Gajakesari Yoga 2025: ಗಜಕೇಸರಿ ಯೋಗ- ಈ ರಾಶಿಯವರಿಗೆ ಶ್ರೀಮಂತರಾಗುವ ಯೋಗ
ಪ್ರತಿಯೊಂದು ಗ್ರಹವು ಕಾಲ ಕಾಲಕ್ಕೆ ತನ್ನ ಸ್ಥಾನವನ್ನು ಬದಲಾಯಿಸುತ್ತದೆ. ಈ ಬದಲಾವಣೆಯು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ಇದು ತುಂಬಾ ಶುಭವಾಗಿರುತ್ತದೆ. ಆದರೆ ಇನ್ನು ಕೆಲವರಿಗೆ ಈ ಪರಿಣಾಮ ಅಶುಭವಾಗಿರುವುದು. ಒಂಬತ್ತು ಗ್ರಹಗಳಲ್ಲಿ ಚಂದ್ರನು ಅತ್ಯಂತ ವೇಗವಾಗಿ ಚಲಿಸುವ ಏಕೈಕ ಗ್ರಹವಾಗಿದ್ದು ಅದು ಒಂದು ರಾಶಿಯಲ್ಲಿ ಸುಮಾರು ಎರಡೂವರೆ ದಿನಗಳವರೆಗೆ ಮಾತ್ರ ಇರುತ್ತದೆ. ಇದಾದ ನಂತರ ಅದು ಮತ್ತೊಂದು ರಾಶಿಯನ್ನು ಪ್ರವೇಶಿಸುತ್ತದೆ.
ಮಾರ್ಚ್ 5ರಂದು ಬೆಳಿಗ್ಗೆ 8:12ಕ್ಕೆ ಚಂದ್ರನು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಗುರು ಈಗಾಗಲೇ ವೃಷಭ ರಾಶಿಯಲ್ಲಿದೆ. ಇದರಿಂದಾಗಿ ಈ ರಾಶಿಯಲ್ಲಿ ಪ್ರಬಲವಾದ ಗಜಕೇಶರಿ ರಾಜಯೋಗ ರೂಪುಗೊಳ್ಳುತ್ತದೆ. ಗಜಕೇಸರಿ ಯೋಗ ಒಂದು ಶುಭ ರಾಜಯೋಗವಾಗಿದೆ.
ಗುರು ಕೇಂದ್ರ ಭಾವಗಳಲ್ಲಿ ಅಂದರೆ 1, 4, 7 ಅಥವಾ 10 ನೇ ಮನೆಗಳಲ್ಲಿದ್ದು, ಚಂದ್ರನ ಶುಭ ಅಂಶದೊಂದಿಗೆ ಸಂಯೋಗವಾದಾಗ ಗಜಕೇಸರಿ ಯೋಗ ರೂಪುಗೊಳ್ಳುತ್ತದೆ. ಗಜಕೇಸರಿ ರಾಜ ಯೋಗದ ರಚನೆಯಿಂದಾಗಿ ಕೆಲವು ರಾಶಿಗಳ ಜನರ ಜೀವನದಲ್ಲಿ ಅದ್ಭುತ ಬದಲಾವಣೆ ಉಂಟಾಗುತ್ತದೆ. ಹಾಗಾದರೆ ಈ ಗಜಕೇಸರಿ ಯೋಗ ಯಾವ ರಾಶಿಯವರಿಗೆ ಉತ್ತಮವಾಗಲಿದೆ ಎಂದು ಈಗ ತಿಳಿಯೋಣ.

ವೃಷಭ ರಾಶಿ
ಈ ಶುಭ ಯೋಗ ವೃಷಭ ರಾಶಿಯಲ್ಲಿ ಮಾತ್ರ ರೂಪುಗೊಳ್ಳಲಿದೆ. ಇದರಿಂದಾಗಿ ವೃಷಭ ರಾಶಿಯವರ ಆರ್ಥಿಕ ಸ್ಥಿತಿ ಬಲಗೊಳ್ಳುವುದು.ವೃಷಭ ರಾಶಿಯವರು ವೃತ್ತಿಯಲ್ಲಿ ಪ್ರಗತಿಯನ್ನು ಹೊಂದುತ್ತಾರೆ. ಇದರೊಂದಿಗೆ ಕುಟುಂಬದ ಸಂತೋಷ ಮತ್ತು ಸಮೃದ್ಧಿಯ ಜೊತೆಗೆ, ಗೌರವವೂ ಹೆಚ್ಚಾಗುತ್ತದೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ನಿಮಗೆ ಹೊಸ ಅವಕಾಶಗಳು ಸಿಗಲಿವೆ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯ ಜನರ 11ನೇ ಮನೆಯಲ್ಲಿ ಈ ಶುಭ ಯೋಗ ರೂಪುಗೊಳ್ಳುತ್ತಿದೆ. ಆದ್ದರಿಂದ ಈ ಯೋಗದ ರಚನೆಯಿಂದಾಗಿ ನಿಮಗೆ ಆರ್ಥಿಕ ಲಾಭ ಸಿಗುತ್ತದೆ. ಇದರೊಂದಿಗೆ ಹೂಡಿಕೆ ಮತ್ತು ವ್ಯವಹಾರದಿಂದ ಉತ್ತಮ ಲಾಭ ಪಡೆಯುವ ಭರವಸೆ ಇದೆ. ಹೊಸ ಯೋಜನೆಗಳಲ್ಲಿ ನೀವು ಯಶಸ್ಸನ್ನು ಪಡೆಯುವ ನಿರೀಕ್ಷೆಯಿದೆ. ನೀವು ಸ್ನೇಹಿತರು ಮತ್ತು ಕುಟುಂಬದಿಂದ ಬೆಂಬಲವನ್ನು ಪಡೆಯುತ್ತೀರಿ.

ಕನ್ಯಾ ರಾಶಿ
ಕನ್ಯಾ ರಾಶಿಯವರ 9ನೇ ಮನೆಯಲ್ಲಿ ಗಜಕೇಸರಿ ಯೋಗ ರೂಪುಗೊಳ್ಳುತ್ತದೆ. ಈ ಸಮಯದಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುವುದು. ಇದರೊಂದಿಗೆ ನೀವು ಪ್ರಯಾಣದಿಂದ ಪ್ರಯೋಜನ ಪಡೆಯುತ್ತೀರಿ. ನಿಮ್ಮ ವೃತ್ತಿಜೀವನದಲ್ಲೂ ನೀವು ಯಶಸ್ಸನ್ನು ಪಡೆಯುವ ನಿರೀಕ್ಷೆಯಿದೆ. ಶಿಕ್ಷಣ, ಆಧ್ಯಾತ್ಮಿಕತೆ ಮತ್ತು ವಿದೇಶ ಪ್ರಯಾಣಕ್ಕೆ ಉತ್ತಮ ಅವಕಾಶಗಳಿವೆ.

ಮಕರ ರಾಶಿ
ಈ ಯೋಗವು ಮಕರ ರಾಶಿಯವರ ಐದನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದು ತುಂಬಾ ಶುಭವಾಗಲಿದೆ. ಈ ಸಮಯದಲ್ಲಿ ಮಕ್ಕಳಾಗದ ವಿವಾಹಿತ ಮಕರ ರಾಶಿಯವರಿಗೆ ಮಕ್ಕಳ ಸಂತೋಷ ಸಿಗುತ್ತದೆ. ಇದರೊಂದಿಗೆ ನೀವು ಪ್ರೇಮ ಸಂಬಂಧ ಮತ್ತು ಶಿಕ್ಷಣದಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಇದರೊಂದಿಗೆ ಷೇರು ಮಾರುಕಟ್ಟೆಯಲ್ಲಿ ಉದ್ಯೋಗ ಮಾಡುವ ಜನರು ಕೂಡ ಪ್ರಯೋಜನಗಳನ್ನು ಪಡೆಯಲಿದ್ದಾರೆ.

ಮೀನ ರಾಶಿ
ಈ ಸಂಯೋಜನೆಯು ಮೀನ ರಾಶಿಯವರಿಗೆ ತುಂಬಾ ಅದೃಷ್ಟವನ್ನು ತರಲಿದೆ. ಈ ಯೋಗ 11ನೇ ಮನೆಯಲ್ಲಿ ರೂಪುಗೊಳ್ಳುಲಿದೆ. ಇದರಿಂದಾಗಿ ನೀವು ಉದ್ಯೋಗದಲ್ಲಿ ಬಡ್ತಿ ಮತ್ತು ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತೀರಿ. ಅಲ್ಲದೆ ನೀವು ಹೊಸ ಆದಾಯದ ಮೂಲಗಳನ್ನು ಸಹ ಪಡೆಯುತ್ತೀರಿ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುವುದು ಮತ್ತು ಸ್ನೇಹಿತರಿಂದ ಬೆಂಬಲ ಕೂಡ ಸಿಗುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications