ಜ್ಯೋತಿಷ್ಯ: ನನಗೆ ಆಗಿಬರುವುದು ಉದ್ಯೋಗವೋ ವ್ಯಾಪಾರವೋ?

By: ಪಂಡಿತ್ ವಿಠ್ಠಲ ಭಟ್ಟ
Subscribe to Oneindia Kannada

ಜೀವನೋಪಾಯಕ್ಕೆ ನಾವು ವಿವಿಧ ಕ್ಷೇತ್ರಗಳಲ್ಲಿ ಜೀವನಾಧಾರ ಹುಡುಕುತ್ತಾ ಸಾಗುತ್ತೇವೆ. ಉತ್ತಮವೋ ಅಧಮವೋ ಸಿಕ್ಕಿದ್ದರಲ್ಲಿ ಕಷ್ಟಪಟ್ಟು ಮುನ್ನುಗ್ಗುತ್ತಾ ಇರುತ್ತೇವೆ. ಯಾವಾಗ ಎಷ್ಟು ಕಷ್ಟ ಪಟ್ಟರೂ ಫಲ ಸಿಗುವುದಿಲ್ಲವೋ ಆಗ ತಲ್ಲಣಿಸಿ ಹೋಗುತ್ತೇವೆ, ಏನು ಮಾಡಬೇಕೋ ಅರಿಯದಂತಾಗಿ ಒದ್ದಾಡುತ್ತೇವೆ.

ಆದರೆ, ಈ ವಿಚಾರದಲ್ಲಿ ನಮಗೆ ಜ್ಯೋತಿಷ್ಯ ಶಾಸ್ತ್ರ ಬಹಳವಾಗಿ ಸಹಾಯಕ್ಕೆ ಬರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳ ಬೇಕು. ಬಹಳ ಮುಖ್ಯವಾದ ಕೆಲಸ ಅಂದರೆ, ನಮ್ಮ ಜನ್ಮ ಸಮಯ, ದಿನ ಹಾಗೂ ಸ್ಥಳದ ಆಧಾರದಲ್ಲಿ ನಿಖರವಾದ ಜಾತಕ ಮಾಡಿಸಬೇಕು. ಆ ನಂತರ ಕೂಡಿ ಬರುವುದು ಉದ್ಯೋಗವೋ ಅಥವಾ ವ್ಯಾಪಾರವೋ ಎಂದು ತಿಳಿದುಕೊಳ್ಳ ಬೇಕು.

ಏಕೆಂದರೆ ಕೆಲವರ ಜಾತಕ ವ್ಯಾಪಾರವನ್ನು ಸಹಕರಿಸುತ್ತದೆ. ಅಂದರೆ ಅವರು ಉದ್ಯೋಗಕ್ಕಿಂತಲೂ ವ್ಯಾಪಾರ ಮಾಡಿದರೆ ಜೀವನದಲ್ಲಿ ಹೆಚ್ಚಿನ ಯಶಸ್ಸು ಕಾಣುತ್ತಾರೆ. ಆದರೆ ತಮ್ಮ ಜಾತಕವನ್ನು ಸರಿಯಾಗಿ ಪರಿಶೀಲನೆ ಮಾಡಿಸದೆ ಎಲ್ಲಿಯೋ ತಮಗಾಗದ, ಮನಸ್ಸಿಲ್ಲದ ಉದ್ಯೋಗ ಮಾಡುತ್ತಾ ಕಷ್ಟ ಪಡುತ್ತಾ ಇರುತ್ತಾರೆ.[ಜ್ಯೋತಿಷ್ಯ: ಎಲ್ಲ ವಿಧದ ಭಯ ನಿವಾರಣೆಗಾಗಿ ದೈವಿಕ ಉಪಾಯ]

Job

ಆದುದರಿಂದ ಮೊದಲು ಜಾತಕ ಮಾಡಿಸಿ. ನಂತರ ಅದರಲ್ಲಿ ಏನಿದೆ, ಅದರ ಪ್ರಕಾರ ಏನು ಮಾಡಬೇಕು ತಿಳಿದು ಅದನ್ನೇ ಮಾಡಿದರೆ ಉದ್ಯೋಗದಲ್ಲಿ ಸ್ವಲ್ಪ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು.

ಇನ್ನು ಜಾತಕದ ಪ್ರಕಾರ ಉದೋಗದಲ್ಲಿಯೇ ಅಭಿವೃದ್ಧಿ ಎಂದು ಇದೆ. ನೀವು ಮಾಡುತ್ತಿರುವುದೂ ಅದೇ ಆದರೂ ಉದ್ಯೋಗದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ ಎಂದಾದಲ್ಲಿ ಜಾತಕದಲ್ಲಿ ನೋಡ ಬೇಕಾಗಿರುವುದು, ಯಾವ ಥರದ ಉದ್ಯೋಗ ಮಾಡಬೇಕು ಎಂದು!?[ಸಿನಿಮಾ ಲೋಕದ ಸೋಲು-ಗೆಲುವು ಮತ್ತು ಜ್ಯೋತಿಷ್ಯ]

ಉದಾಹರಣೆಗೆ ಒಬ್ಬ ವ್ಯಕ್ತಿಗೆ ಹೆಚ್ಚಿನ ವಿದ್ಯೆ ಇಲ್ಲ, ಕೇವಲ ಹತ್ತನೇ ತರಗತಿ ಉತ್ತೀರ್ಣನಾಗಿದ್ದಾನೆ. ಆದುದರಿಂದ ಯಾವುದೋ ಅಂಗಡಿಯಲ್ಲಿ ಚಿಕ್ಕ ಕೆಲಸ ಮಾಡಿಕೊಂಡು ಇದ್ದಾನೆ. ಆದರೆ ಅವನ ಜಾತಕದಲ್ಲಿ ರಾಹು ಗ್ರಹ ಉತ್ತಮ ಸ್ಥಿತಿಯಲ್ಲಿ ಇದ್ದರೆ ಅಂಥ ವ್ಯಕ್ತಿ ವಾಹನ ಚಾಲನೆ ಮಾಡಿದರೆ ಉತ್ತಮವಾಗಿ ಜೀವನದಲ್ಲಿ ಯಶಸ್ಸು ಪಡೆಯಬಹುದು.

ಆದರೆ, ತನ್ನ ಜಾತಕ ಪರಿಶೀಲನೆ ಮಾಡಿಸದೆ ಇನ್ನೂ ಒಂದು ಅಂಗಡಿಯಲ್ಲಿ ತನ್ನ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಇದೇ ಉದಾಹರಣೆ ಎಲ್ಲರಿಗೂ ಅನ್ವಯಿಸುತ್ತದೆ. ನಿಮ್ಮ ಜಾತಕದ ಪ್ರಕಾರ ನಿಮಗೆ ಉದ್ಯೋಗ ಕೊಡುವ ಗ್ರಹ ನಿಮ್ಮ ಜಾತಕದಲ್ಲಿ ಉತ್ತಮ ಸ್ಥಿತಿಯಲ್ಲಿ ಇರಬೇಕು ಹಾಗೂ ಆ ಗ್ರಹ ಯಾವ ಉದ್ಯೋಗವನ್ನು ಸೂಚಿಸುತ್ತದೆಯೋ ಅದೇ ಉದ್ಯೋಗವನ್ನು ನೀವು ಮಾಡಿದಾಗ ಮಾತ್ರ ಸಂತೃಪ್ತಿ ಪಡೆಯಲು ಸಾಧ್ಯ.[ಹನ್ನೆರಡು ರಾಶಿಗಳ ಗುಣ-ಸ್ವಭಾವ ಹೇಗಿರುತ್ತದೆ ಗೊತ್ತಾ?]

ಇನ್ನು ಇವೆಲ್ಲಾ ಅಲ್ಲದೆ ಉತ್ತಮ ಉದ್ಯೋಗಕ್ಕಾಗಿ ನಿಮ್ಮ ಜಾತಕದಲ್ಲಿ ದೋಷಗಳು ಸಹ ಇರಬಾರದು. ಅದರಲ್ಲಿಯೂ ಉದ್ಯೋಗಕ್ಕೆ ಮಾರಕವಾದ ಕೆಲವು ದೋಷಗಳಾದ ಸರ್ಪ ದೋಷ, ಪಿತೃ ದೋಷ ಇತ್ಯಾದಿಗಳು ಇದ್ದಲ್ಲಿ ಕೆಲಸ ನಿಮ್ಮನ್ನು ಬಿಡದಿದ್ದರೂ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಅಥವ ಅತೀ ಬುದ್ದಿವಂತಿಕೆ ಮಾಡಿಕೊಂಡು ನೀವೇ ಉದ್ಯೋಗಕ್ಕೆ ಎಳ್ಳು ನೀರು ಬಿಡುತ್ತೀರಿ!

ನಿಮ್ಮ ಮೇಲಧಿಕಾರಿಗಳು ಅಥವಾ ನಿಮ್ಮ ಸ್ನೇಹಿತರು, 'ಬೇಡ ಇನ್ನೊಮ್ಮೆ ಯೊಚಿಸು' ಅಂದರೂ ಕೇಳದೆ ದುಡುಕಿನ ನಿರ್ಧಾರ ಕೈಗೊಂಡು ಆಮೇಲೆ ಪಶ್ಚಾತ್ತಾಪ ಪಡುತ್ತಾ ಬೇರೆಡೆ ಉದ್ಯೋಗ ಅರಸುತ್ತಾ ಪರದಾಡುತ್ತೀರಿ. ಆಗ ಸಮಸ್ಯೆ ವಿಚಿತ್ರವಾಗಿ ಬರುತ್ತದೆ.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ದುಡ್ಡು ಇದ್ದರೆ ಸಮಸ್ಯೆ ಪರಿಹರಿಸಿಕೊಳ್ಳಬಹುದು ಆದರೆ ದುಡ್ಡೇ ಇದ್ದಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ ಎಂಬಂಥ ವಿಚಿತ್ರ ಸ್ಥಿತಿ. ಆದುದರಿಂದ ಎಲ್ಲದಕ್ಕೂ ಮೊದಲು ನಿಮ್ಮ ಜಾತಕ ಮಾಡಿಸಿ ಅಥವಾ ನಿಖರವಾದ ಜನ್ಮ ಸಮಯ ತಿಳಿಯದವರು ಪ್ರಶ್ನ ಶಾಸ್ತ್ರದ ಮುಖಾಂತರ ಸಮಸ್ಯೆ ತಿಳಿದು ಪರಿಹರಿಸಿಕೊಳ್ಳ ಬೇಕು. { ಆಚಾರ್ಯ ಶ್ರೀ ವಿಠ್ಠಲ ಭಟ್ಟ ಕೆಕ್ಕಾರು -9845682380 }

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Should I go for job or business?- This is the question of many people. Astrologer Vittal Bhat explains importance of planetary position while taking decision.
Please Wait while comments are loading...