Annamalai: ವಿಜಯ್ ಪಕ್ಷ ಟಿವಿಕೆ "ಉದಯ"ದ ನಡುವೆ ಅಣ್ಣಾಮಲೈ ಟ್ವೀಟ್ ವೈರಲ್: ಬಿಜೆಪಿಗೆ ಒಳ್ಳೆಯ ದಿನ ಅಂದಿದ್ಯಾಕೆ
Annamalai: ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಕೆ. ಅಣ್ಣಾಮಲೈ ಅವರು ಟ್ವೀಟ್‌ವೊಂದನ್ನು ಮಾಡಿದ್ದಾರೆ. ಈ ಟ್ವೀಟ್ ಇದೀಗ ಅಚ್ಚರಿಗೆ ಕಾರಣವಾಗಿದೆ. ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಎಲ್ಲಾ ಲೆಕ್ಕಾಚಾರಗಳು ಸಹ ತಲೆಕೆಳಗಾಗಿವೆ. ಆಡಳಿತರೂಢ ಡಿಎಂಕೆ ಪಕ್ಷವು ಅಕ್ಷರಶಃ ಹೀನಾಯ ಸೋಲು ಅನುಭವಿಸಿದೆ. ಈ ಬಾರಿ ತಮಿಳುನಾಡಿನ ಸೂಪರ್ ಸ್ಟಾರ್ ವಿಜಯ್ ಅವರ ದರ್ಬಾರ್ ಶುರುವಾಗಿದೆ. ವಿಜಯ್ ಅವರು ತಮಿಳುನಾಡಿನ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಈ ನಡುವೆ ಕೆ. ಅಣ್ಣಾಮಲೈ ಅವರ ಟ್ವೀಟ್ ವೈರಲ್ ಆಗುತ್ತಿದೆ.
ತಮಿಳುನಾಡಿನ ಜನರ ತೀರ್ಪಿಗೆ ನಾನು ತಲೆಬಾಗುತ್ತೇನೆ. ನನ್ನ ನೆಲದಲ್ಲಿ ಜನರು ಒಂದೇ ಧ್ವನಿಯಲ್ಲಿ ಎದ್ದು ಮಾತನಾಡಿರುವುದನ್ನು (ತೀರ್ಪು ನೀಡಿರುವುದು) ನೋಡಿ ಸಂತೋಷವಾಗಿದೆ. ಮತ ಖರೀದಿಗೆ 'ಇಲ್ಲ' - ವಂಶಪಾರಂಪರ್ಯ ರಾಜಕಾರಣಕ್ಕೆ ಅವಕಾಶ 'ಇಲ್ಲ' ಎಂದು ಕೆ. ಅಣ್ಣಾಮಲೈ ಅವರು ಹೇಳಿದ್ದಾರೆ. ರಾಜಕಾರಣದಲ್ಲಿ ಪೀಳಿಗೆಯ ಬದಲಾವಣೆಗೆ 'ಹೌದು' ಎಂದು ಜನ ಹೇಳಿದ್ದಾರೆ. ಇದನ್ನು ಯಾರೇ ಸಾಧಿಸಿದ್ದರೂ, ಅವರು ಎಲ್ಲರಿಗೂ ಒಳ್ಳೆಯದನ್ನೇ ಮಾಡಿದ್ದಾರೆ.

ಟಿವಿಕೆ ಹಾಗೂ ತಿರು ವಿಜಯ್ ಅವರಿಗೆ ತಮಿಳುನಾಡು ರಾಜಕಾರಣದಲ್ಲಿ ಅದ್ಭುತ ಆರಂಭಕ್ಕಾಗಿ ಅಭಿನಂದನೆಗಳು ಮತ್ತು ಶುಭಾಶಯಗಳು. ನೀವು ಉದ್ದೇಶಿಸಿರುವುದನ್ನು ಸಾಧಿಸಲು ದೇವರು ನಿಮ್ಮೊಂದಿಗಿರಲಿ. ಎನ್‌ಡಿಎ ಅಭ್ಯರ್ಥಿಗಳಿಗೂ - ಇದು ಕಠಿಣ ಹೋರಾಟವಾಗಿತ್ತು. ಗೆದ್ದ ಎಲ್ಲರಿಗೂ ಅಭಿನಂದನೆಗಳು. ಈ ಬಾರಿ ಗೆಲುವು ಸಾಧಿಸಲಾಗದವರು ಹೋರಾಟ ಮುಂದುವರಿಸೋಣ.
ತಿರು ಎಂ.ಕೆ ಸ್ಟಾಲಿನ್ ಹಾಗೂ ತಿರು ಸೀಮಾನ್ ಅವರಿಗೆ ಈ ಚುನಾವಣೆಯಲ್ಲಿ ಸೋಲಿನ ಬಗ್ಗೆ ಸಂತಾಪ ವ್ಯಕ್ತಪಡಿಸುತ್ತೇನೆ. ಕೊನೆಯದಾಗಿ ಹಾಗೂ ಅತ್ಯಂತ ಮುಖ್ಯವಾಗಿ, ನನ್ನ ಪ್ರಿಯ ಬಿಜೆಪಿ ತಮಿಳುನಾಡು ಕಾರ್ಯಕರ್ತರು ಮತ್ತು ನಾಯಕರು ನೆಲಮಟ್ಟದಲ್ಲಿ ಕಷ್ಟಪಟ್ಟು ಕೆಲಸ ಮಾಡಿದಕ್ಕಾಗಿ ಧನ್ಯವಾದಗಳು. ಉತ್ತಮ ದಿನಗಳು ಶೀಘ್ರದಲ್ಲೇ ಬರಲಿವೆ ಎಂದು ಹೇಳಿದ್ದಾರೆ.
I bow down to the people of TN for your verdict. Happy to see in my land, people have risen in one voice and spoken
— K.Annamalai (@annamalai_k) May 4, 2026
1. No to buying of votes
2. No to dynastic Politics
& yes to a generational shift in politics.
Whoever gets it done has actually done a favour to all!…












Click it and Unblock the Notifications