AI ಟೆಕ್ ಉದ್ಯೋಗಗಳನ್ನು ಕಸಿದುಕೊಳ್ಳುತ್ತಾ..? ಜೆನ್ಜಿ ಜನರು ಅದೃಷ್ಟಶಾಲಿಗಳು: ಓಪನ್‌ಎಐ CEO ಸ್ಯಾಮ್

ಬೆಂಗಳೂರು, ಆಗಸ್ಟ್ 12: ಪ್ರತಿ ರಂಗದಲ್ಲಿ ಕೃತಕ ಬುದ್ಧಿಮತ್ತೆ (AI) ಕಾಲಿಡುತ್ತಿದೆ. ದಿನದಿಂದ ದಿನಕ್ಕೆ ಅದರ ಪ್ರಭಾವ, ಬಳಕೆ ಹೆಚ್ಚಾಗುತ್ತಿದೆ. ಈ ತಂತ್ರಜ್ಞಾನ ಮಾನವ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದೆ ಎಂಬ ಆತಂಕಗಳ ಎದುರಾಗಿದೆ. ಈ ಮಧ್ಯೆ ಓಪನ್‌ಎಐ ಸಿಇಒ ಸ್ಯಾಮ್ ಅಲ್ಟ್‌ಮನ್ ಜೆನ್ಜಿ ಜನರೆಂದು ಕರೆಯಲ್ಪಡುವ ಜನರೇಶನ್ (Gen Z) ಇಂದಿನ ನವಪೀಳಿಗೆ ಇವರು ಇತಿಹಾಸದಲ್ಲೇ ಅದೃಷ್ಟಶಾಲಿ ಮಕ್ಕಳು ಎಂದು ಅವರು ಕರೆದಿದ್ದಾರೆ.

ಫಾರ್ಚ್ಯೂನ್ ವರದಿ ಪ್ರಕಾರ, ಕೆಲವು ವರ್ಗದ ಉದ್ಯೋಗಗಳು ಸಂಪೂರ್ಣವಾಗಿ ಮಾಯವಾಗಲಿವೆ ಅಂತಲೂ ಅವರು ತಿಳಿಸಿದ್ದಾರೆ. ನಾನು ಇತಿಹಾಸದಲ್ಲೇ ಅತ್ಯಂತ ಅದೃಷ್ಟಶಾಲಿ ಮಕ್ಕಳಲ್ಲಿ ಒಬ್ಬನಾಗಿದ್ದೇನೆ ಎಂದು ಅವರು ಅಭಿಪ್ರಾಯ ಹೊರ ಹಾಕಿದ್ದರೆ. ಎಐ ಉದ್ಯೋಗ ಕಳೆದುಕೊಳ್ಳುವ ಭೀತಿಗೆ ಕಾರಣವಾಗುತ್ತದೆಯೇ ಎಂದು ಕೇಳಿದಾಗ, ಇದು ಸದಾ ನಡೆಯುತ್ತಲೇ ಇರುತ್ತದೆ. ಯುವಕರು ಈ ಬದಲಾವಣೆಗೆ ಉತ್ತಮವಾಗಿ ಹೊಂದಿಕೊಳ್ಳುತ್ತಾರೆ. ಎಐ ನಿಂದ ನನಗೆ ಕಾಡುತ್ತಿರುವ ಚಿಂತೆ ಎಂದರೆ ಅದು 22 ವರ್ಷದವರ ಬಗ್ಗೆ ಅಲ್ಲ. 62 ವರ್ಷದವರು ಹಾಗೂ ಎಐ ತರಬೇತಿ ಪಡೆಯಲು ಮುಂದಾಗದವರ ಬಗ್ಗೆ ಎಂದು ಅವರು ತಿಳಿಸಿದ್ದಾರೆ.

Gen Z the Luckiest in History Thanks to AI OpenAI CEO Sam Altman

ಎಐ ತಂತ್ರಜ್ಞಾನ ಈ ಕಾಲವು ಯುವ ಸೃಜನಶೀಲರಿಗೆ ತಮ್ಮ ಕಲ್ಪನೆಗಳ ಹುಟ್ಟಿಗೆ ತ್ವರಿತವಾಗಿ ಸಹಾಯ ಮಾಡುತ್ತದೆ.

ಅಲ್ಟ್‌ಮನ್ ಭವಿಷ್ಯದ ಬಗ್ಗೆ ಆಶಾವಾದಿ ಇದ್ದರೂ, ಗೂಗಲ್‌ನ ಮಾಜಿ ಉನ್ನತ ಅಧಿಕಾರಿ ಮೊ ಗೌಡಾಟ್ ಎಐ 2027ರೊಳಗೆ ವೈಟ್-ಕಾಲರ್ ಉದ್ಯೋಗಗಳನ್ನು ಅಳಿಸಿ ಮಧ್ಯಮ ವರ್ಗವನ್ನೇ ನಾಶಮಾಡಬಹುದು ಎಂದು ಎಚ್ಚರಿಸಿದ್ದಾರೆ.

ಮುಂದಿನ ಒಂದೂವರೆಗೆ (15 ವರ್ಷ) ನರಕದಂತಿರುತ್ತದೆ. ನಂತರವೇ ಸ್ವರ್ಗ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಎಐ ಮಾನವರ ಜೀವನೋಪಾಯ ಮತ್ತು ಅಸ್ತಿತ್ವವನ್ನು ಕಸಿದುಕೊಂಡು 'ಸಾಮಾಜಿಕ ಅಶಾಂತಿ' ಉಂಟುಮಾಡಲಿದೆ. ಎಜಿಐ (AGI) ಮನುಷ್ಯರಿಗಿಂತ ಎಲ್ಲ ಕ್ಷೇತ್ರಗಳಲ್ಲಿ ಉತ್ತಮವಾಗಲಿದೆ, ನಾವು ಊಹಿಸದ ವಿಷಯದಲ್ಲೇ ಎಐ ನಮ್ಮನ್ನು ಬದಲಾಯಿಸು ಬಿಡುತ್ತದೆ ಎಂದು ಸಿಇಒ ಹುದ್ದೆ ಕುರಿತು ಅವರು ಮಾತನಾಡಿದರು.

ಇದಕ್ಕೂ ಮೊದಲು, ಎಐ 'ಗಾಡ್‌ಫಾದರ್' ಎಂದೇ ಪ್ರಸಿದ್ಧರಾದ ಜಿಫ್ರಿ ಹಿಂಟನ್ ಅವರು, ಎಐ ತಂತ್ರಜ್ಞಾನವು ತನ್ನದೇ ಭಾಷೆ ಅಭಿವೃದ್ಧಿಪಡಿಸಬಹುದು. ಇದರಿಂದ ಮನುಷ್ಯರು ಯಂತ್ರಗಳನ್ನು ಹತ್ತಿಕ್ಕುವುದು ಅಸಾಧ್ಯವಾಗುತ್ತದೆ ಎಂದು ಎಚ್ಚರಿಸಿದ್ದರು. ಇದೆಲ್ಲದರ ಮಧ್ಯ ಈ ಟೆಕ್ ತಜ್ಞರು ಎಐನಿಂದ ಉದ್ಯೋಗ ನಷ್ಟವಾಗುವುದನ್ನು ಒಪ್ಪಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+