ಮಂಗಳೂರಿನ ಈ ಆಸ್ಪತ್ರೆಯಲ್ಲಿ AI ತಂತ್ರಜ್ಞಾನ ಅಳವಡಿಕೆ: ಪ್ರಯೋಜನೆಗಳೇನು?
Artificial intelligence: ಎಐ ತಂತ್ರಜ್ಞಾನ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಲಿದೆ. ಇದು ಈಗಾಗಲೇ ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ಕಾಲಿಟ್ಟಿದೆ. ಇದರಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆ ಕ್ರಾಂತಿ ಆಗುತ್ತಿದೆ. ಇನ್ನೂ ಇದೀಗ ಮಂಗಳೂರು ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಎಐ ಆಧಾರಿತ ತಂತ್ರಜ್ಞಾನವನ್ನು ಅಳವಡಿಕೆ ಮಾಡಲಾಗಿದೆ. ಹಾಗಾದ್ರೆ, ಇದು ಹೇಗೆ ಕಾರ್ಯನಿರ್ವಹಿಸಲಿದೆ ಹಾಗೂ ಪ್ರಯೋಜನೆಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಎಐ ಎಂಟ್ರಿ ಕೊಟ್ಟಾಗಿನಿಂದ ದೊಡ್ಡ ಮಟ್ಟದ ಬದಲಾವಣೆಗಳು ಆಗುತ್ತಲಿವೆ. ಬಹುತೇಕ ಕಂಪನಿಗಳಲ್ಲಿ ಇದನ್ನು ಅಳವಡಿಕೆ ಮಾಡಿಕೊಂಡಿವೆ. ಕೆಲಸದ ವೇಗ ಹೆಚ್ಚಳ, ಸಮಯ ಉಳಿತಾಯ ಸೇರಿದಂತೆ ಹಲವು ಪ್ರಯೋಜನಾಗಳ ಉದ್ದೇಶದಿಣದ ಇದನ್ನು ಅನುಸರಿಸುತ್ತಿವೆ. ಮತ್ತೊಂದೆಡೆ, ಪ್ರತಿಷ್ಠಿತ ಕಂಪನಿಗಳು ಇದೇ ಉದ್ದೇಶ ಇಟ್ಟುಕೊಂಡು ಉದ್ಯೋಗಿಗಳನ್ನು ವಜಾಗೊಳಿಸಿದ ಉದಾಹರಣೆಳಿವೆ.

ಇನ್ನು ಇದೀಗ ಡೋಜಿ ಎಐ ಆಧಾರಿತ ಸಂಪರ್ಕ ರಹಿತ ಮತ್ತು ರೋಗಿಗಳ ಮೇಲ್ವಿಚಾರಣೆ, ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆ ಹೊಂದಿದ ಅತ್ಯಾಧುನಿಕ ವ್ಯವಸ್ಥೆಯನ್ನು ಮಂಗಳೂರು ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಳವಡಿಕೆ ಮಾಡಲಾಗಿದೆ. ಈ ಬಗ್ಗೆ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಮಾಹಿತಿ ನೀಡಿದ್ದಾರೆ ಅಂತಾ ವರದಿಯಾಗಿದೆ.
"ಎ.ಜೆ.ಆಸ್ಪತ್ರೆಯಲ್ಲಿ ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಕೆ ಮಾಡುತ್ತಿದ್ದೇವೆ. ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಇದು ತುಂಬಾ ಸಹಕಾರಿಯಾಗಲಿದೆ. ಕೋವಿಡ್ ಸಮಯದಲ್ಲೇ ಪರೀಕ್ಷಾರ್ಥವಾಗಿ ಈ ಉಪಕರಣವನ್ನು ಅಳವಡಿಕೆ ಮಾಡಿದ್ದೆವು. ಹಲವು ತಿಂಗಳ ಪ್ರಯೋಗದ ನಂತರ ಇದನ್ನು ಸ್ಥಾಪನೆ ಮಾಡಲಾಗುತ್ತಿದೆ. ಸದ್ಯ ಇದೀಗ ಇದನ್ನು ಕೆಲಸ ಬೆಡ್‌ಗಳಿಗೆ ಮಾತ್ರ ಅಳವಡಿಕೆ ಮಾಡುತ್ತಿದ್ದೇವೆ," ಎಂದು ಹೇಳಿದರು.
"ರೋಗಿಗಳಲ್ಲಿ ಹೃದಯ ಸಂಬಂಧಿ, ಮಧುಮೇಹ, ರಕ್ತದೊತ್ತಡ, ದೇಹದ ಉಷ್ಣತೆ, ಇಸಿಜಿ ಸಹಿತ ವಿವಿಧ ಮಾಹಿತಿಗಳ ಆಧಾರದ ಮೇಲೆ ದೂರದಿಂದಲೇ ನಿಗಾ ಇರಿಸಲು ಆರೋಗ್ಯ ಕಾರ್ಯಕರ್ತರಿಗೆ ಈ ತಂತ್ರ ಸಹಾಯ ಆಗುತ್ತದೆ. ಮುಂಚೆಯೇ ಎಚ್ಚರಿಕೆ ನೀಡುವ ಸೌಲಭ್ಯ ಇದರಲ್ಲಿ ಇದ್ದು, ರೋಗಿಯ ಆರೋಗ್ಯದಲ್ಲಿ ಆಗುವ ಬದಲಾವಣೆಯನ್ನ ಮೊದಲೇ ತಿಳಿಸುತ್ತದೆ," ಎಂದು ಹೇಳಿದರು.
"ಡೋಜಿಯ ಪರಿಹಾರವು ಕ್ಲೌಡ್ ಆಧಾರಿತ ಸೌಲಭ್ಯ ಆಗಿದೆ. ಇದರ ಕೇಂದ್ರೀಯ ಮತ್ತು ದೂರ ನಿಯಂತ್ರಣ ವ್ಯವಸ್ಥೆಯು ರೋಗಿಗಳ ಸುರಕ್ಷೆ, ವೈದ್ಯಕೀಯ ಫಲಿತಾಂಶಗಳಿಗಾಗಿ ಸಮಯೋಚಿತ ವೈದ್ಯಕೀಯ ಸೇವೆ ಒದಗಿಸಲು ರೋಗಿಯನ್ನು ನಿರಂತರವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಆರೋಗ್ಯ ಪೂರೈಕೆದಾರರಿಗೆ ಅವಕಾಶ ಸಿಗಲಿದೆ," ಎಂದು ಹೇಳಿದರು.
ಹೀಗೆ ಎಐ ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳಿಗೂ ಕಾಲಿಟ್ಟು ಕ್ರಾಂತಿ ಮಾಡುತ್ತಿದೆ. ಇದರ ಮೂಲಕ ಆರೋಗ್ಯದ ಸಲಹೆಯನ್ನು ಕೂಡ ಬಹುತೇಕ ಮಂದಿ ಪಡೆಯುತ್ತಿದ್ದಾರೆ. ಇನ್ನೂ ಈಗಾಗಲೇ ಹಲವು ಆಸ್ಪತ್ರೆಗಳಲ್ಲಿ ಅಳವಡಿಸಿದ್ದು, ಪ್ರಯೋಗವನ್ನು ಸಹ ಮಾಡಲು ಮುಂದುವರೆಸಿದ್ದಾರೆ. ಹಾಗೆಯೇ ಇದೀಗ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಈ ತಂತ್ರಜ್ಞಾನವನ್ನು ಅಳವಡಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲೂ ಈ ತಂತ್ರಜ್ಞಾನ ಅಳವಡಿಕೆ ಆದರೂ ಆಶ್ಚರ್ಯವಿಲ್ಲ. ಅಷ್ಟರ ಮಟ್ಟಿಗೆ ಇದು ತನ್ನ ಜಾಲವನ್ನು ವ್ಯಾಪಿಸುತ್ತಿದೆ.












Click it and Unblock the Notifications