಾಡುವುದು ಜೀವನದ ತೊಂದರೆಗಳನ್ನು ನಿವಾರಿಸುತ್ತದೆ.
ಮಕರ ರಾಶಿ
ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ನೀವು ಅನಗತ್ಯ ತೊಂದರೆಗಳು ಮತ್ತು ಒತ್ತಡವನ್ನು ಎದುರಿಸಬಹುದು. ಅನಾರೋಗ್ಯದ ಒತ್ತಡವನ್ನು ಅನುಭವಿಸುವಿರಿ. ಆರ್ಥಿಕ ಅಪಾಯಗಳಿಂದ ದೂರವಿರಿ. ಅಗತ್ಯವಿರುವ ಪ್ರಾಣಿಗಳಿಗೆ ಆಹಾರ ನೀಡಿ. ಎಲ್ಲಾ ಸಮಸ್ಯೆಗಳ ಪರಿಹಾರವಾಗಲು ಗಣೇಶನ ದೇವಸ್ಥಾನಕ್ಕೆ ಭೇಟಿ ನೀಡಿ.
ಕುಂಭ ರಾಶಿ
ಸರ್ಕಾರದಿಂದ ಬೆಂಬಲ ಸಿಗಲಿದೆ. ಕಲೆ ಮತ್ತು ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮಾಡಲಾಗುತ್ತಿರುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಎಚ್ಚರಿಕೆಯಿಂದ ಚಾಲನೆ ಮಾಡಿ. ನಿಮ್ಮ ಹೆತ್ತವರಿಂದ ಆಶೀರ್ವಾದ ಪಡೆದು ಮನೆಯಿಂದ ಹೊರಗೆ ಹೋದರೆ ದಿನ ಚೆನ್ನಾಗಿರುತ್ತದೆ.
ಮೀನ ರಾಶಿ
ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಂಬಂಧಗಳಲ್ಲಿ ಆತ್ಮೀಯತೆ ಇರಲಿದೆ. ನಿಮ್ಮ ಉತ್ಸಾಹಭರಿತ ಪ್ರದರ್ಶನದಿಂದ ನೀವು ಜನರ ಹೃದಯಗಳನ್ನು ಗೆಲ್ಲುತ್ತೀರಿ. ಕುಟುಂಬ ಜೀವನದಲ್ಲಿ ಸಂತೋಷ ಇರಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ವಸ್ತುಗಳ ಖರೀದಿಗೆ ಹಣ ಖರ್ಚು ಮಾಡುವಿರಿ. ಹಣದ ಸಹಾಯ ಸಿಗಲಿದೆ. ಈ ದಿನ ಚೆನ್ನಾಗಿರುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications