Amanpreet Singh Gill Passes Away: ವಿರಾಟ್ ಕೊಹ್ಲಿ ಅವರ U-19 ತಂಡದ ಸಹ ಆಟಗಾರ ಅಮನ್‌ಪ್ರೀತ್ ಸಿಂಗ್ ಗಿಲ್ ನಿಧನ

Amanpreet Gill Passes Away: ವಿರಾಟ್ ಕೊಹ್ಲಿ ಅವರ ಅಂಡರ್-19 ತಂಡದ ಸಹ ಆಟಗಾರರಾಗಿದ್ದ ಅಮನ್‌ಪ್ರೀತ್ ಸಿಂಗ್ ಗಿಲ್ ಅವರು ತಮ್ಮ 36ನೇ ವಯಸ್ಸಿನಲ್ಲಿ ಚಂಡೀಗಢದಲ್ಲಿ ನಿಧನರಾಗಿದ್ದಾರೆ. ಇವರ ಅಕಾಲಿಕ ನಿಧನವು ಕ್ರಿಕೆಟ್ ವಲಯದಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.

ಇವರು ಭಾರತದ ಅಂಡರ್-19 ತಂಡ ಮತ್ತು ಪಂಜಾಬ್ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಮಧ್ಯಮ ವೇಗದ ಬೌಲರ್ ಆಗಿದ್ದರು. ವಿರಾಟ್ ಕೊಹ್ಲಿ ಅವರ ಜೊತೆ ಭಾರತದ ಪರ ಅಂಡರ್-19 ತಂಡದಲ್ಲಿ ಆಡಿದ್ದರು. 2008ರ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಭಾಗವಾಗಿದ್ದರು. ಅಷ್ಟೇ ಅಲ್ಲದೆ ನಂತರದ ದಿನಗಳಲ್ಲಿ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಹಿರಿಯ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

Amanpreet Singh Gill Passes Away Virat Kohli s Former U-19 Teammate Dies at 36 Know details

11 ವಿಕೆಟ್‌ ಕಬಳಿಸಿದ್ದ ಅಮನ್‌ಪ್ರೀತ್ ಸಿಂಗ್ ಗಿಲ್

ಅಮನ್‌ಪ್ರೀತ್ ಸಿಂಗ್ ಗಿಲ್ ಪಂಜಾಬ್ ಪರ 6 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಒಟ್ಟು 11 ವಿಕೆಟ್‌ಗಳನ್ನು ಕಬಳಿಸಿದ್ದರು. ಇದೀಗ ಇವರು ಕೇವಲ 36ನೇ ವಯಸ್ಸಿನಲ್ಲಿ ನಿಧನರಾಗಿರುವುದು ಕ್ರಿಕೆಟ್ ವಲಯದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ. ಆದರೆ ಇವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಪಂಜಾಬ್ ಕ್ರಿಕೆಟ್ ಸಂಸ್ಥೆಯಿಂದ ಸಂತಾಪ

ಪಂಜಾಬ್ ಕ್ರಿಕೆಟ್ ಸಂಸ್ಥೆಯು ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಅಧಿಕೃತವಾಗಿ ಘೋಷಿಸಿ, ಅವರ ಸಾವಿಗೆ ಸಂಪಾತ ಸೂಚಿಸಿದೆ. "ಪಂಜಾಬ್‌ನ ಮಾಜಿ ಕ್ರಿಕೆಟಿಗ ಮತ್ತು ಪಂಜಾಬ್ ಹಿರಿಯ ಆಯ್ಕೆ ಸಮಿತಿಯ ಸದಸ್ಯರಾದ ಅಮನ್‌ಪ್ರೀತ್ ಸಿಂಗ್ ಗಿಲ್ ಅವರ ಅಕಾಲಿಕ ನಿಧನಕ್ಕೆ ಪಂಜಾಬ್ ಕ್ರಿಕೆಟ್ ಸಂಸ್ಥೆಯು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ," ಎಂದು ಟ್ವಿಟ್‌ ಮಾಡಿಕೊಂಡಿದೆ.

ಅಮನ್‌ಪ್ರೀತ್ ಸಿಂಗ್‌ ಸಾವಿಗೆ ಯುವರಾಜ್ ಸಿಂಗ್ ಸಂಪಾತ

"ಅಗಲಿದ ಅವರ ಆತ್ಮಕ್ಕೆ ದೇವರು ಶಾಂತಿಯನ್ನು ನೀಡಲಿ ಮತ್ತು ಈ ಕಷ್ಟದ ಸಮಯದಲ್ಲಿ ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ," ಎಂದು ಪಂಜಾಬ್ ಕ್ರಿಕೆಟ್ ಸಂಸ್ಥೆ ಬರೆದುಕೊಂಡಿದೆ. ಟೀಂ ಇಂಡಿಯಾ ಮಾಜಿ ಸ್ಟಾರ್ ಆಲ್ ರೌಂಡರ್ ಯುವರಾಜ್ ಸಿಂಗ್ ಕೂಡ ಗಿಲ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

"ಅಮನ್‌ಪ್ರೀತ್ ಸಿಂಗ್ ಗಿಲ್ ಅವರ ನಿಧನದ ಸುದ್ದಿ ಮನಸಿಗೆ ತುಂಬಾ ನೋವು ತಂದಿದೆ. ನಮ್ಮ ಆರಂಭದ ದಿನಗಳಲ್ಲಿ ನಾನು ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದೆ. ಅವರು ಕ್ರಿಕೆಟ್ ಅನ್ನು ಪ್ರೀತಿಸುತ್ತಿದ್ದ ಒಬ್ಬ ಶಾಂತ ಸ್ವಭಾವದ ಮತ್ತು ಕಠಿಣ ಪರಿಶ್ರಮಿ ಕ್ರಿಕೆಟಿಗರಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಓಂ ಶಾಂತಿ," ಎಂದು ಯುವರಾಜ್ ಸಿಂಗ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅಮನ್‌ಪ್ರೀತ್ ಸಿಂಗ್ ಗಿಲ್ ಸಾಧನೆ

ಅಮನ್‌ಪ್ರೀತ್ ಸಿಂಗ್ ಗಿಲ್ ಅವರು 2007ರಲ್ಲಿ ಭಾರತದ ಪರವಾಗಿ ಐದು ಯೂತ್ ಏಕದಿನ ಮತ್ತು ಒಂದು ಯೂತ್ ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಶ್ರೀಲಂಕಾದ ಮಾಜಿ ಆಲ್‌ರೌಂಡರ್ ಥಿಸಾರ ಪೆರೆರಾ ಅವರ ವಿಕೆಟ್ ಪಡೆದಿದ್ದರು. ಆದರೆ 2008ರ ವಿಶ್ವಕಪ್ ಗೆದ್ದ ವಿರಾಟ್ ಕೊಹ್ಲಿ ನಾಯತ್ವದ ಭಾರತದ ಅಂಡರ್-19 ತಂಡದಲ್ಲಿ ಸ್ಥಾನ ಪಡೆಯಲು ಅವರು ವಿಫಲರಾಗಿದ್ದರು.

ಪಂಜಾಬ್ ಕಿಂಗ್ಸ್ ತಂಡವು ಕೂಡ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಮನ್‌ಪ್ರೀತ್ ಸಿಂಗ್ ಸಾವಿಗೆ ಸಂತಾಪ ಸೂಚಿಸಿದೆ. "ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಮತ್ತು ಪಂಜಾಬ್ ಕಿಂಗ್ಸ್ ಕುಟುಂಬದ ಭಾಗವಾಗಿದ್ದ ಅಮನ್‌ಪ್ರೀತ್ ಸಿಂಗ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು," ಸಂತಾಪ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+