ಎಐ ಬಳಕೆದಾರರಿಗೆ OpenAI ಭರ್ಜರಿ ಗುಡ್‌ನ್ಯೂಸ್!
ಎಐನಿಂದ ಜನ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಎಐ (ಕೃತಕ ಬುದ್ಧಿಮತ್ತೆ) ಬಂದ ಮೇಲೆ ಜನರಿಗೆ ಸರಿಯಾಗಿ ಕೆಲಸ ಸಿಗುತ್ತಿಲ್ಲ ಹಾಗೂ ಸಂಬಳ ಕಡಿತವಾಗುತ್ತಿದೆ ಎನ್ನುವ ಆತಂಕಗಳ ನಡುವೆಯೇ ಓಪನ್‌ಎಐ ಕಂಪನಿ ಸಿಇಒ ಸ್ಯಾಮ್ ಆಲ್ಟ್‌ಮನ್ ಇತ್ತೀಚಿನ AI ಮಾದರಿಯಾದ ಜಿಪಿಟಿ-5 ಅನ್ನು ಪ್ರಸ್ತುತಪಡಿಸಿದ ಬೆನ್ನಲ್ಲೇ ಮತ್ತೊಂದು ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ಇದೀಗ OpenAI ಮತ್ತೊಂದು ಭರ್ಜರಿ ಗುಡ್‌ನ್ಯೂಸ್ ನೀಡಲಾಗಿದೆ. ಅನ್ವಯಿಕ ಎಂಜಿನಿಯರಿಂಗ್, ಸ್ಕೇಲಿಂಗ್ ಹಾಗೂ ಸುರಕ್ಷತೆ ಸೇರಿದಂತೆ ಹಲವಾರು ವಿಭಾಗಗಳಾದ್ಯಂತ ಓಪನ್‌ಎಐ ತನ್ನ AI ಸಂಶೋಧಕರು ಹಾಗೂ ಎಂಜಿನಿಯರ್‌ಗಳಿಗೆ 'ವಿಶೇಷ ಒಂದು ಬಾರಿ ಪ್ರಶಸ್ತಿ'ಯನ್ನು ಘೋಷಿಸಿದೆ. ಇದು ಎಐ ಕ್ಷೇತ್ರದಲ್ಲಿ ಭಾರೀ ಸಂಚಲನ ಹಾಗೂ ಚರ್ಚೆಗೆ ಕಾರಣವಾಗಿದೆ. ಎಐನಿಂದ ಕೆಲಸ ಹೋಗುವುದು ಮಾತ್ರವಲ್ಲ ಇದನ್ನು ಚೆನ್ನಾಗಿ ಬಳಸಿಕೊಂಡರೆ ಉದ್ಯೋಗಾವಕಾಶ ಹಾಗೂ ಭವಿಷ್ಯದಲ್ಲಿ ಒಳ್ಳೆಯ ಆದಾಯವನ್ನೂ ಗಳಿಸಬಹುದು ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಹೇಳಲಾಗುತ್ತಿದೆ.

ಮೈಕ್ರೋಸಾಫ್ಟ್ ಬೆಂಬಲಿತ AI ಸ್ಟಾರ್ಟ್‌ಅಪ್ ವಿಶ್ವದಲ್ಲೇ ಅತ್ಯುತ್ತಮ ಮಾದರಿಯ GPT-5 ಸೇವೆಯನ್ನು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಬೋನಸ್ ಹಾಗೂ ಪ್ರಶಸ್ತಿ ಪ್ರಕ್ರಿಯೆಗಳನ್ನು ಘೋಷಿಸಲಾಗಿದೆ. 1,000 ಕ್ಕೂ ಹೆಚ್ಚು ಓಪನ್‌ಎಐ ಉದ್ಯೋಗಿಗಳು ಈ ಬೋನಸ್ ಅಥವಾ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಚಾಟ್‌ಜಿಪಿಟಿ- ಪ್ರಸ್ತುತ ಮೌಲ್ಯವು 300 ಬಿಲಿಯನ್ ಮೌಲ್ಯವಾಗಿದೆ ಎಂದು ಹೇಳಲಾಗಿದೆ.
ಎಐ ಕ್ಷೇತ್ರದಲ್ಲಿ ಹೊಸ ಮಾದರಿಯ ಸಂಶೋಧನೆಗಳನ್ನು ಉತ್ತೇಜಿಸುವುದು ಹಾಗೂ ಎಐ ಬಳಕೆ ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಅಲ್ಲದೇ ಈಗಾಗಲೇ ಎಐ ಬಳಕೆ ಮಾಡುತ್ತಿರುವವರನ್ನು ಪ್ರೋತ್ಸಾಹಿಸುವುದು ಸಹ ಇದರಲ್ಲಿ ಸೇರಿದೆ ಎಂದು ಹೇಳಲಾಗುತ್ತಿದೆ. ಉತ್ತಮವಾಗಿ ಎಐ ಬಳಕೆ ಮಾಡುವ ಆಯ್ದ ಎಂಜಿನಿಯರ್‌ಗಳನ್ನು ಸರಾಸರಿ ನೂರಾರು ಸಾವಿರ ಡಾಲರ್‌ಗಳ ಬೋನಸ್ ಸಿಗಲಿದೆ ಎಂದು ಹೇಳಲಾಗಿದೆ. ಈ ಪ್ರಕ್ರಿಯೆಯು ಸುದೀರ್ಘವಾಗಿದ್ದು ಮುಂದಿನ ಎರಡು ವರ್ಷಗಳಲ್ಲಿ ಇದು ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಎಐ ಮಾರುಕಟ್ಟೆಯಲ್ಲಿ ಸಂಚಲ: ಇನ್ನು ಎಐ ಕ್ಷೇತ್ರದಲ್ಲಿ ಈ ಬೆಳವಣಿಗೆ ಹೊಸ ಸಂಚಲವನ್ನೇ ಸೃಷ್ಟಿ ಮಾಡಿದೆ. ಇಷ್ಟು ದಿನಗಳ ಕಾಲ ಎಐಗೆ ಸಂಬಂಧಿಸಿದಂತೆ ಕೇವಲ ನೆಗೆಟಿವ್ ಸುದ್ದಿಗಳೇ ಹೆಚ್ಚು ಬರುತ್ತಿದ್ದವು. ಎಐನಿಂದ ಉದ್ಯೋಗ ಕಡಿತವಾಗಲಿದೆ. ಸಂಬಳ ಕಡಿಮೆ ಆಗಲಿದೆ ಲಕ್ಷಾಂತರ ಜನರಿಗೆ ಕೆಲಸ ಹೋಗುವ ಸಾಧ್ಯತೆ ಇದೆ ಎಂದು ಉದ್ಯಮಿಗಳು ಹಾಗೂ ಎಐ ತಜ್ಞರು ಎಚ್ಚರಿಸುತ್ತಿದ್ದರು. ಅಲ್ಲದೇ ಎಐ ಸಂಶೋಧಕರೆ ಭವಿಷ್ಯದಲ್ಲಿ ಭಾರೀ ದೊಡ್ಡ ಬದಲಾವಣೆಗಳು ಆಗಲಿವೆ ಎಂದಿದ್ದರು. ಅದೆಲ್ಲದರ ನಡುವೆ ಇದೀಗ ಹೊಸದೊಂದು ಅಪ್ಡೇಟ್ಸ್ ಬಂದಿದೆ.
ಎಐ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಆದ ಬದಲಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಈ ಅನ್ವೇಷಣೆಯನ್ನು ಪರಿಚಯಿಸಲಾಗಿದೆ. ನಾವು ಎಐನಲ್ಲಿ ಹೊಸ ಅನ್ವೇಷಣೆಗಾಗಿ ಈ ಪ್ರಶಸ್ತಿಯನ್ನು ನಾವು ಪರಿಚಯಿಸುತ್ತಿದ್ದೇವೆ. ಎಐ ಪ್ರತಿಭಾನ್ವೇಷಣೆಯ ಕಾರಣಕ್ಕಾಗಿ ಈ ಬದಲಾವಣೆಯನ್ನು ಮಾಡಿರುವುದಾಗಿ ಅವರು ಹೇಳಿದ್ದಾರೆ.












Click it and Unblock the Notifications