ಮಕರ ರಾಶಿಯಲ್ಲಿ ಚತುರ್ಗ್ರಹ ಮಹಾಯೋಗ – ಪರಮೋಚ್ಚ ಕುಜ ಮತ್ತು ಪ್ರಪಂಚ ಮಹಾಯುದ್ಧದ ಭೀತಿಕರ ಸೂಚನೆಗಳು
ಭಾರತೀಯ ಜ್ಯೋತಿಷ್ಯ ಶಾಸ್ತ್ರವು ಕೇವಲ ವ್ಯಕ್ತಿಯ ಜಾತಕವನ್ನು ಮಾತ್ರವಲ್ಲ, ರಾಜ್ಯಗಳು, ಸಾಮ್ರಾಜ್ಯಗಳು, ಆಡಳಿತಗಾರರು ಮತ್ತು ವಿಶ್ವಮಟ್ಟದ ಯುದ್ಧ-ಶಾಂತಿ ಪರಿಸ್ಥಿತಿಗಳನ್ನೂ ವಿಶ್ಲೇಷಿಸುವ ಶಕ್ತಿಯನ್ನು ಹೊಂದಿದೆ. ಪ್ರಾಚೀನ ಜ್ಯೋತಿಷ್ಯ ಗ್ರಂಥಗಳನ್ನು ಗಮನಿಸಿದರೆ, ಪ್ರಪಂಚದಲ್ಲಿ ಸಂಭವಿಸಿದ ಅನೇಕ ಮಹಾಯುದ್ಧಗಳು, ಸಾಮ್ರಾಜ್ಯಗಳ ಪತನಗಳು ಮತ್ತು ಆಡಳಿತಗಾರರ ನಾಶಗಳ ಹಿಂದೆ ಗಂಭೀರ ಗ್ರಹಸಂಯೋಗಗಳು ಕಾರ್ಯನಿರ್ವಹಿಸಿರುವುದು ಸ್ಪಷ್ಟವಾಗುತ್ತದೆ. (ಬರಹ: ಪಂಡಿತ್ ವಿಠ್ಠಲ್ ಭಟ್)
2026ರ ಜನವರಿ ಕೊನೆಯವರೆಗೆ ಮಕರ ರಾಶಿಯಲ್ಲಿ ಕುಜ, ರವಿ, ಶುಕ್ರ ಮತ್ತು ಬುಧ ಸೇರಿ ರೂಪುಗೊಳ್ಳುತ್ತಿರುವ ಚತುರ್ಗ್ರಹ ಮಹಾಯೋಗ, ಅದರಲ್ಲೂ ಕುಜ ಪರಮೋಚ್ಚ ಸ್ಥಿತಿಯಲ್ಲಿ ಇರುವುದರಿಂದ, ಇದು ಸಾಮಾನ್ಯ ಗ್ರಹಯೋಗವಲ್ಲ. ಜ್ಯೋತಿಷ್ಯ ದೃಷ್ಟಿಯಲ್ಲಿ ಇದು ಖಚಿತ ಪ್ರಪಂಚ ಮಟ್ಟದ ಮಹಾ ಸಂಘರ್ಷಗಳ ಲಕ್ಷಣಗಳನ್ನು ತೋರಿಸುತ್ತಿದ್ದು, ದೊಡ್ಡ ದೊಡ್ಡ ದೇಶಗಳು ಮತ್ತು ಖಂಡಗಳನ್ನು ಆಳುತ್ತಿರುವವರಿಗೆ ಗಂಭೀರ ಪ್ರಾಣಗಂಡವನ್ನು ಸೂಚಿಸುತ್ತದೆ.

ಮಕರ ರಾಶಿ - ಆಡಳಿತ, ಶಕ್ತಿ ಮತ್ತು ಸಾಮ್ರಾಜ್ಯಗಳ ಭವಿಷ್ಯ
ಜ್ಯೋತಿಷ್ಯದಲ್ಲಿ ಮಕರ ರಾಶಿ ಎಂದರೆ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ, ರಾಜಕೀಯ ಶಕ್ತಿ, ಸೇನೆ ಮತ್ತು ಕಾನೂನು, ದೀರ್ಘಕಾಲದ ಆಳ್ವಿಕೆ, ಸಾಮ್ರಾಜ್ಯ ಮನೋಭಾವ, ಬೃಹತ್ ಸಂಹಿತೆ ಯಲ್ಲಿ ವರಾಹಮಿಹಿರರು ಸ್ಪಷ್ಟವಾಗಿ ಹೇಳುತ್ತಾರೆ. "ರಾಜ್ಯಭಾವೇ ಗ್ರಹಸಂಘಾತೋ ರಾಜನಾಶಕರೋ ಭವೇತ್" ಅದರ ಅರ್ಥ ಆಡಳಿತಕ್ಕೆ ಸಂಬಂಧಿಸಿದ ರಾಶಿಯಲ್ಲಿ ಅನೇಕ ಕ್ರೂರ ಗ್ರಹಗಳು ಸೇರಿದರೆ, ರಾಜರು ಮತ್ತು ಆಡಳಿತಗಾರರ ನಾಶ ಅನಿವಾರ್ಯವಾಗುತ್ತದೆ.
ಚತುರ್ಗ್ರಹ ಮಹಾಯೋಗ - ಅಪರೂಪ ಮತ್ತು ಅಪಾಯ
ಒಂದೇ ರಾಶಿಯಲ್ಲಿ ನಾಲ್ಕು ಪ್ರಮುಖ ಗ್ರಹಗಳು ಸೇರಿರುವ ಸ್ಥಿತಿಯನ್ನು ಚತುರ್ಗ್ರಹ ಯೋಗ ಎಂದು ಕರೆಯಲಾಗುತ್ತದೆ. ಇಲ್ಲಿ ಸೇರಿರುವ ಗ್ರಹಗಳು:
ಕುಜ (ಪರಮೋಚ್ಚ) - ಯುದ್ಧ, ರಕ್ತಪಾತ, ಸೇನಾ ಶಕ್ತಿ
ರವಿ - ರಾಜಸತ್ತೆ, ಅಹಂಕಾರ, ರಾಷ್ಟ್ರಾಧ್ಯಕ್ಷರು
ಶುಕ್ರ - ಸಂಪತ್ತು, ಭೋಗ, ಆರ್ಥಿಕ ಆಸಕ್ತಿ
ಬುಧ - ತಂತ್ರ, ರಾಜತಂತ್ರ, ಮಾತು, ಕುತಂತ್ರ. ಈ ನಾಲ್ಕೂ ಗ್ರಹಗಳು ಆಡಳಿತ ರಾಶಿಯಾದ ಮಕರದಲ್ಲಿ ಒಂದೇ ಸಮಯದಲ್ಲಿ ಕ್ರಿಯಾಶೀಲವಾಗಿರುವುದು, ಜ್ಯೋತಿಷ್ಯದಲ್ಲಿ ಅತ್ಯಂತ ಭೀತಿಕರ ಸೂಚನೆ.
ಪರಮೋಚ್ಚ ಕುಜ - ಮಹಾಯುದ್ಧದ ಪ್ರಮುಖ ಕಾರಣ ಕುಜನು ಮಕರ ರಾಶಿಯಲ್ಲಿ ಪರಮೋಚ್ಚ ಸ್ಥಿತಿಯಲ್ಲಿ ಇರುತ್ತಾನೆ. ಇದು ಕುಜನ ಶಕ್ತಿಯ ಗರಿಷ್ಠ ರೂಪ.
ಫಲದೀಪಿಕಾ ಯ ಅರ್ಥಸೂಚನೆ:
"ಉಚ್ಚಸ್ಥೋ ಮಂಗಳೋ ರಾಜ್ಯೇ ಯುದ್ಧಂ ದಾರೂಣಮಾವಹೇತ್"
ಅರ್ಥ: ಉಚ್ಚಸ್ಥಿತಿಯ ಕುಜನು ರಾಜ್ಯಭಾವದಲ್ಲಿ ಇದ್ದರೆ, ಭೀಕರ ಯುದ್ಧಗಳನ್ನು ಉಂಟುಮಾಡುತ್ತಾನೆ.
ಇದು ಸೂಚಿಸುವ ಯುದ್ಧಗಳು: ಸೈನಿಕ ಯುದ್ಧ, ಗಡಿಸಂಘರ್ಷ, ಅಣ್ವಸ್ತ್ರ ಬೆದರಿಕೆ, ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರ ಪ್ರದರ್ಶನ ಇವು ಸ್ಥಳೀಯವಾಗಿರದೆ, ಪ್ರಪಂಚ ಮಟ್ಟದಲ್ಲಿ ವಿಸ್ತಾರಗೊಳ್ಳುವ ಸಾಧ್ಯತೆ ಹೊಂದಿವೆ. ರವಿ + ಕುಜ - ಅಧಿಕಾರದ ಅಹಂಕಾರ ಮತ್ತು ಪತನ. ರವಿಯು ರಾಜಕಾರಕ ಗ್ರಹ. ಕುಜನೊಂದಿಗೆ ಸೇರಿದಾಗ ಇದು ಅಹಂಕಾರ, ದರ್ಪ ಮತ್ತು ಅಧಿಕಾರದ ಮದವನ್ನು ಅತಿಯಾಗಿ ಹೆಚ್ಚಿಸುತ್ತದೆ.
ನಾರದ ಸಂಹಿತೆ ಯಲ್ಲಿ ಹೇಳಿರುವ ಅರ್ಥ:
"ಸೂರ್ಯಮಂಗಲಸಂಯೋಗೇ ರಾಜಾನಾಂ ಪ್ರಾಣಸಂಶಯಃ" ಅಂದರೆ, ರವಿ-ಕುಜ ಸಂಯೋಗವು ಆಡಳಿತಗಾರರಿಗೆ ಪ್ರಾಣಗಂಡವನ್ನು ಉಂಟುಮಾಡುತ್ತದೆ. ಇದರ ಪರಿಣಾಮವಾಗಿ:
ದೊಡ್ಡ ದೇಶಗಳ ನಾಯಕರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಶಾಂತಿಯ ಮಾರ್ಗವನ್ನು ತಳ್ಳಿಹಾಕುತ್ತಾರೆ, ಶಕ್ತಿಯ ಪ್ರದರ್ಶನವನ್ನೇ ಪರಿಹಾರವೆಂದು ನಂಬುತ್ತಾರೆ
ಇಂತಹ ಅಹಂಕಾರವೇ ಸಾಮ್ರಾಜ್ಯಗಳ ಪತನಕ್ಕೆ ಮೂಲ ಕಾರಣ. ಶುಕ್ರ - ಸಂಪತ್ತಿನ ಲಾಲಸೆ ಮತ್ತು ಆರ್ಥಿಕ ಯುದ್ಧ, ಶುಕ್ರನು ಈ ಯೋಗದಲ್ಲಿ ಯುದ್ಧಕ್ಕೆ ಆರ್ಥಿಕ ಸ್ವರೂಪವನ್ನು ನೀಡುತ್ತಾನೆ.
ಶಾಸ್ತ್ರಾರ್ಥ:
ಶುಕ್ರ ರಾಜ್ಯಭಾವದಲ್ಲಿ ಇದ್ದರೆ, ರಾಷ್ಟ್ರಗಳು ಭೂಮಿ, ಸಂಪನ್ಮೂಲ, ಹಣಕ್ಕಾಗಿ ಹೋರಾಡುತ್ತವೆ. ಇದರ ಅರ್ಥ: ತೈಲ, ಅನಿಲ, ಖನಿಜ ಸಂಪತ್ತಿನ ಹೋರಾಟ, ವ್ಯಾಪಾರ ಮಾರ್ಗಗಳ ಹಿಡಿತ
ಜಾಗತಿಕ ಮಾರುಕಟ್ಟೆ ಅಸ್ಥಿರತೆ, ಆರ್ಥಿಕ ಯುದ್ಧವೇ ನಂತರ ಸೈನಿಕ ಯುದ್ಧಕ್ಕೆ ದಾರಿ ಮಾಡಿಕೊಡುತ್ತದೆ.
"ಬುಧಯುಕ್ತೇ ವಾಕ್ಯಶಸ್ತ್ರಂ ಪ್ರಬಲಂ ಭವೇತ್" ಅಂದರೆ: ಮಾತುಗಳೇ ಅಸ್ತ್ರವಾಗುತ್ತವೆ, ಸುಳ್ಳು ಪ್ರಚಾರ, ಸೈಬರ್ ದಾಳಿ, ರಾಜತಾಂತ್ರಿಕ ದ್ರೋಹ, ಇದು ಕಾಣದ ಯುದ್ಧಗಳ ಕಾಲ. ದೊಡ್ಡ ದೇಶಗಳು ಮತ್ತು ಖಂಡಗಳನ್ನು ಆಳುವವರಿಗೆ ಪ್ರಾಣಗಂಡ ಈ ಚತುರ್ಗ್ರಹ ಮಹಾಯೋಗದ ಅತ್ಯಂತ ಗಂಭೀರ ಪರಿಣಾಮ: ದೊಡ್ಡ ದೇಶಗಳ ಅಧ್ಯಕ್ಷರು, ದೀರ್ಘಕಾಲ ಅಧಿಕಾರದಲ್ಲಿರುವ ಆಡಳಿತಗಾರರು, ಸಾಮ್ರಾಜ್ಯ ಮನೋಭಾವ ಹೊಂದಿರುವ ನಾಯಕರು ಪ್ರಾಣಾಪಾಯ,ಅಧಿಕಾರ ನಷ್ಟ,ಜನಾಕ್ರೋಶ, ಅಂತರಾಷ್ಟ್ರೀಯ ಅವಮಾನ ಸಂಭವಿಸುವ ಸಾಧ್ಯತೆ ಹೆಚ್ಚಾಗುತ್ತದೆ.
ಇದು ಖಚಿತ ಮಹಾಯುದ್ಧವೇ? - ಶಾಸ್ತ್ರೀಯ ಸ್ಪಷ್ಟನೆ
ಜ್ಯೋತಿಷ್ಯ ಗ್ರಂಥಗಳು ಹೇಳುವುದೇನು ಎಂದರೆ: "ಗ್ರಹಾಃ ಸೂಚಕಾಃ, ಕರ್ಮ ನಿರ್ಣಾಯಕಂ" ಅರ್ಥ: ಗ್ರಹಗಳು ಸೂಚನೆ ಮಾತ್ರ ನೀಡುತ್ತವೆ, ಯುದ್ಧ ಮಾಡುವ ನಿರ್ಧಾರ ಮಾನವನ ಕೈಯಲ್ಲಿದೆ. ಆದರೆ ಈ ಯೋಗ ಹೇಳುವುದೇನು? 👉 ಯುದ್ಧ ಸಂಭವಿಸುವ ಪರಿಸ್ಥಿತಿ ಗರಿಷ್ಠ ಮಟ್ಟದಲ್ಲಿದೆ. 2026ರ ಜನವರಿ ಕೊನೆಯವರೆಗೆ ಮಕರ ರಾಶಿಯಲ್ಲಿ ರೂಪುಗೊಳ್ಳುತ್ತಿರುವ
ಕುಜ (ಪರಮೋಚ್ಚ) + ರವಿ + ಶುಕ್ರ + ಬುಧ ಚತುರ್ಗ್ರಹ ಮಹಾಯೋಗ ಇದು ಪ್ರಪಂಚ ಮಹಾಯುದ್ಧದ ಭೀತಿಕರ ಸೂಚನೆ.
ಇದು ದೊಡ್ಡ ದೇಶಗಳ ಆಡಳಿತಗಾರರಿಗೆ ಪ್ರಾಣಗಂಡ, ಸಾಮ್ರಾಜ್ಯಗಳಿಗೆ ಪತನದ ಸೂಚನೆ, ಮಾನವತೆಗೆ ಪರೀಕ್ಷೆಯ ಕಾಲ, ಇತಿಹಾಸ ಹೇಳಿರುವ ಸತ್ಯ ಒಂದೇ: ಅಹಂಕಾರದಲ್ಲಿದ್ದ ಶಕ್ತಿಶಾಲಿಗಳು ಉಳಿದಿಲ್ಲ. ಜ್ಯೋತಿಷ್ಯ ಈ ಸಮಯದಲ್ಲಿ ನೀಡುತ್ತಿರುವ ಸಂದೇಶವೂ ಅದೇ: ಸಂಯಮ ಇಲ್ಲದ ಶಕ್ತಿ, ಖಚಿತವಾಗಿ ನಾಶದ ದಾರಿ ಹಿಡಿಯುತ್ತದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ?












Click it and Unblock the Notifications