Riyan Parag: ಟೀಕಾಕಾರರಿಗೆ ತಗೊಳ್ರೋ ಕೊಡ್ತೀನಿ ಅಂತಾ ಬ್ಯಾಟ್ ಮೂಲಕ ಉತ್ತರ ಕೊಟ್ಟ ಆರ್‌ಆರ್ ನಾಯಕ ರಿಯಾನ್ ಪರಾಗ್
RR Vs DC IPL 2026: ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ (ಮೇ 1) ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ರಿಯಾನ್ ಪರಾಗ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 225 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.
ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆಯೇ ಆರ್‌ಆರ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 225 ರನ್‌ಗಳ ಬೃಹತ್ ಮೊತ್ತ ಪೇರಿಸಿದ್ದು, ಡಿಸಿಗೆ 226 ರನ್‌ಗಳ ಗುರಿ ನೀಡಿದೆ. ಅದರಲ್ಲೂ ಆರ್‌ಆರ್ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿದ ನಾಯಕ ರಿಯಾನ್ ಪರಾಗ್ ಅವರು ಆಕ್ರಮಣಕಾರಿ ಆಟ ಆಡಿ ಮಿಂಚಿದರು.

ವೈಭವ್ ಸೂರ್ಯವಂಶಿ ಫೇಲ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಮೊದಲ ಓವರ್‌ನಲ್ಲೇ ಯಶಸ್ವಿ ಜೈಸ್ವಾಲ್ ಅವರನ್ನು ಮಿಚೆಲ್ ಸ್ಟಾರ್ಕ್ ಔಟ್ ಮಾಡಿದರೆ, ನಂತರದ ಓವರ್‌ನಲ್ಲಿ ಉದಯೋನ್ಮುಖ ಪ್ರತಿಭೆ ವೈಭವ್ ಸೂರ್ಯವಂಶಿ ಕೈಲ್ ಜೇಮೀಸನ್ ಎಸೆತಕ್ಕೆ ಬೌಲ್ಡ್ ಆಗಿ ಪೆವಿಲಿಯನ್‌ನತ್ತ ತೆರಳಿದರು.
ಚೊಚ್ಚಲ ಶತಕ ಮಿಸ್ ಮಾಡಿಕೊಂಡ ಪರಾಗ್
ಕೇವಲ ಅಲ್ಪ ಮೊತ್ತಕ್ಕೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರಿಯಾನ್ ಪರಾಗ್ ಮತ್ತು ಧ್ರುವ್ ಜುರೆಲ್ ಆಸರೆಯಾದರು. ಇವರಿಬ್ಬರು ಸೇರಿ 102 ರನ್‌ಗಳ ಅತ್ಯುತ್ತಮ ಜೊತೆಯಾಟವಾಡಿದರು. ಅತ್ಯಂತ ಜವಾಬ್ದಾರಿಯುತ ಆಟವಾಡಿದ ನಾಯಕ ರಿಯಾನ್ ಪರಾಗ್ 50 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸ್‌ರಗಳೊಂದಿಗೆ 90 ರನ್ ಸಿಡಿಸಿದರು. ಆದರೆ ಕೇವಲ 10 ರನ್‌ಗಳಿಂದ ತಮ್ಮ ಚೊಚ್ಚಲ ಶತಕವನ್ನು ಗಳಿಸುವ ಅವಕಾಶವನ್ನು ಮಿಸ್ ಮಾಡಿಕೊಂಡರು.
ಆರ್‌ಆರ್ ಪರ ಯಾರು ಎಷ್ಟು ರನ್ ಗಳಿಸಿದರು?
ಬಳಿಕ ಪಂದ್ಯದ ಅಂತ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಆಡಿದ ಡೊನೊವನ್ ಫೆರೇರಾ ಕೇವಲ 14 ಎಸೆತಗಳಲ್ಲಿ 2 ಬೌಂಡರಿ, 6 ಸಿಕ್ಸರ್‌ಗಳ ಸಹಿತ ಅಜೇಯ 47 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 220ರ ಗಡಿ ದಾಟಿಸಿದರು. ಧ್ರುವ್ ಜುರೆಲ್ 42(30), ರವೀಂದ್ರ ಜಡೇಜಾ 20(14) ರನ್‌ಗಳ ಕೊಡುಗೆ ನೀಡಿದರು. ಇನ್ನೂ ಡೆಲ್ಲಿ ಕ್ಯಾಪಿಟಲ್ಸ್ ಪರ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ 40 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡರು. ಉಳಿದಂತೆ ಕೈಲ್ ಜೇಮೀಸನ್, ಅಕ್ಷರ್ ಪಟೇಲ್ ಹಾಗೂ ಟಿ.ನಟರಾಜನ್ ತಲಾ ಒಂದು ವಿಕೆಟ್ ಕಬಳಿಸಿದರು.












Click it and Unblock the Notifications