ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್: ನಿಜವಾಗುತ್ತಿದೆ ಸಿದ್ದು ಮುತ್ಯಾ ಕಾಲಜ್ಞಾನ, ಕೋಡಿಶ್ರೀ, ಮೈಲಾರ ಭವಿಷ್ಯ

|
Google Oneindia Kannada News

ಸುಮಾರು ಇಪ್ಪತ್ತು ತಿಂಗಳಿನಿಂದ ಅನುಭವಿಸುತ್ತಿರುವ ಭಯ, ಮುಂದೇನು ಎನ್ನುವ ಯಾತನೆಯಿಂದ ಇನ್ನಾದರೂ ಹೊರಬರುತ್ತಿದ್ದೇವೆ ಎನ್ನುವಷ್ಟರಲ್ಲಿ ಕೊರೊನಾ ವೈರಸ್ ರೂಪಾಂತರಿ ರಾಜ್ಯಕ್ಕೆ ಪ್ರವೇಶಿಸಿದೆ. ಐದು ಕೇಸುಗಳ ಮೂಲಕ ಬೆಂಗಳೂರು ಈ ವೈರಸಿಗೆ ಮೊದಲ ಆತಿಥ್ಯವನ್ನು ನೀಡಿದೆ.

580 ವರ್ಷಗಳ ನಂತರ ಸಂಭವಿಸಿದ ಅತಿದೊಡ್ದ ಚಂದ್ರ ಗ್ರಹಣ ಮತ್ತು ಮುಂದಿನ ಒಂದು ದಿನದಲ್ಲಿ ಸಂಭಸಿಲಿರುವ ಖಗ್ರಾಸ ಸೂರ್ಯ ಗ್ರಹಣ, ಅಪಶಕುನದ ಮುನ್ಸೂಚನೆ ಎಂದು ಹಲವು ಜ್ಯೋತಿಷಿಗಳು, ಸ್ವಾಮೀಜಿಗಳು ಹಿಂದೆನೇ ಭವಿಷ್ಯವನ್ನು ನುಡಿದಿದ್ದರು.

ಡಿ, 4 ಖಗ್ರಾಸ ಸೂರ್ಯ ಗ್ರಹಣದ ಭವಿಷ್ಯ ಫಲ: ವಕ್ರ ದೃಷ್ಟಿಯ ಸರಮಾಲೆಡಿ, 4 ಖಗ್ರಾಸ ಸೂರ್ಯ ಗ್ರಹಣದ ಭವಿಷ್ಯ ಫಲ: ವಕ್ರ ದೃಷ್ಟಿಯ ಸರಮಾಲೆ

ಆರೋಗ್ಯ ಮತ್ತು ನೈಸರ್ಗಿಕ ವಿಕೋಪದ ವಿಚಾರದಲ್ಲಿ ವಿಶ್ವದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ, ಇನ್ನೇನು ಅನಾಹುತ ಕಾದಿದೆಯೋ ಎಂದು ಅಪಾಯದ ದಿನವನ್ನು ಎದುರು ನೋಡುವಂತೆ ಮಾಡಿದೆ ಇವರುಗಳ ಭವಿಷ್ಯ.

ಕೊರೊನಾ ವಿಚಾರದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಿದ್ದು ಮುತ್ಯಾ ಕಾಲಜ್ಞಾನವನ್ನು ನುಡಿದಿದ್ದರು, ಜೊತೆಗೆ, ಕೋಡಿಮಠದ ಶ್ರೀಗಳೂ ಭವಿಷ್ಯವನ್ನು ನುಡಿದಿದ್ದರು. ಅವರು ಹಿಂದೆ ಹೇಳಿದ್ದ ಭವಿಷ್ಯವೇನು, ಈಗ ಆಗುತ್ತಿರುವುದನ್ನು ಅವಲೋಕಿಸಿದಾಗ..

ಕೊರೊನಾ ರೂಪಾಂತರಿ 'ಓಮ್ರಿಕಾನ್': ಹಸಿಹಸಿ ಸತ್ಯ ಬಿಚ್ಚಿಟ್ಟ ಡಾ.ರಾಜು ಕೃಷ್ಣಮೂರ್ತಿಕೊರೊನಾ ರೂಪಾಂತರಿ 'ಓಮ್ರಿಕಾನ್': ಹಸಿಹಸಿ ಸತ್ಯ ಬಿಚ್ಚಿಟ್ಟ ಡಾ.ರಾಜು ಕೃಷ್ಣಮೂರ್ತಿ

 ಸದಾಶಿವ ಮೂಲಮಹಾ ಸಂಸ್ಥಾನ ಮಠ, ಶಿವಯೋಗಿ ಪ್ರಸನ್ನ ಬಬಲಾದಿಯ ಕಾಲಜ್ಞಾನ

ಸದಾಶಿವ ಮೂಲಮಹಾ ಸಂಸ್ಥಾನ ಮಠ, ಶಿವಯೋಗಿ ಪ್ರಸನ್ನ ಬಬಲಾದಿಯ ಕಾಲಜ್ಞಾನ

"ರಾಜಕೀಯ ಏರಿಳಿತವಾಗಿದೆ, ಪಕ್ಷಪಕ್ಷದೊಳಗೆ ಅಸೂಹೆ ಮೂಡಲಿದೆ, ಗಾಳಿ ಹೆಚ್ಚಾಗಲಿದೆ, ಮಹಾವ್ಯಾಧಿ ಮರು ಹುಟ್ಟುತ್ತದೆ, ಆಂಧ್ರ ತೆಲುಗು ರಾಜ್ಯಕ್ಕೆ ಕೇಡಾಗುತ್ತದೆ" ಎಂದು ಗುರು ಚಕ್ರವರ್ತಿ, ಸದಾಶಿವ ಮೂಲಮಹಾ ಸಂಸ್ಥಾನ ಮಠ, ಶಿವಯೋಗಿ ಪ್ರಸನ್ನ ಬಬಲಾದಿಯ ಕಾಲಜ್ಞಾನದಲ್ಲಿ ನುಡಿಯಲಾಗಿತ್ತು. 500 ವರ್ಷಗಳ ಹಿಂದೆ ಚಿಕ್ಕಯ್ಯಪ್ಪನವರು ಬರೆದಿಟ್ಟಿರುವ ಕಾಲಜ್ಞಾನವನ್ನು, ಪ್ರತಿ ವರ್ಷದ ಶಿವರಾತ್ರಿಯಂದು ನುಡಿಯುವ ಸಂಪ್ರದಾಯವಿದೆ. ಇದರಲ್ಲಿ ಮಹಾವ್ಯಾಧಿ ಮರು ಹುಟ್ಟುತ್ತದೆ ಎಂದು ಹೇಳಲಾಗಿತ್ತು.

 ದೇವರಗುಟ್ಟು ಬಸವಣ್ಣನ ದೇವಾಲಯದಲ್ಲಿ ನವರಾತ್ರಿ ಕಾರ್ಣಿಕ

ದೇವರಗುಟ್ಟು ಬಸವಣ್ಣನ ದೇವಾಲಯದಲ್ಲಿ ನವರಾತ್ರಿ ಕಾರ್ಣಿಕ

"ಎರೆ ದೊರೆ ಆಕತಲೆ ದೈವ ದರ್ಬಾರ್ ಆಕತಲೆ ಪರಾಕ್. 2023ರವರೆಗೆ ಮಾರಮ್ಮ ದೇಶ ಸಂಚಾರ ಮಾಡುತ್ತಾಳೆ, ಮಾರಮ್ಮ ಗಂಗೆ ಹೊಳೆ ದಂಡೆಗೆ ನಿಂತಾಳ, ಉತ್ತರ ಭಾಗಕ್ಕೆ ಸವಾರಿ ಮಾಡ್ಯಾಳ ಬಹುಪರಾಕ್. 5600 ನಗೆಳ್ಳಿ, ಒಕ್ಕಳು ಜೋಳ 2600, 3-6, 6-3 ಆದೀತು. 2023ರವರಗೆ ದೇಶಾದ್ಯಂತ ಕೊರೊನಾ ವೈರಸ್ ಮುಂದುವರಿಯಲಿದೆ. ಉತ್ತರ ಭಾಗದ ಕಡೆ ಹೆಚ್ಚಿನ ಮಳೆಯಾಗಲಿದೆ. ಹತ್ತಿ ಬೆಳೆಗೆ 5600, ಜೋಳಕ್ಕೆ 2600 ಮೇಲ್ಪಟ್ಟು ದರ ಸಿಗಲಿದೆ. ಮುಂದಿನ ದಿನಗಳಲ್ಲಿ ರೈತರಿಗೆ ತಮ್ಮ ಬೆಳೆಗೆ ಹೆಚ್ಚಿನ ಬೆಲೆ ಸಿಗಲಿದೆ" ಎಂದು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಗಡಿಭಾಗ, ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲಾ ವ್ಯಾಪ್ತಿಗೆ ಬರುವ ದೇವರಗುಟ್ಟು ಬಸವಣ್ಣನ ದೇವಾಲಯದಲ್ಲೂ ನವರಾತ್ರಿ ಕಾರ್ಣಿಕ ನುಡಿಯಲಾಗಿತ್ತು.

 ಕೊರೊನಾ ರೂಪಾಂತರಗೊಂಡು ಇನ್ನೂ ಮೂರ್ನಾಲ್ಕು ವರ್ಷ ಮನುಕುಲವನ್ನು ಕಾಡಲಿದೆ

ಕೊರೊನಾ ರೂಪಾಂತರಗೊಂಡು ಇನ್ನೂ ಮೂರ್ನಾಲ್ಕು ವರ್ಷ ಮನುಕುಲವನ್ನು ಕಾಡಲಿದೆ

"ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತಿದೆ. ಹೀಗಾಗಿ, ಸಾವು ಹೆಚ್ಚಾಗಲಿದೆ. ಕೊರೊನಾ ರೂಪಾಂತರಗೊಂಡು ಇನ್ನೂ ಮೂರ್ನಾಲ್ಕು ವರ್ಷ ಮನುಕುಲವನ್ನು ಕಾಡಲಿದೆ. ಲೋಕ ಕಲ್ಯಾಣವಾಗಲು ಇನ್ನೂ ಸ್ವಲ್ಪದಿನ ಕಳೆಯಬೇಕು, ಜಗಳಗಳು, ಕಾಯಿಲೆಗಳು, ಯುದ್ದಗಳು ಇನ್ನು ಶುರುವಾಗುತ್ತದೆ" ಎಂದು ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಈ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ನುಡಿದ ಭವಿಷ್ಯವನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

 ಕೊರೊನಾ ಮೂರನೇ ಅಲೆ ಬರುವುದಿಲ್ಲ ಎಂದಿದ್ದ ಮೈಲಾರ ಭವಿಷ್ಯವಾಣಿ

ಕೊರೊನಾ ಮೂರನೇ ಅಲೆ ಬರುವುದಿಲ್ಲ ಎಂದಿದ್ದ ಮೈಲಾರ ಭವಿಷ್ಯವಾಣಿ

"ಎರಿ ದೊರೆ ಆಕತಲೆ ದೈವ ದರ್ಬಾರ್ ಆಕತಲೆ ಪರಾಕ್" ಎನ್ನುವ ಭವಿಷ್ಯವಾಣಿಯನ್ನು ನುಡಿಯಲಾಗಿತ್ತು. ದೈವ ದೊರೆಯದಿತಲೇ ಎಂದರೆ, ಕೊರೊನಾ ಮೂರನೇ ಅಲೆ ಬರುವುದಿಲ್ಲ ಎಂದೂ ವ್ಯಾಖ್ಯಾನಿಸಬಹುದು. ಈ ಭವಿಷ್ಯವಾಣಿಯನ್ನು ರಾಜಕೀಯವಾಗಿ ಹೇಳುವುದಾದರೆ, ಜನತೆ ಮತ್ತು ದೈವ ಮೆಚ್ಚುವಂತಹ ಆಡಳಿತವನ್ನು ಈ ಸರಕಾರ ನೀಡುತ್ತದೆ ಎಂದೂ ಹೇಳಬಹುದು" ಎಂದು ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದ ಗೊರವಯ್ಯನವರು ನುಡಿದ ಭವಿಷ್ಯವನ್ನು ದೇವಾಲಯದ ಪ್ರಧಾನ ಅರ್ಚಕರಾದ ಸಂತೋಷ್ ಭಟ್ ವಿವರಿಸಿದ್ದರು. ಇವರು ಮೂರನೇ ಅಲೆ ಬರುವುದಿಲ್ಲ ಎಂದು ಹೇಳಿದ್ದನ್ನು ಇಲ್ಲಿ ತಪ್ಪು ಎಂದು ಅಂಡರ್ಲೈನ್ ಮಾಡಿಟ್ಟುಕೊಳ್ಳಬಹುದು.

Recommended Video

ಗೋಧಿ ಹಾಗೂ ಜೀವರಕ್ಷಕ ಔಷಧ ಸಾಗಿಸಲು ಪಾಕ್ ಅನುಮತಿ | Oneindia Kannada

English summary
Accuracy Prediction By Kodi Seer, Mylara And Siddu Mutya On Coona Third Wave Variant Omicron. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X