Narendra Modi Prediction: ಮೋದಿ ಇನ್ನೆಷ್ಟು ದಿನ? ನಿಜವಾಯ್ತು ರಾಜಗುರು ಭವಿಷ್ಯ
ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಕೆಲ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು. ಕೆಲವರು ನುಡಿದ ಭವಿಷ್ಯ ಸುಳ್ಳಾದರೆ ಇನ್ನೂ ಕೆಲವರು ನುಡಿದ ಭವಿಷ್ಯ ನಿಜವಾಗಿದೆ. ಇನ್ನೂ ಕೆಲ ಜ್ಯೋತಿಷಿಗಳು ನುಡಿದ ಭವಿಷ್ಯ ನಿಖರವಾಗಿದೆ.
ಹೌದು... ಈ ಬಾರಿ ಲೋಕಸಭಾ ಚುನಾವಣೆ ಫಲಿತಾಂಶ ಹೇಗಿರಲಿದೆ ಎಂದು ಜ್ಯೋತಿಷಿ ರಾಜಗುರು ದ್ವಾರಕನಾಥ್ ಅವರು ನುಡಿದ ಭವಿಷ್ಯ ಪಕ್ಕಾ ಆಗಿದೆ. ಲೋಕಸಭಾ ಚುನಾವಣೆ ಮತದಾನ ಪೂರ್ವ ಸಮೀಕ್ಷೆ ಮತ್ತು ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಿದ್ದವು. ಆದರೀಗ ಅವುಗಳ ನಿರೀಕ್ಷೆ ಹುಸಿಯಾಗಿದೆ.

ಹೊಸ ವರ್ಷದ ಹೊಸ್ತಿಲಲ್ಲಿ ಮತ್ತು ಯುಗಾದಿ ಸಂದರ್ಭದಲ್ಲಿ ರಾಜಗುರು ದ್ವಾರಕನಾಥ್ ಅವರು ನುಡಿದ ವರ್ಷ ಭವಿಷ್ಯದಲ್ಲಿ ಈ ಅಂಶ ಉಲ್ಲೇಖಿಸಿದ್ದರು. ಕ್ರೋಧಿ ನಾಮ ಸಂವತ್ಸರ ಹಾಗೂ ಗ್ರಹಗತಿಗಳ ಬದಲಾವಣೆಯಿಂದ ರಾಷ್ಟ್ರದಲ್ಲಿ ಪ್ರಜೆ ಸುಖಪಡಲ್ಲ. ಪ್ರಜೆಗಳಲ್ಲಿ ಗೊಂದಲ ಇರಲಿದೆ. ಇಡೀ ಭಾರತಾದ್ಯಂತ ಸಂಘರ್ಷ, ರಾಜಕೀಯ ಕಲಹಗಳು ಮುಂದುವರಿಯುತ್ತವೆ ಎಂದಿದ್ದರು. ಅದೀಗ ನಿಜವಾಗಿದೆ.
400 ಸ್ಥಾನ ಗೆಲ್ಲುವುದು ಕನಸಿನ ಮಾತು
ಮುಖ್ಯವಾಗಿ ಕುಜ-ಶನಿ ಸಮಾಗಮದ ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷ ಪುನ: ಗೆಲ್ಲಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ. 400 ಸ್ಥಾನ ಗೆಲ್ಲುವುದು ಕನಸಿನ ಮಾತು. 240 ಸ್ಥಾನ ಗೆದ್ದರೂ ಹೆಚ್ಚು ಮೈತ್ರಿ ಪಕ್ಷಗಳ ಸಹಕಾರದಿಂದಲೇ ಸರ್ಕಾರ ರಚಿಸಬೇಕಾಗುವ ವಾತಾವರಣ ನಿರ್ಮಾಣವಾಗುತ್ತದೆ. ಹಾಗೆಯೇ ಕಳೆದ ಹತ್ತು ವರ್ಷದಲ್ಲಿ ಆಡಳಿತ ನಡೆಸಿದಂತೆ ಮುಂದೆ ಪರಿಸ್ಥಿತಿ ಇರುವುದಿಲ್ಲ. ಆಡಳಿತಾರೂಢ ಪಕ್ಷಕ್ಕೆ ಮಧ್ಯಪ್ರದೇಶ, ರಾಜಸ್ಥಾನ ಗೆದ್ದಂತಲ್ಲ, ಸ್ಪಷ್ಟತೆ ಕಾಣಿಸುತ್ತಿಲ್ಲ ಎಂದಿದ್ದರು.
ಅವರು ಹೇಳಿದ ಈ ಭವಿಷ್ಯ ನಿಖರವಾಗಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಸಾಕಷ್ಟು ಕಷ್ಟ ಪಡುವಂತಹ ಸ್ಥಿತಿ ಇದೆ. ಹಾಗೇಯೇ ರಾಜಗುರು 'ನೀನೊಂದು ಬಗೆದರೆ ದೈವ ಬಗೆವುದು ಬೇರೊಂದು ಎಂಬಂತಾಗಲಿದೆ' ಎಂದು ಹೇಳಿದ್ದರು.

ಬಿಜೆಪಿಯಲ್ಲಿ ಗುಂಪುಗಾರಿಕೆ ಶುರುವಾಗಲಿದೆ. ನಿತಿನ್ ಗಡ್ಕರಿ ಮಹತ್ವದ ಪಾತ್ರ ವಹಿಸುತ್ತಾರೆ. ಈ ಚುನಾವಣೆ ನಡೆದು ಗೆದ್ದರೂ ನಂತರ ನಡೆಯುವ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಲಿದೆ. ಮಹಾರಾಷ್ಟ್ರದಲ್ಲಿ ಪುನ: ಬಿಜೆಪಿಗೆ ಹೆಚ್ಚು ಸ್ಥಾನ ಸಿಗಲ್ಲ ಎಂದೂ ಅವರು ವರ್ಷಭವಿಷ್ಯದಲ್ಲಿ ಉಲ್ಲೇಖಿಸಿದ್ದರು. ಇದೆಲ್ಲವೂ ಸದ್ಯ ನಡೆಯುತ್ತಿದ್ದು ಜ್ಯೋತಿಷಿ ರಾಜಗುರು ದ್ವಾರಕನಾಥ್ ಅವರು ನುಡಿಯುವ ಭವಿಷ್ಯದ ಮೇಲೆ ಜನರಲ್ಲಿ ನಂಬಿಕೆ ಹೆಚ್ಚಾಗಿದೆ.
ಮೋದಿ ಇನ್ನೆಷ್ಟು ದಿನ?
ನರೇಂದ್ರ ಮೋದಿ ಮುಂದೆ ಪ್ರಧಾನಿ ಆಗುತ್ತಾರೆ. ಆದರೆ ಅಷ್ಟು ಸುಲಭವಾಗಿ ಮುಂದಿನ ಸರ್ಕಾರ ಮಾಡಲು ಆಗಲ್ಲ, ನಡೆಸುವುದಕ್ಕೂ ಆಗಲ್ಲ. ಹತ್ತು ವರ್ಷ ಕಳೆದವರಿಗೆ ಮುಂದಿನ ಐದು ವರ್ಷ ಕಳೆಯುವುದು ಕಷ್ಟವಾಗುತ್ತದೆ. ಪ್ರಜೆಗಳಲ್ಲಿ ಕ್ರೋಧ ಉಂಟಾಗುತ್ತದೆ.
ಯಾರಿಂದ ಅವಕಾಶ ಪಡೆದುಕೊಂಡಿದ್ದರೋ ಅವರ ವಿರೋಧ ಎದುರಿಸಬೇಕಾಗುತ್ತದೆ. ಯಾರನ್ನು ನಂಬಿದ್ದರೋ ಅವರೇ ಎದುರಾಗುತ್ತಾರೆ. ಮೋದಿ 2026ರವರೆಗೂ ಅಧಿಕಾರದಲ್ಲಿ ಇರಬಹುದು. ಕುಜ-ಶನಿ ಒಂದು ಮನೆಗೆ ಬಂದ ಕೂಡಲೇ ಬದಲಾವಣೆ ಖಚಿತ ಎಂದು ಭವಿಷ್ಯ ನುಡಿದಿದ್ದರು. ಈವರೆಗೂ ನಡೆದ ಘಟನೆಗಳು ರಾಜಗುರು ಹೇಳಿದಂತೆ ನಡೆದಿದ್ದು, 2026ರವರೆಗೆ ಮೋದಿ ಅವರು ಅಧಿಕಾರ ನಡೆಸುತ್ತಾರಾ ಅಥವಾ ಅಧಿಕಾರದಿಂದ ಕೆಳಗಿಳಿಯುತ್ತಾರಾ ಕಾದು ನೋಡಬೇಕಿದೆ.












Click it and Unblock the Notifications