KL Rahul: ರಾಜಸ್ಥಾನ್ ರಾಯಲ್ಸ್‌ ವಿರುದ್ಧ 75 ರನ್‌ ಸಿಡಿಸಿ ವಿರಾಟ್‌ ಕೊಹ್ಲಿ ದಾಖಲೆ ಅಳಿಸಿದ ಕನ್ನಡಿಗ ಕೆಎಲ್ ರಾಹುಲ್

KL Rahul: ಜೈಪುರಲ್ಲಿ ಶುಕ್ರವಾರ (ಮೇ 1) ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ರಾಜಸ್ಥಾನ್ ರಾಯಲ್ಸ್‌ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಇನ್ನೂ ಈ ಪಂದ್ಯದಲ್ಲಿ ಡಿಸಿ ಪರ ಸ್ಫೋಟಕ ಬ್ಯಾಟಿಂಗ್ ಆಡಿದ ಕನ್ನಡಿಗರ ಕೆಎಲ್‌ ರಾಹುಲ್‌ ಅವರು ವಿರಾಟ್ ಕೊಹ್ಲಿ ಅವರ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧ ಅತಿ ಹೆಚ್ಚು ಬಾರಿ 50 ಪ್ಲಸ್ (ಅರ್ಧಶತಕ ಅಥವಾ ಅದಕ್ಕಿಂತ ಹೆಚ್ಚು) ರನ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಕೆ.ಎಲ್. ರಾಹುಲ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಮೂಲಕ ಅವರು ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರನ್ನು ಹಿಂದಿಕ್ಕಿದ್ದಾರೆ ಎಂದು

KL Rahul Breaks Virat Kohli s Record vs RR in IPL 2026 Delhi Capitals Beat Rajasthan by 7 Wickets

ಕೊಹ್ಲಿ, ದವನ್ ದಾಖಲೆ ಅಳಿಸಿದ ಕನ್ನಡಿಗ

ರಾಜಸ್ಥಾನ್ ರಾಯಲ್‌ ವಿರುದ್ಧ ರಾಹುಲ್ ಈಗ ಒಟ್ಟು 8 ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ತಲಾ 7 ಬಾರಿ ಈ ಸಾಧನೆ ಮಾಡಿದ್ದರು. ಪ್ರಸ್ತುತ ಕನ್ನಡಿಗ ಕೆಎಲ್‌ ರಾಹುಲ್ ಈ ಪಟ್ಟಿಯಲ್ಲಿ ವಿದೇಶಿ ಆಟಗಾರ ಹಾಗೂ ಆರ್‌ಸಿಬಿ ಸ್ಟಾರ್ ಆಗಿದ್ದ ಎಬಿ ಡಿವಿಲಿಯರ್ಸ್ (8 ಬಾರಿ) ಅವರೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಆರ್‌ಆರ್ ವಿರುದ್ಧ ಮಿಂಚಿದ ಕೆಎಲ್‌ ರಾಹುಲ್

ಜೈಪುರದಲ್ಲಿ ಶುಕ್ರವಾರ (ಮೇ 1) ನಡೆದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಕಣಕ್ಕಿಳಿದ ಕನ್ನಡಿಗ ಕೆ.ಎಲ್. ರಾಹುಲ್ ರಾಜಸ್ಥಾನ್ ರಾಯಲ್ಸ್ ನೀಡಿದ್ದ 226 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ತಂಡಕ್ಕೆ ಭರ್ಜರಿ ಆರಂಭ ನೀಡಿ ಆಸರೆಯಾದರು. ಅವರು 75 ರನ್‌ ಸಿಡಿಸಿದರೆ, ಅವರಿಗೆ ಸಾಥ್ ನೀಡಿದ ಪಥುಮ್ ನಿಸ್ಸಾಂಕ 62 ರನ್ ರನ್‌ ಸಿಡಿಸಿದರು.

ಆರ್‌ಆರ್‌ ವಿರುದ್ಧ ಅತಿ ಹೆಚ್ಚು 50ಕ್ಕೂ ಅಧಿಕ ರನ್ ಸಿಡಿಸಿದವರು

* ಕೆ.ಎಲ್. ರಾಹುಲ್: 8 ಬಾರಿ (18 ಇನ್ನಿಂಗ್ಸ್‌)

* ಎಬಿ ಡಿವಿಲಿಯರ್ಸ್: 8 ಬಾರಿ (20 ಇನ್ನಿಂಗ್ಸ್‌)

* ಶಿಖರ್ ಧವನ್: 7 ಬಾರಿ (24 ಇನ್ನಿಂಗ್ಸ್‌)

* ವಿರಾಟ್ ಕೊಹ್ಲಿ: 7 ಬಾರಿ (33 ಇನ್ನಿಂಗ್ಸ್‌)

ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಬೀಸಿದ ರಾಜಸ್ಥಾನ್ ರಾಯಲ್ಸ್ ತಂಡವು ನಾಯಕ ರಿಯಾನ್ ಪರಾಗ್ ಅವರ ಸ್ಫೋಟಕ 90 ರನ್‌ಗಳ ನೆರವಿನಿಂದ 225 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ರಾಹುಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಆಸರೆಯಾದರು. ಸದ್ಯ ಕೆಎಲ್‌ ರಾಹುಲ್ ಐಪಿಎಲ್ 2026ರಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈಗಾಗಲೇ ಇದೇ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಅಜೇಯ 152 ರನ್ ಸಿಡಿಸಿ ಐಪಿಎಲ್ ಇತಿಹಾಸದಲ್ಲಿ ಭಾರತೀಯ ಬ್ಯಾಟರ್ ಒಬ್ಬನ ಗರಿಷ್ಠ ಸ್ಕೋರ್ ಇದಾಗಿದೆ.

ಈ ಸಾಧನೆಯೊಂದಿಗೆ ಕೆ.ಎಲ್. ರಾಹುಲ್ ಅವರು ತಮ್ಮ ಮೇಲಿದ್ದ ಸ್ಟ್ರೈಕ್ ರೇಟ್ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ಇನ್ನೂ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಮೂಲಕ ತಾವು ಎಷ್ಟು ಪ್ರಭಾವಶಾಲಿ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಕೆಎಲ್ ರಾಹುಲ್‌ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಸತತವಾಗಿ ಈ ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ಪರ ಮಿಂಚುವುದಲ್ಲದೆ, ತಮ್ಮ ಫಾರ್ಮ್‌ ಬಗ್ಗೆ ಟೀಕೆ ಮಾಡುತ್ತಿದ್ದವರಿಗೆ ಮುಟ್ಟಿನೋಡಿಕೊಳ್ಳುವ ಹಾಗೆ ಬ್ಯಾಟ್‌ ಮೂಲಕ ಉತ್ತರ ನೀಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+