ಗೋಧಿ ಬೆಲೆ ನಿಯಂತ್ರಿಸಲು ಕೇಂದ್ರ ಕ್ರಮ ಕೈಗೊಂಡಿಲ್ಲ: ಆಹಾರ ಇಲಾಖೆ ಕಾರ್ಯದರ್ಶಿ
ಬೆಂಗಳೂರು, ನವೆಂಬರ್ 25: ಕೇಂದ್ರ ಸರ್ಕಾರವು ಗೋಧಿ ಬೆಲೆಯನ್ನು ನಿಯಂತ್ರಿಸುತ್ತಿಲ್ಲ. ಕೇವಲ ಸರಕುಗಳ ಮೇಲೆ ಸೂಕ್ಷ್ಮ ಗಮನ ನೆಟ್ಟಿದೆ. ಹಲವು ಕಾರಣಗಳಿಂದ ಆಹಾರ ಧಾನ್ಯಗಳ ಬೆಲೆ ಏರಿಕೆ ಆಗಿದೆ ಎಂದು ಕೇಂದ್ರ ಆಹಾರ ಇಲಾಖೆಯ ಕಾರ್ಯದರ್ಶಿ ಸಂಜೀವ್ ಚೋಪ್ರಾ ತಿಳಿಸಿದ್ದಾರೆ.
ಅಕ್ಕಿ ಬೆಲೆಯು ಹೆಚ್ಚಾಗದೇ, ಇಳಿಕೆಯೂ ಕಾಣದೇ ಬೆಲೆ ಸಮವಾಗಿದೆ. ಮೇ ತಿಂಗಳಿನಲ್ಲಿ ಗೋಧಿ ರಫ್ತಿಗೆ ನಿಷೇಧ ಹೇರಿದ ನಂತರ ಚಿಲ್ಲರೆ ವ್ಯಾಪಾರದಲ್ಲಿ ಗೋಧಿ ಬೆಲೆ ಶೇ.7ರಷ್ಟು ಏರಿಕೆ ಆಗಿತ್ತು. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಳವನ್ನು ಪರಿಗಣಿಸಿದರೆ ಶೇ.4-5ರಷ್ಟು ಬೆಲೆ ಏರಿಕೆಯಾಗಿದೆ. ಇದರ ಹೊರತು ಗೋಧಿ ಬೆಲೆ ಮೇಲೆ ಸರ್ಕಾರದ ನಿಯಂತ್ರಣವಿಲ್ಲ ಎಂದರು.
ಸರ್ಕಾರವು 2023 ರ ಏಪ್ರಿಲ್ 1ರಂದು 75 ಲಕ್ಷ ಮಿಲಿಯನ್ ಟನ್ (ಎಲ್‌ಎಂಟಿ) ಬಫರ್ ಸ್ಟಾಕ್‌ನ ವಿರುದ್ಧ 113ಎಲ್‌ಎಂಟಿ ಗೋಧಿಯನ್ನು ದಾಸ್ತಾನು ಹೊಂದಿದೆ. 2023 ರಂತೆ ಅಕ್ಕಿಯ ಉದ್ದೇಶಿತ ಸ್ಟಾಕ್ ಸ್ಥಾನವು ಬಫರ್ ಸ್ಟಾಕ್‌ಗೆ 137 ಎಲ್‌ಎಂಟಿಗೆ ವಿರುದ್ಧವಾಗಿ 237 ಎಲ್‌ಎಂಟಿ ಯಷ್ಟಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 263.42 ಮೆಟ್ರಿಕ್ ಟನ್‌ಗೆ ಹೋಲಿಸಿದರೆ ಈ ವರ್ಷ ನವೆಂಬರ್ 21ರಂದು 277.37 ಎಲ್‌ಎಂಟಿ ಭತ್ತವನ್ನು ಸರ್ಕಾರ ಸಂಗ್ರಹಿಸಿದೆ. ಇದೇ ಅವಧಿಯಲ್ಲಿ ಗೋಧಿ ಸಂಗ್ರಹಣೆಯು 2022-23 ಮಾರುಕಟ್ಟೆ ವರ್ಷದಲ್ಲಿ 434.44 ಲಕ್ಷ ಟನ್‌ಗಳಿಂದ ಈ ವರ್ಷ 187.92 ಲಕ್ಷ ಟನ್‌ಗಷ್ಟು ಕಡಿಮೆ ಸಂಗ್ರಹಿಸಿದೆ. ಸಂಗ್ರಹಣೆಯಲ್ಲಿ ಕುಸಿತಕ್ಕೆ ದೇಶೀಯ ಉತ್ಪಾದನೆಯಲ್ಲಿನ ಕುಸಿತ ಮತ್ತು ದುಪ್ಪಟ್ಟು ಖಾಸಗಿ ಖರೀದಿಯೇ ಕಾರಣ ಎಂದು ಕೇಂದ್ರ ಆಹಾರ ಇಲಾಖೆ ಸ್ಪಷ್ಟಪಡಿಸಿದೆ.

ಇನ್ನು ನಿತ್ಯ ಬಳಸುವ ಖಾದ್ಯ ತೈಲದ ಮೇಲೆ ಚಿಲ್ಲರೆ ಬೆಲೆಗಳು ಇಳಿಕೆ ಕಾಣುತ್ತಿವೆ. ಈಗಾಗಲೇ ಕಡಿಮೆ ದರ ಇಳಿದ ಅಡುಗೆ ಎಣ್ಣೆ ದರಗಳು ಇನ್ನಷ್ಟು ಇಳಿಕೆ ಆಗುವ ನಿರಿಕ್ಷೆ ಇದೆ. ಮೇ ತಿಂಗಳಲ್ಲಿ, ದೇಶೀಯ ಸರಬರಾಜುಗಳನ್ನು ಹೆಚ್ಚಿಸಲು ಮತ್ತು ಬೆಲೆಗಳನ್ನು ನಿಯಂತ್ರಣದಲ್ಲಿಡಲು ಸರ್ಕಾರವು ಗೋಧಿಯ ರಫ್ತುಗಳನ್ನು ನಿಷೇಧಿಸಿತ್ತು. ಸೆಪ್ಟೆಂಬರ್‌ನಲ್ಲಿ ನುಚ್ಚಕ್ಕಿ (ಬ್ರೋಕನ್ ರೈಸ್) ರಫ್ತಿನ ಮೇಲೆ ನಿಷೇಧ ಹೇರಿತ್ತು ಎಂದು ತಿಳಿಸಿದರು.












Click it and Unblock the Notifications