ಗೂಗಲ್ ಮಾಸ್ಟರ್ ಪ್ಲ್ಯಾನ್: ಇನ್ಮುಂದೆ Gemini AI ಮೂಲಕ ಸಿಗಲಿದೆ ಧಮಾಕ!
Gemini AI: ಎಐ ಜಗತ್ತಿನಲ್ಲಿ ವೇಗವಾಗಿ ಓಡುತ್ತಿರುವ ಗೂಗಲ್ ಇದೀಗ ಮತ್ತೊಂದು ಮಹತ್ವದ ಬದಲಾವಣೆಗೆ ಮುಂದಾಗಿದೆ. ತನ್ನ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಒಂದಿಲ್ಲೊಂದು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಟೆಕ್ ದೈತ್ಯ ಎಂದೇ ಖ್ಯಾತಿ ಗಳಿಸಿರುವ ಗೂಗಲ್ ಇತ್ತೀಚಿನ ದಿನಗಳಲ್ಲಿ ಎಐಗೆ ಭರ್ಜರಿ ಆದ್ಯತೆ ಕೊಡುತ್ತಿದೆ. ಇದರ ಭಾಗವಾಗಿ ವಿಂಡ್‌ಸರ್ಫ್ ಸಹ-ಸಂಸ್ಥಾಪಕ ಮತ್ತು ಸಿಇಒ ವರುಣ್ ಮೋಹನ್ ಅವರೊಂದಿಗೆ ಗೂಗಲ್ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಇದು ಮುಂದಿನ ದಿನಗಳಲ್ಲಿ ಎಐ ಕ್ಷೇತ್ರದಲ್ಲಿ ಗೂಗಲ್ ಮಹತ್ವದ ಸಾಧನೆ ಮಾಡುವುದಕ್ಕೆ ಸಹಕಾರಿ ಆಗಲಿದೆ ಎಂದೇ ಹೇಳಲಾಗುತ್ತಿದೆ.
ಅನಾಲಿಟಿಕ್ಸ್ ಇಂಡಿಯಾ ಮ್ಯಾಗಜೀನ್ ವರದಿ ಮಾಡಿರುವ ಪ್ರಕಾರ, ಗೂಗಲ್ ಕೆಲವು ವಿಂಡ್‌ಸರ್ಫ್ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 2.4 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಗೂಗಲ್ ಒಪ್ಪಂದದ ಹೊರತಾಗಿಯೂ ವಿಂಡ್‌ಸರ್ಫ್ ತನ್ನ ತಂತ್ರಾಂಶವನ್ನು ಇನ್ನುಳಿದ ಕಂಪನಿಗಳೊಂದಿಗೆ ಹಂಚಿಕೊಳ್ಳುವುದಕ್ಕೆ ಅನುವು ಮಾಡಿಕೊಡಲಿದೆ ಎಂದು ಹೇಳಲಾಗಿದೆ. ಗೂಗಲ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೊದಲು, ವಿಂಡ್‌ಸರ್ಫ್ ಓಪನ್‌ಎಐ ಜೊತೆ ಅಂದಾಜು 3 ಬಿಲಿಯನ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸುತ್ತು ಎಂದು ವರದಿಯಾಗಿದೆ.

ಟೆಕ್ ದೈತ್ಯ ಗೂಗಲ್ ಎಐ ಕ್ಷೇತ್ರದಲ್ಲಿ ದಾಪುಗಾಲು ಇರಿಸುತ್ತಿದೆ. ಪ್ರಾರಂಭದಲ್ಲಿ ಎಐ ವಿಚಾರದಲ್ಲಿ ಗೂಗಲ್‌ಗೆ ಭಾರೀ ಹಿನ್ನಡೆಯಾಗಿತ್ತು. ಇದೇ ಕಾರಣಕ್ಕೆ ಗೂಗಲ್ ಸಾವಿರಾರು ಜನರನ್ನು ಕೆಲಸದಿಂದ ತೆಗೆದು ಹಾಕಿತ್ತು. ಇದೀಗ ಎಐ ಬಳಕೆಯಲ್ಲಿ ಅತ್ಯುನ್ನತ ಸಾಧನಗಳು ಹಾಗೂ ವಿಧಾನಗಳನ್ನು ಅಳವಡಿಸಿಕೊಳ್ಳುವುದಕ್ಕೆ ಗೂಗಲ್ ಮುಂದಾಗಿದೆ. ಇದು ಎಐ ಕ್ಷೇತ್ರದಲ್ಲಿನ ಪೈಪೋಟಿಯನ್ನು ತೋರಿಸುತ್ತದೆ ಅಂತಲೇ ಹೇಳಲಾಗುತ್ತಿದೆ. ಮೊದಲ ಮೊದಲು ಐಎ ಅನ್ನು ಗೂಗಲ್ ಲೈಟ್ ಆಗಿ ತೆಗೆದುಕೊಂಡಿತ್ತು. ಆದರೆ ಇದೀಗ ಗಂಭೀರವಾಗಿ ತೆಗೆದುಕೊಂಡಿದ್ದು. ಕೋಟ್ಯಾಂತರ ರೂಪಾಯಿ ಡಾಲರ್ ಖರ್ಚು ಮಾಡುವುದಕ್ಕೆ ಮುಂದಾಗಿದೆ.
ಗೂಗಲ್‌ನ ಪ್ರಮುಖ ವಿಂಡ್‌ಸರ್ಫ್ ಕಂಪನಿಯೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿರುವುದು AI-ನೆರವಿನ ಡೆವಲಪರ್ ಸಾಧನಗಳು ಹಾಗೂ ಏಜೆಂಟ್ ಕೋಡಿಂಗ್ ಕ್ಷೇತ್ರದಲ್ಲಿ ಟೆಕ್ ದೈತ್ಯ ಕಂಪನಿಗಳ ನಡುವೆ ನಡೆಯುತ್ತಿರುವ ಪೈಪೋಟಿಯನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ. ಮೋಹನ್ ಹಾಗೂ ವಿಂಡ್‌ಸರ್ಫ್ ಸಹ-ಸಂಸ್ಥಾಪಕ ಡೌಗ್ಲಾಸ್ ಚೆನ್ ಘಟಾನುಘಟಿ ಪ್ರತಿಭೆಗಳು ಗೂಗಲ್‌ನ AI ವಿಭಾಗವಾದ ಡೀಪ್‌ಮೈಂಡ್ ಕ್ಷೇತ್ರಕ್ಕೆ ಕೊಡುಗೆ ನೀಡಲಿದ್ದಾರೆ. ಗೂಗಲ್ ಜೆಮಿನಿ ಪ್ಲಾಟ್‌ಫಾರ್ಮ್‌ಗೆ ಇವರು ಕೊಡುಗೆ ನೀಡಲಿದ್ದಾರೆ. ಗೂಗಲ್ ಎಐ ಜೆಮಿನಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು ಇದು ಸಾಕಷ್ಟು ಪ್ರಗತಿ ಕಂಡಿದೆ.
ಗೂಗಲ್ ಜೆಮಿನಿ ಎಐ: ಗೂಗಲ್ ಜೆಮಿನಿ ಸಾಕಷ್ಟು ಅಭಿವೃದ್ಧಿಯಾಗಿದೆ. ಇದೀಗ ಗೂಗಲ್ ಜೆಮಿನಿಯಲ್ಲಿ ನೀವು ವಾಯ್ಸ್ ಟೂಲ್ ಸಹ ಬಳಕೆ ಮಾಡಬಹುದು. ಸದ್ಯಕ್ಕೆ ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಈ ಸೇವೆ ಲಭ್ಯವಿಲ್ಲ. ಇಂಗ್ಲಿಷ್‌ನಲ್ಲಿ ಮಾತ್ರ ಈ ಸೇವೆ ಇದೆ. ಮುಂದಿನ ದಿನಗಳಲ್ಲಿ ಕನ್ನಡ ಭಾಷೆಯಲ್ಲೂ ಎಐ ಬರುವ ಸಾಧ್ಯತೆ ಇದೆ. ಈಗಾಗಲೇ ಪಠ್ಯ ರೂಪದಲ್ಲಿ ಎಐ ಜೆಮಿನಿ ಸೌಲಭ್ಯ ಲಭ್ಯವಿದೆ. ಕನ್ನಡದಲ್ಲಿ ನಾವು ಕೇಳುವ ಪ್ರಶ್ನೆಗಳಿಗೆ ಎಐ ಉತ್ತರಿಸುತ್ತದೆ. ಆದರೆ ಮಾತನಾಡಿದರೆ ಅದಕ್ಕೆ ಉತ್ತರಿಸುವುದಿಲ್ಲ. ಆದರೆ ಇಂಗ್ಲೀಷ್‌ನಲ್ಲಿ ಈ ಎಲ್ಲಾ ಸೇವೆಗಳೂ ಉಚಿತವಾಗಿ ಲಭ್ಯವಿದೆ.












Click it and Unblock the Notifications