Tungabhadra Dam: ಹಿಂಗಾರು ಹಂಗಾಮು ಕಾಲುವೆಗೆ ನೀರು, ವೇಳಾಪಟ್ಟಿ ಪ್ರಕಟ
ಬಳ್ಳಾರಿ, ಡಿಸೆಂಬರ್ 01: ತುಂಗಭದ್ರಾ ಡ್ಯಾಂ ನೀರನ್ನು ಆಶ್ರಯಿಸಿ ಹಿಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆ ನಡೆಸುವ ರೈತರಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಜಲಾಶಯದಲ್ಲಿ ಲಭ್ಯವಿರುವ ನೀರಿನ ಆಧಾರದ ಮೇಲೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ, ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳಿಗೆ ನೀರು ಬಿಡುಗಡೆ ಮಾಡುವ ವೇಳಾಪಟ್ಟಿಯನ್ನು ಘೋಷಣೆ ಮಾಡಲಾಗಿದೆ. ರೈತರು ಇದನ್ನು ಆಧರಿಸಿ ಕೃಷಿ ಚಟುವಟಿಕೆ ಕೈಗೊಳ್ಳಬಹುದು.
ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ತುಂಗಭದ್ರಾ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಆದ ಶಿವರಾಜ ಎಸ್. ತಂಗಡಗಿ ನೇತೃತ್ವದಲ್ಲಿ
122ನೇ ನೀರಾವರಿ ಸಲಹಾ ಸಮಿತಿ ಸಭೆಯ ನಡೆಯಿತು. ಸಭೆಯಲ್ಲಿ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ಹಿಂಗಾರು ಹಂಗಾಮಿಗೆ ಜಲಾಶಯದಲ್ಲಿ ಲಭ್ಯವಾಗುವ ನೀರಿನ ಪ್ರಮಾಣವನ್ನು ಅಂದಾಜಿಸಿ ನೀರು ಹರಿಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.

ನೀರು ಬಿಡುಗಡೆ ವೇಳಾಪಟ್ಟಿ
* ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಡಿಸೆಂಬರ್ 1 ರಿಂದ 15 ರವರೆಗೆ 1500 ಕ್ಯೂಸೆಕ್‌ನಂತೆ, ಡಿ.16 ರಿಂದ 31 ರವರೆಗೆ 2000 ಕ್ಯೂಸೆಕ್‌ನಂತೆ, 2025ರ ಜ.01 ರಿಂದ 31 ರವರೆಗೆ 3800 ಕ್ಯೂಸೆಕ್‌ನಂತೆ, ಫೆ.01 ರಿಂದ 28 ರವರೆಗೆ 3800 ಕ್ಯೂಸೆಕ್‌ನಂತೆ, ಮಾ.01 ರಿಂದ 31 ರವರೆಗೆ 3800 ಕ್ಯೂಸೆಕ್‌ನಂತೆ ಮತ್ತು ಕುಡಿಯುವ ನೀರಿಗಾಗಿ ಏ.01 ರಿಂದ 10 ರವರೆಗೆ 1650 ಕ್ಯೂಸೆಕ್‌ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆ ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
* ಎಡದಂಡೆ ವಿಜಯನಗರ ಕಾಲುವೆ. 2025ರ ಏಪ್ರಿಲ್ 11 ರಿಂದ ಮೇ.10 ರವರೆಗೆ 150 ಕ್ಯೂಸೆಕ್‌ನಂತೆ ವಿತರಣಾ ಕಾಲುವೆ 1 ರಿಂದ 11ಎ ವರೆಗೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
* ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ. ಡಿಸೆಂಬರ್ 1 ರಿಂದ 10 ರವರೆಗೆ ನೀರು ನಿಲುಗಡೆ, ಡಿ.11 ರಿಂದ 31 ರವರೆಗೆ 800 ಕ್ಯೂಸೆಕ್‌ನಂತೆ, 2025ರ ಜ.01 ರಿಂದ 10 ರವರೆಗೆ ನೀರು ನಿಲುಗಡೆ ಮತ್ತು ಜ.11 ರಿಂದ 31 ರವರೆಗೆ 800 ಕ್ಯೂಸೆಕ್‌ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
* ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ. ಡಿಸೆಂಬರ್ 1 ರಿಂದ 15 ರವರೆಗೆ 400 ಕ್ಯೂಸೆಕ್‌ನಂತೆ, ಡಿ.16 ರಿಂದ 31 ರವರೆಗೆ 600 ಕ್ಯೂಸೆಕ್‌ನಂತೆ, 2025ರ ಜ.01 ರಿಂದ 31 ರವರೆಗೆ 650 ಕ್ಯೂಸೆಕ್‌ನಂತೆ, ಫೆ.01 ರಿಂದ 28 ರವರೆಗೆ 650 ಕ್ಯೂಸೆಕ್‌ನಂತೆ ಮತ್ತು ಮಾ.01 ರಿಂದ 31 ರವರೆಗೆ 700 ಕ್ಯೂಸೆಕ್‌ನಂತೆ ಮತ್ತು ಕುಡಿಯುವ ನೀರಿಗಾಗಿ ಏ.01 ರಿಂದ ಮೇ.31 ರವರೆಗೆ 100 ಕ್ಯೂಸೆಕ್‌ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
* ರಾಯ ಬಸವಣ್ಣ ಕಾಲುವೆ. ಡಿಸೆಂಬರ್ 10 ರಿಂದ 2025ರ ಜ.10 ರವರೆಗೆ ನೀರು ನಿಲುಗಡೆ ಮತ್ತು 2025ರ ಜ.11 ರಿಂದ ಮೇ 31 ರವರೆಗೆ 250 ಕ್ಯೂಸೆಕ್‌ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
* ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆ. ಡಿಸೆಂಬರ್ 1 ರಿಂದ 25 ಕ್ಯೂಸೆಕ್‌ನಂತೆ ಅಥವಾ ಜಲಾಶಯದ ನೀರಿನ ಮಟ್ಟ 1,585 ಅಡಿಗಳವರೆಗೆ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
ರೈತರಲ್ಲಿ ಮನವಿ: ತುಂಗಭದ್ರಾ ಜಲಾಶಯದಲ್ಲಿ ಹಿಂಗಾರು ಹಂಗಾಮಿಗೆ ಲಭ್ಯವಿರುವ ನೀರನ್ನು ಮಿತವ್ಯಯವಾಗಿ ಬಳಸಿ ಅಧಿಕೃತ ಅಚ್ಚುಕಟ್ಟು ಪ್ರದೇಶದಲ್ಲಿ ನಿಗದಿತ ಬೆಳೆಗಳನ್ನು ಮಾತ್ರ ಬೆಳೆಯಲು ಹಾಗೂ ಸಮರ್ಪಕ ನೀರು ನಿರ್ವಹಣೆಗೆ ಇಲಾಖೆಯೊಡನೆ ಸಹಕರಿಸಬೇಕು ಎಂದು ರೈತರಲ್ಲಿ ಮನವಿ ಮಾಡಲಾಗಿದೆ.
ರೈತರು ಅನಧಿಕೃತವಾಗಿ ನೀರು ಪಡೆದು ಭತ್ತ ಹಾಗೂ ಇತರೆ ಬೆಳೆಗಳನ್ನು ಬೆಳೆದಲ್ಲಿ ನೀರಾವರಿ ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸಲಾಗುವುದು, ರೈತರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಮುನಿರಾಬಾದ್ ತುಂಗಭದ್ರಾ ಯೋಜನಾ ವೃತ್ತದ ಕನೀನಿನಿ ಅಧೀಕ್ಷಕ ಅಭಿಯಂತರ ಎಲ್. ಬಸವರಾಜ್ ತಿಳಿಸಿದ್ದಾರೆ.












Click it and Unblock the Notifications