Perplexity AI ಮೇಲೆ ಜಪಾನಿನ ಮಾಧ್ಯಮ ಕಂಪನಿಗಳಿಂದ ಮೊಕದ್ದಮೆ ದಾಖಲು, ಕಾರಣವೇನು?
Perplexity AI: ನಿಕ್ಕಿ ಇಂಕ್ ಮತ್ತು ಅಸಾಹಿ ಶಿಂಬುನ್ ಕಂಪನಿಗಳು ಕೃತಕ ಬುದ್ಧಿಮತ್ತೆಯ (AI) ಕಂಪನಿಯಾಗಿರುವ ಪರ್ಪ್ಲೆಕ್ಸಿಟಿ ಎಐ ಇಂಕ್ ಮೇಲೆ ಪ್ರಕರಣ ದಾಖಲಿಸಿವೆ. ಹಕ್ಕುಸ್ವಾಮ್ಯ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿವೆ. ಈ ಬಗ್ಗೆ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಗಳಾದ ಜಪಾನ್ ಮತ್ತು ಯುಎಸ್‌ನಲ್ಲಿ ಮಾಧ್ಯಮಗಳಲ್ಲಿ AI ಪರಿಕರಗಳಿಂದ ಬಳಸಿದ ತಮ್ಮ ವಿಷಯದ ವಿರುದ್ಧ ಕಂಪನಿಗಳು ಕಿಡಿ ಕಾರಿವೆ. ಮಾಹಿತಿ ಬಳಕೆ ಬಗ್ಗೆ ಪ್ರಶ್ನಿಸಿವೆ.
ತಡೆಯಾಜ್ಞೆ ಕೋರಿಸುವ ಸುದ್ದಿ ಪತ್ರಿಕೆಗಳು ಪರ್ಪ್ಲೆಕ್ಸಿಟಿಯಿಂದ ತಲಾ $15 ಮಿಲಿಯನ್ ಡಾಲರ್ ನಷ್ಟವನ್ನು ತುಂಬಿಕೊಂಡುವಂತೆ ಕೋರಿವೆ. ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿರುವ ಈ ಎರಡು ಕಂಪನಿಗಳು ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣವನ್ನು ಟೋಕಿಯೊ ಜಿಲ್ಲಾ ನ್ಯಾಯಾಲಯದಲ್ಲಿ ಈ ಮೊಕದ್ದಮೆ ಹೂಡಿವೆ. ಪರ್ಪ್ಲೆಕ್ಸಿಟಿ ವಿರುದ್ಧ ಅಸಮಾಧಾನ ಹೊರ ಹಾಕಿವೆ.

ನಿಕ್ಕಿ ಕಂಪನಿಯು ಜಪಾನ್ ದೇಶದಲ್ಲಿ ಅತೀ ದೊಡ್ಡ ಹಣಕಾಸು ಪತ್ರಿಕೆ ಹೊಂದಿದೆ. ಎಡಪಂಥೀಯ ವಿಚಾರಧಾರೆ ಹೊಂದಿರುವ ಅಸಾಹಿ ಮಾಡಿದ ಕಾನೂನು ಕ್ರಮವು ಪ್ರಕಾಶಕರು ಮತ್ತು AI ಕಂಪನಿಗಳ ನಡುವೆ ಸುದ್ದಿ ವಿತರಣೆ, ನಿಯಂತ್ರಣ ಹಾಗೂ ಲಾಭ ಗಳಿಕೆ ಮಧ್ಯೆ ಬಿರುಕುಗಳಿವೆ ಎಂಬುದು ಗೊತ್ತಾಗಿದೆ. ಯಾವುದೇ ಪರವಾನಗಿ ಇಲ್ಲದೇ ಕೆಲಸವನ್ನು ಮತ್ತು ಎಐ ಪರಿಕರ ಮೂಲಕ ಓದುಗರನ್ನು ಸೆಳೆದು ಜಾಹೀರಾತು ಆದಾಯ ಕಸಿದುಕೊಳ್ಳಲಾಗುತ್ತದೆ ಎಂದು ಕಂಪನಿ ದೂರಿದೆ.
ಅನುಮತಿ ರಹಿತ ಎಐ ಪರಿಕರಗಳಿಂದ ಮಾಹಿತಿ ಪಡೆಯುವುದು ಪತ್ರಕರ್ತರ ಸಮಯ ಹಾಗೂ ಶ್ರಮದ ಮೇಲೆ ನಿರಂತರ ಹೊಡೆತ ನೀಡುತ್ತದೆ. ಇದೆಲ್ಲ ನಿಯಂತ್ರಣಗೊಳ್ಳಬೇಕು. ಇಲ್ಲವಾದರೆ ಸತ್ಯಗಳನ್ನು ನಿಖರವಾಗಿ ವರದಿ ಮಾಡುವ ಮಾಧ್ಯಮಗಳು ದುಬರ್ಲಗೊಳ್ಳಬಹುದು. ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರಬಹುದು. ಅದರ ಅಡಿಪಾಲಯ ಅಲುಗಾಡಬಹುದೆಂದು ನಿಕ್ಕಿ ಮತ್ತು ಅಸಾಹಿ ತಮ್ಮ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಇದೆಲ್ಲ ಮಾಹಿತಿ ಪಡೆಯುವಿಕೆ ಹಕ್ಕುಸ್ವಾಮ್ಯ ಕಾನೂನು ಉತ್ಪಾದಕ AI ಗೆ ಅನ್ವಯಿಸುವುದು ಹೇಗೆ ಎಂಬುದನ್ನು ಕಂಡು ಕೊಳ್ಳಬೇಕಿದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೆಲೆಗೊಂಡಿರುವ ಪರ್ಪ್ಲೆಕ್ಸಿಟಿಯನ್ನು ಫೋರ್ಬ್ಸ್, ನ್ಯೂಸ್ ಕಾರ್ಪ್‌ನ ಡೌ ಜೋನ್ಸ್ ಮತ್ತು ಯೋಮಿಯುರಿ ಶಿಂಬುನ್ ಸಹ ಗುರಿಯಾಗಿಸಿಕೊಂಡಿವೆ. ಸದ್ಯ ಇದೆಲ್ಲ ವಿಚಾರವು ನ್ಯಾಯಾಲಯದಲ್ಲಿದೆ. ಹಕ್ಕು ಸ್ವಾಮ್ಯ ಉಲ್ಲಂಘನೆಯು ಆರೋಪಿ, ಮೊಕದ್ಧಮೆಗಳು ಯುದ್ಧದಂತೆ ಭಾಸವಾಗುತ್ತಿದೆ.
2024ರ ಜೂನ್‌ನಿಂದ ಪರ್ಪ್ಲೆಕ್ಸಿಟಿ ಕನಿಷ್ಠ 18 ಬಿಲಿಯನ್ ಮೌಲ್ಯ ಗಳಿಸಿದೆ. ತಮ್ಮ ಕೊನೆಯ ತ್ರೈಮಾಸಿಕದಲ್ಲಿ 18 ಬಿಲಿಯನ್ ಡಾಲರ್ ಮೌಲ್ಯ ಗಳಿಕೆ ಮಾಡಿದೆ. ಇದೆಲ್ಲ ಅಂಕಿ ಸಂಖ್ಯೆಗಳನ್ನು ನಿಕ್ಕಿ ಮತ್ತು ಅಸಾಹಿ ಕಂಪನಿಗಳು ತಮ್ಮ ಹೇಳಿಕೆಯಲ್ಲಿ ವಿವರಿಸಿವೆ. ಸ್ಟಾರ್ಟ್‌ಅಪ್‌ನ AI ಹುಡುಕಾಟ ಫಲಿತಾಂಶ ಹೇಗೆ ಸಿಗಬೇಕು. ವಿಷಯದ ಹುಡುಕಾಟಕ್ಕೆ ಮಿತಿ ಇಡಬೇಕು. ಅದನ್ನು ಸೂಚಿಸುವ ಕೋಡಿಂಗ್ ಅನ್ನು ಪರ್ಪ್ಲೆಕ್ಸಿಟಿ ನಿರ್ಲಕ್ಷಿಸಿದೆ. ಸುದ್ದಿ ಸಂಸ್ಥೆಗಳಿಗೆ ಕಾರಣವಾದ ದೋಷಗಳನ್ನು ಉಲ್ಲೇಖಿಸಿ ಕಂಪನಿಗಳು ನೀಡಿದ ಮಾಹಿತಿಯಿಂದ ಪತ್ರಿಕೆಗಳ ವಿಶ್ವಾಸಾರ್ಹತೆಗೆ ಹಾನಿ ಉಂಟುಮಾಡಿವೆ. ಆದ್ದರಿಂದ ನಷ್ಟ ಭರಿಸುಂತೆ ಕಂಪನಿಗಳು ಕೋರ್ಟ್ ಮೆಟ್ಟಿಲೇರಿವೆ.












Click it and Unblock the Notifications