Career Horoscope 2023: 2024ರಲ್ಲಿ ಈ 3 ರಾಶಿಯವರ ವ್ಯವಹಾರಕ್ಕಿದೆ ಶನಿದೇವನ ಕೃಪೆ
ಶನಿ ದೇವನು ವ್ಯಕ್ತಿಯ ಕಾರ್ಯಗಳಿಗೆ ಅನುಗುಣವಾಗಿ ಫಲಿತಾಂಶವನ್ನು ನೀಡುತ್ತದೆ. ತಪ್ಪು ಮಾಡಿದವರು ಶನಿ ದೇವನ ಮುಂದೆ ಶರಣಾಗಲೇಬೇಕು. ಹೀಗಾಗಿ ಜೀವನದಲ್ಲಿ ಶನಿ ದೇವನ ಆಶೀರ್ವಾದ ಇರುವುದು ಮುಖ್ಯ. ಶನಿಯು ನಿಧಾನವಾಗಿ ಚಲಿಸುವ ಗ್ರಹವಾಗಿದ್ದು ಸುಮಾರು 2 1/2 ವರ್ಷಗಳಿಗೊಮ್ಮ ರಾಶಿಯನ್ನು ಬದಲಾಯಿಸುತ್ತದೆ. ಶನಿ ಗ್ರಹವು ದೀರ್ಘಕಾಲದವರೆಗೆ ರಾಶಿಯಲ್ಲಿ ಸಂಚರಿಸುವುದರಿಂದ ಮಾನವ ಜೀವನದ ಮೇಲೆ ಅದರ ಪ್ರಭಾವವು ಸಾಕಷ್ಟು ಆಳವಾಗಿರುತ್ತದೆ.
ಶನಿಯು ಪ್ರಸ್ತುತ ತನ್ನ ಮೂಲತ್ರಿಗೋನ ರಾಶಿಯಾದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಮುಂಬರುವ 2024ರಲ್ಲಿ ಶನಿಯು ಕುಂಭ ರಾಶಿಯಲ್ಲಿಯೇ ಸಂಚರಿಸುತ್ತಾನೆ. ಶನಿಯು ಈ ರಾಶಿಯಲ್ಲಿ ಪ್ರಯಾಣಿಸುತ್ತಿರುವುದರಿಂದ ಈ ಇಡೀ ವರ್ಷ ಕೆಲವು ರಾಶಿಚಕ್ರದವರಿಗೆ ಒತ್ತಡದಿಂದ ಕೂಡಿರುತ್ತದೆ.
ಶನಿಯು ತನ್ನ ರಾಶಿಯನ್ನು ಬದಲಾಯಿಸದಿದ್ದರೂ ಸಹ ಈ ಹೊಸ ವರ್ಷದಲ್ಲಿ ಅಸ್ತಮಿಸುತ್ತಾನೆ ಮತ್ತು ಉದಯಿಸುತ್ತಾನೆ. ಶನಿದೇವನ ಸ್ಥಾನದ ಈ ಬದಲಾವಣೆಯಿಂದಾಗಿ ಕೆಲವು ರಾಶಿಚಕ್ರದವರು ಶನಿ ದೇವರ ಕೃಪೆಯಿಂದ ತಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಹಾಗಾದರೆ ಆ ಅದೃಷ್ಟದ ರಾಶಿಗಳು ಯಾರೆಂದು ನೋಡೋಣ.

ಮೇಷ ರಾಶಿ
ಶನಿಯ ಕೃಪೆಯಿಂದ ಮೇಷ ರಾಶಿಯವರಿಗೆ 2024 ರ ವರ್ಷವು ಉತ್ತಮವಾಗಿರುತ್ತದೆ. ಮುಖ್ಯವಾಗಿ ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸು ಮತ್ತು ಪ್ರಗತಿ ಇರುತ್ತದೆ. ಉದ್ಯೋಗಿಗಳಿಗೆ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ಕಚೇರಿಯಲ್ಲಿನ ಉನ್ನತ ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷಪಡುತ್ತಾರೆ.
ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ ಸಿಗಲಿದೆ. ನೀವು ಬಹಳ ದಿನಗಳಿಂದ ಹೊಸ ಕೆಲಸವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ ನೀವು ಈ ವರ್ಷವನ್ನು ಪ್ರಾರಂಭಿಸಿದರೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಈ ವರ್ಷ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಶನಿದೇವನ ಕೃಪೆಯಿಂದ ನೀವು ಹೊಸ ಆದಾಯದ ಮೂಲಗಳನ್ನು ಸೃಷ್ಟಿಸುವಿರಿ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ 2024ರ ವರ್ಷ ಶನಿಯ ಆಶೀರ್ವಾದದಿಂದ ಅದ್ಭುತವಾಗಿರುತ್ತದೆ. ನಿಮ್ಮ ಕೆಲಸವನ್ನು ಬದಲಾಯಿಸುವ ದೀರ್ಘಾವಧಿಯ ಬಯಕೆಯನ್ನು ನೀವು ಹೊಂದಿದ್ದರೆ ಅದು 2024 ರಲ್ಲಿ ನನಸಾಗುವ ಸಾಧ್ಯತೆಯಿದೆ. ಕೆಲವರಿಗೆ ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ವೃತ್ತಿಪರವಾಗಿ ಉತ್ತಮ ಪ್ರಗತಿಯನ್ನು ಕಾಣಬಹುದು. ಕಠಿಣ ಪರಿಶ್ರಮಕ್ಕೆ ಈ ವರ್ಷ ಸಂಪೂರ್ಣ ಪ್ರತಿಫಲ ದೊರೆಯಲಿದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಶನಿದೇವನ ಕೃಪೆಯಿಂದ ಉತ್ತಮ ಲಾಭ ದೊರೆಯಲಿದೆ.

ತುಲಾ ರಾಶಿ
2024 ತುಲಾ ರಾಶಿಯವರಿಗೆ ಸಂತೋಷದ ವರ್ಷವಾಗಿರುತ್ತದೆ. ಮುಖ್ಯವಾಗಿ ಶನಿ ದೇವರ ಆಶೀರ್ವಾದದಿಂದಾಗಿ ವೃತ್ತಿಪರ ಜೀವನದಲ್ಲಿ ಧನಾತ್ಮಕ ಪ್ರಯೋಜನಗಳನ್ನು ಪಡೆಯಬಹುದು. ಕೆಲವರು ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಬಹುದು.
ಕುಟುಂಬದೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ಅವಕಾಶಗಳನ್ನು ಪಡೆಯುತ್ತೀರಿ. ಕೆಲಸದಲ್ಲಿ ನಿಮ್ಮ ಕೌಶಲ್ಯದಿಂದ ನೀವು ಅನೇಕ ಜನರನ್ನು ಮೆಚ್ಚಿಸುತ್ತೀರಿ. ಈ ವರ್ಷ ನೀವು ಹೊಸದನ್ನು ಕಲಿಯುವಿರಿ ಮತ್ತು ಅದರಿಂದ ಪ್ರಯೋಜನ ಪಡೆಯುತ್ತೀರಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಉತ್ತಮ ಲಾಭವನ್ನು ನೀಡುತ್ತದೆ. ಒಟ್ಟಾರೆ ಈ ವರ್ಷ ಜೀವನ ಸುಖಮಯವಾಗಿರುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications