ಅಕ್ಷಯ ತೃತೀಯದ ದಿನವೇ ಅಕ್ಷಯ ಯೋಗ: ಮೂರು ರಾಶಿಯವರಿಗೆ ಒಲಿದು ಬರುವುದು ಧನ ಸಂಪತ್ತು
ಬೆಂಗಳೂರು: ಅಕ್ಷಯ ತೃತೀಯ ದಿನಕ್ಕೆ ನಮ್ಮಲ್ಲಿ ವಿಶೇಷ ಮಾನ್ಯತೆ ಇದೆ. ಪ್ರತಿ ವರ್ಷವೂ ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುತ್ತದೆ.ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯ ದಿನವನ್ನು ಅಕ್ಷಯ ತೃತೀಯ ಎಂದು ಆಚರಿಸಲಾಗುತ್ತದೆ. ಈ ದಿನ ಅನೇಕ ಶುಭ ಯೋಗಗಳು ರೂಪುಗೊಳ್ಳುತ್ತವೆ. ಈ ದಿನದಂದು ಬದಲಾಗುವ ಗ್ರಹಗಳ ನಡೆ ಕೆಲವು ರಾಶಿಯವರ ಜೀವನದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಈ ಗ್ರಹಗಳ ಪಥ ಬದಲಾವಣೆ ಮೂಲಕವೇ ಜೀವನದ ದಿಕ್ಕು ಕೂಡಾ ಬದಲಾಗುವ ಸಾಧ್ಯತೆ ಇದೆ. ಈ ವರ್ಷದ ಅಕ್ಷಯ ತೃತೀಯದ ದಿನವೂ ಒಂದು ವಿಶೇಷ ಯೋಗ ರೂಪುಗೊಳ್ಳುತ್ತಿದೆ. ಈ ದಿನ ಸೂರ್ಯ ಮತ್ತು ಚಂದ್ರ ಇಬ್ಬರೂ ತಮ್ಮ ಉಚ್ಛ ರಾಶಿಯಲ್ಲಿ ಸೇರಲಿದ್ದಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಷಯ ಯೋಗ ಎಂದರೆ ಅದು ಅತ್ಯಂತ ಶುಭ ಯೋಗ ಆಗಿರಲಿದೆ. ಈ ಯೋಗದ ಕಾರಣ ಕೆಲವು ರಾಶಿಯವರ ಜೀವನದಲ್ಲಿ ಉತ್ತಮ ಬದಲಾವಣೆಗಳಾಗುವುದು.ಅಂದರೆ ಅವರ ಪಾಲಿನ ಅದೃಷ್ಟದ ದಿನಗಳು ಇಲ್ಲಿಂದಲೇ ಆರಂಭವಾಗುವುದು. ಹಾಗಿದ್ದರೆ ಅಕ್ಷಯ ತೃತೀಯದ ದಿನ ನಿರ್ಮಾಣವಾಗುತ್ತಿರುವ ಅಕ್ಷಯ ಯೋಗ ಯಾವೆಲ್ಲಾ ರಾಶಿಯವರ ಮೇಲೆ ಶುಭ ಪರಿಣಾಮ ಬೀರಲಿದೆ ಎನ್ನುವುದನ್ನು ಇಲ್ಲಿ ನೋಡೋಣ.

ಮೂರು ರಾಶಿಗಳ ಮೇಲಾಗುವುದು ಅಕ್ಷಯ ಯೋಗದ ಶುಭ ಪರಿಣಾಮ:
ಮೇಷ ರಾಶಿಯವರಿಗೆ ಹೇಗಿರಲಿದೆ ಅಕ್ಷಯ ಯೋಗದ ಫಲ:
ಅಕ್ಷಯ ತೃತೀಯದ ದಿನ ನಿರ್ಮಾಣವಾಗುತ್ತಿರುವ ಅಕ್ಷಯ ಯೋಗದಿಂದ ಮೇಷ ರಾಶಿಯವರಿಗೆ ದೊಡ್ಡ ಮಟ್ಟದ ಪ್ರಯೋಜನಕಾರಿಯಾಗಿರಲಿದೆ. ವೃತ್ತಿಯಲ್ಲಿ ಇರುವವರಿಗೆ ತಮ್ಮ ಕಚೇರಿ ಕೆಲಸಗಳಲ್ಲಿ ಮೇಲಾಧಿಕಾರಿಗಳ ಮತ್ತು ಜೊತೆಯಲ್ಲಿ ಕೆಲಸ ಮಾಡುವವರ ನೆರವು ಸಿಗಲಿದೆ. ಈ ರಾಶಿಯವರಿಗೆ ಉನ್ನತ ಸ್ಥಾನಮಾನ ಒಲಿದು ಬರುವ ಸಾಧ್ಯತೆ ಇದೆ. ಸ್ವಲ್ಪ ಮಟ್ಟದಲ್ಲಿ ಹಣಕಾಸಿನ ಸಮಸ್ಯೆ ಎದುರಾಗಬಹದು. ಆದರೆ ನಿಮ್ಮ ಸಂಗಾತಿಯ ಜೊತೆ ಕುಳಿತು ಮಾತುಕತೆ ನಡೆಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಗತ್ಯವೂ ಇದೆ.
ತುಲಾ ರಾಶಿಯವರಿಗೆ ಹೇಗಿರಲಿದೆ ಅಕ್ಷಯ ಯೋಗದ ಫಲ:
ಅಕ್ಷಯ ತೃತೀಯದ ದಿನ ನಿರ್ಮಾಣವಾಗುತ್ತಿರುವ ಅಕ್ಷಯ ಯೋಗ ತುಲಾ ರಾಶಿಯವರಿಗೆ ಹೆಚ್ಚು ಲಾಭದಾಯಕವಾಗಲಿದೆ. ನೀವು ಮಾಡುವ ಪ್ರತಿ ಕಾರ್ಯದಲ್ಲಿಯೂ ಯಶಸ್ಸು ನಿಮ್ಮ ಕೈ ಹಿಡಿಯುವುದು. ಜೀವದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ವಿಶೇಷ ಶಕ್ತಿ ಮತ್ತು ಆತ್ಮವಿಶ್ವಾಸ ನಿಮ್ಮದಾಗುವುದು. ಇಲ್ಲಿಯವರೆಗೆ ನಿಮ್ಮನ್ನು ಕಾಡುತ್ತಿರುವ ಆರ್ಥಿಕ ಸಮಸ್ಯೆಗಳು ಕೂಡಾ ನಿಧಾನವಾಗಿ ಕರಗುತ್ತಾ ಹೋಗುವುದು. ಮಕ್ಕಳಿಗೆ ಸಂಬಂಧಪಟ್ಟಂತೆ ಸಿಹಿ ಸುದ್ದಿಗಳನ್ನು ಕೇಳಲಿದ್ದೀರಿ. ಪರಿವಾರದ ಜೊತೆ ದೂರ ಪ್ರಯಾಣ ಬೆಳೆಸುವ ಯೋಗವಿದೆ.
ಧನು ರಾಶಿಯವರಿಗೆ ಹೇಗಿರಲಿದೆ ಅಕ್ಷಯ ಯೋಗದ ಫಲ:
ಅಕ್ಷಯ ತೃತೀಯದ ದಿನ ನಿರ್ಮಾಣವಾಗುತ್ತಿರುವ ಅಕ್ಷಯ ಯೋಗ ಧನು ರಾಶಿಯವರ ಜೀವನದಲ್ಲಿ ಹೊಸ ಬೆಳಕನ್ನು ತರಲಿದೆ. ಈ ಯೋಗದ ಶುಭ ಪ್ರಭಾವದ ಕಾರಣ ಧನು ರಾಶಿಯವರ ಜೀವನದಲ್ಲಿ ಭಾಗ್ಯೋದಯವಾಗುವುದು. ಹೆಚ್ಚು ಶ್ರಮ ವಹಿಸದೆಯೇ ನೀವು ಅಂದುಕೊಂಡ ಕೆಲಸವನ್ನು ಸಾಧಿಸಿ ಬಿಡುವಿರಿ. ಹೊಸ ಹೊಸ ಅವಕಾಶಗಳು ಅರಸಿಕೊಂಡು ಬರುವುದು. ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಥಿಗಳಿಗೂ ಈ ಸಮಯ ಶುಭವಾಗಿರಲಿದೆ. ನೀವು ಮಾಡುವ ಪ್ರತಿ ಕೆಲಸದಲ್ಲಿ ನಿಮ್ಮ ಸಂಗಾತಿಯ ಸಹಕಾರ ಸಿಗುವುದು.
(ಬರಹ : ರಂಜಿತಾ ಆರ್.ಕೆ)














Click it and Unblock the Notifications