• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮಿತ್ ಶಾ ಜಾತಕ ಫಲದಲ್ಲಿ ವಿವಿಧ ಹಗರಣಗಳ ಆರೋಪಿಗಳು ಜೈಲು ಪಾಲು

By ಪ್ರಕಾಶ್ ಅಮ್ಮಣ್ಣಾಯ
|
   ಅಮಿತ್ ಶಾ ಜಾತಕ ಫಲ ಹೇಗಿದೆ? | Oneindia Kannada

   ಆ ದೇವರು ಹಲವು ಸಲ ಮುಂದಾಗುವುದರ ಮುನ್ಸೂಚನೆಯನ್ನು ನೀಡುತ್ತಾನೆ. ಈಚಿನ ತನಕ ನನಗೂ ಈ ಬಗ್ಗೆ ಹೇಗೆ ಎಂಬ ಸೂಚನೆ ಇರಲಿಲ್ಲ. ಆದರೆ ಗುರುವಾರದಂದು ಯಾವಾಗ ಅಮಿತ್ ಶಾಗೆ ಗೃಹ ಸಚಿವ ಸ್ಥಾನ ಎಂಬುದು ಬಹುತೇಕ ಪಕ್ಕಾ ಆಯಿತೋ ಅಲ್ಲಿಗೆ ಯಾರ್ಯಾರಿಗೆ ಜೈಲು ಕಾಣುವ ಯೋಗ ಇದೆಯೋ ಎಂಬ ಪ್ರಶ್ನೆ ಎದುರಾಯಿತು.

   ಅಮಿತ್ ಶಾ ಅವರದು ಭರಣಿ ನಕ್ಷತ್ರ, ಮೇಷ ರಾಶಿ. ಸದ್ಯಕ್ಕೆ ರಾಹು ದಶೆ ನಡೆಯುತ್ತಿದೆ. ಈ ವ್ಯಕ್ತಿಯ ಸ್ವಭಾವ ಏನೆಂದರೆ, ಕಾನೂನಿನ ಕುಣಿಕೆಗೆ ಸಿಲುಕಿದವರನ್ನು ಇನ್ನಿಲ್ಲದಂತೆ ಕಾಡುವಲ್ಲಿ ನಿಸ್ಸೀಮರು. ನೀವು ಇದೇ ಮಾತನ್ನು ಹೀಗೂ ಅಂದುಕೊಳ್ಳಬಹುದು: ಎದುರಾಳಿ ಪಾಳಯದ ಕಾನೂನು ಲೋಪ- ದೋಷಗಳನ್ನು ಬೀದಿಗೆ ಎಳೆಯುವುದರಲ್ಲಿ ಈ ಮನುಷ್ಯ ಗಟ್ಟಿಗ.

   ಪಿವಿಸಿ ಪೈಪ್ ಮಾರಾಟದಿಂದ ಕೇಂದ್ರದ ಸಂಪುಟ ಸಚಿವ ಸ್ಥಾನದವರೆಗೆ ಅಮಿತ್ ಶಾ ಪಯಣ

   ಅದರಲ್ಲೂ ಇನ್ನೆರಡು ವರ್ಷ ರಾಹು ದಶೆ ನಡೆಯಲಿದ್ದು, ಈ ದೇಶದಲ್ಲಿ ನಡೆದ ಬಹುತೇಕ ಹಗರಣದ ಅರೋಪಿಗಳು ಜೈಲು ಕಾಣ ಬೇಕಾಗುತ್ತದೆ. ಯಾವುದೇ ಹೊಂದಾಣಿಕೆ, ರಾಜೀ ಮಾಡಿಕೊಳ್ಳದೆ ಕೇಸುಗಳು ಹಾಕಿಸುವುದರಲ್ಲಿ ಈ ಬಾರಿ ಯಾವುದೇ ಅನುಮಾನ ಇಲ್ಲ. ಆ ಕಾರಣಕ್ಕೆ ಇನ್ನೆರಡು ವರ್ಷ ಅಮಿತ್ ಶಾ ಧಗಿಧಗಿಸುತ್ತಾರೆ. ಹಗರಣಗಳ ಆರೋಪಿಗಳು ಜೈಲು ಸೇರುತ್ತಾರೆ.

   ಕಾನೂನಿನ ಕುಣಿಕೆಗೆ ಸಿಲುಕಿಸುತ್ತಾರೆ

   ಕಾನೂನಿನ ಕುಣಿಕೆಗೆ ಸಿಲುಕಿಸುತ್ತಾರೆ

   ಅಮಿತ್ ಶಾ ಅವರದು ದ್ವೇಷ ಸಾಧಿಸುವ ಮನಸ್ಥಿತಿ. ಹಾಗಂತ ರಾಜಕೀಯವಾಗಿ ಹಣಿಯಲು ಯತ್ನಿಸುವುದಿಲ್ಲ. ಕಾನೂನಿನ ಮೂಲಕವೇ ಕುಣಿಕೆಗೆ ಸಿಲುಕಿಸುತ್ತಾರೆ. ಈಗಾಗಲೇ ಕುಣಿಕೆಯಲ್ಲಿ ಸಿಲುಕಿಕೊಂಡವರ ಕುತ್ತಿಗೆ ಸುತ್ತ ಹಗ್ಗ ಮತ್ತಷ್ಟು ಗಟ್ಟಿಯಾಗುತ್ತದೆ. ಇವರ ಜನ್ಮ ಜಾತಕದಲ್ಲಿ ಗುರುವು ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ಜ್ಞಾನವನ್ನು ನೀಡಿದ್ದಾನೆ. ಆದರೆ ಮನಸ್ಸು ಬಲವಾಗಿರುವಷ್ಟು ದೇಹ ಬಲವಾಗಿಲ್ಲ. ಅದಕ್ಕೆ ಕಾರಣ ಕುಜ.

   ಎರಡು ವರ್ಷಗಳ ಕಾಲ ತಣ್ಣಗಾಗುವುದಿಲ್ಲ

   ಎರಡು ವರ್ಷಗಳ ಕಾಲ ತಣ್ಣಗಾಗುವುದಿಲ್ಲ

   ಇನ್ನೆರಡು ವರ್ಷಗಳ ಕಾಲ ಅಮಿತ್ ಶಾ ಅವರಿಗೆ ರಾಹು ದಶೆ ನಡೆಯುವುದರಿಂದ ಈ ಸಮಯದಲ್ಲಿ ದೇಶದಲ್ಲಿ ಹಲವು ಹೊಸ ಕಾನೂನು, ಕಠಿಣ ಕಾನೂನು ಜಾರಿ ಆಗಬಹುದು. ಅಂಥ ಧೋರಣೆಯನ್ನು ಇಷ್ಟಪಡದ ಅನೇಕರು ಆರೋಪಗಳನ್ನು ಸಹ ಮಾಡಬಹುದು. ಆದರೆ ಎರಡು ವರ್ಷಗಳ ಕಾಲ ಈ ವ್ಯಕ್ತಿ ತಣ್ಣಗಾಗುವುದಿಲ್ಲ. ಗುರು ದಶೆ ಶುರುವಾದ ನಂತರವೇ ಒಂದಿಷ್ಟು ತಣ್ಣಗಾಗುತ್ತಾರೆ.

   ಚಾಣಕ್ಯ ಅಮಿತ್ ಶಾಗೆ ಕೇಂದ್ರ ಗೃಹಖಾತೆ ಜವಾಬ್ದಾರಿ

   ಮೋದಿ- ಅಮಿತ್ ಶಾ ಪಟ್ಟು ಸಡಿಲಿಸದ ಸ್ವಭಾವ

   ಮೋದಿ- ಅಮಿತ್ ಶಾ ಪಟ್ಟು ಸಡಿಲಿಸದ ಸ್ವಭಾವ

   ಅಮಿತ್ ಶಾ ತಮ್ಮನ್ನು ತಾವು ಮುನ್ನೆಲೆಯಲ್ಲಿ ಕಾಣಬೇಕು ಎಂದು ಬಯಸುವ ವ್ಯಕ್ತಿಯಲ್ಲ. ಆದರೆ ತಾವು ಇಟ್ಟು ಗುರಿಯನ್ನು ತಲುಪುವುದಕ್ಕೆ ಬಹಳ ಶ್ರಮ ಹಾಕುತ್ತಾರೆ. ಗುರಿ ತಲುಪುವ ಹಾದಿಯಲ್ಲಿ ಇವರು ಕ್ರೂರಿಯಂತೆಯೂ ಹಾಗೂ ಯಾವುದೇ ಭಾವನೆಗಳನ್ನು ಗೌರವಿಸದವರಂತೆಯೂ ಕಾಣುತ್ತಾರೆ. ಗುರಿ ತಲುಪಬೇಕು ಎಂಬ ವಿಚಾರದಲ್ಲಿ ಮೋದಿ ಹಾಗೂ ಅಮಿತ್ ಶಾ ಇಬ್ಬರದೂ ಒಂದೇ ಸ್ವಭಾವ. ಪಟ್ಟು ಸಡಿಲಿಸದ ಜಾಯಮಾನ.

   ಬಲಿಷ್ಠ ಶನಿಯ ಪ್ರಭಾವ ಇರುತ್ತದೆ

   ಬಲಿಷ್ಠ ಶನಿಯ ಪ್ರಭಾವ ಇರುತ್ತದೆ

   ಅಮಿತ್ ಶಾ ಅವರಿಗೆ ಕರ್ಮ ಸ್ಥಾನದಲ್ಲಿ (ಕನ್ಯಾ ಲಗ್ನವಾಗಿದ್ದು, ಕರ್ಮಸ್ಥಾನ ಮಿಥುನ) ರಾಹು, ಮೂಲ ತ್ರಿಕೋಣ ಕುಂಭದಲ್ಲಿ ವಕ್ರ ಶನಿ ಇದ್ದಾನೆ. ಇವರ ಮುಂದಾಲೋಚನೆ, ಮುತ್ಸದಿತನವನ್ನು ಬಲಿಷ್ಠಗೊಳಿಸುತ್ತಾನೆ. ಇಂತಹ ಬಲಿಷ್ಠ ಶನಿಯ ಜಾತಕರಿಗೆ ನೆನಪಿನ ಶಕ್ತಿಯೂ ಜಾಸ್ತಿ, ಸೇಡೂ ಜಾಸ್ತಿ. ಆದರೆ ಸೇಡು ಶಾಸನ ಬದ್ಧವಾಗಿಯೇ ಇದ್ದು, ಕೇವಲ ಅನ್ಯಾಯದ ಮಾರ್ಗದವರನ್ನು ಹಿಡಿದು ನಿಲ್ಲಿಸುವ ಚಿಂತನೆ ಜಾಸ್ತಿ. ಈಗ ಸಿಕ್ಕಿದ ಗೃಹ ಖಾತೆಯು ಇದಕ್ಕೆ ಪೂರಕವಾಗಿರುತ್ತದೆ.

   ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯರಿಂದ ನರೇಂದ್ರ ಮೋದಿ ಪ್ರಮಾಣ ವಚನದ ಮುಹೂರ್ತ ವಿಶ್ಲೇಷಣೆ

   ಶನಿಯ ಪ್ರಭಾವದಿಂದ ಅಡೆತಡೆ

   ಶನಿಯ ಪ್ರಭಾವದಿಂದ ಅಡೆತಡೆ

   ಮೇಷ ರಾಶಿಯವರಾದ ಅಮಿತ್ ಶಾಗೆ ಈ ವರ್ಷ ನವೆಂಬರ್ ತನಕ ಗುರು ಎಂಟರಲ್ಲಿ ಇರುತ್ತದೆ. ಈ ಆರು ತಿಂಗಳು ಬಹಳ ಮುಖ್ಯವಾಗಿರುತ್ತದೆ. ಇನ್ನು ಮುಂದಿನ ಜನವರಿ ತನಕ ಶನಿಯು ಒಂಬತ್ತನೇ ಮನೆಯಲ್ಲಿ ಇರುವುದರಿಂದ ಕೆಲ ಮಟ್ಟಿಗೆ ಅಡೆ-ತಡೆ ಬರುತ್ತದೆ. ಆದರೆ ಅವೆಲ್ಲವನ್ನೂ ಮೀರಿ, ಉತ್ತಮ ಕೆಲಸ ಮಾಡುತ್ತಾರೆ.

   ಮೋದಿ 2.0 ಸರ್ಕಾರ: ರಾಜನಾಥ್ ಗೆ ರಕ್ಷಣಾ, ಅಮಿತ್ ಗೆ ಗೃಹ, ನಿರ್ಮಲಾಗೆ ವಿತ್ತ

   English summary
   BJP national president Amit Shah joined Narendra Modi led NDA 2 cabinet on Thursday. Here is an astrology analysis of Amit Shah horoscope by well know astrologer Prakash Ammannaya.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more