Advertisement

ಕೋಲಾರ ಜಿಲ್ಲಾ ಪಂಚಾಯಿತಿ; ವಿವಿಧ ಹುದ್ದೆಗೆ ಅರ್ಜಿ ಆಹ್ವಾನ


ಕೋಲಾರ, ಮಾರ್ಚ್ 15; ಕೋಲಾರ ಜಿಲ್ಲಾ ಪಂಚಾಯಿತಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆದಿದೆ. ಆಸಕ್ತ ಅಭ್ಯರ್ಥಿಗಳು ಖುದ್ದಾಗಿ ಅರ್ಜಿಗಳನ್ನು ಸಲ್ಲಿಸಲು 25/3/2021ರ ಸಂಜೆ 5 ಗಂಟೆ ಕೊನೆಯ ದಿನವಾಗಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲಾ ಪಂಚಾಯಿತಿ ಹೊರಗುತ್ತಿಗೆ ಆಧಾರದ ಮೇಲೆ ತಾಲೂಕು ಪಂಚಾಯಿತಿ ಮಟ್ಟದಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

ಕರ್ನಾಟಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ; 402 ಹುದ್ದೆ

ತಾಂತ್ರಿಕ ಸಹಾಯಕರು 4 (ತೋಟಗಾರಿಕೆ 3, ಅರಣ್ಯ 1) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಕೋಲಾರ ಜಿಲ್ಲಾ ಪಂಚಾಯಿತಿ ಕಚೇರಿಯಿಂದ ಪಡೆದು, ಭರ್ತಿ ಮಾಡಿ ಖುದ್ದಾಗಿ ಸಲ್ಲಿಕೆ ಮಾಡುವುದು.

ಕೊಪ್ಪಳ; 16 ಬಿಎಫ್‌ಟಿ ಹುದ್ದೆ ನೇಮಕಾತಿ, 12 ಸಾವಿರ ವೇತನ

Advertisement
Advertisement

ತಾಂತ್ರಿಕ ಸಹಾಯಕರು ತೋಟಗಾರಿಕೆ 3 ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ತೋಟಗಾರಿಕೆ ವಿಷಯದಲ್ಲಿ ಬಿ. ಎಸ್‌ಸಿ/ ಎಂ. ಎಸ್‌ಸಿ ವ್ಯಾಸಂಗ ಮಾಡಿರಬೇಕು. ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. ಅಭ್ಯರ್ಥಿಗಳಿಗೆ 21 ರಿಂದ 40 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.

ಹೆಚ್‌ಪಿಸಿಎಲ್ ನೇಮಕಾತಿ; ಏ.15ರೊಳಗೆ ಅರ್ಜಿ ಹಾಕಿ

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಸಂಭಾವನೆ 24,000 (ಪ್ರಯಾಣ ಭತ್ಯೆ ಪ್ರತಿ ಕಿ. ಮೀ.ಗೆ 5 ರೂ. ನಂತೆ ಗರಿಷ್ಠ ಮಾಸಿಕ ರೂ. 1,500).

ತಾಂತ್ರಿಕ ಸಹಾಯಕರು ಅರಣ್ಯ ಹುದ್ದೆಗೆ ಫಾರೆಸ್ಟರಿ ವಿಷಯದಲ್ಲಿ ಬಿ. ಎಸ್‌ಸಿ/ ಎಂ. ಎಸ್‌ಸಿ ವ್ಯಾಸಂಗ ಮಾಡಿರಬೇಕು. ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. ವಯೋಮಿತಿ 21 ರಿಂದ 40 ವರ್ಷ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಸಂಭಾವನೆ 24,000 (ಪ್ರಯಾಣ ಭತ್ಯೆ ಪ್ರತಿ ಕಿ. ಮೀ.ಗೆ 5 ರೂ. ನಂತೆ ಗರಿಷ್ಠ ಮಾಸಿಕ ರೂ. 1,500).

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವಿ. ಸತೀಶ್ ಕುಮಾರ್, ಎಡಿಪಿಸಿ, ಜಿಲ್ಲಾ ಪಂಚಾಯಿತಿ ಕೋಲಾರ, ದೂರವಾಣಿ ಸಂಖ್ಯೆ 9108735005 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

English Summary

Kolar zilla panchayat invited applications for the post of technical assistant (horticulture and forest). Candidates can apply till March 25, 2021.
Read more...