Artificial Intelligence: 20,00,000 ಆಸೆಗೆ 21,000 ರೂಪಾಯಿ ಕಳೆದುಕೊಳ್ಳಬೇಡಿ: ಏನಿದು?
Artificial Intelligence: ವಂಚನೆ ಮೂಲಕ ಮುಗ್ದ ಜನರ ಜೀವನದ ಜೊತೆ ಆಟ ಆಡಿ ಅವರಿಂದ ಹಣ ಪೀಕುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲಿರುತ್ತವೆ. ಕಳ್ಳ-ಕಾಕರಿಗೆ ಲಾಠಿ ರುಚಿ ತೋರಿಸಿ ಪೊಲೀಸರು ಬುದ್ಧಿವಾದ ಹೇಳಿದರೂ ಸಹ ಕೆಲವರು ಕ್ಯಾರೆ ಅನ್ನದೆ, ವಂಚನೆಯನ್ನೇ ಬಂಡವಾಳ ಮಾಡಿಕೊಂಡುಬಿಟ್ಟಿದ್ದಾರೆ. ಇದೀಗ ವಾಟ್ಸಾಪ್ಗಳಿಗೆ ಕ್ವಾಂಟಂ ಎಐ ಪ್ರಾಜೆಕ್ಟ್ ಬಗ್ಗೆ ಸಂದೇಶದ ಮೂಲಕ ತಮ್ಮ ಆಟ ಮುಂದುವರೆಸಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಸಂದೇಶ ಕಳುಹಿಸಿ ಹಣದ ಆಸೆ ತೋರಿಸಿ ಒಟಿಪಿ ಕಳುಹಿಸಿಕೊಂಡು ಮುಗ್ದ ಜನರ ಬಳಿ ಹಣ ಪೀಕಿರುವ ಘಟನೆಗಳು ಬೆಳಕಿಗೆ ಬಂದಿವೆ. ಅಂತಹ ಸ್ಕ್ಯಾಮರ್‌ಗಳಿಗೆ ತಕ್ಕ ಶಿಕ್ಷೆಯನ್ನು ಕೊಡುವ ಮೂಲಕ ಹಣ ವಾಪಾಸ್ ಕೊಡಿಸುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಆದರೂ ಕೂಡ ಇಂತಹ ಪ್ರಕರಣಗಳಿಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಬದಲಾಗಿ ಅವರು ಇದೀಗ ಬೇರೆಯದ್ದೇ ದಾರಿ ಹಿಡಿದಿರುವ ಬಗ್ಗೆ ವಿಚಾರ ಬಯಲಿಗೆ ಬಂದಿದೆ.

ಇದೀಗ ಹಲವು ಜನರ ವಾಟ್ಸಾಪ್ಗಳಿಗೆ ಕ್ವಾಂಟಂ ಎಐ ಪ್ರಾಜೆಕ್ಟ್ ಕುರಿತ ಸಂದೇಶಗಳು ಹಬ್ಬುತ್ತಿವೆ. ಇದರಲ್ಲಿ ಕೇವಲ 21,000 ರೂಪಾಯಿ ಹೂಡಿಕೆ ಮಾಡಿ ತಿಂಗಳಿಗೆ 20,00,000 ಹಣ ಗಳಿಸಬಹುದು ಎಂದು ಈ ಸಂದೇಶ ಕಳುಹಿಸಿ ಆಸೆ ಹುಟ್ಟಿಸುತ್ತಿದ್ದಾರೆ. ಆದರೆ, ಇದು ಎಂಥವರಿಗೂ ಫೇಕ್ ಅಂತಲೇ ಅನಿಸುತ್ತದೆ. ಪಿಐಬಿ ಫ್ಯಾಕ್ಟ್ ಚೆಕ್ ತಂಡ ಸಹ ಈ ಸಂದೇಶದ ಬಗ್ಗೆ ಅಲರ್ಟ್ ನೀಡಿದೆ. ಜನರು ಇದನ್ನು ನಂಬಬಾರದು ಎಂದು ಮನವಿ ಮಾಡಿದೆ.
ಇನ್ಫೋಸಿನ್ ಸುಧಾಮೂರ್ತಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವೈಯಕ್ತಿಕವಾಗಿ ಕ್ವಾಂಟಂ ಎಐ ಪ್ರಾಜೆಕ್ಟ್ ಅಭಿವೃದ್ಧಿಪಡಿಸಿದ್ದಾರೆ ಅಂತಲೂ ಇದರಲ್ಲಿ ಬರೆಯಲಿದೆ. ಆರಂಭಿಕ 21,000 ರೂಪಾಯಿ ಹಣ ಹೂಡಿಕೆ ಮಾಡಿ ತಿಂಗಳಿಗೆ 20,00,000 ರೂಪಾಯಿ ತಮ್ಮದಾಗಿಸಿಕೊಳ್ಳಬಹುದು. ಇನ್ನೆರಡು ದಿನಗಳವರೆಗೆ ನೊಂದಣಿ ಲಭ್ಯವಿರುತ್ತದೆ ಎನ್ನುವುದನ್ನು ಕೂಡ ಇದರಲ್ಲಿ ತಿಳಿಸಲಾಗಿದೆ.
ಆದರೆ ಅಸಲಿ ಸತ್ಯ ಬೇರೆಯದ್ದೇ ಇದೆ. ನಿರ್ಮಲಾ ಸೀತಾರಾಮನ್ ಹಾಗೂ ಸುಧಾಮೂರ್ತಿ ಕೈ ಕುಲುಕುವುದರ ಫೇಕ್ ಚಿತ್ರ ಸೃಷ್ಟಿಸಿ ಸೇರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಜನರು ಇದಕ್ಕೆ ಬಲಿ ಆಗಬಾರದು ಎಂದು ಜಾಗೃತಿ ಮೂಡಿಸಲಾಗಿದೆ. ಪಿಐಬಿ ಫ್ಯಾಕ್ಟ್ ಚೆಕ್ನ ಟ್ವಿಟರ್ ಅಕೌಂಟ್‌ನಲ್ಲಿ ಇದು ನಕಲಿ ಎಂದು ಸ್ಪಷ್ಟಪಡಿಸಲಾಗಿದೆ. ಇದರಲ್ಲಿ ಬಳಸಲಾಗಿರುವ ಚಿತ್ರವನ್ನು ಎಐನಿಂದ ಜನರೇಟ್ ಮಾಡಲಾಗಿದೆ.
ಒಂದು ವೇಳೆ ನಿಮ್ಮ ಫೋನ್‌ಗಳಿಗೆ ಈ ರೀತಿಯಾಗಿ ಏನಾದರೂ ಸಂದೇಶ ಬಂದರೆ, ಹಣ ಆಸೆಗೆ ಅದರ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ವೈಯಕ್ತಿಯ ದತ್ತಾಂಶದ ಜೊತೆಗೆ ಹಣವನ್ನು ಕೂಡ ಕಳಡದುಕೊಳ್ಳುತ್ತೀರಿ ಎಂದು ಜಾಗೃತಿ ಮೂಡಿಸಲಾಗಿದೆ. ಇಂತಹ ಘಟನೆಗಳು ಬೆಳಕಿಗೆ ಬಮದಿರುವುದು ಇದೇ ಮೊದಲೇನಲ್ಲ. ಮೊದಲಿನಿಂದಲೂ ಸಹ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕೊನೆಗೆ ಇಂತಹ ಕೆಲಸ ಮಾಡಿರುವ ಕಳ್ಳ-ಕಾಕರು ಮೀನ್ಸ್ ಸ್ಕ್ಯಾಮರ್ಸ್‌ಗಳಿಗೆ ಪೊಲೀಸರು ಲಾಠಿ ಮೂಲಕ ಪಾಠ ಕಲಿಸಿರುವ ಘಟನೆಗಳು ನಡೆದಿವೆ. ಆದರೂ ಜನರು ಎಚ್ಚರಿಕೆಯಿಂದ ಇರಬೇಕಾಗುತ್ತದೆ.












Click it and Unblock the Notifications