• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಧನಸ್ಸು ಮತ್ತು ಮಕರ ರಾಶಿ ಗುಣ ಸ್ವಭಾವ

By * ಧವಳ
|

Sagittarius and Capricorn
ನಾನು ಭವಿಷ್ಯವಲ್ಲದ ಭವಿಷ್ಯ ಬರೆಯಲು ಆರಂಭಿಸಿದ ದಿನದಿಂದ ಅನೇಕ ಬಗೆ ಪ್ರತಿಕ್ರಿಯೆಗಳು ತಮ್ಮಿಂದ ವ್ಯಕ್ತವಾಗುತ್ತಿವೆ. ತಮಗೆಲ್ಲ ಧನ್ಯವಾದಗಳು. ಸಾಕಷ್ಟು ಜನರು ಕೇಳಿದಂತೆ ಇದು ಸೂರ್ಯರಾಶಿಯ ಭವಿಷ್ಯ ಹಾಗೂ ನಮ್ಮಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಚಂದ್ರ ರಾಶಿಗೆ. ನಾನು ಬರೆಯುವ ಭವಿಷ್ಯ ವಾಣಿಯು ಗಳಿಗೆ, ಲೆಕ್ಕಾಚಾರಗಳಿಗೆ ಆದ್ಯತೆ ನೀಡಿದೆ ಆದರೆ ತೀವ್ರ ಸ್ವರೂಪದಲ್ಲಿ ಅಲ್ಲ.

ಸೂರ್ಯರಾಶಿಯಲ್ಲಿ ರಾಶಿಗಳ ಗುಣಗಳು, ವರ್ತನೆಗಳನ್ನು ನೇರವಾಗಿ ಖಡಾಖಂಡಿತವಾಗಿ ಹೇಳಿ ಬಿಡುವ ಮನಸ್ಥಿತಿ ಇರುತ್ತದೆ. ಆದರೆ, ಚಂದ್ರ ರಾಶಿ ನಮ್ಮಲ್ಲಿ ಬಳಸುವ ಜಾತಕಗಳಲ್ಲಿ ಪಾದಗಳಿಗೆ ಅಂದ್ರೆ ಈಗ ಉದಾಹರಣೆಗೆ ಪೂರ್ವಾಭಾದ್ರ ನಕ್ಷತ್ರ ನಾಲ್ಕನೇ ಪಾದದವರಿಗೆ ಕುಂಭ ರಾಶಿ ಅಂತ ಹೇಳಿದ್ದಾರೆ. ಅಲ್ಲದೆ ಯಾವ ಪಾದಕ್ಕೆಷ್ಟು ಒಳ್ಳೆಯ ಹಾಗೂ ಕೆಟ್ಟದು ಮಾಡುವ ಶಕ್ತಿ ಇರುತ್ತದೆ ಎಂದು ಸಹ ತಿಳಿಸಿದ್ದಾರೆ. ಆದರೆ ಸೂರ್ಯರಾಶಿಯವರ ವಿಷಯಕ್ಕೆ ಬಂದ್ರೆ ದಿನಾಂಕ ತಿಂಗಳು ಆದ್ಯತೆ ಪಡೆದುಕೊಳ್ಳುತ್ತದೆ.

ಎರಡರ ಬಗ್ಗೆ ತಿಳಿದ ಓದುಗರು ಎರಡೂರಾಶಿಯನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಓದಿ ಕೊಳ್ತಾರೆ. ಆ ವಿಷ್ಯ ಬೇರೆ ಬಿಡಿ. ಅವರಿಗೆ ಬಂಪರ್ ಬಹುಮಾನ! ಯಾವುದೇ ಭವಿಷ್ಯ, ರಾಶಿ, ನಕ್ಷತ್ರದವರಿಗೆ ಮೂಲಭೂತವಾಗಿ ಬೇಕಾಗಿರುವುದು ನೆಮ್ಮದಿ, ಶಾಂತಿ ಹಾಗೂ ಸಂತೋಷ. ನೀವು ಯಾವುದೇ ರೀತಿಯ ಭವಿಷ್ಯದತ್ತ ಕಣ್ಣು ಹಾಯಿಸಿ ಅಲ್ಲಿ ಹಿರಿಯರ (ದೇಶ-ವಿದೇಶ ಅಪ್ರಸ್ತುತ ) ಮುಖ್ಯ ಉದ್ದೇಶ ಸಮಾಜದಲ್ಲಿ ಶಾಂತಿಯನ್ನು ನೀಡುವುದು.

ಚೈನಾ ಭವಿಷ್ಯ, ಸಂಖ್ಯಾ ಶಾಸ್ತ್ರ, ಕಲರ್ ಥೆರಪಿ, ಹೀಗೆ ಎಲ್ಲವೂ ಸುಗಮ ಬದುಕನ್ನು ನೀಡುವ ಉದ್ದೇಶ ಹೊಂದಿದೆ. ನಿಮ್ಮ ಪ್ರತಿಕ್ರಿಯೆ ಹಾಗೂ ಮುಕ್ತ ಅಭಿಪ್ರಾಯಕ್ಕೆ ಮತ್ತೊಮ್ಮೆ ಹೃತ್ಪೂರ್ವಕ ಧನ್ಯವಾದಗಳು. ದಟ್ಸ್ ಕನ್ನಡ ಸಂಪಾದಕರಾದ ಶಾಮಸುಂದರ ಅವರು ಈ ವಿಷಯದ ಬಗ್ಗೆ ಸಣ್ಣ ಮಾಹಿತಿ ನೀಡುವಂತೆ ಆರ್ಡರ್ ಮಾಡಿದರು. ಅವರ ಆಜ್ಞೆಯಂತೆ ನಾನು ನಿಮಗೆ ಇದರ ಬಗ್ಗೆ ತಿಳಿಸಿದ್ದೇನೆ ಸ್ವೀಕರಿಸಿ. ನಿಮಗಾಗಿ ಮುಂದೆ ಸಾಕಷ್ಟು ರೋಚಕಗಳು ಕಾದಿವೆ. ಓದಿ ಸಿಂಪ್ಲಿ ಎಂಜಾಯ್ ಮಾಡಿ!

ಧನಸ್ಸು (Sagittarius) ನವೆಂಬರ್ 23 - ಡಿಸೆ೦ಬರ್ 24 : ಸೂರ್ಯರಾಶಿ ಆಗಿರಲಿ ಇಲ್ಲವೇ ಚಂದ್ರ ರಾಶಿ ಆಗಿರಲಿ ಗುರುವಿಗೆ ಭಿನ್ನ ಸ್ಥಾನವಿದೆ. ಧನಸ್ಸು ರಾಶಿಯ ಅಧಿಪತಿ ಗುರು. ವಿಶೇಷ ಅಂದ್ರೆ ಹೆಸರಿಗೆ ತಕ್ಕಂತೆ ಈ ರಾಶಿಯರು ಮಾಸ್ಟರ್ ಗಳಾಗಿರುತ್ತಾರೆ. ಹಾಗೆಂದರೆ ಜಾಕ್ ಆಫ್ ನನ್ ಅಂತ ಅಲ್ಲ ಮಾಡುವ ಕೆಲಸದಲ್ಲಿ ಪಕ್ಕಾ ಪರ್ಫೆಕ್ಟ್. ತುಂಬಾ ಆಶಾವಾದಿಗಳು ಇವರು. ಅದೇ ಅವರ ಬದುಕಿನ ಪ್ಲಸ್ ಪಾಯಿಂಟ್ .

ಇವರ ಈ ಗುಣಬಲದಿಂದ ಲೋಕ ಪ್ರಖ್ಯಾತರಾಗುತ್ತಾರೆ. ಇತರರಿಗೆ ಮಾದರಿ ಆಗುತ್ತಾರೆ. ಬದುಕಿನ ಬಗ್ಗೆ ಸದಾ ಆಸಕ್ತಿ, ತಮ್ಮನ್ನು ಹೊಸ ಹೊಸ ಅನುಭವಗಳಿಗೆ ಒಡ್ಡಿ ಕೊಳ್ಳುವ ಮನಸ್ಥಿತಿ ಸದಾ ಅವರದಾಗಿರುತ್ತದೆ. ಕುತೂಹಲ ಇವರ ರಕ್ತದಲ್ಲಿ ಕರಗಿರುತ್ತದೆ. ಹುಡುಕಾಟ, ಸಂಶೋಧನೆ, ಅನ್ವೇಷಣೆ ಇವರ ಬದುಕಿನ ಭಾಗವಾಗಿರುತ್ತದೆ. ಗೆಲ್ಲುವ ತವಕ ಇವರಲ್ಲಿ ಮನೆಮಾಡಿರುತ್ತದೆ. ಅದಕ್ಕೆ ಪೂರಕ ಪ್ರಯತ್ನವನ್ನು ಸದಾ ಜಾರಿಯಲ್ಲಿ ಇಟ್ಟಿರುತ್ತಾರೆ.

ಆದರೆ, ಸೋತ ತಕ್ಷಣ ಕೈಚಲ್ಲಿ ಕೂರುವುದಿಲ್ಲ, ಬದಲಿಗೆ ಮರಳಿ ಯತ್ನವ ಮಾಡು ಅನ್ನುವ ಸಿದ್ದಾಂತವನ್ನು ಮುಂದಿಟ್ಟುಕೊಂಡು ಹೊಸ ಉತ್ಸಾಹದಿಂದ ಸವಾಲುಗಳ ಕುದುರೆ ಏರುತ್ತಾರೆ. ಈ ರಾಶಿಯರು ನಂಬಿಕಸ್ಥರು, ಧಾರಾಳಿಗಳು, ನಿಷ್ಕಪಟಿಗಳು, ಪ್ರಾಮಾಣಿಕರು, ನ್ಯಾಯನೀತಿಗೆ ಬೆಲೆ ಕೊಡುವವರು. ಒಟ್ಟಿನಲ್ಲಿ ಪುರಾಣಗಳಲ್ಲಿ ಬರುವ ಪುಣ್ಯ ಪುರುಷರು ಹಾಗೂ ಚಂದಮಾಮ ಕಥೆಗಳಲ್ಲಿ ಬರುವ ರಾಜಕುಮಾರರ ಗುಣಗಳಂತೆ ಎಲ್ಲಾ ಒಳ್ಳೆಯ ಹಾಗೂ ಸಮಾಜಕ್ಕೆ ಆದರ್ಶ ಪ್ರಾಯವಾದ ಅಂಶಗಳು ಇವರ ರಕ್ತದಲ್ಲಿ ಇರುತ್ತದೆ. ಸಮಾಜದಲ್ಲಿ ತುಂಬಾ ಬೇಗ ಗುರುತಿಸಿಕೊಳ್ಳುವ ಈ ರಾಶಿಯರಿಗೆ ಸಂಗೀತ, ವಿಜ್ಞಾನ, ಸಾರ್ವಜನಿಕ ಸೇವೆ ಸೂಟಬಲ್ ಆಗಿರುತ್ತದೆ.

ಮಕರ (Capricorn) ಡಿಸೆಂಬರ್ 23 - ಜನೆವರಿ 20 : ಭವಿಷ್ಯದ -ಬದುಕಿನ ಬಗ್ಗೆ ಅಪಾರವಾದ ಕನಸುಗಳನ್ನು ಹೊಂದಿರುವ ರಾಶಿ. ಇದು ಸಂಪೂರ್ಣವಾಗಿ ಭೂಮಿ ಗ್ರಹಕ್ಕೆ ಸಂಬಂಧಪಟ್ಟ ರಾಶಿ ಎಂದೂ ಸಹ ತಿಳಿದವರು ಹೇಳ್ತಾರೆ. ಗ್ರಹ ಯಾವುದಾದರೇನು ಅದರ ಗುಣಗಳತ್ತ ಗಮನ ಹರಿಸಿದಾಗ ಈ ರಾಶಿಯರು ಆಶಾವಾದಿಗಳು. ಇವರ ಗೋಲ್ ಸಣ್ಣ ಪುಟ್ಟದ್ದು ಆಗಿರದು. ಇವರಿಗೆ ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಅಂದ್ರೆ ಸಿಕ್ಕಾಪಟ್ಟೆ ಬೇಜಾರು..!

ಹಾಸಿಗೆಗಿಂತ ಇವರ ಕಾಲೇ ಉದ್ದವಾಗಿರುತ್ತದೆ. ಸದಾ ಆಕಾಶಕ್ಕೆ ಏಣಿ ಹಾಕಿ, ಆಕಾಶದಿಂದಾಚೆ ಏನಿದೆ ಎಂದು ಹುಡುಕಿ ಅದರಲ್ಲಿ ಯಶಸ್ವಿ ಆಗುವ ಗುಣವನ್ನು ಸಹ ತಮ್ಮದಾಗಿಸಿಕೊಂಡಿರುತ್ತಾರೆ. ಇವರು ನೂರಕ್ಕೆ ನೂರರಷ್ಟು ವರ್ಕೋಹಾಲಿಕ್. ಕಷ್ಟಪಟ್ಟು ದುಡಿಯೋಕೆ ಹಿಂದೆಮುಂದೆ ನೋಡಲ್ಲ. ಇವರಿಗೆ ಸುಲಭವಾಗಿ ಕಾಯಿಲೆಗಳು ಹತ್ತಿರ ಸುಳಿಯಲ್ಲ. ಮತ್ತೊಂದು ಸಂಗತಿ, ಇವರು ಗೆಲ್ಲುವ ತವಕದಲ್ಲಿ ಎಲ್ಲರೂ ತಮ್ಮಂತೆ ಇರಬೇಕು ಅಂತ ಬಯಸುತ್ತಾರೆ. ಇದು ಜೊತೆಗಾರ ಕೋಪಕ್ಕೆ ಕಾರಣ ಆಗುತ್ತದೆ. ಹಾಗಾಗದಂತೆ ಎಚ್ಚರ ವಹಿಸಬೇಕು.

ಈ ಒಂದು ಸ್ವಭಾವ ಏನಿದೆ ನೋಡಿ ಅದು ಈ ರಾಶಿಯವರ ಎಲ್ಲ ಒಳ್ಳೆಯ ಅಂಶಗಳನ್ನು ತಿಂದು ಬಿಡುತ್ತದೆ. ಉತ್ತಮ ಸ್ನೇಹಪರರು. ಮಕರ ರಾಶಿಯವರ ಮತ್ತೊಂದು ಅತಿ ಮುಖ್ಯ ಗುಣ ಅಂದ್ರೆ ಸೆನ್ಸಿಟಿವ್ ಸ್ವಭಾವ. ಇದು ಈ ರಾಶಿಯರ ಗೆಲುವಿಗೆ ಪ್ಲಸ್ ಹಾಗೂ ಮೈನಸ್ ಆಗಿ ಏಕಕಾಲಕ್ಕೆ ಕೆಲಸ ಮಾಡುತ್ತದೆ. ಅತ್ಯುತ್ತಮ ಆಡಳಿತ ನಡೆಸುತ್ತಾರೆ. ಯಾವುದೇ ಕೆಲಸದ ಯಜಮಾನನಿಕೆ ಇವರಿಗೆ ಸಿಕ್ಕರೆ ಸಾಕು, ಬೇರೆಯವರು ನೆಮ್ಮದಿಯಿಂದ ಇರಬಹುದು. ಅತಿ ದೊಡ್ಡ ಹುದ್ದೆಯನ್ನು ಲೀಲಾಜಾಲವಾಗಿ ನಿರ್ವಹಿಸುತ್ತಾರೆ. ಸಂಗಾತಿ ವಿಷಯಕ್ಕೆ ಬಂದ್ರೆ ತುಂಬಾ ಪ್ರೀತಿ, ಕಾಳಜಿ ಇವರಿಗೆ. ತಾವು ಊಟ ಮಾಡದೇ ಇದ್ದರು ನಿನ್ನ ಊಟ ಆಯ್ತಾ? ಎಂದು ಕೇಳುವ ನೇಚರ್ರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more