Artificial Intelligence: ರೋಗ ಪತ್ತೆಯಲ್ಲಿ ವೈದ್ಯರನ್ನು ಮೀರಿಸಬಲ್ಲ AI ಟೂಲ್ ಸಂಶೋಧಿಸಿದ ಮೈಕ್ರೋಸಾಫ್ಟ್
ಬೆಂಗಳೂರು, ಜುಲೈ 01: ಉದ್ಯೋಗ, ಐಟಿ ವಲಯ, ಕಾರ್ಪೋರೇಟ್, ಕೃಷಿ ಸೇರಿದಂತೆ ಎಲ್ಲ ರಂಗಗಳಲ್ಲೂ ಕೃತಕ ಬುದ್ಧಿಮತ್ತೆ (Artificial Intelligence) ತನ್ನ ಪ್ರಭಾವ ಭೀರುತ್ತಿದೆ. ಈಗಾಗಲೇ ಅನೇಕ ಉದ್ಯೋಗ ಕಸಿದುಕೊಂಡಿರುವ ಎಐ ತಂತ್ರಜ್ಞಾನ ವೈದ್ಯಕೀಯ ಕ್ಷೇತ್ರದಲ್ಲೂ ಕಾಲಿಟ್ಟಿದೆ. "ವೈದ್ಯಕೀಯ ಸೂಪರ್ ಇಂಟೆಲಿಜೆನ್ಸ್ ಕಡೆಗೆ ನಿಜವಾದ ಹೆಜ್ಜೆ ಇಟ್ಟಿದೆ" ಎಂದು ಮೈಕ್ರೋಸಾಫ್ಟ್ ಕಂಪನಿ ತಿಳಿಸಿದೆ.
ತಂತ್ರಜ್ಞಾನ ದೈತ್ಯ ಮತ್ತು ಶಕ್ತಿಶಾಲಿ ಹೊಸ AI ತಂತ್ರಜ್ಞಾನವು ವೈದ್ಯರಿಗಿಂತ ನಾಲ್ಕು ಪಟ್ಟು ಅಧಿಕ ನಿಖರವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ರೋಗ ಪತ್ತೆ ಮಾಡುತ್ತದೆ. ಅಂತಹ ಎಐ ಉಪಕರಣವನ್ನು ಮೈಕ್ರೋಸಾಫ್ಟ್ ಕಂಪನಿ ಕಂಡು ಹಿದಿದೆ. ಈ ಎಐ ಉಪಕರಣ ಕೆಲವು ಕಾಯಿಲೆಗಳನ್ನು ವೈದ್ಯರಂತೆ ನಿಖರವಾಗಿ ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ. ಮಾನವರಂತೆ ಪರೀಕ್ಷೆ ಮಾಡಿ ಸೂಕ್ತ ಮಾಹಿತಿ ನೀಡುತ್ತದೆ ಎಂದು ಮೈಕ್ರೋಸಾಫ್ಟ್ ಕಂಪನಿಯ ಎಐ ವಿಭಾಗದ ಸಿಇಒ ಮುಸ್ತಫಾ ಸುಲೇಮಾನ್ ಅವರು ಮಾಹಿತಿ ನೀಡಿದರು.

ಸೀಕ್ವೆನ್ಷಿಯಲ್ ಡಯಾಗ್ನೋಸಿಸ್ ಬೆಂಚ್‌ಮಾರ್ಕ್ ಎಂಬ ಪರೀಕ್ಷೆ ನಡೆಸಲು ನಮ್ಮ ಮೈಕ್ರೋಸಾಫ್ಟ್ ಕಂಪನಿಯ ತಂಡ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಿಂದ ಬರೋಬ್ಬರಿ 304 ಪ್ರಕರಣಗಳ ಅಧ್ಯಯನ ನಡೆಸಿತು. ರೋಗದ ಕುರಿತು ಅಂತಿಮ ನಿರ್ಧಾರಕ್ಕೆ ಬರಲು ವೈದ್ಯರ ನಿರ್ವಹಣಾ ಪ್ರಕ್ರಿಯೆಯನ್ನು ವಿಭಜಿಸಲಾಯಿತು. ಅದರಿಂದ ಪರೀಕ್ಷೆ ಮಾಹಿತಿ ಪಡೆದೆವು.
ಎಂಎಐ ಡಯಾಗ್ನೋಸ್ಟಿಕ್ ಆರ್ಕೆಸ್ಟ್ರೇಟರ್ (MAI-DxO) ಎಂಬ ವ್ಯವಸ್ಥೆಯನ್ನು ಮೈಕ್ರೋಸಾಫ್ಟ್‌ನ ಸಂಶೋಧಕರು ರೂಪಿಸಿದ್ದಾರೆ. ಓಪನ್‌ಎಐನ ಜಿಪಿಟಿ, ಗೂಗಲ್‌ನ ಜೆಮಿನಿ, ಆಂಥ್ರೊಪಿಕ್‌ನ ಕ್ಲೌಡ್, ಮೆಟಾದ ಲಾಮಾ ಹಾಗೂ ಗ್ರೋಕ್ ನಂತರ ಅನೇಕ ಎಐ ಮಾದರಿಯಾಗಿದೆ. ಅನೇಕ ಉದ್ಯೋಗಿಗಳ ಗುಂಪಿಗೆ ಈ ಎಐ ಉಪಕರಣಗಳು ಸಹಕಾರಿಯಾಗಿವೆ. ವೃತ್ತಿಪರರಿಗೆ ಅನುಕೂಲ ಒದಗಿಸುತ್ತಿದೆ ಎಂದರು.
ಎಐ ತಂತ್ರಜ್ಞಾನ ಇಂದು MAI-DxO ಮಾನವ ವೈದ್ಯರನ್ನು ಮೀರಿಸುತತಿವೆ. ವೈದ್ಯರಿಗೆ ಹೋಲಿಸಿದರೆ ಶೇಕಡಾ 80ರಷ್ಟು ನಿಖರತೆ ಸಾಧಿಸುತ್ತದೆ. ಮಾನವರಂತೆ ಹೆಚ್ಚಿನ ಹಾಗೂ ದುಬಾರಿ ಪರೀಕ್ಷೆಗಳ ಮೂಲಕ ರೋಗ ಪತ್ತೆ, ಚಿಕಿತ್ಸೆ ಮಾಡದೇ ಅತೀ ಕಡಿಮೆ ಕಾರ್ಯವಿಧಾನಗಳ ಮೂಲಕ ತ್ವರಿತವಾಗಿ ವೈದ್ಯಕೀಯ ಲೋಕದಲ್ಲಿ ಪ್ರಭಾವ ಬೀರುತ್ತಿದೆ ಎಂದು ಸುಲೇಮಾನ್ ಮಾಹಿತಿ ನೀಡಿದರು.
ಎಐ ಬಳಕೆಯಿಂದ ಒಂದಷ್ಟು ಸಮಸ್ಯೆಗಳು
ಇಂತಹ ವೈದ್ಯಕೀಯ ಪ್ರಯತ್ನಗಳಿಗೆ ಸಹಾಯ ಮಾಡಲು ಮೈಕ್ರೋಸಾಫ್ಟ್ ಕಂಪನಿಯು ಅನೇಕ ಗೂಗಲ್ AI ಸಂಶೋಧಕರನ್ನು ಆಕರ್ಷಿಸಿದಿದೆ. ತಂತ್ರಜ್ಞಾನ ಯುಗದಲ್ಲಿ ಉನ್ನತ AI ಬಳಕೆ ತೀವ್ರಗೊಳ್ಳುತ್ತಿದೆ. ಅಮೆರಿಕದ ಆರೋಗ್ಯ ರಕ್ಷಣೆ ರಂಗದಲ್ಲಿ ರೇಡಿಯಾಲಜಿಸ್ಟ್‌ಗಳು ಸ್ಕ್ಯಾನ್‌ಗಳನ್ನು ಅರ್ಥ ಮಾಡಿಕೊಳ್ಳಲು ಎಐ ಬಳಕೆ ಹೆಚ್ಚಿನ ಪ್ರಮಾಣದಲ್ಲಿದೆ. ಇತ್ತೀಚೆಗೆ ಬಹುಮಾದರಿ AI ಉಪಕರಣಗಳು ರೋಗದ ವಿರುದ್ಧ ಹೋರಾಡುವ ಪ್ರಮುಖ ಸಾಧನಗಳಾಗಿ ಕೆಲಸ ಮಾಡುತ್ತಿವೆ. ಇದೆಲ್ಲ ಲಾಭವಿರುದ್ಧ ಸಹ ಆರೋಗ್ಯ ರಕ್ಷಣೆ AI ಬಳಕೆಯಿಂದ ಒಂದಷ್ಟು ಸಮಸ್ಯೆಗಳು ತಲೆದೂರುತ್ತಿವೆ ಎಂಬುದನ್ನು ಮರೆಯಬಾರದು ಎಂದು ಅವರು ತಿಳಿಸಿದರು.












Click it and Unblock the Notifications