ಕಾರವಾರದಲ್ಲಿ ಕರಡಿಗಳಿಗೆ ಬಲಿಯಾದ ರೈತ
ಕಾರವಾರ,
ಮೇ 10: ಇಲ್ಲಿನ ಖಾನಾಪುರ ತಾಲೂಕಿನ ಗೋಧೂಳಿ ಗ್ರಾಮದಲ್ಲಿ ಎರಡು ಕರಡಿಗಳ ದಾಳಿಗೆ ಸಿಲುಕಿ ರೈತನೊಬ್ಬ ಮೃತಪಟ್ಟಿದ್ದಾನೆ. ಮೋಟಿಸ್ ಥೋಮಸ್ ಚೊಲೆಂಕರ್(60) ಮೃತಪಟ್ಟ ದುರ್ದೈವಿ. id="toptextpromo">ಗೇರು
ತಿನ್ನಲು ಆಗಾಗ ಕರಡಿಗಳು ಗ್ರಾಮದ ತೋಟ ಪ್ರವೇಶಿಸುತ್ತಿದ್ದವು. ಭಾನುವಾರ ರಾತ್ರಿ ಥೋಮಸ್ ತೋಟದ ಕೆಲಸ ಮುಗಿಸಿಬಂದಾಗ ಅನಿರೀಕ್ಷಿತವಾಗಿ ಎರಡು ಕರಡಿಗಳು ದಾಳಿ ಮಾಡಿವೆ. ಬಲತೊಡೆಗೆ ಬಲವಾದ ಗಾಯವಾಗಿ ರಕ್ತಸ್ರಾವಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪೋಸ್ಟ್
ಮಾರ್ಟಮ್ ನಂತರ ಮೃತದೇಹವನ್ನು ಕುಟುಂಬದವರ ವಶಕ್ಕೆ ನೀಡಲಾಗಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ. ನಾಯ್ಕ್, ಅರಣ್ಯಾಧಿಕಾರಿ ಸಿ. ಎಂ. ಸಂಕೊಳ್ಳಿ ಮತ್ತು ಫಾರೆಸ್ಟರ್ ಕೆ. ಐ ಗುರಾವ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.











Click it and Unblock the Notifications