Artificial Intelligence: ಎಐ ಇಂಜಿನಿಯರ್ ಆದ್ರೆ ಮಾಸಿಕ ಸಂಬಳ ಎಷ್ಟು ಗೊತ್ತಾ?
AI Engineer: ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಕ್ರಾಂತಿಯೇ ಆಗುತ್ತಿದೆ. ಅದರಲ್ಲೂ ವಿಶೇಷವಾಗಿ ಎಐ ಬಂದಾಗಿನಿಂದ.. ಇದು ಎಲ್ಲಾ ಎಲ್ಲಾ ಕ್ಷೇತ್ರಗಳಿಗೂ ಕಾಲಿಟ್ಟಾಗಿನಿಂದ ತುಂಬಾ ಬದಲಾವಣೆಗಳಾಗಿವೆ. ಚಿಕ್ಕ ಕಂಪನಿಗಳಿಂದ ಹಿಡಿದು ದೊಡ್ಡ ದೊಡ್ಡ ಐಟಿ ಕಂಪನಿಗಳಲ್ಲಿ ಇದನ್ನು ಅಳವಡಿಕೆ ಮಾಡಿಕೊಂಡಿವೆ. ಇನ್ನು ಇದೀಗ ಎಐ ಇಂಜಿನಿಯರಿಂಗ್ ಆಗಲು ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕೆನ್ನುವ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ.
ಇದೀಗ ಎಲ್ಲಿ ನೋಡಿದರೂ ಎಐನದ್ದೇ ಸದ್ದು ಜೋರಾಗಿದೆ. ಕೆಲಸ ವೇಗ ಪಡೆದುಕೊಳ್ಳಲಿ ಎನ್ನುವ ಉದ್ದೇಶದಿಂದ ಈ ತಂತ್ರಜ್ಞಾನವನ್ನು ಬಹುತೇಕ ಎಲ್ಲಾ ಐಟಿ ಕಂಪನಿಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಈ ಬಗ್ಗೆ ಗೊತ್ತಿಲ್ಲದಿದ್ದರೆ, ಅಂತಹವರನ್ನು ಕೆಲಸದಿಂದ ವಜಾಗೊಳಿಸುವ ಕಾರ್ಯವೂ ನಡೆಯುತ್ತಿದೆ. ಈಗಾಗಲೇ ದೈತ್ಯ ಕಂಪನಿಗಳು ಇದೇ ಕಾರಣ ನೀಡಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಿರುವ ಉದಾಹರಣೆಗಳಿವೆ. ಈ ನಡುವೆಯೇ ಗೂಗಲ್‌ನಲ್ಲಿ ಎಐ ಇಂಜಿನಿಯರಿಂಗ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಸ್ಮಾರ್ಟ್ ಹೋಮ್ ಸಾಧನಗಳವರೆಗೆ ಎಲ್ಲವೂ ಎಐ ಅಡಿಯಲ್ಲಿ ಬಂದಿದೆ. ಇದು ಕೆಲಸವನ್ನು ಸುಲಭ ಮಾಡುವುದಲ್ಲದೆ, ಹೊಸ ವೃತ್ತಿ ಮಾರ್ಗಗಳನ್ನು ಸೃಷ್ಟಿಸುತ್ತಿದೆ. ಮತ್ತೊಂದೆಡೆ ಇದೀಗ ಎಐ ಎಂಜಿನಿಯರ್ ಆಗುವುದು ಹೇಗೆ ಹಾಗೂ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕೆನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ.
ಐಐಐಟಿ ಬೆಂಗಳೂರು, ಐಐಟಿ ಮುಂಬೈಗಳಲ್ಲಿ ಮೆಷಿನ್ ಲರ್ನಿಂಗ್ ಮತ್ತು ಎಐನಲ್ಲಿ ಪಿಜಿ ಕಾರ್ಯಕ್ರಮಗಳನ್ನು ನೀಡಲಾಗುತ್ತದೆ. ನೀವು ಐಐಐಟಿ ಹೈದರಾಬಾದ್‌ನಿಂದ ಫೌಂಡೇಶನ್ ಆಫ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ಕೋರ್ಸ್ ಮಾಡಬಹುದು. ಗುರ್ಗಾಂವ್‌ನ ಗ್ರೇಟ್ ಲರ್ನಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯಲ್ಲಿ ಸ್ನಾತಕೋತ್ತರ ಕಾರ್ಯಕ್ರಮವನ್ನ ನೀಡಲಾಗುತ್ತದೆ.
ಎಐ ಕೋರ್ಸ್‌ಗೆ ಕಂಪ್ಯೂಟರ್ ವಿಜ್ಞಾನ ಮತ್ತು ಗಣಿತದ ಜ್ಞಾನ ಇರಬೇಕು. ಎಂಜಿನಿಯರಿಂಗ್ ಬಳಿಕ ವೃತ್ತಿಜೀವನವನ್ನು ಪ್ರಾರಂಭ ಮಾಡಬಹುದು. ಪದವಿ ಕಂಪ್ಯೂಟರ್ ವಿಜ್ಞಾನ, ಗಣಿತ, ಎಲೆಕ್ಟ್ರಾನಿಕ್ಸ್, ಸಾಫ್ಟ್‌ವೇರ್ ತಂತ್ರಜ್ಞಾನದಲ್ಲಿ ಇರಬೇಕು. ಕೆಲವು ಪ್ರವೇಶ ಪರೀಕ್ಷೆಗಳ ಬಳಿಕ ಪ್ರವೇಶ ನೀಡಲಾಗುತ್ತದೆ.
ವರದಿಗಳ ಪ್ರಕಾರ, ಕೃತಕ ಬುದ್ಧಿಮತ್ತೆಯಲ್ಲಿ ಉದ್ಯೋಗ ಪಡೆಯುವವರ ಆರಂಭಿಕವಾಗಿ ಮಾಸಿಕ ಸಂಬಳ ತಿಂಗಳಿಗೆ 50-60,000 ರೂಪಾಯಿಗಳಿಂದ 1,00,000 ರೂಪಾಯಿಗಳವರೆಗೆ ಇರಬಹುದು. ಬೆಂಗಳೂರಿನಲ್ಲಿ ಎಐ ವೃತ್ತಿಪರರಿಗೆ ಬೇಡಿಕೆ ಹೆಚ್ಚಿದೆ. ಅಲ್ಲದೆ, ನವದೆಹಲಿ, ಮುಂಬೈ ಹಾಗೂ ಹೈದರಾಬಾದ್‌ಗಳಲ್ಲಿಯೂ ಉತ್ತಮ ಅವಕಾಶ ಇದ್ದು, ಇಲ್ಲಿ ವರ್ಷಕ್ಕೆ 1O,OO,OOO-20,00,000 ರೂಪಾಯಿಗಳ ಪ್ಯಾಕೇಜ್ ಪಡೆದುಕೊಳ್ಳಬಹುದಾಗಿದೆ. ಎಐ ಈಗಾಗಲೇ ಬಹುತೇಕ ಕ್ಷೇತ್ರಗಳಿಗೆ ಕಾಲಿಟ್ಟಿದ್ದು, ತಜ್ಞಾರ ಪ್ರಕಾರ, ಇದು ದೊಟ್ಟ ಮಟ್ಟದ ಉದ್ಯೋಗ ಸೃಷ್ಟಿ ಹಾಗೂ ಕೆಲಸದ ವೇಗ ಹೆಚ್ಚಳ ಸೇರಿದಂತೆ ಹಲವು ಅವಕಾಶಗಳನ್ನು ಕಲ್ಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.












Click it and Unblock the Notifications