IAS officers transfer: ರಾಜ್ಯ ಸರ್ಕಾರದಿಂದ ನಾಲ್ವರು ಐಎಎಸ್ ಅಧಿಕಾರಿಗಳ ವರ್ಗಾವಣೆ
IAS Officers Transffer: ರಾಜ್ಯ ಸರ್ಕಾರ ಆಗಾಗ ಆಡಳಿತ ಯಂತ್ರ ಸರ್ಜರಿ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ ರಾಜ್ಯದಲ್ಲಿ ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಾಗಾದ್ರೆ ಯಾರನ್ನು ಎಲ್ಲಿಗೆ ವರ್ಗಾಹಿಸಲಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಹಿನ್ನೆಲೆ ಕರ್ನಾಟಕ ರಾಜ್ಯ ಸರ್ಕಾರ ತಕ್ಷಣವೇ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಐಎಎಸ್ ಅಧಿಕಾರಿಗಳಾದ ಫೌಝಿಯಾ ತರನ್ನುಮ್, ಮುಹಮ್ಮದ್ ಇಕ್ರಾಮುಲ್ಲಾ ಶರೀಫ್, ಡಾ.ಗೋಪಾಲ್ ಕೃಷ್ಣ ಬಿ., ರುಚಿ ಬಿಂದಲ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವರ್ಗಾವಣೆಯಾದ ಐಎಎಸ್ ಅಧಿಕಾರಿಗಳು
* ಫೌಝಿಯಾ ತರನ್ನುಮ್
* ಮುಹಮ್ಮದ್ ಇಕ್ರಾಮುಲ್ಲಾ ಶರೀಫ್
* ಡಾ.ಗೋಪಾಲ್ ಕೃಷ್ಣ ಬಿ.
* ರುಚಿ ಬಿಂದಲ್
ಯಾರು ಯಾವ ಹುದ್ದೆಗೆ ವರ್ಗಾವಣೆ?
1. ಫೌಝಿಯಾ ತರನ್ನುಮ್: ಇವರು ಈ ಹಿಂದೆ ಕಲಬುರಗಿ ಜಿಲ್ಲಾಧಿಕಾರಿಯಾಗಿದ್ದು, ಈಗ ಇವರನ್ನು ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
2. ಮುಹಮ್ಮದ್ ಇಕ್ರಾಮುಲ್ಲಾ ಶರೀಫ್: ಈ ಹಿಂದೆ ಜಂಟಿ ಕಾರ್ಯದರ್ಶಿ ಆರ್ಥಿಕ ಇಲಾಖೆಯಲ್ಲಿದ್ದರು. ಈಗ ಇವರನ್ನು ಕಲಬುರಗಿ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಅದೇಶ ಹೊರಡಿಸಲಾಗಿದೆ.
3. ಡಾ. ಗೋಪಾಲ್ ಕೃಷ್ಣ ಬಿ.: ಈ ಹಿಂದೆ ಸರ್ಕಾರದ ಉಪ ಕಾರ್ಯದರ್ಶಿ-3, ಆರ್ಥಿಕ ಇಲಾಖೆಯಲ್ಲಿದ್ದು, ಈಗ ಇವರನ್ನು ಸರ್ಕಾರದ ಉಪ ಕಾರ್ಯದರ್ಶಿ ಆರ್ಥಿಕ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.
4. ರುಚಿ ಬಿಂದಲ್: ಈ ಹಿಂದೆ ಇವರು ಹಾವೇರಿ ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದು, ಈಗ ಸರ್ಕಾರದ ಉಪ ಕಾರ್ಯದರ್ಶಿ-3, ಆರ್ಥಿಕ ಇಲಾಖೆಗೆ ವರ್ಗಾಹಿಸಲಾಗಿದೆ.
ಕಲಬುರಗಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಫೌಝಿಯಾ ತರನ್ನುಮ್ ಅವರನ್ನು ವರ್ಗಾವಣೆ ಮಾಡಿ ಗ್ರಾಮೀಣ ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆಯ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಇನ್ನೂ ಈ ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿಯಾಗಿ ಮುಹಮ್ಮದ್ ಇಕ್ರಾಮುಲ್ಲಾ ಶರೀಫ್ ಅವರನ್ನು ನೇಮಿಸಲಾಗಿದೆ. ಶರೀಫ್ ಅವರು ಈ ಹಿಂದೆ ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ವರ್ಗಾವಣೆ ಪ್ರಕ್ರಿಯೆಯ ಭಾಗವಾಗಿ ಆರ್ಥಿಕ ಇಲಾಖೆಯಲ್ಲೂ ಪ್ರಮುಖ ಬದಲಾವಣೆಗಳಾಗಿವೆ. ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ- 3 ಆಗಿದ್ದ ಡಾ.ಗೋಪಾಲ್ ಕೃಷ್ಣ ಬಿ. ಅವರನ್ನು ಅದೇ ಇಲಾಖೆಯ ಬಜೆಟ್ ಮತ್ತು ಸಂಪನ್ಮೂಲ ವಿಭಾಗದ ಉಪ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
ಹಾವೇರಿ ಜಿಲ್ಲಾ ಪಂಚಾಯತ್‌ನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ರುಚಿ ಬಿಂದಲ್ ಅವರನ್ನು ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ-3 ಹುದ್ದೆಗೆ ನೇಮಿಸಿ ಆದೇಶ ಹೊರಡಿಸಲಾಗಿದೆ. ಇನ್ನೂ ಹಾವೇರಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ರುಚಿ ಬಿಂದಲ್ ಅವರನ್ನು ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ-3 ಹುದ್ದೆಗೆ ನೇಮ ಮಾಟಲಾಗಿದೆ. ಸರ್ಕಾರದ ಈ ಆದೇಶವು ಆಡಳಿತಾತ್ಮಕ ಹಿತದೃಷ್ಟಿಯಿಂದ ಕೂಡಿದ್ದು, ಅಧಿಕಾರಿಗಳು ನೂತನ ಹುದ್ದೆಗಳಲ್ಲಿ ಅಧಿಕಾರ ಸ್ವೀಕರಿಸುವಂತೆ ಸೂಚಿಸಲಾಗಿದೆ.
ರುಚಿ ಬಿಂದಲ್ 2020ರ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ ರುಚಿ ಬಿಂದಲ್ ಅವರು 2025ರ ಫೆಬ್ರವರಿ 21ರಂದು ಹಾವೇರಿ ಜಿಪಂ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳು, ಗ್ರಾಮೀಣ ಗ್ರಂಥಾಲಯಗಳ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿಪರ ಕಾರ್ಯಗಳಿಂದ ಜನಪ್ರಿಯರಾಗಿದ್ದರು. ಸದ್ಯ ರುಚಿ ಬಿಂದಲ್ ಅವರಿಂದ ತೆರವಾಗಿರುವ ಜಿಲ್ಲಾ ಪಂಚಾಯುತ್ ಸಿಇಒ ಸ್ಥಾನಕ್ಕೆ ಸರ್ಕಾರ ಬೇರೆ ಅಧಿಕಾರಿಯನ್ನು ನಿಯೋಜನೆ ಮಾಡಿಲ್ಲ. ಒಟ್ಟಿನಲ್ಲಿ ಸರ್ಕಾರದ ಈ ಆದೇಶವವನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಮಾಡಿದೆ ಎನ್ನಲಾಗುತ್ತಿದೆ.












Click it and Unblock the Notifications