Artificial Intelligence: ಬೆಂಗಳೂರಿನಲ್ಲಿ ಎಐ ಲ್ಯಾಬ್ ಸ್ಥಾಪನೆಗೆ ನಿರ್ಧಾರ: ಹೂಡಿಕೆ ಎಷ್ಟು ಸಾವಿರ ಕೋಟಿ ಗೊತ್ತಾ?
AI Lab in Bengaluru: ಎಲ್ಲಾ ಕ್ಷೇತ್ರಗಳಿಗೂ ಎಐ ಲಗ್ಗೆ ಇಟ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ತಂತ್ರಜ್ಞಾನವನ್ನು ಸಾಮಾನ್ಯವಾಗಿ ಇದೀಗ ಸಣ್ಣಪುಟ್ಟ ಕಂಪನಿಗಳಿಂದ ಹಿಡಿದು ಐಪಿ-ಬಿಟಿಗಳಲ್ಲೂ ಅಳವಡಿಕೆ ಮಾಡಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಇದು ಪ್ರಸಿದ್ಧಿ ಪಡೆಸಿದೆ. ಇನ್ನೂ ಇದೀಗ ಕಿಂಡ್ರಿಲ್ ಕಂಪನಿಯು ಬೆಂಗಳೂರಿನಲ್ಲಿ ಎಐ ಲ್ಯಾಬ್ ಸ್ಥಾಪನೆ ಮಾಡಲು ಮುಂದಾಗಿದೆ. ಹಾಗಾದ್ರೆ ಎಷ್ಟು ಹೂಡಿಕೆ ಮಾಡಲಾಗಿದೆ ಹಾಗೂ ಉದ್ಧೇಶ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಎಐ ತಂತ್ರಜ್ಞಾನ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಮೂಲಕ ಪ್ರಸಿದ್ಧಿ ಪಡೆಯುತ್ತಿದೆ. ಅಲ್ಲದೆ, ಯುವಪೀಳಿಗೆಗೆ ಬೇಕಾಗಿರುವ ಪ್ರಮುಖ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಮಾರ್ಗಗಗಳನ್ನು ಸಹ ಸರಳಿಕರಣಗೊಳಿಸುತ್ತಿದೆ. ಇದರಿಂದ ಕೆಲಸ ವೇಗ ಪಡೆದುಕೊಳ್ಳುವುದಲ್ಲದೆ, ವಿಚಾರಗಳನ್ನು ಬೇಗ ತಿಳಿದುಕೊಳ್ಳಲು ತುಂಬಾ ಸಹಾಯಕವಾಗುತ್ತಿದೆ ಎನ್ನುವ ಮಾತುಗಳು ಕೂಡ ಜೋರಾಗಿ ಕೇಳಿಬರುತ್ತಿವೆ.

ವಿಶ್ವದಲ್ಲೇ ಅತಿದೊಡ್ಡ ಐಟಿ ಇನ್ಫ್ರಾಸ್ಟ್ರಕ್ಚರ್ ಸರ್ವಿಸ್ ಕಂಪನಿಗಳಲ್ಲಿ ಒಂದಾಗಿರುವ ಕಿಂಡ್ರಿಲ್ ಭಾರತದಲ್ಲಿ ಮುಂದಿನ ಮೂರು ವರ್ಷದಲ್ಲಿ ಸುಮಾರು 20,000 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾಗಿದೆ. ಮುಂಬರುವ ದಿನಗಳಲ್ಲಿ ಪ್ರತಿಭೆಗಳನ್ನು ಬೆಳೆಸುವುದರಿಂದ ಹಿಡಿದು ಎಐ ಲ್ಯಾಬ್ ಸ್ಥಾಪನೆವರೆಗೂ ವಿವಿಧ ಕಾರ್ಯಗಳನ್ನು ಕಿಂಡ್ರಿಲ್ ಹಾಕಿಕೊಂಡಿದೆ. ಇದರಲ್ಲಿ ಬೆಂಗಳೂರಿನಲ್ಲಿ ಎಐ ಇನ್ನೋವೆಶನ್ ಲ್ಯಾಬ್ ಸ್ಥಾಪನೆ ಯೋಜನೆ ಕೂಡ ಒಂದಾಗಿದೆ.
ಎಐ, ಐಟಿ ಪ್ರತಿಭೆಗಳ ಅಭಿವೃದ್ಧಿ, ಡಿಜಿಟಲ್ ಟ್ರೈನಿಂಗ್ ಇತ್ಯಾದಿ ವಿಚಾರಕ್ಕೆ ಸಂಬಂಧಪಟ್ಟಂತೆ ಭಾರತ ಸರ್ಕಾರಕ್ಕೆ ನೆರವು ಆಗಲೆಂದು ಕಿಂಡ್ರಿಲ್ ಸಂಸ್ಥೆ ಬೆಂಗಳೂರಿನಲ್ಲಿ ಎಐ ಇನ್ನೋವೇಶನ್ ಲ್ಯಾಬ್ ಸ್ಥಾಪನೆ ಮಾಡಲಿ ಯೋಜನೆ ರೂಪಿಸಿದೆ. ಎಐ ಶಕ್ತ ಕನ್ಸಲ್ಟಿಂಗ್ ಸರ್ವಿಸ್ ಬಲಗೊಳಿಸಲು ಈ ಲ್ಯಾಬ್ ಸಹಾಯಕ ಆಗಲಿದೆ ಎಂಬ ಉದ್ಧೇಶದಿಂದ ಕಿಂಡ್ರಿಲ್ ಈ ಕಾರ್ಯಕ್ಕೆ ಕೈಹಾಕಿದೆ ಎಂದು ತಿಳಿದುಬಂದಿದೆ.
ಕಿಂಡ್ರಿಲ್ ಸ್ಥಾಪನೆ ಮಾಡುವ ಈ ಲ್ಯಾಬ್ನಲ್ಲಿ ಡಾಟಾ ಸೈಂಟಿಸ್ಟ್ಗಳು, ಕನ್ಸಲ್ಟೆಂಟ್ಗಳು ಸೇರಿದಂತೆ ಹಲವರು ಇರಲಿದ್ದಾರೆ. ಬ್ರಿಟನ್, ಸಿಂಗಾಪುರದಲ್ಲೂ ಕಿಂಡ್ರಿಲ್ ಎಐ ಲ್ಯಾಬ್ಗಳನ್ನು ಹೊಂದಿದೆ. ಅದೇ ಮಾದರಿಯಲ್ಲೇ ಬೆಂಗಳೂರಿನಲ್ಲೂ ಎಐ ಲ್ಯಾಬ್ ಸ್ಥಾಪನೆಗೆ ಮುಂದಾಗಿದೆ. ಎಐ ಕೌಶಲ್ಯ, ಡಾಟಾ, ಕ್ಲೌಡ್, ಪ್ಲಾಟ್ಫಾರ್ಮ್ ಎಂಜಿನಿಯರಿಂಗ್ ಇತ್ಯಾದಿ ತಂತ್ರಜ್ಞಾನಗಳಲ್ಲಿ ಉದ್ಯೋಗಿಗಳಿಗೆ ತರಬೇತಿ ನೀಡಿ ಭವಿಷ್ಯದ ಅಗತ್ಯಗಳಿಗೆ ಸಿದ್ಧಗೊಳಿಸುವುದು ಎಐ ಲ್ಯಾಬ್ನ ಮುಖ್ಯ ಉದ್ದೇಶ ಆಗಿದೆ.
ಅಮೆರಿಕ ಮೂಲದ ಈ ಐಟಿ ಕಂಪನಿಯು ಭಾರತ ಸರ್ಕಾರದೊಂದಿಗೆ ವಿವಿಧ ಒಪ್ಪಂದ ಮತ್ತು ಸಹಭಾಗಿತ್ವ ಮಾಡಿಕೊಳ್ಳುತ್ತಿದೆ. ಆಡಳಿತದಲ್ಲಿ ಎಐ ನೆರವು ಪಡೆಯುವುದು, ಉದ್ಯಮ ನಿಯಮಗಳ ಸುಧಾರಣೆ ಸೇರಿದಂತೆ ಹಲವು ವಿಚಾರದಲ್ಲಿ ಸರ್ಕಾರಕ್ಕೆ ಹಾಗೂ ವಿವಿಧ ಇಲಾಖೆಗಳಿಗೆ ಕಿಂಡ್ರಿಲ್ ಸಲಹೆಗಳನ್ನು ನೀಡಲಿದೆ ಎನ್ನಲಾಗುತ್ತಿದೆ.
ಅಲ್ಲದೆ, ಈ ಕಂಪನಿಯು ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಭಾರತದಾದ್ಯಂತ ಸ್ಕಿಲ್ಲಿಂಗ್ ಪ್ರೋಗ್ರಾಮ್ ಹಮ್ಮಿಕೊಳ್ಳಲಿದೆ. ಕೆಂಡ್ರಿಲ್ ಫೌಂಡೇಶನ್ ಮೂಲಕ ಎರಡನೇ ಸ್ತರ ಮತ್ತು ಮೂರನೇ ಸ್ತರ ನಗರಗಳಲ್ಲಿ ಎರಡು ಲಕ್ಷ ಜನರಿಗೆ ಡಿಜಿಟಲ್ ಕೌಶಲ್ಯಗಳನ್ನು ಹೆಚ್ಚಳ ಮಾಡುವಂತಹ ತರಬೇತಿ ಒದಗಿಸಲಿದೆ ಎಂದು ತಿಳಿದುಬಂದಿದೆ. ಇನ್ನು ಎಐ ತಂತ್ರಜ್ಞಾನ ಬಂದಾಗಿನಿಂದ ಕೆಲಸ ವೇಗ ಪಡೆದುಕೊಳ್ಳುತ್ತಿದೆ. ಇದರಿದ ಸಮಯದ ಉಳಿತಾಯ ಆಗುತ್ತಿದ್ದು, ಉದ್ಯೋಗಿಗಳಿಗೆ ಒತ್ತಡ ಕೂಡ ಕಡಿಮೆಯಾಗುತ್ತಿದೆ.












Click it and Unblock the Notifications