ಪರ್ಸ್‌ನಲ್ಲಿ ಈ 6 ವಸ್ತು ಇಡಬೇಡಿ! ನಿಮ್ಮ ಕೈಯಲ್ಲಿ ಹಣ ಉಳಿಯದಿರಲು ಇದೇ ಕಾರಣ
Wallet Tips; ನಮಗೆ ಹಣ ಸಂಪಾದಿಸುವುದು ಒಂದು ಭಾಗವಾಗಿದ್ದರೆ ಅದನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದು ಮತ್ತೊಂದು ದೊಡ್ಡ ಸವಾಲು. ನಾವು ದಿನ ನಿತ್ಯ ಬಳಸುವ ಪರ್ಸ್ (ವಾಲೆಟ್) ಕೇವಲ ಹಣ ಇಡುವ ಸ್ಥಳವಲ್ಲ, ಅದು ನಮ್ಮ ಆರ್ಥಿಕ ಶಕ್ತಿಯನ್ನು ಆಕರ್ಷಿಸುವ ವಸ್ತು ಆಗಿದೆ ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ. ಪರ್ಸ್‌ನಲ್ಲಿ ಇಡುವ ವಸ್ತುಗಳು ನಮ್ಮ ಆರ್ಥಿಕ ಸ್ಥಿತಿಗೆ ನೇರವಾಗಿ ಪರಿಣಾಮ ಬೀರುತ್ತವೆ ಎಂಬ ನಂಬಿಕೆ ಇದೆ.
ತುಂಬಾ ಜನರು ಎಷ್ಟು ಹಣ ಗಳಿಸಿದರೂ ಕೈಯಲ್ಲಿ ಉಳಿಯುವುದಿಲ್ಲ ಎಂದು ದೂರು ಹೇಳುತ್ತಾರೆ. ವಾಸ್ತು ಪ್ರಕಾರ ಇದರ ಪ್ರಮುಖ ಕಾರಣ ಪರ್ಸ್‌ನಲ್ಲಿ ಇರುವ ಅಸ್ತವ್ಯಸ್ತತೆ ಮತ್ತು ನಕಾರಾತ್ಮಕ ಶಕ್ತಿ. ಪರ್ಸ್ ಅನ್ನು ಸದಾ ಸ್ವಚ್ಛವಾಗಿ ಮತ್ತು ಸರಿಯಾಗಿ ಇಡುವುದರಿಂದ ಸ್ಥಿರ ಲಕ್ಷ್ಮಿ ನೆಲೆಸುತ್ತಾಳೆ ಎಂದು ತಜ್ಞರು ಹೇಳಿದ್ದಾರೆ.

ಈ ತರಹದ ವಸ್ತುಗಳನ್ನು ಪರ್ಸ್‌ನಲ್ಲಿ ಇಡಬಾರದು
ಬಹಳ ಜನರು ಹಳೆಯ ಬಿಲ್‌ಗಳು, ಬಸ್ ಟಿಕೆಟ್‌ಗಳು, ಅನಗತ್ಯ ಕಾರ್ಡ್‌ಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ವಾಸ್ತು ಪ್ರಕಾರ ಇಂತಹ ಕಸಕ್ಕೆ ಹಾಕುವ ಕಾಗದಗಳು ರಾಹು ಗ್ರಹದ ನಕಾರಾತ್ಮಕ ಪ್ರಭಾವವನ್ನು ಹೆಚ್ಚಿಸುತ್ತವೆ. ಇದರಿಂದ ಅನಗತ್ಯ ಖರ್ಚುಗಳು ಮತ್ತು ಸಾಲದ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಹಣವನ್ನು ಗೌರವದಿಂದ ಇಡಿ
ಹಣವನ್ನು ಲಕ್ಷ್ಮೀ ದೇವಿಯ ರೂಪವಾಗಿ ನೋಡಲಾಗುತ್ತದೆ. ಹಾಗಾಗಿ ನೋಟುಗಳನ್ನು ಮಡಚುವುದು, ಒತ್ತಿಹಾಕುವುದು ಅಥವಾ ಅಸಮರ್ಪಕವಾಗಿ ಇಡುವುದು ತಪ್ಪು. ಅವುಗಳನ್ನು ಸರಿಯಾಗಿ ರೀತಿಯಲ್ಲಿ ಇಡುವುದು ಒಳ್ಳೆಯದು. ನಾಣ್ಯಗಳನ್ನು ಪ್ರತ್ಯೇಕವಾಗಿ ಇಡುವುದು ಸರಿಯಾದ ಕ್ರಮವಾಗಿದೆ. ನೋಟು ಮತ್ತು ನಾಣ್ಯಗಳನ್ನು ಒಂದೆ ಕಡೆ ಸೇರಿಸಿ ಇಡುವುದರಿಂದ ಆರ್ಥಿಕ ಒತ್ತಡ ಹೆಚ್ಚಾಗಬಹುದು.
ಪರ್ಸ್‌ನಲ್ಲಿ ದೇವರ ಫೋಟೋ ಇಡಬಾರದು
ಬಹಳ ಜನರು ಭಕ್ತಿಯಿಂದ ದೇವರ ಫೋಟೋಗಳನ್ನು ಪರ್ಸ್‌ನಲ್ಲಿ ಇಡುತ್ತಾರೆ. ಆದರೆ ಪರ್ಸ್ ಅನ್ನು ನಾವು ಎಲ್ಲೆಲ್ಲೂ ತೆಗೆದುಕೊಂಡು ಹೋಗುವ ಕಾರಣ, ಅದು ಶುದ್ಧವಾಗಿರುವುದಿಲ್ಲಾ ಎಂಬ ನಂಬಿಕೆ ಇದೆ. ಆದ್ದರಿಂದ ದೇವರ ಚಿತ್ರಗಳ ಬದಲು ಓಂ ಅಥವಾ ಸ್ವಸ್ತಿಕ ಚಿಹ್ನೆಯನ್ನು ಕೆಂಪು ಕಾಗದದಲ್ಲಿ ಇಟ್ಟುಕೊಳ್ಳಬಹುದು. ಕುಟುಂಬ ಸದಸ್ಯರ ಫೋಟೋಗಳನ್ನು ಇಡುವುದು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಈ ಸರಳ ಉಪಾಯಗಳು ಹಣವನ್ನು ಉಳಿಸುತ್ತವೆ
ಕೆಂಪು ಕಾಗದದಲ್ಲಿ 21 ಅಕ್ಕಿ ಕಾಳುಗಳನ್ನು ಇಟ್ಟು ಪರ್ಸ್‌ನಲ್ಲಿ ಇಡುವುದು ಸಮೃದ್ಧಿಯ ಸಂಕೇತ ಎಂದು ಹೇಳಲಾಗುತ್ತದೆ. ಜೊತೆಗೆ ಎರಡು ಲವಂಗ ಇಡುವುದರಿಂದ ಆಕರ್ಷಣೆಯ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. 'ಶ್ರೀ' ಎಂದು ಬರೆಯಲಾದ ಆಲದ ಎಲೆ ಇಡುವುದರಿಂದ ಹಣಕಾಸಿನ ಲಾಭ ಸಿಗುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.
ಪರ್ಸ್‌ನ ಬಣ್ಣವೂ ಮುಖ್ಯ
ಜ್ಯೋತಿಷ್ಯದ ಪ್ರಕಾರ ಹಸಿರು ಬಣ್ಣದ ಪರ್ಸ್ ವ್ಯಾಪಾರಿಗಳು ಮತ್ತು ಉದ್ಯೋಗಿಗಳಿಗೆ ಶುಭಕರ. ಕಂದು ಅಥವಾ ಕಪ್ಪು ಬಣ್ಣ ಸ್ಥಿರತೆಯನ್ನು ಸೂಚಿಸುತ್ತದೆ. ಕೆಂಪು ಬಣ್ಣ ವೇಗವಾಗಿ ಹಣದ ಹರಿವನ್ನು ಸೂಚಿಸುತ್ತದೆ.
ಹಳೆಯ ಪರ್ಸ್ ಬಳಸಬೇಡಿ
ಪರ್ಸ್ ಹರಿದುಹೋಗಿದ್ದರೆ ಅಥವಾ ಹಳೆಯದಾಗಿದ್ದರೆ ಅದನ್ನು ತಕ್ಷಣ ಬದಲಾಯಿಸಬೇಕು. ಹಾಳಾದ ಪರ್ಸ್ ದಾರಿದ್ರ್ಯದ ಸೂಚಕ ಎಂದು ಪರಿಗಣಿಸಲಾಗುತ್ತದೆ. ಹೊಸದು ಸ್ವಚ್ಛವಾದ ಪರ್ಸ್ ಹೆಚ್ಚು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ.














Click it and Unblock the Notifications