AI ವೈದ್ಯರನ್ನು ಬದಲಿಸಬಹುದು, ದಾದಿಯರನ್ನಲ್ಲ: ಗೂಗಲ್ ಡೀಪ್ ಮೈಂಡ್ ಸಿಇಒ
Artificial Intelligence: ಎಲ್ಲ ರಂಗಗಳಲ್ಲಿಯು Artificial Intelligence (ಕೃತಕ ಬುದ್ಧಿಮತ್ತೆ) ದಾಪುಗಾಲಿಟ್ಟಿದೆ. ಒಂದೊಂದೆ ವಲಯದಲ್ಲಿ ತನ್ನ ಪ್ರಭಾವ ಬೀರುತ್ತಿದೆ. ಅದೇ ರೀತಿ ವೈದ್ಯಕೀಯ ಲೋಕಕ್ಕೆ ಸಹಾರವನ್ನೂ ಒದಗಿಸಬಲ್ಲ ಎಐ ನಿಂದಲೇ ಇಲ್ಲಿನ ಅನೇಕ ವೈದ್ಯರಿಗೆ ಕೆಲಸ ಇಲ್ಲವಾಗಬಹುದು ಎಂದು Google DeepMind CEO ಡೆಮಿಸ್ ಹಸ್ಸಾಬಿಸ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಎಐ ಏನೆಲ್ಲ ಮಾಡುತ್ತದೆ ಎಂಬುದಕ್ಕೆ ಮಿತಿಗಳಿವೆ. ತಂತ್ರಜ್ಞಾನವು ಒಂದು ದಿನ ವೈದ್ಯರು ಪ್ರಸ್ತುತ ನಿರ್ವಹಿಸುವ ಅನೇಕ ಕಾರ್ಯಗಳನ್ನು ನಿರ್ವಹಿಸಬಹುದು. ಹೀಗಿದ್ದರೂ ಸಹಿತ ವೈದ್ಯಕೀಯ ಕ್ಷೇತ್ರದಲ್ಲಿ ಮಾನವ ಸಂಪರ್ಕ, ಸಹಾನುಭೂತಿ ಮತ್ತು ಭಾವನಾತ್ಮಕತೆ ಅವಲಂಬಿಸುವ, ಹಲವು ಡೇಟಾ, ಕಾರ್ಯಗಳ ವಿಧಾನ ಮೀರಿ ಸ್ಪಂದಿಸುವ ದಾದಿಯರನ್ನು ಎಐನಿಂದ ಬದಲಿಸಲಾಗದು ಎಂದು ಅವರು ಪ್ರತಿಪಾದಿಸಿದ್ದಾರೆ.

ವೈದ್ಯಕೀಯ ರಂಗದಲ್ಲಿ ಇತ್ತೀಚೆಗೆ AI ಬಳಕೆ ಹೆಚ್ಚಾಗುತ್ತಿದೆ. ಮುಂದಿನ ಒಂದು ದಶಕದ ಒಳಗಾಗಿ ಅನೇಕ ಬದಲಾವಣೆಗಳೂ ಈ ರಂಗದಲ್ಲಿ ಆಗಲಿವೆ ಎಂದು ಹಸ್ಸಾಬಿಸ್ ಭವಿಷ್ಯ ನುಡಿದಿದ್ದಾರೆ. AI ತಂತ್ರಜ್ಞಾನ ಈಗಾಗಲೇ ವೈದ್ಯಕೀಯ ಸೇವೆಯ ಭಾಗವೇ ಆಗಿವೆ. ಕಾಯಿಲೆ ಪತ್ತೆಗೆ, ಚಿಕಿತ್ಸೆ ಸೇರಿದಂತೆ ಅನೇಕ ಕಾರ್ಯಗಳಲ್ಲಿ ತಂತ್ರಜ್ಞಾನ ಬಳಕೆ ಆಗುತ್ತಿದೆ. ಉದಹಾರಣೆಗೆ X- ಕಿರಣಗಳು, MRI ಸ್ಕ್ಯಾನ್, CT ಸ್ಕ್ಯಾನ್, ಪ್ರಯೋಗಾಲದಲ್ಲಿ ನಡೆಸುವ ಇತರ ಪರೀಕ್ಷೆಗಳಲ್ಲಿ ತಂತ್ರಜ್ಞಾನ ಜಾಗ ಪಡೆದು ವರ್ಷಗಳು ಕಳದಿವೆ.
ಈ AI ಶೀಘ್ರವೇ ವೈದ್ಯರಿಗೆ ಸಮಾನವಾಗಿ ಈ ವಲಯದಲ್ಲಿ ಪಾಲುದಾರಿಕೆ ಹೊಂದಬಹುದು. ರೋಗ ಪತ್ತೆ, ರೋಗನಿರ್ಣಯದ ಜವಾಬ್ದಾರಿಗಳನ್ನೂ ನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿವೆ. ಆದರೆ ವೈದ್ಯರ ಕೆಲಸ ಮಾಡಬಲ್ಲ ಈ ಎಐಗಳು ಎಂದಿಗೂ ದಾದಿಯರಂತೆ ಸೇವೆ ನೀಡಲು ಆಗಲ್ಲ. ಏಕೆಂದರೆ ದಾದಿಯರು ವೈದ್ಯಕೀಯ ಸೂಚನೆ ಅನುಸರಿಸುವ ಜೊತೆಗೆ ರೋಗಿಗಳ ಮೇಲ್ವಿಚಾರಣೆ ಮಾಡುತ್ತಿರುತ್ತಾರೆ. ಹೀಗಾಗಿ ಕೃತಕ ಬುದ್ಧಿಮತ್ತೆ ಎಂದಿ ದಾದಿಯರ ಕೆಲಸ ಕಸಿಕೊಳ್ಳುವುದು ಅಸಾಧ್ಯ ಎಂದು ಅವರು ವಿವರಿಸಿದ್ದಾರೆ.












Click it and Unblock the Notifications