ಜೈಪುರದಲ್ಲಿ ಕನ್ನಡಿಗ ಕೆಎಲ್ ರಾಹುಲ್ ದರ್ಬಾರ್; ಮೆಚ್ಚಿದೆ ಕಣಯ್ಯ ಎಂದ ಡೆಲ್ಲಿ

RR Vs DC IPL 2026: ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಶುಕ್ರವಾರ (ಮೇ 1) ನಡೆದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಕನ್ನಡಿಗ ಕೆಎಲ್‌ ರಾಹುಲ್‌ ಆಕ್ರಮಣಕಾರಿ ಆಟದ ನೆರವಿನಿಂದ ಡಿಸಿ ಈ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಏರಿದೆ.

ಟಾಸ್‌ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾಲ್ ಪರಾಗ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಆರ್‌ಆರ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 225 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ನಂತರ 226 ರನ್‌ಗಳ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್‌ 19.1 ಓವರ್‌ಗಳಲ್ಲಿ ತಲುಪಿ ಗದ್ದು ಬೀಗಿತು.

RR vs DC IPL 2026 Kannadiga KL Rahul Powers Delhi Capitals to 7-Wicket Win in Jaipur Vs Rajasthan

ಕನ್ನಡಿಗ ಕೆಎಲ್ ರಾಹುಲ್ ಆಕ್ರಮಣಕಾರಿ ಆಟ

ಆರ್‌ಆರ್‌ ನೀಡಿದ 226 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕರಾದ ಕೆ.ಎಲ್.ರಾಹುಲ್ 40 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 75 ರನ್‌ ಮತ್ತು ಪಥುಮ್ ನಿಸ್ಸಾಂಕ 33 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸ್‌ರ್‌ಗಳ ಸಹಿತ 62 ರನ್‌ ಕಲೆಹಾಕುವ ಮೂಲಕ ಉತ್ತಮ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 110 ರನ್‌ಗಳ ಜೊತೆಯಾಟವಾಡಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

ಅಂತಿಮವಾಗಿ ಟ್ರಿಸ್ಟಾನ್ ಸ್ಟಬ್ಸ್ ಅಜೇಯ 18 ಮತ್ತು ಅಶುತೋಷ್ ಶರ್ಮಾ ಅಜೇಯ 25 ರನ್‌ ಸಿಡಿಸಿ ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಉಳಿದಂತೆ ನಿತೀಶ್ ರಾಣಾ 33(17) ರನ್‌ಗಳ ಕೊಡುಗೆ ನೀಡಿ ಇವರು ಕೂಡ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

ರಿಯಾನ್ ಪರಾಗ್ ಹೋರಾಟ ವ್ಯರ್ಥ

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ಪರ ನಾಯಕ ರಿಯಾನ್ ಪರಾಗ್ 50 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 90 ರನ್‌ ಸಿಡಿಸಿದರು. ಈ ಮೂಲಕ ಅವರು ಈ ಸೀಸನ್‌ನ ತಮ್ಮ ಮೊದಲ ಅರ್ಧಶತಕ ಸಿಡಿಸಿ ಫಾರ್ಮ್‌ಗೆ ಮರಳಿದರು. ಪಂದ್ಯದ ಅಂತ್ಯದಲ್ಲಿ ಡೊನೊವನ್ ಫೆರೇರಾ ಕೇವಲ 14 ಎಸೆತಗಳಲ್ಲಿ ಅಜೇಯ 47 ರನ್ ಚಚ್ಚಿ ತಂಡದ ಮೊತ್ತವನ್ನು 220ರ ಗಡಿ ದಾಟಿಸಿದರು.

ಜೈಸ್ವಾಲ್, ವೈಭವ್ ಪ್ಲಾಫ್‌

ಆರಂಭದಲ್ಲೇ ಯಶಸ್ವಿ ಜೈಸ್ವಾಲ್ 6(3) ಮತ್ತು ಯುವ ಪ್ರತಿಭೆ ವೈಭವ್ ಸೂರ್ಯವಂಶಿ 4(2) ರನ್‌ಗಳನ್ನಷ್ಟೇ ಗಳಿಸಿ ವಿಕೆಟ್ ಒಪ್ಪಿಸಿ ಪೆವೆಲಿಯನ್ ಕಡೆಗೆ ನಡೆದರು. ಆದರೂ ನಂತರ ಬಂದ ನಾಯಕ ರಿಯಾನ್ ಪರಾಗ್ 90 ಮತ್ತು ಧ್ರುವ್ ಜುರೆಲ್ 42 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು. ಕಳೆದ ಪಂದ್ಯದಲ್ಲಿ ವೇಪಿಂಗ್ ಮಾಡಿ ದಂಡಕ್ಕೆ ಗುರಿಯಾಗಿದ್ದ ಪರಾಗ್ ಈ ಪಂದ್ಯದಲ್ಲಿ ಜವಾಬ್ದಾರಿಯುತ ಆಟವಾಡಿದರು. ಈ ಮೂಲಕ ಇವರು ಯಾವ ಪಂದ್ಯದಲ್ಲೂ ಸರಿಯಾಗಿ ಆಡಿಲ್ಲ, ಫಾರ್ಮ್‌ ಸರಿಯಿಲ್ಲ ಎಂದು ಹೇಳುವವರ ಬಾಯಿ ಮುಚ್ಚಿಸಿದರು.

3 ವಿಕೆಟ್ ಕಬಳಿಸಿ ಮಿಂಚಿದ ಸ್ಟಾರ್ಕ್

ಡೆಲ್ಲಿ ಕ್ಯಾಟಪಿಟಲ್ಸ್‌ ಪರ ಮಿಚೆಲ್ ಸ್ಟಾರ್ಕ್ 40 ರನ್‌ಗಳಿಗೆ 3 ವಿಕೆಟ್ ಪಡೆದು ಮಿಂಚಿದರು. ಈ ಪೈಕಿ ಇದರಲ್ಲಿ ಅಪಾಯಕಾರಿ ರಿಯಾನ್ ಪರಾಗ್ ವಿಕೆಟ್ ಕೂಡ ಸೇರಿತ್ತು. ಉಳಿದಂತೆ ಕೈಲ್ ಜೇಮೀಸನ್, ಅಕ್ಷರ್ ಪಟೇಲ್ ಹಾಗೂ ಟಿ.ನಟರಾಜನ್‌ ತಲಾ ಒಂದು ವಿಕೆಟ್‌ ಕಬಳಿಸಿದರು. ಒಟ್ಟಿನಲ್ಲಿ ಡೆಲ್ಲಿ ಪರ ಬೌಲರ್‌ಗಳು ದುಬಾರಿಯಾದರು. ಆದರೂ ಬ್ಯಾಟರ್‌ಗಳು ಅಪಯಕಾರಿ ಬ್ಯಾಟಿಂಗ್ ಪ್ರದರ್ಶನ ಮಾಡುವ ಮೂಲಕ ತಂಡವನ್ನು ಗೆಲ್ಲಿಸಿಯೇಬಿಟ್ಟರು. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತೆ ಜಯದ ಹಳಿಗೆ ಮರಳಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಚೇತರಿಕೆ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+