Guru Pushya Yoga 2025: ಹೊಸ ವರ್ಷದಲ್ಲಿ 3 ಗುರು ಪುಷ್ಯ ಯೋಗ- ಶುಭ ದಿನಾಂಕ, ಪ್ರಾಮುಖ್ಯತೆ ತಿಳಿಯಿರಿ
ಹಿಂದೂ ಧರ್ಮದಲ್ಲಿ ಕೆಲವು ಯೋಗಗಳನ್ನು ಬಹಳ ಮಂಗಳಕರ ಮತ್ತು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಈ ಯೋಗಗಳಲ್ಲಿ ಗುರು ಪುಷ್ಯ ಯೋಗ ಅತ್ಯುತ್ತಮವಾದುದು ಮಾತ್ರವಲ್ಲ, ಬಹಳ ಅಪರೂಪವೂ ಆಗಿದೆ. ಪುಷ್ಯ ನಕ್ಷತ್ರ ಗುರು ಜೊತೆ ಸೇರಿದಾಗ ಇದು ರೂಪುಗೊಳ್ಳುತ್ತದೆ.
ವೈದಿಕ ಜ್ಯೋತಿಷ್ಯದಲ್ಲಿ ಗುರುವನ್ನು ಶಿಕ್ಷಣ, ಜ್ಞಾನ, ಸಂಪತ್ತು ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಪುಷ್ಯ ನಕ್ಷತ್ರವನ್ನು ಎಲ್ಲಾ ನಕ್ಷತ್ರಗಳಲ್ಲಿ ಅತ್ಯಂತ ಮಂಗಳಕರವೆಂದು ಕರೆಯಲಾಗುತ್ತದೆ. ಗುರು ಪುಷ್ಯ ಯೋಗವನ್ನು ಗುರು ಪುಷ್ಯ ನಕ್ಷತ್ರ ಯೋಗ, ಗುರು ಪುಷ್ಯ ಅಮೃತ ಯೋಗ ಅಥವಾ ಗುರುಪುಷ್ಯಾಮೃತ ಯೋಗ ಎಂದೂ ಕರೆಯಲಾಗುತ್ತದೆ. ಮುಂಬರುವ 2025 ರಲ್ಲಿ ಗುರು ಪುಷ್ಯ ಯೋಗ ಯಾವಾಗ ರೂಪುಗೊಳ್ಳುತ್ತದೆ. ಹಿಂದೂ ಧರ್ಮದಲ್ಲಿ ಈ ಯೋಗದ ಪ್ರಾಮುಖ್ಯತೆ ಏನು ಎಂದು ಈಗ ತಿಳಿಸಿ?

ಗುರು ಪುಷ್ಯ ಯೋಗದ ಮಹತ್ವ
ಸನಾತನ ಪಂಚಾಂಗದಲ್ಲಿ ಗುರು ಪುಷ್ಯ ಯೋಗ ಶುಭ ಯೋಗ ಮುಹೂರ್ತವಾಗಿದೆ. ವೈದಿಕ ಜ್ಯೋತಿಷ್ಯದಲ್ಲಿ ಪುಷ್ಯ ನಕ್ಷತ್ರವನ್ನು ಎಲ್ಲಾ ನಕ್ಷತ್ರಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಈ ರಾಶಿಯ ಅಧಿಪತಿ ಶನಿ ಮತ್ತು ಇದರ ಅಧಿದೇವತೆ ಗುರುವಾಗಿದೆ. ಇದು 27 ನಕ್ಷತ್ರಗಳಲ್ಲಿ ಎಂಟನೇ ಸ್ಥಾನದಲ್ಲಿದೆ. ಎಂಟು ಸಂಖ್ಯೆಯನ್ನು ದುರ್ಗಾ ದೇವಿ ಮತ್ತು ತಾಯಿ ಲಕ್ಷ್ಮಿಗೆ ಸಮರ್ಪಿಸಲಾಗಿದೆ. ಗುರುವಾರ ವಿಷ್ಣು ಮತ್ತು ಗುರು ಗ್ರಹದ ದಿನ. ವೈದಿಕ ಜ್ಯೋತಿಷ್ಯದಲ್ಲಿ ಗುರುವು ಅತ್ಯಂತ ಮಂಗಳಕರ ಗ್ರಹವಾಗಿದೆ. ಗುರುವಿನ ನಿಯಂತ್ರಣ ಮತ್ತು ಆಳ್ವಿಕೆಯಲ್ಲಿ ಈ ದಿನವು ಶುಭ ಕಾರ್ಯಗಳಿಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ.
ಇದಲ್ಲದೆ ಗುರು ಪುಷ್ಯ ಯೋಗದಲ್ಲಿ ಲಕ್ಷ್ಮಿ ದೇವಿಯು ಜನಿಸಿದಳು. ಅವಳು ಸಂಪತ್ತು ಮತ್ತು ಸಂತೋಷ ಮತ್ತು ಸಮೃದ್ಧಿಯ ಅಧಿದೇವತೆಯಾಗಿದ್ದಾಳೆ. ಈ ಕಾರಣದಿಂದಾಗಿ ಗುರು ಪುಷ್ಯ ನಕ್ಷತ್ರ ಹಣ ಮತ್ತು ಹಣಕಾಸು ಸಂಬಂಧಿತ ಕೆಲಸಗಳಿಗೆ ಮತ್ತು ಹೊಸ ಚಟುವಟಿಕೆಗಳಿಗೆ ಸೂಕ್ತವೆಂದು ಪರಿಗಣಿಸಲಾಗಿದೆ.
ಈ ಯೋಗದಲ್ಲಿ ಶಿಕ್ಷಣವನ್ನು ತೆಗೆದುಕೊಳ್ಳುವುದರಿಂದ, ಹೊಸ ಕೆಲಸವನ್ನು ಪ್ರಾರಂಭಿಸುವುದರಿಂದ ಮತ್ತು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕುವುದರಿಂದ ಶುಭ ಫಲಿತಾಂಶಗಳು ಸಿಗುತ್ತವೆ. ಈ ಯೋಗದ ದಿನ ಭೂಮಿ ಅಥವಾ ವಾಹನವನ್ನು ಖರೀದಿಸಲು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.
3 ಗುರು ಪುಷ್ಯ ಯೋಗ 2025ರಲ್ಲಿ ರೂಪುಗೊಳ್ಳುತ್ತದೆ:-
2024 ರಲ್ಲಿ ಒಟ್ಟು 5 ಗುರು ಪುಷ್ಯ ಯೋಗಗಳು ರೂಪುಗೊಂಡವು. ಈ ವರ್ಷದ ಮೊದಲ ಯೋಗ ಜನವರಿ 25 ರಂದು ರೂಪುಗೊಂಡಿದ್ದರೆ, ಕೊನೆಯ ಗುರು ಪುಷ್ಯ ಯೋಗವು ನವೆಂಬರ್ 21 ರಂದು ರೂಪುಗೊಂಡಿತು. 2025 ರ ವರ್ಷಕ್ಕೆ ಸಂಬಂಧಿಸಿದಂತೆ ದೃಕ್ ಪಂಚಾಂಗದ ಪ್ರಕಾರ ಈ ವರ್ಷದಲ್ಲಿ ಕೇವಲ 3 ಗುರು ಪುಷ್ಯ ಯೋಗಗಳು ಮಾತ್ರ ರೂಪುಗೊಳ್ಳುತ್ತವೆ. ಹಾಗಾದರೆ ಈ ಯೋಗಗಳು ರೂಪಗೊಳ್ಳುತ್ತವೆ ಎಂದು ನೋಡುವುದಾದರೆ-
2025 ರಲ್ಲಿ ಗುರು ಪುಷ್ಯ ಯೋಗದ ದಿನಾಂಕಗಳು ಮತ್ತು ಮಂಗಳಕರ ಸಮಯ:-
ಗುರು ಪುಷ್ಯ ಯೋಗ ದಿನಾಂಕ- ಗುರು ಪುಷ್ಯ ಯೋಗ ಸಮಯ ಹೀಗಿದೆ-
*2025 ಜುಲೈ 24 ಗುರುವಾರ ಸಂಜೆ 04:43 ರಿಂದ ಜುಲೈ 25 ಬೆಳಗ್ಗೆ 05:39 ರವರೆಗೆ
*2025 ಆಗಸ್ಟ್ 21 ಗುರುವಾರ ಬೆಳಗ್ಗೆ 05:53 ರಿಂದ ಆಗಸ್ಟ್ 22 ಬೆಳಗ್ಗೆ 12:08ರವರೆಗೆ
*2025 ಸೆಪ್ಟೆಂಬರ್ 18 ಗುರುವಾರ ಬೆಳಗ್ಗೆ 06:07 ರಿಂದ ಬೆಳಗ್ಗೆ 06:32ವರೆಗೆ
ಗುರು ಪುಷ್ಯ ಯೋಗವು ವರ್ಷದಲ್ಲಿ ಕೆಲವೇ ಬಾರಿ ಸಂಭವಿಸುತ್ತದೆ. ಆದ್ದರಿಂದ ಇದು ಅಪರೂಪ ಎಂದು ಹೇಳಲಾಗುತ್ತದೆ. 2025 ರಲ್ಲಿ ಜುಲೈ ತಿಂಗಳಲ್ಲಿ ಈ ಮೊದಲ ಯೋಗ ರೂಪುಗೊಳ್ಳುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ಕೊನೆಯ ಯೋಗ ನಡೆಯಲಿದೆ. ನಿಮ್ಮ ಶುಭ ಕಾರ್ಯಗಳಿಗೆ ಇದು ಹೇಳಿ ಮಾಡಿಸಿದ ಸಮಯವಾಗಿದೆ.












Click it and Unblock the Notifications