Ugadi Horoscope 2023: ಕುಂಭ ರಾಶಿಯ ಯುಗಾದಿ ಭವಿಷ್ಯ ಈ ವರ್ಷ ಶುಭವೋ? ಅಶುಭವೋ?
ಕುಂಭ ರಾಶಿಯ ಯುಗಾದಿ ಜಾತಕ 2023: ಕುಂಭ ರಾಶಿ ಶೋಭಾಕೃತಿ ನಾಮ ಸಂವತ್ಸರ ಯುಗಾದಿ ರಾಶಿ ಭವಿಷ್ಯ ಇಲ್ಲಿದೆ.
ಯುಗಾದಿ ಹಬ್ಬವನ್ನು ಇದೇ ಮಾರ್ಚ್ 22ರಂದು ಆಚರಿಸಲಾಗುತ್ತದೆ. ಈ ವರ್ಷ ದ್ವಾದಶಿ ರಾಶಿಯವರ ಜೀವನದಲ್ಲಿ ಹಲವಾರು ಬದಲಾವಣೆಗಳಾಗಲಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ ಕುಂಭ ರಾಶಿಯವರಿಗೆ 2023ರ ಯುಗಾದಿ ಭವಿಷ್ಯ ಯಾವ ರೀತಿ ಇದೆ? ಯಾವ ಗ್ರಹದ ಅನುಗ್ರಹವನ್ನು ಕುಂಭ ರಾಶಿಯವರು ಪಡೆಯುತ್ತಾರೆ ಎನ್ನುವುದನ್ನು ನೋಡೋಣ.
ಈಗಾಗಲೇ ಕುಂಭ ರಾಶಿಗೆ ಶನಿ ಬಂದಾಗಿದೆ. ಶನಿ ನಿಮ್ಮ ರಾಶಿಯಲ್ಲಿ ಇದ್ದುಕೊಂಡು ಯಾವ ರೀತಿ ಫಲವನ್ನು ಕೊಡುತ್ತಾನೆಂದು ನೋಡುವುದಾದರೆ- ಶನಿ ಶುಭ ಹಾಗೂ ಅಶುಭ ಫಲಗಳನ್ನು ಕೊಡುತ್ತಾನೆ. ಕುಂಭ ರಾಶಿಯವರಿಗೆ ಗುರು ಬಲ ಇರುವುದಿಲ್ಲ. ಹೀಗಾಗಿ ಕುಂಭ ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರಬೇಕಾದ ವರ್ಷ ಇದಾಗಿದೆ. ಆದರೂ ಕೆಲವೊಂದು ವಿಚಾರದಲ್ಲಿ ಗುರು ಗ್ರಹ ಕುಂಭ ರಾಶಿಯವರನ್ನು ಕಾಪಾಡುತ್ತದೆ.
ಹರ ಮುನಿದರು ಗುರು ಕಾಯುವನು ಎನ್ನುವ ರೀತಿಯಲ್ಲಿ ಗುರು ನಿಮ್ಮನ್ನು ಶನಿಯಿಂದ ಕಾಪಾಡುತ್ತದೆ. ಆದರೆ ಕುಂಭ ರಾಶಿಯವರಿಗೆ ಸಾಡೇಸಾತ್ ನಡೆಯುತ್ತಿದೆ. ಹೀಗಾಗಿ ಎಲ್ಲಾ ಸಮಸ್ಯೆಯನ್ನು ಕುಂಭ ರಾಶಿಯವರೇ ಎದುರಿಸಬೇಕಾಗುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದಕ್ಕೆ ಪರಿಹಾರವೂ ಕೂಡ ಇದೆ. ಹಾಗಾದರೆ ಯಾವ ರೀತಿ ಸಮಸ್ಯೆಗಳು ಆಗಬಹುದು. ಇದರಿಂದ ಪರಿಹಾರ ಪಡೆಯುವುದು ಹೇಗೆ ತಿಳಿಯೋಣ.

ಕುಂಭ: ಆರ್ಥಿಕ ಜೀವನ
ಕುಂಭ ರಾಶಿಯವರು ಈ ವರ್ಷ ಹಣದ ವಿಚಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಶೇರ್ ಮಾರುಕಟ್ಟೆಯಿಂದ ಅಥವಾ ಯಾರಿಗೋ ಹಣ ಕೊಟ್ಟು ಮೋಸ ಹೋಗಬಹುದು. ಹಣಕಾಸಿನ ವಿಚಾರದಲ್ಲಿ ದೊಡ್ಡ ಯೋಜನೆಗಳನ್ನು ಹಾಕಿಕೊಳ್ಳಬೇಡಿ. ಹೂಡಿಕೆಯನ್ನು ತಪ್ಪಿಸಿ. ಪಾಲುದಾರರು ನಿಮಗೆ ಸಮಸ್ಯೆ ತರಬಹುದು. ಹೀಗಾಗಿ ಯೋಚನೆ ಮಾಡಿ ಕೆಲಸ ಮಾಡಿ. ಪರಿಸ್ಥಿತಿ ಎದುರಿಸಲು ಸಾಧ್ಯವಾದರೆ ಮಾತ್ರ ಹಣಕಾಸಿನ ವಿಚಾರಕ್ಕೆ ಕೈ ಹಾಕಿ.
ಇನ್ನೂ ನಿಮ್ಮ ತೃತಿಯಭಾವದಲ್ಲಿ ರಾಹು ಇದೆ. ಇದು ನಿಮಗೆ ಒಳ್ಳೆಯದನ್ನು ಮಾಡುತ್ತದೆ. ನಿಮ್ಮ ಒಳ್ಳೆಯ ಮನಸ್ಸು ಎಚ್ಚರಿಸುವಂತ ಕೆಲಸ ರಾಹು ಮಾಡುತ್ತದೆ. ರಾಹುಗೆ ಅಂತಹ ವಿಶೇಷ ಶಕ್ತಿ ಇದೆ. ಹೀಗಾಗಿ ರಾಹು ಯಾವುದು ಸರಿ ಯಾವುದು ತಪ್ಪು ಎಂದು ಕುಂಭ ರಾಶಿಯವರಿಗೆ ಎಚ್ಚರಿಕೆ ನೀಡುತ್ತಾನೆ. ಆರ್ಥಿಕವಾಗಿ ಖರ್ಚು ಮತ್ತು ಆದಾಯ ಸಮಾನವಾಗಿರುತ್ತದೆ. ಕಷ್ಟ ಜಾಸ್ತಿ ಆಗಿ ಸಾಲ ಮಾಡುವಂತ ಪರಿಸ್ಥಿತಿ ಬರಬಹುದು. ಆದರೆ ಅದಕ್ಕೂ ಮುಂಚಿತವಾಗಿ ಜಾಗೃತ ವಹಿಸಿ.

ಕುಂಭ: ವೃತ್ತಿ ಜೀವನ
ಕುಂಭ ರಾಶಿಯವರಿಗೆ ಇಷ್ಟು ದಿನ ಇದ್ದ ಆದಾಯ ಕಡಿಮೆಯಾಗಲಿದೆ. ಈ ವರ್ಷ ಯುಗಾದಿ ಕಳೆದ ಬಳಿಕ ಲಾಭ ಕಮ್ಮಿಯಾಗುತ್ತದೆ. ಹಣಕಾಸಿನ ಸಮಸ್ಯೆಗಳು ಬರಬಹುದು. ಹೀಗಾಗಿ ಹಣವನ್ನು ಕೂಡಿಟ್ಟುಕೊಳ್ಳಬೇಕು. ಮುಂದೆ ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾದರೆ ಈಗಿನಿಂದಲೇ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು.
ಉದ್ಯೋಗ ಮಾಡುವವರು ಹೆಚ್ಚು ಶ್ರಮ ಪಡುತ್ತೀರಿ. ಆದರೆ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುವುದಿಲ್ಲ. ಕಷ್ಟ ಪಟ್ಟ ಶ್ರಮಕ್ಕೆ ಲಾಭ ಸಿಗುವುದಿಲ್ಲ. ಬೇರೆಯವರ ಕೈ ಕೆಳಗೆ ಕೆಲಸ ಮಾಡುವವರಿಗೆ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಕೆಲಸ ಬದಲಾಯಿಸಲು ಮನಸ್ಸು ಮಾಡುತ್ತೀರಿ. ಆದರೆ ಕೆಲಸ ಬದಲಾಯಿಸುವುದರಿಂದ ನಿಮ್ಮ ಕೆಲಸ ಸುಲಭವಾಗುತ್ತದೆ ಎಂದು ಭಾವಿಸಬೇಡಿ. ಅಲ್ಲೂ ಕೂಡ ಇದೇ ಸಮಸ್ಯೆಗಳು ಎದುರಾಗಬಹುದು. ಈ ಸಮಯದಲ್ಲಿ ನೀವು ಕೆಲಸ ಮಾತ್ರ ಬದಲಾಯಿಸಬಹುದು. ಆದರೆ ತೊಂದರೆಗಳಿಂದ ಮುಕ್ತಿಯನ್ನಲ್ಲ. ಇಲ್ಲಿ ಶನಿ ಸ್ಥಾನವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಇದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರಗಳಿವೆ. ಅವುಗಳನ್ನು ಈ ಕೆಳಗೆ ಸೂಚಿಸಲಾಗಿದೆ.

ಕುಂಭ: ಕೌಟುಂಬ ಜೀವನ
ಗುರುವಿನ ದೃಷ್ಟಿ ನಿಮ್ಮ ಏಳನೇ ಮನೆಯಲ್ಲಿ ಇರುತ್ತದೆ. ಹೀಗಾಗಿ ಕುಂಭ ರಾಶಿಯವರು ದುಡ್ಡಿನ ವಿಚಾರದಲ್ಲಿ ಜಾಗೃತರಾಗಿರಬೇಕು. ಹಣ ಕಳ್ಳತನವಾಗುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಕುಟುಂಬ ಜೀವನ ತುಂಬಾ ಕಷ್ಟವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಥವಾ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ.
ಅವಶ್ಯಕತೆ ಇಲ್ಲದ ಕಡೆ ಮಾತನಾಡದೇ ಇರುವುದು ಉತ್ತಮ. ನಿಮ್ಮ ಮಾತಿನಿಂದ ಸಮಸ್ಯೆ ಬರುತ್ತದೆ ಎಂದು ತಿಳಿದ ಬಳಿಕ ಮೌನ ತಾಳಬೇಡಿ ಅದಕ್ಕೂ ಮುನ್ನ ಮೌನವಾಗಿರುವುದು ಬುದ್ಧಿವಂತರ ಲಕ್ಷಣ. ಮುಂಚಿತವಾಗಿ ಮಾತನ್ನು ಹಿಡಿತವಾಗಿಟ್ಟುಕೊಳ್ಳಿ. ಎಷ್ಟು ಬೇಕು ಅಷ್ಟು ಮಾತನಾಡಿ. ಯಾರೇ ನಿಮ್ಮನ್ನು ಬೇಸರ ಮಾಡಿದರೂ ತಕ್ಷಣಕ್ಕೆ ನೀವು ಪ್ರತಿಕ್ರಿಯೆ ನೀಡದೇ ಇರುವುದು ಒಳ್ಳೆಯದು. ಇದರಿಂದ ಮನೆಯಲ್ಲಿ ನೆಮ್ಮದಿ ಇರುತ್ತದೆ. ಶಾಂತಿ ನೆಲಸಲಿದೆ.

ಕುಂಭ: ಶೈಕ್ಷಣಿಕ ಜೀವನ
ಇನ್ನೂ ಕುಂಭ ರಾಶಿಯ ವಿದ್ಯಾರ್ಥಿಗಳಿಗೆ ಈ ಯುಗಾದಿ ಯಾವ ರೀತಿ ಇದೆ ಎಂದು ನೋಡೋಣ. ಪಂಚಮಕ್ಕೆ ಗುರು ದೃಷ್ಟಿ ಇಲ್ಲ. ಆದರೆ ನಿಮ್ಮ ಭಾಗ್ಯ ಸ್ಥಾನಕ್ಕೆ ಗುರು ದೃಷ್ಟಿ ಇದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಇ ವರ್ಷ ಯಾವುದೇ ತೊಂದರೆ ಇಲ್ಲ. ನಿಮ್ಮ ವಿದ್ಯಾಭ್ಯಾಸದಲ್ಲಿ ಯಾವುದೇ ಅಡೆತಡೆಗಳು ಇರುವುದಿಲ್ಲ. ಅಕ್ಟೋಬರ್ ಕಳೆದ ನಂತರ ಇನ್ನೂ ಉತ್ತಮ ದಿನಗಳನ್ನು ನೀವು ನೋಡುವಿರಿ. ಉನ್ನತ ವ್ಯಾಸಾಂಗ ಮಾಡುವವರಿಗೆ ಉತ್ತಮವಾಗಿರುತ್ತದೆ. ಅಂದುಕೋಮಡ ಕೋರ್ಸ್ ಅನ್ನು ಅವರು ಶುರು ಮಾಡುತ್ತಾರೆ.

ಕುಂಭ: ಪ್ರೇಮ ಜೀವನ
ಪರಸ್ಪರ ವ್ಯಕ್ತಿಗಳ ನಡುವೆ ಉತ್ತಮ ಹೊಂದಾಣಿಕೆ ಹಾಗೂ ಪ್ರೀತಿ ವಿಶ್ವಾಸ ಇರುತ್ತದೆ. ಹೀಗಾದರೆ ಅವರ ಸಂಬಂಧ ಹಾಗೂ ಸ್ನೇಹವು ಅತ್ಯುತ್ತಮವಾಗಿರುತ್ತವೆ. ಜೊತೆಗೆ ಒಬ್ಬರ ಕಷ್ಟದಲ್ಲಿ ಇನ್ನೊಬ್ಬರು ಹೃದಯ ಪೂರ್ವಕವಾಗಿ ಸ್ಪಂದಿಸುತ್ತಾರೆ. ಅಗತ್ಯದ ಸಂದರ್ಭದಲ್ಲಿ ಸೂಕ್ತ ಸಹಾಯವನ್ನು ಮಾಡುತ್ತಾರೆ. ಒಬ್ಬರ ಅಗತ್ಯಗಳಿಗೆ ಇನ್ನೊಬ್ಬರು ಸ್ಪಂದಿಸುವುದರ ಮೂಲಕ ಮಾನಸಿಕವಾಗಿಯೂ ಹಿತವನ್ನು ನೀಡುತ್ತಾರೆ. ಇಂತಹ ಹೊಂದಾಣಿಕೆಯು ದಾಂಪತ್ಯ ಜೀವನದಲ್ಲಿ ಅತ್ಯಗತ್ಯವಾದ ಸಂಗತಿಯಾಗಿರುತ್ತದೆ.
ವ್ಯಕ್ತಿಗಳ ನಡುವೆ ಉತ್ತಮ ಹೊಂದಾಣಿಕೆ ಇರಬೇಕು ಎಂದರೆ ಅವರ ಕುಂಡಲಿ ಹಾಗೂ ರಾಶಿಚಕ್ರಗಳ ಹೊಂದಾಣಿಕೆ ಉತ್ತಮವಾಗಿರಬೇಕು. ವೈದಿಕ ಜ್ಯೋತಿಷ್ಯದ ಪ್ರಕಾರ ಪಾಲುದಾರರು ಅಥವಾ ಸಂಗಾತಿಗಳ ನಡುವೆ ಸೂಕ್ತ ಹೊಂದಾಣಿಕೆ ಇರಬೇಕು. ಆಗಲೇ ವೈವಾಹಿಕ ಜೀವನವು ಉತ್ತಮವಾಗಿರುತ್ತದೆ.

ಕುಂಭ: ಆಸ್ತಿ ಖರೀದಿ
ಯಾವುದೇ ಸಣ್ಣ- ಪುಟ್ಟ ವಿಚಾರಕ್ಕೂ ಕಾನೂನು ಬಾಹೀರ ದಾರಿಯನ್ನು ಅನುಸರಿಸಬೇಡಿ. ಯಾರ್ಯಾರದೋ ಮಾತನ್ನು ನಂಬಿ, ದೊಡ್ಡ ಮೊತ್ತದ ಹೂಡಿಕೆ ಮಾಡಿದರೆ ಆ ನಂತರದಲ್ಲಿ ದುಃಖ ಪಡಬೇಕಾಗುತ್ತದೆ. ಮುಖ್ಯವಾಗಿ ಪಾರ್ಟನರ್ಶಿಪ್ ವ್ಯವಹಾರಗಳನ್ನು ಮಾಡಬೇಡಿ.
ಮನೆ, ಭೂಮಿ, ವಾಹನ ಖರೀದಿಸಲು ಈ ಸಮಯ ಉತ್ತಮವಾಗಿರುತ್ತದೆ. ಆದರೆ ಯಾವುದೇ ಕಾರಣಕ್ಕೂ ಸಾಲ ಮಾಡಿ ಮನೆ, ಭೂಮಿ, ವಾಹನ ಖರೀದಿಗೆ ಮುಂದಾಗಬೇಡಿ. ಇದು ನಿಮಗೆ ಕಷ್ಟವನ್ನು ನೀಡಬಹುದು. ಸಾಲ ತೀರಿಸಲಾಗದಂತ ಸಮಸ್ಯೆಗಳು ನಿಮಗೆ ಬರಬಹುದು.

ಕುಂಭ: ಆರೋಗ್ಯ
ಕುಂಭ ರಾಶಿಯವರಿಗೆ ಈ ವರ್ಷ ಕೆಲ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಈಗಾಗಲೇ ಆರೋಗ್ಯ ಸಮಸ್ಯೆಗಳು ಇರುವಂತವರಿಗೆ ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಯಾವುದೇ ಆರೋಗ್ಯ ಸಮಸ್ಯೆಗಳು ಇಲ್ಲದೆ ಇರುವವರಿಗೆ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಪದೇ ಪದೇ ವೈರಲ್ ಫಿವರ್ ಬರುತ್ತದೆ. ಶನಿ ಹಳೆ ವ್ಯಾದಿಗಳನ್ನು ಮತ್ತೆ ಮತ್ತೆ ಬರುವಂತೆ ಮಾಡುತ್ತಾನೆ.
ನೀರು ಬದಲಾಗುವುದರಿಂದ, ಟ್ರಾವೆಲ್ ಮಾಡುವುದರಿಂದ ಇನ್ಫೆಕ್ಷನ್ ಆಗಬಹುದು. ಹೀಗಾಗಿ ಈ ವರ್ಷ ನಿಮ್ಮ ಆರೋಗ್ಯ ಕಡೆಗೆ ನೀವು ಹೆಚ್ಚು ಗಮನವನ್ನು ಕೊಡಬೇಕಾಗುತ್ತದೆ. ಯಾಕೆಂದರೆ ಕೆಲ ಕಠಿಣ ಆರೋಗ್ಯ ಸಮಸ್ಯೆಗಳೂ ಈ ಸಂದರ್ಭದಲ್ಲಿ ಬರಬಹುದು. ತಿನ್ನೋ ವಿಚಾರದಲ್ಲಿ ಜಾಗರೂಕರಾಗಿರಬೇಕು ಬೊಜ್ಜು ಹೆಚ್ಚಾಗಬಹುದು. ಸಮಯಕ್ಕೆ ಸರಿಯಾಗಿ ಊಟ ಮಾಡಿ, ಹೊರಗಿನ ಆಹಾರವನ್ನು ತಪ್ಪಿಸಿ. ದೇಹದ ತೂಕ, ಮಧುಮೇಹ, ರಕ್ತದೊತ್ತಡ ಇವೆಲ್ಲವುಗಳ ಕಡೆಗೆ ಒಂದು ಕಣ್ಣಿಟ್ಟಿರಿ.

ಪರಿಹಾರ
* ಶುಕ್ರವಾರ ಅರ್ಧ ಕೆಜಿ ಕಪ್ಪು ಎಳ್ಳು ಬಟ್ಟೆಯಲ್ಲಿ ಕಟ್ಟಿ ದೇವರ ಮುಂದೆ ಇಡಬೇಕು
* ಪ್ರತೀ ದಿನ ಸಂಜೆ ಬೆಳಿಗ್ಗೆ ಪೂಜೆ ಮಾಡಿ, ಶನಿವಾರ ಗಂಟನ್ನು ಹರಿಯುವ ನೀರಿನಲ್ಲಿ ಬಿಡಿ
*ಹನುಮಾನ್ ಚಾಲೀಸ್, ಗಣೇಶ ಹಾಗೂ ದುರ್ಗಾ ಸ್ತ್ರೋತ್ರವನ್ನು ಪ್ರತಿ ದಿನ ಪಠಿಸಿ.
*ವೃದ್ಧಾಶ್ರಮಕ್ಕೆ ಹೋಗಿ ಹಳದಿ ವಸ್ತ್ರವನ್ನು ದಾನ ಮಾಡಿ
* ಸಂಕಷ್ಟ ಚತುರ್ಥಿ ವ್ರತ ಮಾಡಿ
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications