Horoscope Today: ದಿನ ಭವಿಷ್ಯ ಏಪ್ರಿಲ್ 7- ಈ ರಾಶಿಗೆ ಪರಶಿವನ ದೆಸೆಯಿಂದ ಎಲ್ಲಾ ಸಂಕಷ್ಟ ದೂರ

ಪ್ರತಿ ನಿತ್ಯ ಈ ದಿನ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ದಿನದ ಆರಂಭದಿಂದ ಮುಕ್ತಾಯದವರೆಗೂ ಯಾವೆಲ್ಲಾ ಕೆಲಸ ಕಾರ್ಯಗಳು ಸುಲಲಿತವಾಗಿ ನೆರವೇರುತ್ತವೆ? ಯಾವ ಕೆಲಸಗಳು ಆಗಲ್ಲ? ಯಾವ ಕೆಲಸ ಮಾಡಿದರೆ ಒಳ್ಳೆಯದು? ಯಾವುದರಿಂದ ಧನಲಾಭವಾಗಲಿದೆ ಎಲ್ಲವನ್ನೂ ತಿಳಿಯಲು ಬಯಸುವವರಿಗೆ ಈ ದಿನ ಭವಿಷ್ಯ ಸಹಾಯಕವಾಗಿದೆ. ಹಾಗಾದರೆ ಈ ದಿನ ಏಪ್ರಿಲ್ 7, ವಾರದ ಮೊದಲನೇ ದಿನ ಸೋಮವಾರ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಈ ದಿನ ತುಂಬಾ ಮುಖ್ಯವಾದ ದಿನವಾಗಿದೆ. ಶೀಘ್ರದಲ್ಲೇ ದೊಡ್ಡ ಪ್ರಗತಿ ಸಾಧಿಸುವಿರಿ. ವ್ಯಾಪಾರಿಗಳು ಇಂದು ಸಾಲ ಪಡೆಯಲು ಯೋಜನೆ ಮಾಡಿದ್ದರೆ ಅದರ ಬಗ್ಗೆ ಒಳ್ಳೆಯ ಸುದ್ದಿಯನ್ನು ನೀವು ಪಡೆಯುತ್ತೀರಿ. ಮನೆಯ ವಾತಾವರಣ ಶಾಂತವಾಗಿರುತ್ತದೆ. ಆರ್ಥಿಕ ವಿಚಾರದಲ್ಲಿ ಈ ದಿನ ಮಿಶ್ರ ಫಲಿತಾಂಶಗಳು ಪಡೆಯುತ್ತವೆ. ಮಾನಸಿಕವಾಗಿ ತೊಂದರೆ ಮನಸ್ಸಿನಲ್ಲಿ ಗೊಂದಲದಿಂದ ಕೆಲಸ ಸರಿಯಾಗಿ ಮಾಡಲು ಆಗುವುದಿಲ್ಲ. ಹೀಗಾಗಿ ಕೆಲಸದ ಹೊರೆ ಹೆಚ್ಚಾಗುತ್ತದೆ.

Astrology dina bhavishya april 7 12 zodiac signs today prediction in kannada

ವೃಷಭ ರಾಶಿ

ವೃಷಭ ರಾಶಿಯವರಿಗೆ ದಿನವಿಡೀ ಓಡಾಟ ಇರುತ್ತದೆ. ಇದರಿಂದ ನಿಮ್ಮ ಮನಸ್ಸಿನಲ್ಲಿ ಅಶಾಂತಿ ಉಂಟಾಗಬಹುದು. ಒಂದು ಹಂತವನ್ನು ದೇಹ ದಂಡೆಯನ್ನು ಸಹಿಸಿಕೊಳ್ಳಬೇಡಿ. ಇದರಿಂದ ನಿಮ್ಮ ಆರೋಗ್ಯ ಹದಗೆಡಬಹುದು. ನಿಮ್ಮ ವ್ಯವಹಾರದಲ್ಲಿ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಗಂಡ ಹೆಂಡತಿ ನಡುವೆ ಭಿನ್ನಾಭಿಪ್ರಾಯಗಳಿರುತ್ತವೆ.

Take a Poll

ಮಿಥುನ ರಾಶಿ

ಹಣದ ಚಿಂತೆ ದೂರವಾಗಲಿದೆ. ನಿಮ್ಮ ಆದಾಯ ಹೆಚ್ಚಾಗಲಿದೆ. ಕಚೇರಿಯಲ್ಲಿ ನಡೆಯುವ ರಾಜಕೀಯದಿಂದ ದೂರವಿರಿ. ಮನೆ ಸದ್ಯರೊಂದಿಗೆ ಸಂಬಂಧ ಪ್ರೀತಿಯಿಂದ ಕೂಡಿರುತ್ತದೆ. ಸಮಾಧಾನದಿಂದ ಯೋಚನೆ ಮಾಡಿದರೆ ಪರಿಹಾರ ಕಂಡುಕೊಳ್ಳಬಹುದು. ಜೀವನ ಸಂಗಾತಿ ಕೋಪಗೊಂಡರೆ ಶಾಂತವಾಗಿರಿ. ಹಣದ ಬಗ್ಗೆ ವಿವಾದ ಉಂಟಾಗಬಹುದು. ನಿರೀಕ್ಷೆಯಂತೆ ಫಲಿತಾಂಶ ಪಡೆಯಲು ವಿದ್ಯಾರ್ಥಿಗಳು ಹೆಚ್ಚು ಶ್ರಮ ಹಾಕಬೇಕು.

ಕರ್ಕ ರಾಶಿ

ಕರ್ಕಾಟಕ ರಾಶಿಯವರಿಗೆ ನಾಳೆ ಒಳ್ಳೆಯ ಸುದ್ದಿ ಬರಬಹುದು. ಕಳೆದ ಕೆಲವು ದಿನಗಳಿಂದ ನೀವು ಮಾಡಲು ಪ್ರಯತ್ನಿಸುತ್ತಿರುವ ಕೆಲಸವು ಪೂರ್ಣಗೊಳ್ಳುತ್ತದೆ. ಕುಟುಂಬಕ್ಕೆ ಹೊಸ ಅತಿಥಿ ಬರಬಹುದು. ಕೆಲಸದಲ್ಲಿ ಧನಲಾಭ, ಸಂಪತ್ತು ಹೆಚ್ಚಳಕ್ಕೆ ಉಂಟಾಗುವ ಅಡೆತಡೆಗಳು ದೂರವಾಗಲಿವೆ.

ಸಿಂಹ ರಾಶಿ

ಸಿಂಹ ರಾಶಿಯವರು ಇಂದು ಎಚ್ಚರದಿಂದಿರಿ. ನೀವು ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಮಾತನ್ನು ನಿಯಂತ್ರಿಸಿ, ಇಲ್ಲದಿದ್ದರೆ ವಿವಾದ ಉಂಟಾಗಬಹುದು. ನಿಮ್ಮ ಸುಳ್ಳು ಆರೋಪ ಹೊರಿಸಬಹುದು. ಆರೋಗ್ಯ ಹದಗೆಡಬಹುದು. ಕೆಲಸದ ಒತ್ತಡದಿಂದ ನೀವು ದುರ್ಬಲರಾಗುವಿರಿ. ಮನಸ್ಸು ಚಂಚಲವಾಗಿ ಇರುತ್ತದೆ. ನಿಮ್ಮ ನೆಚ್ಚಿನ ದೇವರನ್ನು ಧ್ಯಾನಿಸಿ, ಪೂಜಿಸುವುದರಿಂದ ಪರಿಹಾರ ಸಿಗಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ದಿನ ಮಿಶ್ರಫಲ ಸಿಗಲಿದೆ. ಕುಟುಂಬ ಸದಸ್ಯರೊಂದಿಗೆ ಜಗಳವಾಗಬಹುದು. ನಿಮ್ಮ ವ್ಯವಹಾರ ಪಾಲುದಾರರು ನಿಮಗೆ ಮೋಸ ಮಾಡಬಹುದು. ನಿಮ್ಮ ಮಾತನ್ನು ನಿಯಂತ್ರಿಸಿ. ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ. ಊಟ ಮಾಡುವಾಗ ನಿರ್ಲಕ್ಷ್ಯ ವಹಿಸಿದರೆ ತೊಂದರೆಗೆ ಸಿಲುಕಬಹುದು. ಹೊರಗಿನ ಆಹಾರವನ್ನು ತಪ್ಪಿಸುವುದು ಉತ್ತಮ.

ತುಲಾ ರಾಶಿ

ತುಲಾ ರಾಶಿಯವರು ನಾಳೆ ವಿಶೇಷ ವ್ಯಕ್ತಿಯನ್ನು ಭೇಟಿಯಾಗುತ್ತಾರೆ. ಇದು ಮನಸ್ಸನ್ನು ಸಂತೋಷವಾಗಿಡುತ್ತದೆ. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ನಿಮ್ಮ ಸಂಗಾತಿಯೊಂದಿಗೆ ನೀವು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ನಿಮ್ಮ ಎಲ್ಲಾ ಚಿಂತೆಗಳು ದೂರವಾಗುತ್ತವೆ. ಪರ ಶಿವನ ಆಶೀರ್ವಾದ ಪಡೆಯಲು ಲಿಂಗ ಪೂಜೆ ಮಾಡಿ. ಬಿಲ್ವಪತ್ರೆಯನ್ನು ಅರ್ಪಿಸಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ದಿನ ಶುಭ ತರಲಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಯಶಸ್ಸು ಸಿಗಲಿದೆ. ಅಂದುಕೊಂಡ ಉದ್ಯೋಗ ನಿಮಗೆ ಸಿಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ನಿಮಗೆ ದೊಡ್ಡ ಆರ್ಡರ್ ಸಿಗುತ್ತದೆ. ಹೊಸ ಆದಾಯದ ಮಾರ್ಗಗಳು ತೆರೆದುಕೊಳ್ಳುತ್ತವೆ. ಎಲ್ಲಾ ಕೆಲಸಗಳನ್ನು ಸುಲಭವಾಗಿ ಮಾಡಲು ಪ್ರಯತ್ನಿಸುವಿರಿ.

ಧನು ರಾಶಿ

ಧನು ರಾಶಿಯವರಿಗೆ ಈ ದಿನ ಸ್ವಲ್ಪ ಸಮಸ್ಯೆಯನ್ನು ತರಬಹುದು. ನಿಮ್ಮ ಆರೋಗ್ಯದ ಬಗ್ಗೆ ನೀವು ಚಿಂತಿತರಾಗಬಹುದು. ಮನಸ್ಸಿನಲ್ಲಿ ಆತಂಕ ಹೆಚ್ಚಾಗಲಿದೆ. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ನಷ್ಟವಾಗುವ ಸಾಧ್ಯತೆಯನ್ನು ತಪ್ಪಿಸಿ. ಯಾವುದೇ ಸ್ನೇಹಿತರ ಮಾತನ್ನು ಆಲಿಸಬೇಡಿ, ನೂರು ಬಾರಿ ಯೋಚಿಸಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಮಕರ ರಾಶಿ

ಈ ದಿನ ನಿಮಗೆ ಸಮಸ್ಯೆಗಳಿಂದ ತುಂಬಿರುತ್ತದೆ. ಈ ದಿನ ನಿಮಗೆ ಆರೋಗ್ಯ ಹದಗೆಡಬಹುದು. ನಿಮ್ಮ ಕುಟುಂಬದಲ್ಲಿ ಯಾರೊಬ್ಬರ ಬಗ್ಗೆ ಅಹಿತಕರ ಸುದ್ದಿ ಕೇಳುವಿರಿ. ವ್ಯವಹಾರ ಇತ್ಯಾದಿಗಳಲ್ಲಿ ನಷ್ಟ ಅನುಭವಿಸಬೇಕಾಗಬಹುದು. ಹೀಗಾಗಿ ಈ ದಿನ ಜಾಗರೂಕರಾಗಿರಿ. ಹೊಸ ಕೆಲಸಕ್ಕೆ ಕೈ ಹಾಕಬೇಡಿ. ಯಾವುದೇ ಹೊಸ ಕೆಲಸಕ್ಕೆ ಕೈ ಹಾಕುವಾಗ ಜಾಗರೂಕರಾಗಿರಿ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಇಂದು ತುಂಬಾ ಒಳ್ಳೆಯ ದಿನವಾಗಿದೆ. ನೀವು ನ್ಯಾಯಾಲಯದ ಪ್ರಕರಣವನ್ನು ಗೆಲ್ಲುತ್ತೀರಿ. ಯೋಜಿತ ಕೆಲಸಗಳು ಪೂರ್ಣಗೊಳ್ಳುತ್ತವೆ. ಸ್ನೇಹಿತರು ಮತ್ತು ಸಂಬಂಧಿಕರಿಂದ ನಿಮಗೆ ಸಂಪೂರ್ಣ ಆರ್ಥಿಕ ನೆರವು ಸಿಗುತ್ತದೆ. ನೀವು ಕೆಲವು ಹೊಸ ಕೆಲಸಗಳನ್ನು ಪ್ರಾರಂಭಿಸಬಹುದು. ನಿಮ್ಮ ಕುಟುಂಬದೊಂದಿಗೆ ಧಾರ್ಮಿಕ ಪ್ರವಾಸಕ್ಕೆ ಹೋಗಬಹುದು.

ಮೀನ ರಾಶಿ

ನೀವು ನಿಮ್ಮ ಕುಟುಂಬದೊಂದಿಗೆ ಎಲ್ಲೋ ಹೋಗಬಹುದು. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಹೊಸ ವಾಹನ, ಮನೆ ಇತ್ಯಾದಿ ಖರೀದಿಸುವ ಸಾಧ್ಯತೆ ಇದೆ. ಆದರೆ ಈ ಸಮಯದಲ್ಲಿ ಯಾವುದೇ ಹೊಸ ದುಬಾರಿ ವಸ್ತು ಖರೀದಿಗೆ ಮುಂದಾಗಬೇಡಿ. ನೀವು ಹೊಸ ಕೆಲಸವನ್ನು ಪ್ರಾರಂಭಿಸುವುದು ಮುಂದೂಡಿ. ಆಗ ನಿಮಗೆ ಯಶಸ್ಸು ಸಿಗುತ್ತದೆ.

ಪತ್ನಿಯೊಂದಿಗಿದ್ದ ಮನಸ್ತಾಪ ದೂರವಾಗಲಿದೆ. ಎಲ್ಲೋ ಪ್ರವಾಸಕ್ಕೆ ನೀವು ಅವರನ್ನು ಕರೆದುಕೊಂಡು ಹೋಗಬಹುದು. ಇದರಿಂದ ನಿಮ್ಮ ನಡುವೆ ಸಂಬಂಧ ಗಟ್ಟಿಯಾಗುತ್ತವೆ. ಕುಟುಂಬದ ಜವಬ್ದಾರಿಯನ್ನು ಸರಿಯಾಗಿ ಪಾಲಿಸುವಿರಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+