Mercury Rise 2025: ಕುಂಭ ರಾಶಿಯಲ್ಲಿ ಬುಧ ಉದಯ- ಈ 4 ರಾಶಿಯವರಿಗೆ ಶುಭೋದಯ

ಗ್ರಹಗಳ ರಾಜಕುಮಾರ ಮತ್ತು ಬುದ್ಧಿವಂತಿಕೆಯನ್ನು ನೀಡುವ ಬುಧ ಗ್ರಹ ಫೆಬ್ರವರಿ 22ರಂದು ಕುಂಭ ರಾಶಿಯಲ್ಲಿ ಮತ್ತೆ ಉದಯಿಸಲಿದೆ. ಫೆಬ್ರವರಿ 26ರವರೆಗೆ ಕುಂಭ ರಾಶಿಯಲ್ಲಿ ಇರುತ್ತದೆ. ಇದಾದ ನಂತರ ಅದು ಮೀನ ರಾಶಿಯನ್ನು ಪ್ರವೇಶಿಸುವುದು. ಫೆಬ್ರವರಿ 22 ರಂದು ಬುಧ ಗ್ರಹದ ಉದಯ ಕೆಲವು ರಾಶಿಚಗಳ ಜನರ ಜೀವನದಲ್ಲಿ ಸಂತೋಷವನ್ನು ತರುವುದು. ಬುಧ ಗ್ರಹದ ಉದಯ ಯಾವ ರಾಶಿಗಳಿಗೆ ಶುಭವಾಗಲಿದೆ ಎಂದು ಈಗ ತಿಳಿಯೋಣ.

astrology mercury rises in aquarius auspicious for these zodiac signs

ವೃಷಭ ರಾಶಿ

ವೃಷಭ ರಾಶಿಯವರಿಗೆ ಬುಧನ ಉದಯ ತುಂಬಾ ಒಳ್ಳೆಯದಾಗಿರುತ್ತದೆ. ಈ ರಾಶಿಯ 10 ನೇ ಮನೆಯಲ್ಲಿ ಬುಧ ಗ್ರಹವ ಉದಯಿಸಲಿದೆ. 10ನೇ ಮನೆ ವೃತ್ತಿಜೀವನದ ಮನೆಯಾಗಿದೆ. ಈ ಸಮಯದಲ್ಲಿ ನೀವು ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿಯನ್ನು ನೋಡುತ್ತೀರಿ. ಇದರೊಂದಿಗೆ ನೀವು ಒಂದು ಕೆಲಸ ಮಾಡಿದರೆ ಕೆಲಸದ ಸ್ಥಳದಲ್ಲಿ ಮೆಚ್ಚುಗೆ ಸಿಗುತ್ತದೆ. ಬಡ್ತಿಯ ಜೊತೆಗೆ, ನಿಮಗೆ ಸಂಬಳ ಹೆಚ್ಚಳವಾಗುತ್ತದೆ.

ವೃತ್ತಿಜೀವನದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಮೆಚ್ಚುಗೆ ಸಿಗಲಿದೆ, ಬಡ್ತಿಯ ಜೊತೆಗೆ ಸಂಬಳ ಹೆಚ್ಚಳಕ್ಕೂ ಅವಕಾಶ ಸಿಗಬಹುದು. ಇದರೊಂದಿಗೆ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಉಳಿತಾಯದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ವ್ಯಾಪಾರಿಗಳು ಸಹ ಲಾಭ ಗಳಿಸುವ ಸಾಧ್ಯತೆಯಿದೆ.

astrology mercury rises in aquarius auspicious for these zodiac signs

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಬುಧ ಗ್ರಹ 7ನೇ ಮನೆಯಲ್ಲಿ ಉದಯಿಸಲಿದೆ. ಇದರಿಂದಾಗಿ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಇದು ವ್ಯವಹಾರ ಮತ್ತು ಉದ್ಯೋಗದಲ್ಲಿ ನಿಮಗೆ ಪ್ರಯೋಜನವನ್ನು ನೀಡುತ್ತದೆ. ಹಠಾತ್ ಆರ್ಥಿಕ ಲಾಭ ಉಂಟಾಗಬಹುದು. ಇದು ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ಕುಟುಂಬ ಜೀವನದಲ್ಲಿ ಸಂತೋಷ ಹಾಗೂ ಹೊಸ ಅವಕಾಶಗಳು ದೊರೆಯುತ್ತವೆ.

astrology mercury rises in aquarius auspicious for these zodiac signs

ತುಲಾ ರಾಶಿ

ತುಲಾ ರಾಶಿಚಕ್ರದ ಐದನೇ ಮನೆಯಲ್ಲಿ ಬುಧ ಉದಯಿಸುತ್ತಾನೆ. ಈ ಸಮಯದಲ್ಲಿ ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ನೀವು ಬಯಸಿದ ಯಶಸ್ಸನ್ನು ಪಡೆಯುತ್ತೀರಿ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುವುದು. ಆರ್ಥಿಕ ಪರಿಸ್ಥಿತಿಯೂ ಸುಧಾರಿಸುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳು ಸಿಗುವ ಸಾಧ್ಯತೆ ಇದೆ.

astrology mercury rises in aquarius auspicious for these zodiac signs

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರ ನಾಲ್ಕನೇ ಮನೆಯಲ್ಲಿ ಬುಧ ಉದಯಿಸಲಿದೆ. ಈ ಅವಧಿಯಲ್ಲಿ ಐಷಾರಾಮಿ ಮತ್ತು ಸೌಕರ್ಯಗಳು ಹೆಚ್ಚಾಗುತ್ತವೆ. ಜೀವನ ಮಟ್ಟ ಸುಧಾರಿಸುತ್ತದೆ. ಆಸ್ತಿ ಸಂಬಂಧಿತ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ ಮತ್ತು ಈ ಸಮಯ ಹೂಡಿಕೆಗೆ ಅನುಕೂಲಕರವಾಗಿರುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯ ಹೊಸ ಮಾರ್ಗಗಳು ತೆರೆದುಕೊಳ್ಳಲಿದೆ.

(ಗಮನಿಸಿ ಮೇಲೆ ನೀಡಲಾದ ಮಾಗಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+