ಸಂಪತ್ತು, ಹಣಕಾಸು ವೃದ್ಧಿಗೆ ಇಲ್ಲಿವೆ 10 ವಾಸ್ತು ಸಲಹೆ
ವಾಸ್ತು ಶಾಸ್ತ್ರ ಎಂಬುದು ಪ್ರಾಚೀನ ವಿಜ್ಞಾನ. ನಿಮ್ಮ ಮನೆ, ಕಚೇರಿಯನ್ನು ವಾಸ್ತು ಶಾಸ್ತ್ರದ ಅನ್ವಯವೇ ನಿರ್ಮಾಣ ಮಾಡಿ ಎಂಬುದರ ಸಲಹೆ ಹಿಂದೆ ಇರುವ ಕಾರಣ ಏನು ಅಂದರೆ, ನೆಮ್ಮದಿ, ಅಭಿವೃದ್ಧಿ, ಹಣಕಾಸು ಅನುಕೂಲ, ಆರೋಗ್ಯ ಎಲ್ಲವೂ ದೊರೆಯಲಿ ಅಂತಲೇ. ವಾಸ್ತು ಶಾಸ್ತ್ರದ ಅನ್ವಯವಾಗಿ ನಿರ್ಮಾಣವಾದ ಗೃಹವಾಗಲೀ ಕಚೇರಿಯಾಗಲಿ ಏಳ್ಗೆಗೆ ಕಾರಣವಾಗುತ್ತದೆ ಎಂಬುದು ನಿಮ್ಮ ಗಮನದಲ್ಲಿರಲಿ.
ಬಹಳ ಜನರ ಪ್ರಶ್ನೆ ಏನಾಗಿರುತ್ತದೆ ಅಂದರೆ, ಶ್ರಮ ಪಟ್ಟು ದುಡಿಯುತ್ತೇವೆ. ಆದರೆ ಹಣ ಉಳಿಸಲು ಸಾಧ್ಯವಾಗುತ್ತಿಲ್ಲ. ಒಂದಲ್ಲ ಒಂದು ಖರ್ಚು ಬರುತ್ತದೆ. ಇಷ್ಟು ವರ್ಷ ದುಡಿದದ್ದೆಲ್ಲ ಏನು ಮಾಡಿದೆ ಎಂದು ಸಂಬಂಧಿಕರು ಪ್ರಶ್ನೆ ಮಾಡಿದರೆ ಉತ್ತರ ನೀಡಲಾಗದೆ ತಬ್ಬಿಬ್ಬಾಗುತ್ತೇವೆ. ಜಾತಕ ಚೆನ್ನಾಗಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆದರೆ ಅಭಿವೃದ್ಧಿ ಮಾತ್ರ ಆಗುತ್ತಿಲ್ಲ ಎಂದು ಸಂಕಟ ಹೇಳಿಕೊಳ್ಳುತ್ತಾರೆ.
ಇದು ತುಂಬ ಜನರ ಪ್ರಶ್ನೆ ಹಾಗೂ ಬೇಸರ ಆದ್ದರಿಂದ ಇಂದಿನ ಲೇಖನದಲ್ಲಿ ಒಂದಿಷ್ಟು ವಾಸ್ತು ಸಲಹೆಗಳನ್ನು ನೀಡುವ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತಿದ್ದೇವೆ. ಹಾಗಂತ ಇದು ಸಂಪೂರ್ಣ ಪರಿಹಾರ ಎಂದು ಭಾವಿಸಬೇಡಿ. ಏಕೆಂದರೆ ತಜ್ಞ ವಾಸ್ತು ಶಾಸ್ತ್ರಜ್ಞರನ್ನು ಮನೆಗೆ ಕರೆಸಿ, ಪರಿಶೀಲನೆ ಮಾಡಿಸುವುದು ಸೂಕ್ತ. ಈ ಲೇಖನ ನಿಮಗೆ ಮೇಲ್ಮಟ್ಟದ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದಕ್ಕಷ್ಟೇ ನೆರವಾಗುತ್ತದೆ.
ಈ ಹತ್ತು ಸಲಹೆಗಳನ್ನು ಗಂಭೀರವಾಗಿ ಪಾಲಿಸಿ.

ಉತ್ತರ ಹಾಗೂ ಈಶಾನ್ಯ ಶಕ್ತಿಯುತವಾಗಿರಲಿ
ನಿಮ್ಮ ಮನೆಯ ಉತ್ತರ ಹಾಗೂ ಈಶಾನ್ಯ ದಿಕ್ಕು ಸಕಾರಾತ್ಮಕವಾಗಿರಬೇಕು, ಶಕ್ತಿಯುತವಾಗಿರಬೇಕು. ಏಕೆಂದರೆ ಸಂಪತ್ತಿನ ಅಧಿದೇವತೆ ಇರುವ ಕೇಂದ್ರ ಸ್ಥಾನವಿದು. ಈ ಸ್ಥಾನವು ಶಕ್ತಿಯುತವಾಗಿದ್ದರೆ ಸಂಪತ್ತಿಗೆ ಕೊರತೆ ಆಗುವುದಿಲ್ಲ.

ತಡೆಯಾಗದಂತೆ ಎಚ್ಚರ ವಹಿಸಿ
ಈಶಾನ್ಯ ದಿಕ್ಕಿಗೆ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಬಾರದು. ನಿಮ್ಮ ಮನೆಯ ಪ್ರವೇಶ ಅಥವಾ ಮುಖ್ಯ ಬಾಗಿಲು ವೈರ್, ಕಂಬಗಳು, ಚರಂಡಿ ಅಥವಾ ಇನ್ಯಾವುದೇ ರೀತಿಯಿಂದಲೂ ತಡೆಯಾಗದಂತೆ ಎಚ್ಚರ ವಹಿಸಿ.

ಉತ್ತರಕ್ಕೆ ತೆರೆಯುವಂತಿರಲಿ ತಿಜೋರಿ ಬಾಗಿಲು
ಹಣದ ತಿಜೋರಿಯನ್ನು ನೈರುತ್ಯ ಅಥವಾ ನೈರುತ್ಯಕ್ಕಿರುವ ಕೋಣೆಯಲ್ಲಿನ ದಕ್ಷಿಣದ ಗೋಡೆಗೆ ಅಥವಾ ಈಶಾನ್ಯಕ್ಕೆ ಇಡಿ. ಹಾಗೆ ಮಾಡುವುದರಿಂದ ತಿಜೋರಿಯ ಬಾಗಿಲು ಉತ್ತರಕ್ಕೆ ತೆರೆದುಕೊಳ್ಳುತ್ತದೆ. ಬೀಮ್ ಗಳ ಅಡಿಯಲ್ಲಿ ತಿಜೋರಿ ಇಡದಂತೆ ಎಚ್ಚರ ವಹಿಸಿ. ಹಾಗೆ ಮಾಡಿದರೆ ಕುಟುಂಬ ಹಾಗೂ ವ್ಯಾಪಾರದಲ್ಲಿ ಒತ್ತಡ ಹೆಚ್ಚುತ್ತದೆ.

ತಿಜೋರಿ ಎದುರು ಕನ್ನಡಿ ಇರಿಸಿ
ಹಣದ ತಿಜೋರಿ ಎದುರು ಕನ್ನಡಿಯೊಂದನ್ನು ಇಡಿ. ಅದ್ದರಿಂದ ತಿಜೋರಿ ತೆರೆದಾಗ ಅದರ ಪ್ರತಿಬಿಂಬ ಕನ್ನಡಿಯಲ್ಲಿ ಕಾಣುತ್ತದೆ. ನಿಮ್ಮ ಸಂಪತ್ತು ದ್ವಿಗುಣಗೊಳ್ಳುವ ಸಂಕೇತವಿದು. ಹಣದ ಲಾಕರ್ ನ ಎದುರಿನ ಗೋಡೆಯ ಮೇಲೆ ಕನ್ನಡಿ ಇರಲಿ. ಹೀಗೆ ಮಾಡುವುದರಿಂದ ಆಭರಣ- ಹಣ ಮತ್ತಿತರ ಬೆಲೆ ಬಾಳುವ ವಸ್ತು, ದಾಖಲೆ ಪ್ರತಿಫ್ಲನವಾಗುತ್ತದೆ. ಶುಭ ತರುತ್ತದೆ.

ಭಾರವಾದವು ಈಶಾನ್ಯದಲ್ಲಿ ಇರಬಾರದು
ಈಶಾನ್ಯ ದಿಕ್ಕಿನಲ್ಲಿ ಮೆಟ್ಟಿಲು ನಿರ್ಮಾಣ ಮಾಡಬಾರದು. ಯಂತ್ರಗಳು, ಏಣಿ, ಭಾರವಾದ ಯಾವುದೇ ವಸ್ತುಗಳನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು.

ಮುಖ್ಯ ಬಾಗಿಲಿನ ದಿಕ್ಕಿಗೆ ಕಸ ಗುಡಿಸಬೇಡಿ
ಇನ್ನು ಕಸ ಗುಡಿಸುವಾಗ ಮನೆಯ ಒಳ ಭಾಗಕ್ಕೆ ಬರುವಂತೆ ಗುಡಿಸುತ್ತಾ ಸಾಗಬೇಕು. ಮುಖ್ಯ ಬಾಗಿಲಿನ ಕಡೆಗೆ ಮುಖ ಮಾಡಿ ಕಸ ಗುಡಿಸಬಾರದು. ಹೀಗೆ ಮಾಡಿದರೆ ಸಂಪತ್ತು ಕಡಿಮೆ ಆಗುತ್ತದೆ. ಕಸದ ಬುಟ್ಟಿ ಸದಾ ಮುಚ್ಚಿರಬೇಕು. ಕಸದ ಡಬ್ಬವನ್ನು ಮೂಲೆಯಲ್ಲಿ ಇಡಬೇಡಿ. ಇದರಿಂದ ಕೂಡ ಸಂಪತ್ತು ಕ್ಷೀಣವಾಗುತ್ತದೆ.

ಈಶಾನ್ಯ ದಿಕ್ಕಿನ ಗೋಡೆ ಹೀಗಿರಲಿ
ಈಶಾನ್ಯ ದಿಕ್ಕಿನ ಮೂಲೆಯ ಗೋಡೆಯನ್ನು ಬಾಗಿದಂತೆ ನಿರ್ಮಾಣ ಮಾಡಬಾರದು. ಸರಿಯಾದ ಕೋನದಲ್ಲೇ ಇರಬೇಕು. 90 ಡಿಗ್ರಿಗಿಂತ ಹೆಚ್ಚು ಅಥವಾ ಕಡಿಮೆಯಿರುವುದು ಒಳ್ಳೆಯದಲ್ಲ.

ನೈರುತ್ಯ ಭಾಗದ ಛಾವಣಿ ಎತ್ತರದಲ್ಲಿರಲಿ
ನೈರುತ್ಯ ಭಾಗದ ಛಾವಣಿಯು ಈಶಾನ್ಯದ ಭಾಗಕ್ಕಿಂತ ಸ್ವಲ್ಪ ಎತ್ತರದಲ್ಲಿರಲಿ. ಮನೆಯ ಛಾವಣಿಯು ನೈರುತ್ಯ ದಿಕ್ಕಿನಿಂದ ಈಶಾನ್ಯಕ್ಕೆ ಇಳಿಜಾರಿನಂತೆ ಇರಬೇಕು.

ಮೆಟ್ಟಿಲಿನ ಕೆಳಗೆ ಬೇಡದ ವಸ್ತುಗಳನ್ನು ಇಡದಿರಿ
ಮನೆಯ ಹಳೆ ವಸ್ತುಗಳು, ಬೇಡದ ಸಾಮಾನುಗಳು ಹಾಗೂ ಷೂ-ಚಪ್ಪಲಿಗಳನ್ನು ಮನೆಯ ಮೆಟ್ಟಿಲಿನ ಕೆಳಗೆ ಇಡಬಾರದು. ಈ ರೀತಿಯ ವಸ್ತುಗಳಿಂದ ವಾಸ್ತು ದೋಷ ಏರ್ಪಡುತ್ತದೆ. ಮತ್ತು ಇಂಥ ವಸ್ತುಗಳನ್ನು ಉತ್ತರ, ಈಶಾನ್ಯ ಹಾಗೂ ಪೂರ್ವ ದಿಕ್ಕಿನ ಕಡೆಗೆ ಇಡಬಾರದು.

ನೇರಳೆ ಬಣ್ಣದ ಕುಂಡ ಬಳಸಿ
ನೇರಳೆ ಬಣ್ಣವು ಸಂಪತ್ತನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ನೇರಳೆ ಬಣ್ಣವನ್ನು ಹೆಚ್ಚು ಬಳಸಿ. ಇದು ಕಷ್ಟ ಅಂತಾದರೆ, ನೇರಳ ಬಣ್ಣದ ಕುಂಡದಲ್ಲಿ ಮನಿ ಪ್ಲಾಂಟ್ ಹಾಕಿಡಿ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications