Puneeth Rajkumar: ಪುನೀತ್ ರಾಜಕುಮಾರ ನಿಧನದ ಬಗ್ಗೆ ಜ್ಯೋತಿಷಿ ನಾಗರಾಜ್ ಕೋಟೆ ಅಚ್ಚರಿ ಹೇಳಿಕೆ..!
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಂದು ನಮ್ಮೊಡನೆ ದೈಹಿಕವಾಗಿ ಇಲ್ಲ. ಆದರೂ ಅವರ ಮಾತು, ಅವರ ಮಾರ್ಗದರ್ಶನ, ಅವರ ಅಭಿನಯ, ಅವರ ಹಾಡುಗಳು ಅಲ್ಲದೆ ಅವರು ಮಾಡಿದ ಒಳ್ಳೆಯ ಕಾರ್ಯಗಳು ಜನಮನದಲ್ಲಿ ಮಾಸದಂತೆ ಉಳಿದಿವೆ. ಪ್ರೀತಿಯಿಂದ ಅಪ್ಪಿಕೊಳ್ಳುವ ಸದಾ ನಗುಮುಖದ ಅಪ್ಪು ಅವರು ಇಹಲೋಕ ತ್ಯಜಿಸಿ ಮೂರು ವರ್ಷಗಳಾಗಿವೆ. ಇದೀಗ ಪುನೀತ್ ರಾಜಕುಮಾರ್ ನಿಧನದ ಬಗ್ಗೆ ಜ್ಯೋತಿಷಿ ನಾಗರಾಜ್ ಕೋಟೆ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಅಪ್ಪು... ಈ ಒಂದು ಹೆಸರು ಕೇಳಿದರೆ ಅಭಿಮಾನಿಗಳು, ಆಪ್ತರು, ಕುಟುಂಬಸ್ಥರ ಕಣ್ತುಂಬಿ ಬರುತ್ತದೆ. ಪುನೀತ್ ರಾಜಕುಮಾರ್ ಅವರನ್ನು ಇಷ್ಟು ಬೇಗ ಕಳೆದುಕೊಳ್ಳುತ್ತೇವೆ ಅಂತ ಯಾರೂ ಕೂಡ ಊಹೆ ಮಾಡಿರಲಿಲ್ಲ. ಇನ್ನೂ ಬಾಳಿ ಬದುಕಬೇಕಿದ್ದ ಅಪ್ಪು ನಿಧನ ಎಲ್ಲರಿಗೂ ತುಂಬಾ ನೋವು ತಂದಿದೆ. ಅಪ್ಪು ನಿಧನದ ನಂತರ ಅವರ ಬಗ್ಗೆ ಹಲವಾರು ಜ್ಯೋತಿಷಿಗಳು ಭವಿಷ್ಯ ನುಡಿದರು. ಇದೀಗ ಜ್ಯೋತಿಷಿ ನಾಗರಾಜ್ ಕೋಟೆ ಅವರು ಅಪ್ಪು ಬಗ್ಗೆ ಹೇಳಿದ ಮಾತೊಂದು ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ಹೌದು.. ಅಕ್ಟೋಬರ್ 29, 2021 ಅಪ್ಪು ನಿಧನ ಹೊಂದಿದ ದಿನ ಇಡೀ ರಾಜ್ಯವೇ ಕಂಬನಿ ಮಿಡಿದಿತ್ತು. ಅಂದು ಅಭಿಮಾನಿಗಳು ಸಣ್ಣ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತಿದ್ರು. ಅಪ್ಪು ಅಭಿಮಾನಿಗಳ ದು:ಖಕ್ಕೆ ಸಾಂತ್ವಾನ ಹೇಳುವ ಗಟ್ಟಿ ಧೈರ್ಯ ಕೂಡ ಯಾರಿಗೂ ಇಲ್ಲದಂತಾಗಿತ್ತು. ಎಂಥಹ ಕಲ್ಲು ಹೃದಯದವರ ಕಣ್ಣಲ್ಲಿ ನೀರು ಜಿನುಗಿದ್ದ ಸಂದರ್ಭವದು. ಅಪ್ಪು ಹೃದಘಾತದಿಂದ ಹಠಾತ್ ಸಾವನ್ನಪ್ಪಿದ ದಿನ ಇಡೀ ಕನ್ನಡಿಗರ ಹೃದಯ ಒಡೆದು ಹೋಗಿತ್ತು. ಹೀಗೆ ಅಲ್ಪಾಯುಷಿಯಾಗಿ ನಿಧನರಾದ ಪುನೀತ್ ರಾಜಕುಮಾರ್ ದೇವರ ಸಮಾನರು ಎಂದು ಜ್ಯೋತಿಷಿ ನಾಗರಾಜ್ ಕೋಟೆ ಹೇಳಿದ್ದಾರೆ.
ಯೂಟ್ಯೂಬ್ ಚಾನಲ್‌ವೊಂದರಲ್ಲಿ ಸಂದರ್ಶನದ ವೇಳೆ ಮಾತನಾಡಿದ ಜ್ಯೋತಿಷಿ ನಾಗರಾಜ್ ಕೋಟೆ ಅವರು, 'ಅಪ್ಪಿ ಸಾವು ತುಂಬಾ ನೋವು ತಂದಿದೆ. ಶಂಕರಾಚಾರ್ಯರು ಹಾಗೂ ವಿವೇಕಾನಂದರು, ಪುನೀತ್ ರಾಜಕುಮಾರ್ ಇವೆರೆಲ್ಲಾ ಅಲ್ಪಾಯುಷಿಗಳಾಗಿದ್ದಾರೆ. ಅವರೆಲ್ಲಾ ಇಂದಿಗೆ ಇದ್ದಿದ್ದರೆ ಏನೆಲ್ಲಾ ಮಾಡುತ್ತಿದ್ದರು. ಆದರೆ ದೇವರು ಅವರನ್ನು ಇರಲು ಬಿಡಲಿಲ್ಲ. ಹೀಗೆ ಅಲ್ಪಾಯುಷಿಗಳೆಲ್ಲಾ ದೇವರಾಗುತ್ತಾರೆ' ಎಂದಿದ್ದಾರೆ.

ನಾವು ಎಲ್ಲಾ ವಿಚಾರದಲ್ಲಿ ಭವಿಷ್ಯ, ಜಾತಕ ಹೇಳುತ್ತೇವೆ. ಆದರೆ ಹುಟ್ಟು ಸಾವಿನ ಬಗ್ಗೆ ಹೇಳಲು ಆಗುವುದಿಲ್ಲ. ಯಾಕೆಂದರೆ ಬ್ರಹ್ಮದೇವ ಹುಟ್ಟು, ಸಾವು, ಸಂಗಾತಿ ಈ ಮೂರನ್ನು ಬಿಟ್ಟುಕೊಟ್ಟಿಲ್ಲ. ನಾವು ಎಲ್ಲವನ್ನು ಊಹಿಸಬಹುದು ಆದರೆ ಹುಟ್ಟು, ಸಾವು, ಸಂಗಾತಿಯನ್ನು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಅಲ್ಪಾವಧಿಯಲ್ಲಿ ಬರುವ ಸಾವು ದೇವರು ತಂದ ಸಾವು. ಹೀಗೆ ಮರಣ ಹೊಂದಿದವರು ದೇವರಾಗುತ್ತಾರೆ' ಎಂದು ಜ್ಯೋತಿಷಿ ನಾಗರಾಜ್ ಕೋಟೆ ಅವರು ಹೇಳಿದ್ದಾರೆ.
'ಅಪ್ಪು ಸಾವನ್ನಪ್ಪಿದ ದಿನ ಅವರ ಫೋಟೋಗಳು ಹೆಚ್ಚು ಮಾರಾಟ ಆದ್ವು. ಇವತ್ತಿಗೂ ಅಪ್ಪು ಫೋಟೋ ಇಲ್ಲದ ಅಂಗಡಿಗಳೇ ಇಲ್ಲ. ಅವರಿಗಾಗಿ ದೇವಸ್ಥಾನ ಕಟ್ಟಿದವರು ಇದ್ದಾರೆ. ಅಭಿಮಾನಿಗಳ ಮನದಲ್ಲಿ ಇಂದಿಗೂ ಅಪ್ಪು ಅಚ್ಚಳಿಯದಂತೆ ಉಳಿದಿದ್ದಾರೆ. ಇದನ್ನೆಲ್ಲಾ ನೋಡಿದರೆ ಅಪ್ಪು ನಿಜಕ್ಕೂ ದೇವರು' ಎಂದು ಜ್ಯೋತಿಷಿ ನಾಗರಾಜ್ ಕೋಟೆ ಹೇಳಿದ್ದಾರೆ.












Click it and Unblock the Notifications