Kotyadhipati Yoga: ನಾಳೆ ಕಾರ್ತಿಕ ಅಮವಾಸ್ಯೆ: ಈ 7 ರಾಶಿಗೆ ಕೋಟ್ಯಾಧಿಪತಿ ಯೋಗ- ಸೋಲೇ ಇಲ್ಲ

2024 ಡಿಸೆಂಬರ್ 1 ಬಹಳ ವಿಶೇಷವಾದ ಅಮವಾಸ್ಯೆಯ ಇದೆ. ಈ ದಿನ 7 ರಾಶಿಯವರಿಗೆ ರಾಜಯೋಗ ಪ್ರಾಪ್ತಿಯಾಗುತ್ತದೆ. ಲಕ್ಷ್ಮೀ ದೇವಿಯ ಆಶೀರ್ವಾದದಿಂದ ಬಾಳು ಬಂಗಾರವಾಗಿ ಹಣದ ಹೊಳೆ ಹರಿಯುತ್ತದೆ. ಹಾಗೆ ಕುಬೇರ ದೇವನ ಸಂಪೂರ್ಣ ಆಶೀರ್ವಾದ ಸಿಗಲಿದ್ದು ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಗೆಲ್ಲುವ ಛಲ ಹೆಚ್ಚಾಗಲಿದೆ. ಹೀಗಾಗಿ ಕಾರ್ತಿಕ ಅಮವಾಸ್ಯೆಯ ದಿನ ಏಳು ರಾಶಿಯವರ ಅದೃಷ್ಟ ಮನೆ ಬಾಗಿಲಿದೆ ಬರಲಿದೆ. ಹಾಗಾದರೆ ಆ ರಾಶಿಗಳು ಯಾವುವು? ಹಾಗೇ ಅವುಗಳಿಗೆ ಯಾವೆಲ್ಲಾ ರೀತಿಯ ಲಾಭಗಳು ಸಿಗಲಿವೆ ಎನ್ನುವುದನ್ನು ತಿಳಿಯೋಣ.

Astrology december 1st kartik amavasya kotyadhipati yoga for these 7 zodiac signs

ವೃಷಭ ರಾಶಿ

ಡಿಸೆಂಬರ್ 1ರಂದು ಇರುವ ಕಾರ್ತಿಕ ಅಮವಾಸ್ಯೆ ವೃಷಭ ರಾಶಿಯವರಿಗೆ ಬಂಪರ್ ಲಾಭವನ್ನು ತಂದು ಕೊಡಲಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಿಗುವಂತೆ ಮಾಡಲಿದೆ. ಪಿತ್ರಾರ್ಜಿತ ಆಸ್ತಿಯಿಂದಲೂ ಕೂಡ ಈ ಸಂದರ್ಭದಲ್ಲಿ ವೃಷಭ ರಾಶಿಯವರು ಹಣವನ್ನು ಸಂಪಾದನೆ ಮಾಡುವಿರಿ. ಸಾಕಷ್ಟು ದೊಡ್ಡ ಮಟ್ಟದಲ್ಲಿ ನೀವು ಲಾಭ ಗಳಿಸಲು ಕುಬೇರನ ಆಶೀರ್ವಾದ ಸಿಗಲಿದೆ. ಉದ್ಯೋಗದಲ್ಲಿ ಪ್ರಮೋಷನ್ ಹಾಗೂ ವ್ಯಾಪರದಲ್ಲಿ ಕೈ ತುಂಬಾ ಹಣ ಪ್ರಾಪ್ತಿಯಾಗಲಿದೆ. ಆರೋಗ್ಯ ಉತ್ತಮವಾಗಿರಲಿದ್ದು, ಸಂಗಾತಿಯೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ.

Astrology december 1st kartik amavasya kotyadhipati yoga for these 7 zodiac signs

ಸಿಂಹ ರಾಶಿ

ಸಿಂಹ ರಾಶಿಯವರು ಈ ಸಮಯದಲ್ಲಿ ವಾಹನ ಹಾಗೂ ಆಸ್ತಿ ಖರೀದಿ ಮಾಡಲಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಹಣ ಹೂಡಿಕೆ ಮಾಡಿದರೂ ಹಣ ಕಟ್ಟಿಟ್ಟ ಬುತ್ತಿ. ಶತ್ರುಗಳ ವಿರುದ್ಧ ಗೆಲುವು ಸಾಧಿಸುವಿರಿ. ಸಂಗಾತಿ ಜೊತೆಗೆ ಪ್ರವಾಸ ಹೋಗುವಿರಿ. ಸುಖದ ಜೀವನದಲ್ಲಿ ಇನ್ನಷ್ಟು ವೃದ್ಧಿಯನ್ನು ಕಾಣುವಿರಿ. ಯಾವುದೇ ಕ್ಷೇತ್ರದಲ್ಲಾಗಲಿ ಕಠಿಣವಾದ ಸ್ಪರ್ಧಿ ನೀವಾಗಿರುತ್ತೀರಿ. ಹಣದ ಹರಿವು ಕೂಡ ಹೆಚ್ಚಾಗಲಿದೆ.

Astrology december 1st kartik amavasya kotyadhipati yoga for these 7 zodiac signs

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರಿಗೆ ಈ ಅಮವಾಸ್ಯೆ ಶುಭ ಹಾಗೂ ಲಾಭದಾಯಕವಾಗಿದೆ. ವೃಶ್ಚಿಕ ರಾಶಿಗೆ ಸೇರಿದ ಜನರ ಆರೋಗ್ಯವೂ ಅತ್ಯುತ್ತಮವಾಗಿರಲಿದೆ. ಇದರಿಂದಾಗಿ ಸಾಕಷ್ಟು ಉತ್ಸಾಹದಿಂದ ನೀವು ಇರುವಿರಿ. ಹೂಡಿಕೆಯಿಂದ ಉತ್ತಮ ದನಯೋಗ ಪ್ರಾಪ್ತಿಯಾಗುವ ಯೋಗ ಸೃಷ್ಟಿಯಾಗುತ್ತದೆ. ಬಾಡಿಗೆ ಮನೆಯಲ್ಲಿ ಇರುವ ವೃಶ್ಚಿಕರಾಶಿಯ ಜನರು ತಮ್ಮದೇ ಆದ ಸ್ವಂತ ಮನೆಯನ್ನು ಪಡೆಯುವ ಕನಸು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದಾಗಿ ಸಂತೋಷ ವೃದ್ಧಿಯಾಗಲಿದೆ. ನಿರುದ್ಯೋಗಿಗಳು ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯುತ್ತಾರೆ. ಹೊಸ ವೃತ್ತಿ ಜೀವನಕ್ಕೆ ಅವಕಾಶ ಸಿಗಲಿದೆ. ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ. ಸಂಗಾತಿಯೊಂದಿಗೆ ಮನಸ್ತಾಪ ದೂರವಾಗಿ ಸಂಬಂಧದಲ್ಲಿ ಹೊಸತನ ಹೆಚ್ಚಾಗಲಿದೆ.

Astrology december 1st kartik amavasya kotyadhipati yoga for these 7 zodiac signs

ಕುಂಭ ರಾಶಿ

ಕುಂಭ ರಾಶಿಯ ಅಧಿಪತಿ ಶನಿ ಆಗಿದೆ. ಪ್ರಸ್ತುತ ಶನಿ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಈ ಅಮವಾಸ್ಯೆಯ ದಿನ ಶನಿಯು ಶಶ ರಾಜಯೋಗವನ್ನು ಸೃಷ್ಟಿಸುತ್ತಾನೆ. ಈ ಯೋಗದಿಂದ ಸಾಕಷ್ಟು ಲಾಭ ಸಿಗಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಹೊಸ ಉದ್ಯೋಗದ ಪ್ರಸ್ತಾಪ ಬರಲಿದೆ. ನೆಮ್ಮದಿಯ ಜೀವನ ನಿಮ್ಮದಾಗಲಿದೆ. ಈ ಸಮಯದಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವ್ಯವಹಾರ ಲಾಭ ತರುತ್ತದೆ. ಈ ಸಮಯದಲ್ಲಿ ನೀವು ಮಾಡಿದ ಯೋಜನೆಗಳು ಯಶಸ್ವಿಯಾಗುತ್ತವೆ. ಹೆಚ್ಚು ಹಣ ಉಳಿಯಲಿದೆ. ಕಂಕಣಭಾಗ್ಯ ಕೂಡಿ ಬರಲಿದೆ.

Astrology december 1st kartik amavasya kotyadhipati yoga for these 7 zodiac signs

ಮಕರ ರಾಶಿ

ಈ ಸಮಯದಲ್ಲಿ ಶನಿ ದೇವ ಮಕರ ರಾಶಿಯವರಿಗೆ ವಿಶೇಷವಾಗಿ ದಯೆ ತೋರುತ್ತಾನೆ. ಶನಿ ಮಕರ ರಾಶಿಯ ಅಧಿಪತಿಯಾಗಿದ್ದು ಅದೃಷ್ಟವನ್ನು ಬೆಳಗಿಸುತ್ತಾನೆ. ನಿಮ್ಮ ಆರ್ಥಿಕ ಜೀವನ ಸುಧಾರಿಸಲಿದೆ. ಉತ್ತಮ ಸಮಯ ಇದಾಗಿರುತ್ತದೆ. ಈ ಅವಧಿಯಲ್ಲಿ ನೀವು ಕೆಲಸ ಮತ್ತು ಪ್ರಗತಿಯಲ್ಲಿ ನೀವು ಗಮನಾರ್ಹ ಪ್ರಗತಿಯನ್ನು ಕಾಣುವಿರಿ. ಬಹಳಷ್ಟು ಹಣ ಗಳಿಸಿ ಹಣ ಉಳಿಸುವಿರಿ. ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಹೊಸ ಉದ್ಯೋಗ ಅವಕಾಶ ಸಿಗಲಿದೆ. ವ್ಯಾಪಾರ ಕೂಡ ವೃದ್ಧಿಯಾಗಲಿದೆ.

Astrology december 1st kartik amavasya kotyadhipati yoga for these 7 zodiac signs

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ಅಮವಾಸ್ಯೆ ಸಾಕಷ್ಟು ಪ್ರಯೋಜನಗಳನ್ನು ನೀಡಲಿದೆ. ಬಡ್ತಿ ಸಿಗಲಿದೆ. ಒಳ್ಳೆಯ ಸುದ್ದಿ ಬರಬಹುದು. ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ವ್ಯಾಪಾರಸ್ಥರು ಹೊಸ ಎತ್ತರಕ್ಕೆ ತಲುಪುತ್ತಾರೆ. ಆದಾಯದ ಮೂಲಗಳು ಕಂಡುಕೊಳ್ಳುವಿರಿ. ಈ ಸಮಯದಲ್ಲಿ ನಿಮ್ಮ ಕೌಶಲ್ಯಗಳು ಹಾಗೂ ಬುದ್ದಿಮಟ್ಟ ಹೆಚ್ಚಾಗುತ್ತದೆ. ಹೆಚ್ಚುವರಿ ಹಣ ಗಳಿಸುವ ಅವಕಾಶ ಸಿಗಲಿದೆ. ಹೂಡಿಕೆಯಿಂದಲೂ ಲಾಭ ಸಿಗಲಿದೆ. ವೈವಾಹಿಕ ಜೀವನ ಸುಖವಾಗಿರುತ್ತದೆ. ಬುಧ ಗ್ರಹದ ಅನುಗ್ರಹದಿಂದ ಸಂಪತ್ತು ಕೂಡ ಹೆಚ್ಚಾಗಲಿದೆ.

Astrology december 1st kartik amavasya kotyadhipati yoga for these 7 zodiac signs

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ಸಮಯದಲ್ಲಿ ಸಾಕಷ್ಟು ಹಣದ ಆಗಮನವಾಗುವ ಸಾಧ್ಯತೆ ಇದೆ. ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುವಿರಿ. ಉದ್ಯೋಗದಲ್ಲೂ ಕೂಡ ನಿಮ್ಮ ಹಿರಿಯ ಅಧಿಕಾರಿಗಳು ಸಹೋದ್ಯೋಗಿಗಳು ನಿಮಗೆ ಬೆಂಬಲವಾಗಿ ಇರಲಿದ್ದಾರೆ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಗಳಿಸಲು ನಿಮಗೆ ಸಾಧ್ಯವಾಗುತ್ತದೆ. ನೀವು ಪಡುವ ಪರಿಶ್ರಮಕ್ಕೆ ಸರಿಯಾದ ಪ್ರತಿಫಲ ಸಿಗಲಿದೆ. ಸಂತೋಷದ ಜೀವನ ಆಗಮನವಾಗಲಿದೆ. ವ್ಯಪಾರದಲ್ಲಿ ವೃದ್ಧಿಯಾಗುವುದು.

ಕಾರ್ತಿಕ ಅಮಾವಾಸ್ಯೆ ಅವಧಿ

ಕಾರ್ತಿಕ ಅಮಾವಾಸ್ಯೆ ತಿಥಿ ಆರಂಭ: 2024ರ ನವೆಂಬರ್ 30ರಂದು ಬೆಳಗ್ಗೆ 10:29 ರಿಂದ ಡಿಸೆಂಬರ್ 1ರಂದು ಬೆಳಗ್ಗೆ 11:50ರವರೆಗೆ ಇರುತ್ತದೆ. ಈ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗುತ್ತದೆ. ಶುಭ ಕಾರ್ಯಗಳಿಗೆ ಹೋಗುವುದನ್ನು ಈ ಸಮಯದಲ್ಲಿ ತಪ್ಪಿಸಲಾಗುತ್ತದೆ. ಇಡೀ ದಿನ ದೇವರನ್ನು ಆರಾಧಿಸಲಾಗುತ್ತದೆ. ಜೊತೆಗೆ ಮಾಂಸಹಾರ, ಮದ್ಯಪಾನವನ್ನು ಸೇವಿಸುವುದನ್ನು ತಪ್ಪಿಸಲಾಗುತ್ತದೆ. ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಕಾಲಭೈರವ ಹಾಗೂ ಶನಿ ದೇವನ ಆಶೀರ್ವಾದ ಪಡೆಯಬಹುದು. ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಗಂಗಾಜಲವನ್ನು ಬೆರೆಸಿ ಸ್ನಾನ ಮಾಡಿ. ಮನೆಯನ್ನು ಉಪ್ಪು ನೀರಿನಿಂದ ಸ್ವಚ್ಚಗೊಳಿಸಿ. ದೇವರ ಮನೆಯಲ್ಲಿ ದೀಪವನ್ನು ಹಚ್ಚಿ ಭಕ್ತಿಯಿಂದ ಪೂಜೆ ಮಾಡಿ. ಶಿವನನ್ನು ಪೂಜಿಸಿ, ಈ ಸಮಯದಲ್ಲಿ ಪೂರ್ವಜರಿಗೆ ತರ್ಪಣವನ್ನು ಸಹ ಅರ್ಪಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+