ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬನಶಂಕರಿ ಜಾತ್ರೆ ತಡೆಯಲು ಹೋದ್ರಿ': ಬಿಜೆಪಿಯ ಮುಂದಿನ ಚುನಾವಣಾ ಭವಿಷ್ಯ ನುಡಿದ ದಿಗಂಬರೇಶ್ವರ ಶ್ರೀ

|
Google Oneindia Kannada News

ಬಾಗಲಕೋಟೆ, ಜ 18: ಬಿಜೆಪಿ ಸರಕಾರ ಪೂರ್ಣಾವಧಿಗೆ ಮುಂದುವರಿದರೆ ಅಸೆಂಬ್ಲಿ ಚುನಾವಣೆ ನಡೆಯಲು ಇನ್ನೂ ಹದಿನೈದು-ಹದಿನಾರು ತಿಂಗಳು ಬಾಕಿಯಿದೆ. ಬಿಜೆಪಿ ಅಧಿಕಾರ ಉಳಿಸಿಕೊಳ್ಳುತ್ತದೋ, ಇಲ್ಲವೋ ಎನ್ನುವುದರ ಬಗ್ಗೆ ಸ್ವಾಮೀಜಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

ಯಡಿಯೂರಪ್ಪನವರು ಅಧಿಕಾರದಿಂದ ಕೆಳಗೆ ಇಳಿದಾಗ, ಬಿಜೆಪಿ ಮುಂದಿನ ದಿನಗಳಲ್ಲಿ ಇದರ ಫಲವನ್ನು ಅನುಭವಿಸಲಿದೆ ಎಂದು ಹಲವು ಶ್ರೀಗಳು ಹೇಳಿದ್ದರು. ಈಗ, ವಿಜಯಪುರ ಜಿಲ್ಲೆಯ ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು ಬಿಜೆಪಿಗೆ ಅಶುಭದ ಮುನ್ಸೂಚನೆಯನ್ನು ನೀಡಿದ್ದಾರೆ.

ಜನರ ಭಕ್ತಿಭಾವದ ಮುಂದೆ ದಿಕ್ಕೆಟ್ಟು ಓಡಿ ಹೋದ ಕೊರೊನಾ ವೈರಸ್ಜನರ ಭಕ್ತಿಭಾವದ ಮುಂದೆ ದಿಕ್ಕೆಟ್ಟು ಓಡಿ ಹೋದ ಕೊರೊನಾ ವೈರಸ್

ಮಕರ ಸಂಕ್ರಾಂತಿಯ ನಂತರ ರಾಜ್ಯ ಬಿಜೆಪಿಯಲ್ಲಿ ಹಲವು ಬದಲಾವಣೆಯಾಗಲಿದೆ ಎಂದು ಹಿರಿಯ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು. ಆದರೆ, ಈ ರೀತಿಯ ದಿನಾಂಕವನ್ನು ಯತ್ನಾಳ್ ಅವರು ಬಹಳಷ್ಟು ಬಾರಿ ಹೇಳಿದ್ದರಿಂದ, ಅವರ ಹೇಳಿಕೆಗೆ ಅಷ್ಟೊಂದು ತೂಕವಿಲ್ಲದಂತಾಗಿದೆ.

ಎರಡು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ, ಮುಂದಿನ ಅಂದರೆ 2023ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಗಲಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದಮ್ಯ ವಿಶ್ವಾಸದ ಮಾತನ್ನಾಡಿದ್ದರು. ಆದರೆ, ಬೊಮ್ಮಾಯಿ ತಮ್ಮ ತವರು ಜಿಲ್ಲೆಯ ಕ್ಷೇತ್ರವನ್ನೇ ಉಳಿಸಿಕೊಳ್ಳಲಾಗಿರಲಿಲ್ಲ. ಸ್ವಾಮೀಜಿ ಭವಿಷ್ಯವೇನು? ಮುಂದೆ ಒದಿ..

ಶಿವಮೊಗ್ಗದ ಶಾಲೆಗಳಿಗೆ 3 ದಿನ ರಜೆ ಘೋಷಣೆ; ಪ್ರಸಿದ್ಧ ಮಾರಿಕಾಂಬ ಜಾತ್ರೆ ಮುಂದೂಡಿಕೆಶಿವಮೊಗ್ಗದ ಶಾಲೆಗಳಿಗೆ 3 ದಿನ ರಜೆ ಘೋಷಣೆ; ಪ್ರಸಿದ್ಧ ಮಾರಿಕಾಂಬ ಜಾತ್ರೆ ಮುಂದೂಡಿಕೆ

 ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿ ಜಾತ್ರೆ

ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿ ಜಾತ್ರೆ

ಮಕರ ಸಂಕ್ರಾಂತಿ ಮತ್ತು ಬನದ ಹುಣ್ಣಿಮೆಯ ಪ್ರಯುಕ್ತ ರಾಜ್ಯದ ವಿವಿದೆಡೆ ಜಾತ್ರೆ/ರಥೋತ್ಸವ ನಡೆಯುವ ಪದ್ದತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಅದರಂತೇ, ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿ ಜಾತ್ರೆ ಕೂಡಾ ಬನದ ಹುಣ್ಣಿಮೆಯ ದಿನ ನಡೆದಿತ್ತು. ಕೋವಿಡ್ ನಿರ್ಬಂಧ ಹೇರಿದ್ದರಿಂದ, ಜಿಲ್ಲಾಡಳಿತ ಭಕ್ತರ ಪ್ರವೇಶಕ್ಕೆ ತಡೆಯೊಡ್ಡಿತ್ತು. ಆದರೂ, ಭಕ್ತರ ಭಕ್ತಿಭಾವನೆಯ ಎದುರು ಉತ್ಸವದಲ್ಲಿ ಪಾಲ್ಗೊಳ್ಳುವವರನ್ನು ತಡೆಯಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿರಲಿಲ್ಲ.

 ಭಕ್ತರು ಬಲವಂತದಿಂದ ರಥೋತ್ಸವದ ಜಾಗಕ್ಕೆ ತೆರಳಿದ್ದರು

ಭಕ್ತರು ಬಲವಂತದಿಂದ ರಥೋತ್ಸವದ ಜಾಗಕ್ಕೆ ತೆರಳಿದ್ದರು

ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ಬಲವಂತದಿಂದ ರಥೋತ್ಸವದ ಜಾಗಕ್ಕೆ ತೆರಳಿದ್ದರು. ಇತಿಹಾಸದಲ್ಲಿ ಎಂದೂ ಬಾದಾಮಿ ಬನಶಂಕರಿ ಜಾತ್ರೆ ದೇವಾಲಯದಲ್ಲಿ ನಿಂತ ಉದಾಹರಣೆಗಳಿಲ್ಲ. ಈ ಬಾರಿಯೂ ಶ್ರದ್ದಾಭಕ್ತಿಯಿಂದ ಜಾತ್ರೆ ಸಂಪನ್ನಗೊಂಡಿತ್ತು. ಕೋವಿಡ್ ನಿರ್ಬಂಧ ಉಲ್ಲಂಘಿಸಿದ್ದಕ್ಕಾಗಿ ದೇವಾಲಯದ ಆಡಳಿತ ಮಂಡಳಿ ಮತ್ತು ಕೆಲವು ಗ್ರಾಮಸ್ಥರ ವಿರುದ್ದ ಪೊಲೀಸರು ಕೇಸು ದಾಖಲಿಸಿದ್ದರು. ಇದು ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳ ಆಕ್ರೋಶಕ್ಕೆ ಕಾರಣವಾಗಿದೆ.

 ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳ ಭವಿಷ್ಯ

ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳ ಭವಿಷ್ಯ

ಬನಶಂಕರಿ ತಾಯಿಯ ದರ್ಶನದ ನಂತರ ಮಾತನಾಡುತ್ತಿದ್ದ ಶ್ರೀಗಳು, "ರಾಜ್ಯ ಸರಕಾರ ಕೊರೊನಾ ನೆಪವನ್ನೊಡ್ಡಿ ರೈತರ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸುತ್ತಿದೆ. ಇದೇ ರೀತಿಯ ಬನಶಂಕರಿ ಅಮ್ಮನ ಉತ್ಸವನ್ನೂ ತಡೆಯಲು ಮುಂದಾಗಿತ್ತು. ಇದು ಬಿಜೆಪಿಗೆ ಶುಭ ಶಕುನವಲ್ಲ, ತಾಯಿಯ ಜಾತ್ರೆಗೆ ಅಡ್ಡಿಪಡಿಸಿದ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಸೋಲನ್ನು ಅನುಭವಿಸಲಿದೆ"ಎಂದು ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

 ಹಿಂದೂಗಳ ಶಾಪ ಈ ಸರಕಾರಕ್ಕೆ ತಟ್ಟದೇ ಇರುವುದಿಲ್ಲ

ಹಿಂದೂಗಳ ಶಾಪ ಈ ಸರಕಾರಕ್ಕೆ ತಟ್ಟದೇ ಇರುವುದಿಲ್ಲ

"ಬಿಜೆಪಿಯು ಹಿಂದೂಗಳ ಭಾವನೆಯನ್ನು ಉಳಿಸುತ್ತದೆ ಎನ್ನುವ ಕಾರಣಕ್ಕಾಗಿ ಆ ಪಕ್ಷವನ್ನು ಜನರು ಅಧಿಕಾರಕ್ಕೆ ತಂದಿದ್ದರು. ಆದರೆ ಈ ಸರಕಾರ ಧರ್ಮವನ್ನು ಒಡೆಯುವ ಕೆಲಸಕ್ಕೆ ಮುಂದಾಗಿದೆ. ಹಿಂದೂಗಳ ಶಾಪ ಈ ಸರಕಾರಕ್ಕೆ ತಟ್ಟದೇ ಇರುವುದಿಲ್ಲ. ಕೊರೊನಾ ತೊಲಗಲಿ ಎಂದು ಬನಶಂಕರಿ ತಾಯಿಯ ಬಳಿ ಬಂದು ಪ್ರಾರ್ಥಿಸಿದ್ದರೆ, ಅದು ದೂರವಾಗಿರುವುದು. ಯಾಕೆಂದರೆ, ತಾಯಿಗೆ ಅಂತಹ ಶಕ್ತಿಯಿದೆ. ಇದನ್ನು ಪ್ರಾರ್ಥಿಸಲು ಬಂದ ಭಕ್ತರನ್ನು ತಡೆದದ್ದು ಬಿಜೆಪಿ ಪತನದ ಮುನ್ಸೂಚನೆ" ಎಂದು ಕಲ್ಲಿನಾಥ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

English summary
BJP Government Tried To Stop Badami Banashankari Festival, Kallinath Seer Prediction. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X