Chanakya Niti : ಸಂಸಾರದಲ್ಲಿ ನೆಮ್ಮದಿ ಇರಬೇಕಾದರೆ ಮದುವೆಯಾದ ಪ್ರತೀ ಪುರುಷ ಈ ಐದು ಸುಳ್ಳುಗಳನ್ನು ಹೇಳಲೇಬೇಕಂತೆ!
Chanakya Niti : ಎಲ್ಲಾ ಸಂಬಂಧದ ಬುನಾದಿಯೇ ಸತ್ಯ ಎಂದು ಹೇಳುತ್ತೇವೆ. ಸಂಬಂಧಗಳ ನಡುವೆ ಸುಳ್ಳು ಬಂದರೆ ಆ ಸಂಬಂಧಕ್ಕೆ ಹೆಚ್ಚು ಬಾಳಿಕೆ ಇಲ್ಲ ಅಂತಾನೂ ಹೇಳ್ತಾರೆ. ಸತ್ಯ ಇದ್ದಾಗ ಅಲ್ಲಿ ನಂಬಿಕೆಯೂ ಗಟ್ಟಿಯಾಗಿ ಇರುತ್ತದೆಯಂತೆ. ಆದ್ರೆ, ಶಿಕ್ಷಕ ಮತ್ತುಅರ್ಥ ಶಾಸ್ತ್ರಜ್ಞ ಚಾಣಕ್ಯ ಹೇಳುವುದೇ ಬೇರೆ. ಮಾನವ ಸ್ವಭಾವದ ಬಗ್ಗೆ ಆಳವಾಗಿ ಅರ್ಥಮಾಡಿಕೊಂಡಿರುವ ಇವರು ಸಂಬಂಧ ಮತ್ತು ಸತ್ಯಗಳ ಬಗ್ಗೆ ತಮ್ಮದೇ ವಾದವನ್ನು ತಮ್ಮ ನೀತಿಯಲ್ಲಿ ಹೇಳಿದ್ದಾರೆ.
ಸತ್ಯವನ್ನೇ ಮಾತನಾಡಿ ಆದರೆ ಆ ಸತ್ಯ ಕೇಳುವುದಕ್ಕೆ ಹಿತವಾಗಿದ್ದಾಗ ಮಾತ್ರ ಎಂದು ಹೇಳಿದ್ದಾರೆ. ಅಹಿತಕರ ಸತ್ಯವನ್ನು ಹೇಳುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಿದ್ದಾರೆ. ಮದುವೆಯಲ್ಲಿ ಸತ್ಯವು ಅಹಂಕಾರವಾಗಿರಬಾರದು. ಕೆಲವೊಮ್ಮೆ, ಕೆಲವು ಸಂದರ್ಭಗಳಲ್ಲಿ ಸುಳ್ಳು ಹೇಳುವುದು ಕೂಡಾ ದ್ರೋಹವಲ್ಲ ಎಂದಿದ್ದಾರೆ. ಅನಗತ್ಯವಾಗಿ ಕಠೋರ ಸತ್ಯವನ್ನು ಹೇಳಿ ಸಂಬಂಧವನ್ನು ಹೊರೆಯಾಗಿಸುವ ಬದಲು ಸಂಬಂಧವನ್ನು ಉಳಿಸಿಕೊಳ್ಳಲು ಹೇಳುವ ಸುಳ್ಳು ಮೋಸವಲ್ಲ ಎಂದು ಹೇಳಿದ್ದಾರೆ.

ಪ್ರತಿಯೊಬ್ಬ ಪುರುಷನೂ ತಿಳಿದುಕೊಳ್ಳಬೇಕಾದ 5 ಪ್ರಮುಖ ಚಾಣಕ್ಯ ಸೂತ್ರಗಳು
ನೀವು ಯಾವಾಗಲೂ ಸುಂದರ
ಮಹಿಳೆ ಹೇಗೆ ಕಾಣುತ್ತಾಳೆ ಎನ್ನುವುದನ್ನು ತಿಳಿಯುವುದಕ್ಕೆ ಕನ್ನಡಿ ಬೇಕಿಲ್ಲ. ಅವಳ ಸೌಂದರ್ಯೌವನ್ನು ಮೀರಿದ ಬೆಲೆ ಅವಳಿಗಿದೆ ಎನ್ನುವ ಭರವಸೆ ಆಕೆಗೆ ಇದ್ದರೆ ಸಾಕು. ತನ್ನ ಬಗ್ಗೆ ಆಕೆಗೆ ಸಂದೇಹ ಮೂಡಿದಾಗ ಪತಿಯ ಮಾತುಗಳು ಅವಳಿಗೆ ಶಕ್ತಿಯಾಗಬೇಕು. ಹೂವುಗಳ ಪರಿಮಳ ಗಾಳಿಯ ದಿಕ್ಕಿನಲ್ಲಿ ಮಾತ್ರ ಹರಡುತ್ತದೆ. ಆದರೆ ವ್ಯಕ್ತಿಯ ಒಳ್ಳೆಯತನ ಎಲ್ಲಾ ದಿಕ್ಕುಗಳಲ್ಲಿಯೂ ಹರಡುತ್ತದೆ ಎನ್ನುವುದು ನೆನಪಿರಲಿ. ಆಕೆಯ ಸೌಂದರ್ಯದ ಬಗ್ಗೆ ಮಾತನಾಡುವಾಗ ಅವಳ ದೇಹ ಸೌಂದರ್ಯ ಮಾತ್ರವಲ್ಲ ಮನಸ್ಸಿನ ಸುಂದರತೆಯನ್ನೂ ಗುರುತಿಸಿಕೊಳ್ಳಿ. ಹಾಗಾಗಿ ನೋಡುವುದಕ್ಕೆ ಸುಂದರವಾಗಿಲ್ಲದಿದ್ದರೂ ಅದನ್ನು ಕಹಿ ಸತ್ಯದಂತೆ ಹೇಳುವ ಬದಲು ಆಕೆಯ ಮನಸ್ಸಿನ ಸೌಂದರ್ಯವನ್ನು ಅರಿತುಕೊಂಡು ಆಕೆಯ ಸೌಂದರ್ಯವನ್ನು ಹೊಗಳುವುದು ಜಾಣತನ.
ನಾನು ನಿನ್ನ ಮಾತನ್ನು ಕೇಳುತ್ತಿದ್ದೇನೆ
ಮಾತನ್ನು ಕೇಳುವುದು ಎಂದರೆ ಪ್ರತಿ ಪದಗಳಿಗೂ ಕಿವಿಯಾಗುವುದಲ್ಲ. ಮಾತನಾಡುವ ವ್ಯಕ್ತಿಯನ್ನು ಗೌರವಿಸುವುದು. ಅವಳೇನು ಹೇಳುತ್ತಿದ್ದಾಳೆ ಎನ್ನುವುದಕ್ಕೆ ನೀವು ಕಿವಿ ಕೊಡದೇ ಹೋದರೂ ನೀವು ಅಲ್ಲಿ ಇದ್ದೀರಿ ಎನ್ನುವುದು ಬಹಳ ಮುಖ್ಯವಾಗುತ್ತದೆ. ಶಿಕ್ಷಣ ನಮ್ಮ ಅತ್ಯುತ್ತಮ ಸ್ನೇಹಿತ. ವಿದ್ಯಾವಂತ ವ್ಯಕ್ತಿಗೆ ಎಲ್ಲಾ ಕಡೆ ಗೌರವ ಸಿಗುತ್ತದೆ. ಮದುವೆ ಕೂಡಾ ಒಂದು ಶಿಕ್ಷಣವೇ. ಇಲ್ಲಿ ಪರಸ್ಪರರ ಭಾವನೆಗಳು, ಭಯ ಮತ್ತು ಸಂತೋಷಗಳನ್ನು ಅರಿತುಕೊಳ್ಳಬೇಕು. ನಾನು ನಿನ್ನೊಂದಿಗೆ ಇದ್ದೇನೆ ಎನ್ನುವ ಧೈರ್ಯದ ಮಾತೊಂದಿದ್ದರೆ ಎಡವಿದವರೂ ಮೇಲೆದ್ದು ನಿಲ್ಲಲ್ಲು ಸಾಕಾಗುತ್ತದೆ.
ನೀವು ನನಗಾಗಿ ಮಾಡುವುದನ್ನು ನಾನು ಗೌರವಿಸುತ್ತೇನೆ
ಅದು ಊಟವಾಗಲಿ, ಕುಟುಂಬದ ಕಾಳಜಿಯಾಗಲಿ ಅಥವಾ ನಿಮ್ಮ ಕಣ್ಣಿಗೆ ಬೀಳದೇ ನಡೆಯುವ ಅದೇಷ್ಟೋ ಪ್ರಯತ್ನಗಳಾಗಲಿ ಅದಕ್ಕೊಂದು ಮೆಚ್ಚುಗೆಯ ಮಾತಿರಲಿ. ನಿಮ್ಮ ಪತ್ನಿ ನಿಮಗಾಗಿ, ನಿಮ್ಮ ಮನೆಯವರಿಗಾಗಿ ಮಾಡುವ ಕೆಲಸಗಳನ್ನು ಒಂದೇ ಒಂದು ಅಜಾಗರೂಕ ಪದವನ್ನು ಬಳಸಿ ಹಾಳು ಮಾಡಬೇಡಿ. ಇದು ಅವರು ತೋರಿಸುವ ಪ್ರೀತಿ, ಕಾಳಜಿ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಬಹುದು. ಹಾಗಾಗಿ ಪತ್ನಿ ಅಡುಗೆ ಮಾಡುವಾಗ ಅಥವಾ ಕಾಳಜಿ ವಹಿಸುವಾಗ ನಿಮ್ಮ ಗಮನಕ್ಕೆ ಅದು ಬರುತ್ತದೆಯೋ ಬಿಡುತ್ತದೆಯೋ ಅವೆಲ್ಲವೂ ನಿಮಗೆ ಇಷ್ಟವಾಗುತ್ತಿದೆ ಎಂದೇ ಹೇಳಿ.
Chanakya Niti:ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ
ಪ್ರತಿಯೊಂದು ಮನೆಯಲ್ಲಿ ಎಲ್ಲವೂ ಸರಿಯಾಗಿರುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ. ಕೆಲವೊಮ್ಮೆ ಎಷ್ಟೇ ಪ್ರಯತ್ನಪ್ಟಟರೂ ಎಲ್ಲವನ್ನೂ ಸರಿ ಮಾಡುವುದು ಸಾಧ್ಯವಾಗುವುದೇ ಇಲ್ಲ. ಕೆಲವೊಂದು ಜವಾಬ್ದಾರಿ ಪೂರೈಸುವುದು ಸಾಧ್ಯವಾಗದೇ ಹೋದಾಗ ಮದುವೆಯೇ ಮುರಿದು ಬೀಳಬಹುದು. ಈ ಸಂದರ್ಭದಲ್ಲಿ ಜವಾಬ್ದಾರಿಯನ್ನು ಒಬ್ಬಳ ಹೆಗಲ ಮೇಲೆ ಹಾಕುವ ಬದಲು ಹೊರೆಯನ್ನು ಜೊತೆಯಾಗಿ ಹೊತ್ತರೆ ನಂಬಿಕೆ ಭರವಸೆ ಹುಟ್ಟಿಕೊಳ್ಳುವುದು. ಇಲ್ಲಿ ಚಾಣಾಕ್ಯರು ಹೇಳುವ ಪ್ರಕಾರ, ಒಬ್ಬ ವ್ಯಕ್ತಿ ತುಂಬಾ ಪ್ರಾಮಾಣಿಕನಾಗಿರಬಾರದು. ಯಾಕೆಂದರೆ ನೇರವಾಗಿರುವ ಮರಗಳನ್ನೇ ಮೊಸಲು ಕಡಿಯುವುದು ನಿಯಮ. ಹಾಗೆಯೇ ಪ್ರಾಮಾಣಿಕ ಜನರನ್ನೇ ಮೊದಲು ಕೆಡವಲಾಗುತ್ತದೆ. ನನಗೆ ಸಮಯವಿಲ್ಲ ಎನ್ನುವಂಥಹ ಪದಗಳು ಪ್ರಾಮಾಣಿಕವಾಗಿದ್ದರೂ ಅದು ಅಸಮಾಧಾನವನ್ನು ಹುಟ್ಟುಹಾಕುತ್ತದೆ. ಇದರ ಬದಲು ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇವೆ ಎನ್ನುವಂಥಹ ಸೌಮ್ಯವಾದ ಮಾತುಗಳು ಅಥವಾ ಸುಳ್ಳು ಹೊಸ ಭರವಸೆಯನ್ನು ನೀಡಬಹುದು.
Chanakya Niti:ನನಗೆ ನೀನೊಬ್ಬಳೇ
ಹೊರಗಿನ ಜಗತ್ತಿನಲ್ಲಿ ಆಕರ್ಷಣೆ ಇರಬಹುದು. ಆದರೆ ಭಕ್ತಿ ಮನೆಯಲ್ಲಿಯೇ ಇರಬೇಕು. ಮದುವೆ ಎಂದರೆ ವಾಸ್ತವವನ್ನು ನಿರಾಕರಿಸುವುದಲ್ಲ, ಶಿಸ್ತಿನಿಂದ ನಿಷ್ಠೆಯನ್ನು ಆರಿಸಿಕೊಳ್ಳುವುದು. ಪುರುಷ ತನ್ನ ಹುಟ್ಟಿನಿಂದ ಶ್ರೇಷ್ಠ ಅಲ್ಲವೇ ಅಲ್ಲ, ಆತ ತನ್ನ ಕರ್ಮಗಳಿಂದಲೇ ಶ್ರೇಷ್ಠನಾಗುವುದು. ಮದುವೆಯಲ್ಲಿ ಆತ ಎಷ್ಟು ಶ್ರೇಷ್ಠ ಎನ್ನುವುದು ಆತನ ನಿಷ್ಠೆ ನಿರ್ಧಾರ ಮಾಡುತ್ತದೆ. ಅದು ನಿಮ್ಮ ಸಂಗಾತಿಯ ಮನಸ್ಸಿನಲ್ಲಿ ಅನುಮಾನ ಮೂಡುವುದನ್ನು ತಡೆಯುತ್ತದೆ. ಭಯ ಮತ್ತು ಹೋಲಿಕೆಗಳಿಂದ ರಕ್ಷಿಸುತ್ತದೆ. ನೀನೊಬ್ಬಳೇ ಅಂತ ಹೇಳುವುದು ಸುಳ್ಳಲ್ಲ, ಅದು ಪ್ರತಿದಿನ ಪುನರಾವರ್ತಿಸುವ ಪ್ರತಿಜ್ಞೆ.
ಮದುವೆಯನ್ನು ಜೀವಂತವಾಗಿರಿಸುವುದು ಕ್ರೂರ ಪ್ರಾಮಾಣಿಕತೆಯ ಮಾತುಗಳಿಂದಲ್ಲ, ಬದಲಾಗಿ ಬುದ್ಧಿವಂತ ಮಾತುಗಳ ಮೃದು ಬಲದಿಂದ. ಚಾಣಕ್ಯ ಎಂದಿಗೂ ವಂಚನೆಯನ್ನು ಉತ್ತೇಜಿಸಲಿಲ್ಲ. ಅವನು ಮಾತಿನಲ್ಲಿ ತಂತ್ರ, ಸಮಯಪ್ರಜ್ಞೆ ಮತ್ತು ಕರುಣೆಯನ್ನು ಒತ್ತಿ ಹೇಳಿದ್ದಾನೆ. ಈ ಸುಳ್ಳುಗಳು ಸುಳ್ಳುಗಳಲ್ಲ. ಅವು ಪ್ರೀತಿಯ ಗುರಾಣಿಗಳು. ಸತ್ಯವನ್ನು ಮರೆಮಾಚುವ ಗುರಾಣಿ ಅಲ್ಲ ಬದಲಿಗೆ ಬಂಧವನ್ನು ಕಾಪಾಡಿಕೊಳ್ಳಲು ಇರುವಂಥದ್ದು.
ಚಾಣಕ್ಯನ ಪ್ರಕಾರ ಪ್ರತಿಯೊಂದು ಸ್ನೇಹದ ಹಿಂದೆಯೂ ಸ್ವಲ್ಪ ಸ್ವಾರ್ಥವಿರುತ್ತದೆ. ಸ್ವಾರ್ಥವಿಲ್ಲದೆ ಸ್ನೇಹ ಇರುವುದಿಲ್ಲ. ಇದು ಕಹಿ ಸತ್ಯ. ಮದುವೆಯಲ್ಲಿ, ಆ ಸ್ವಾರ್ಥ ಸರಳವಾಗಿರಬೇಕು. ಪ್ರೀತಿಯ ಉಳಿವು, ಸಾಮರಸ್ಯದ ರಕ್ಷಣೆ ಮತ್ತು ಎರಡು ಆತ್ಮಗಳು ಒಟ್ಟಿಗೆ ನಡೆಯುವ ಬೆಳವಣಿಗೆಯಾಗಬೇಕು.


Click it and Unblock the Notifications
