ಬಜೆಟ್ ನ ಆರಂಭ ಕೃಷಿ ವಲಯದ ಪ್ರೋತ್ಸಾಹಕ್ಕೆ ಮೀಸಲು
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಕೃಷಿ ವಲಯದ ಪ್ರೋತ್ಸಾಹಕ್ಕೆ ಅಂತಲೇ ಬಜೆಟ್ ನ ಅರಂಭದ ಎಲ್ಲ ಘೋಷಣೆಗಳು ಮೀಸಲಿಟ್ಟರು. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಕೃಷಿ ವಲಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಅದು ನಿಜವಾಗಿದೆ.
ಕೃಷಿ ಮಾರುಕಟ್ಟೆ, ಸಾವಯವ ಕೃಷಿಗೆ ಪ್ರೋತ್ಸಾಹ, ಎಪಿಎಂಸಿ, ರಫ್ತು ಪ್ರೋತ್ಸಾಹಕ್ಕೆ ಪೂರಕವಾದ ಅಂಶಗಳನ್ನು ಘೋಷಿಸಿದರು. ಕೃಷಿ ಚಟುವಟಿಕೆಗೆ ಬೇಕಾದ ಬಂಡವಾಳಕ್ಕೆ ಕಿಸಾನ್ ಕಾರ್ಡ್ ಬಳಸಿಕೊಳ್ಳಲು ಬೇಕಾದ ಅನುಕೂಲ ಮಾಡಿಕೊಡುವ ಘೋಷಣೆ ಮಾಡಿದರು. ಸ್ತ್ರೀಶಕ್ತಿ ಸಂಘಗಳು ಸಹ ಸಾವಯವ ಕೃಷಿ ಮಾಡಲು ಪ್ರೋತ್ಸಾಹಿಸುವಂಥ ಯೋಜನೆ ಘೋಷಿಸಿದರು.
ಕೃಷಿಗೆ ಅಗತ್ಯವಾದ ನೀರನ್ನು ಒದಗಿಸಲು ನೀರಾವರಿ ಯೋಜನೆಗಾಗಿ ಅಪಾರ ಪ್ರಮಾಣದಲ್ಲಿ ಹಣ ಮೀಸಲಿಡಲಾಗಿದೆ. ಇನ್ನು ಗ್ರಾಮೀಣ ವಸತಿ ಯೋಜನೆಗೆ ಕೂಡ ದೊಡ್ಡ ಹೆಚ್ಚಿನ ಹಣವನ್ನು ಮೀಸಲಿಡಲಾಗಿದೆ. ಒಟ್ಟಾರೆ ಗ್ರಾಮೀಣ ಭಾರತದಲ್ಲಿ ಉದ್ಯೋಗ ಸೃಷ್ಟಿಯೂ ಸೇರಿದಂತೆ ಕೃಷಿ ಚಟುವಟಿಕೆಯನ್ನು ಪ್ರೋತ್ಸಾಹಿಸುವಂಥ ಹಲವು ಯೋಜನೆ ಘೋಷಣೆ ಮಾಡಲಾಗಿದೆ.












Click it and Unblock the Notifications