• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅರ್ಜಿ ಸಲ್ಲಿಸಿ 18,000 ಪಡೆಯಿರಿ: 3 ವರ್ಷ ಬಿದಿರು ಬೆಳೆದು 80 ವರ್ಷ ಲಾಭ ಗಳಿಸಿ!

|
Google Oneindia Kannada News

ಹಾವೇರಿ, ಜನವರಿ 6: ಬಿದಿರು ಬೆಳೆದರೆ ಬದುಕು ಬಂಗಾರವಾಗಲಿದೆ, ಲಾಕ್‌ಡೌನ್‌ ಸಂದರ್ಭದಲ್ಲಿ ಕೃಷಿಯಲ್ಲಿ ಇಂಥದೊಂದು ಹೊಸ ಆವಿಷ್ಕಾರವನ್ನು ಕಂಡುಕೊಳ್ಳಲಾಗಿದೆ. ಬಿದಿರು ಬೆಳೆಯುವ ರೈತರ ಉತ್ಸಾಹಕ್ಕೆ ಸರ್ಕಾರವೂ ಸಹಕಾರ ನೀಡುತ್ತಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಪರಿಶಿಷ್ಟ ಪಂಗಡದ ರೈತರು ಬಿದಿರು ಕೃಷಿ ಮಾಡಲು ಸಹಾಯಧನ ಸೌಲಭ್ಯಕ್ಕಾಗಿ ಸರ್ಕಾರದಿಂದ ಅರ್ಜಿ ಆಹ್ವಾನಿಸಲಾಗಿದೆ.

ಪರಿಶಿಷ್ಟ ಪಂಗಡದ ರೈತರು ಬಿದಿರು ಕೃಷಿ ಮಾಡಲು ಪ್ರೋತ್ಸಾಹಿಸಲು ಪ್ರತಿ ಎಕರೆಗೆ ಪ್ರತಿ ವರ್ಷ 18,000 ರೂಪಾಯಿ ಸಹಾಯಧನವನ್ನು ನೀಡಲಾಗುತ್ತದೆ. ಮೂರು ವರ್ಷಗಳವರೆಗೂ ಸರ್ಕಾರದಿಂದ ಈ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ಅರ್ಹ ಪರಿಶಿಷ್ಟ ಪಂಗಡದ ರೈತರು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು 2022ರ ಜನವರಿ 18ರೊಳಗೆ ಹಾವೇರಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ಸಿ ಬ್ಲಾಕ್ ರೂಂ.ನಂಬರ್-38 ದೇವಗಿರಿ ಹಾಗೂ ಆಯಾ ತಾಲೂಕಿನ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಇಲಾಖೆಗೆ ಸಲ್ಲಿಸಬೇಕು.

ಉಪಕಸುಬಾಗಿ ಬಿದಿರಿನ ಕೃಷಿ; ಉಪಕಸುಬಾಗಿ ಬಿದಿರಿನ ಕೃಷಿ; "ಬಿದಿರು ನೀನಾರಿಗಲ್ಲದವಳು..."

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಾಗೂ ಲಾಕ್‌ಡೌನ್‌ನಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚು ಅಡೆತಡೆಗಳು ಎದುರಾಗಿಲ್ಲ. ಇದರ ಮಧ್ಯೆ ಒಂದು ಕಾಲದಲ್ಲಿ ಕಾಡುಬೆಳೆ ಎನಿಸಿಕೊಂಡಿದ್ದ ಬಿದಿರು ಬೆಳೆಯುವ ಹೊಸ ಆವಿಷ್ಕಾರವನ್ನು ಕಂಡುಕೊಳ್ಳಲಾಗಿದೆ. ಹಾಗಿದ್ದರೆ, ಬಿದಿರು ಬೆಳೆಯಿಂದ ಆಗುವ ಲಾಭವೇನು?, ಬಿದಿರು ಬೆಳೆಗೆ ಸಹಾಯ ಧನಕ್ಕಾಗಿ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ?, ರೈತರು ಬಿದಿರು ಕೃಷಿಯನ್ನು ಮಾಡುವುದಕ್ಕೆ ಏಕೆ ಹಿಂಜರಿಯುತ್ತಾರೆ?, ಒಂದು ಬಾರಿ ಬಿದಿರು ಬೆಳೆಯುವ ರೈತ ಎಷ್ಟು ವರ್ಷಗಳವರೆಗೆ ಅದರಿಂದ ಲಾಭವನ್ನು ಸಂಪಾದಿಸಬಹುದು ಎಂಬಿತ್ಯಾದಿ ಪ್ರಶ್ನೆಗಳಿಗೆ ಒಂದೇ ವರದಿಯಲ್ಲಿ ಉತ್ತರವನ್ನು ತಿಳಿಯಿರಿ.

ಅರ್ಜಿ ಜೊತೆ ಯಾವೆಲ್ಲ ದಾಖಲೆಗಳು ಅತ್ಯಗತ್ಯ?

ಅರ್ಜಿ ಜೊತೆ ಯಾವೆಲ್ಲ ದಾಖಲೆಗಳು ಅತ್ಯಗತ್ಯ?

ಬಿದಿರು ಬೆಳೆಯನ್ನು ಬೆಳೆಯುವ ರೈತರು ರಾಜ್ಯ ಸರ್ಕಾರದಿಂದ ನೀಡುವ ಸಹಾಯಧನವನ್ನು ಪಡೆಯುವುದಕ್ಕೆ ನಿಗದಿತ ಅರ್ಜಿಯನ್ನು ಭರ್ತಿ ಮಾಡಬೇಕು. ಈ ಅರ್ಜಿಯ ಜೊತೆಗೆ ಪರಿಶಿಷ್ಟ ಪಂಗಡದ ರೈತರು ಜಮೀನು ಹೊಂದಿರುವ ಆರ್.ಟಿ.ಸಿ., ಅರಣ್ಯ ಹಕ್ಕು ಅಧಿನಯಮದಡಿ ಹಕ್ಕುಪತ್ರ ಹಾಗೂ ಜಾತಿಪ್ರಮಾಣಪತ್ರದ ಝೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು. ಹೀಗೆ ಅರ್ಜಿ ಸಲ್ಲಿಸಿ ಅಂಗೀಕೃತಗೊಂಡ ಬಿದಿರು ಬೆಳೆಯುವ ರೈತರಿಗೆ ಪ್ರತಿ ವರ್ಷ 18,000 ರೂಪಾಯಿ ಸಹಾಯಧನದಂತೆ ಮೂರು ವರ್ಷಗಳವರೆಗೂ ಸಹಾಯಧನವನ್ನು ನೀಡಲಾಗುತ್ತದೆ.

ಬಿದಿರು ಕಾಡು ಸಸ್ಯ ಎಂಬ ವಾದ ಸರಿಯಲ್ಲ

ಬಿದಿರು ಕಾಡು ಸಸ್ಯ ಎಂಬ ವಾದ ಸರಿಯಲ್ಲ

ಭಾರತವು ಒಂದು ಕಾಲದಲ್ಲಿ 60 ರಿಂದ 70 ಟನ್ ಬಿದಿರನ್ನು ಚೀನಾ ಮತ್ತು ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳುತ್ತಿತ್ತು. ದೇಶದ ರೈತರಲ್ಲಿ ಬಿದಿರು ಕೇವಲ ಒಂದು ಕಾಡು ಸಸ್ಯ ಎಂಬ ಪರಿಕಲ್ಪನೆ ಮೂಡಿದೆ. ಆದರೆ ಅದು ಸುಳ್ಳಾಗಿದ್ದು, ಇಂದು ಬಿದಿರು ಬೆಳೆದ ರೈತರ ಬಾಳು ಬಂಗಾರವಾಗುತ್ತಿದೆ. ಬಿದಿರು ಬುಟ್ಟಿ, ಮರ, ಏಣಿ, ಚಾಪೆ, ಪರದೆ ಸೇರಿದಂತೆ ಹಲವಾರು ಪೀಠೋಪಕರಣಗಳನ್ನು ತಯಾರಿಸಲಾಗುತ್ತಿದೆ. ಈ ಹಿನ್ನೆಲೆ ಬಿದಿರು ಬೆಳೆಗೆ ಹೆಚ್ಚಿನ ಬೇಡಿಕೆಯಿದ್ದು, ಬಿದಿರು ಹಸಿರು ಹೊನ್ನು ಎಂದು ಕರೆಸಿಕೊಳ್ಳುತ್ತದೆ.

ಬಿದಿರು ಬೆಳೆಯಲು ಯಾವುದೇ ತೊಡಕಿಲ್ಲ

ಬಿದಿರು ಬೆಳೆಯಲು ಯಾವುದೇ ತೊಡಕಿಲ್ಲ

ಕಾಡು ಸಸಿ ಎಂದು ಕರೆಸಿಕೊಳ್ಳುತ್ತಿದ್ದ ಬಿದಿರನ್ನು ವಾಣಿಜ್ಯ ಬೆಳೆ ಎಂದು ಕಂಡುಕೊಂಡವರು ತೀರಾ ಕಡಿಮೆಯಾಗಿದ್ದಾರೆ. ಏಕೆಂದರೆ ಈ ಹಿಂದೆ ದೇಶದಲ್ಲಿ ಬಿದಿರು ಕಡಿಯಲು, ಸಾಗಿಸಲು ಹಾಗೂ ಮಾರಾಟ ಮಾಡುವುದಕ್ಕೆ ಸರ್ಕಾರದಿಂದ ಪರವಾನಗಿ ಪಡೆದುಕೊಳ್ಳುವುದು ಕಡ್ಡಾಯವಾಗಿತ್ತು. ಆದರೆ ಸರ್ಕಾರ ಬಹಳಷ್ಟು ವರ್ಷಗಳ ಹಿಂದೆಯೇ ಈ ನಿಯಮವನ್ನು ತೆರವುಗೊಳಿಸಿದೆ. ಯಾರು ಬೇಕಾದರೂ ಬಿದಿರು ಬೆಳೆಯನ್ನು ಬೆಳೆಯುವುದಕ್ಕೆ ಅವಕಾಶ ನೀಡಲಾಗುತ್ತಿದೆ. ಅಷ್ಟೇ ಅಲ್ಲದೇ ಸರ್ಕಾರದಿಂದ ಸಹಾಯಧನವನ್ನೂ ಸಹ ನೀಡಲಾಗುತ್ತಿದೆ.

ಬಿದಿರು ಬೆಳೆಯಲು ಹೆಸರು ನೋಂದಾಯಿಸಿದರೆ ಉಚಿತ ತರಬೇತಿ

ಬಿದಿರು ಬೆಳೆಯಲು ಹೆಸರು ನೋಂದಾಯಿಸಿದರೆ ಉಚಿತ ತರಬೇತಿ

ಭಾರತದಲ್ಲಿ ಬಿದಿರು ಬೆಳೆಯಲು ಬಯಸುವ ರೈತರು ರಾಷ್ಟ್ರೀಯ ಬಿದಿರು ಮಿಷನ್ ಅಥವಾ ಅರಣ್ಯ ಇಲಾಖೆಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಅರ್ಜಿಗಳನ್ನು ಪರಿಶೀಲಿಸಿ ಹಿರಿತನದ ಆಧಾರದಲ್ಲಿ ರೈತರಿಗೆ ಬಿದಿರಿನ ಸಸಿಗಳನ್ನು ಇಲಾಖೆಯಿಂದಲೇ ವಿತರಿಸಲಾಗುತ್ತದೆ. ಇದರ ಜೊತೆಗೆ ಬಿದಿರು ಬೆಳೆಯುವುದಕ್ಕೆ ಅಗತ್ಯವಿರುವ ತರಬೇತಿ ಹಾಗೂ ಪ್ರಾತ್ಯಕ್ಷಿಕೆಯನ್ನು ನೀಡಲಾಗುತ್ತದೆ.

ಹೈಬ್ರೀಡ್ ಬಿದಿರು ಸಸಿಗಳಲ್ಲಿ ಮುಳ್ಳು ತೀರಾ ಕಡಿಮೆ

ಹೈಬ್ರೀಡ್ ಬಿದಿರು ಸಸಿಗಳಲ್ಲಿ ಮುಳ್ಳು ತೀರಾ ಕಡಿಮೆ

ಸಾಮಾನ್ಯವಾಗಿ ದೇಶದಲ್ಲಿನ ಬಿದಿರಿನಲ್ಲಿ 1400ಕ್ಕೂ ಹೆಚ್ಚು ಜಾತಿಗಳಿವೆ. ಈ ಪೈಕಿ ಪೆಳೆ ಎಂಬ ಬಿದಿರಿನಲ್ಲಿ ಹೆಚ್ಚು ಮುಳ್ಳುಗಳು ಇರುವುದರಿಂದ ರೈತರು ಅದನ್ನು ಬೆಳೆಯುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಇದನ್ನು ಅರಿತುಕೊಂಡು ಕೃಷಿ ವಿಜ್ಞಾನಿಗಳು ಅಂಗಾಂಶ ಕೃಷಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಈ ಬಿದಿರಿನ ಬೆಳೆಯಲ್ಲಿ ಅಷ್ಟಾಗಿ ಮುಳ್ಳುಗಳು ಇರುವುದಿಲ್ಲ. ಈ ಅಂಗಾಂಶವನ್ನು ಹಾಕಿ ಕೃಷಿ ಮಾಡುವ ರೈತರಿಗೆ ಮಾತ್ರ ಸರ್ಕಾರವು ಸಹಾಯಧನವನ್ನು ನೀಡುತ್ತಿದೆ.

ದೇಶದಲ್ಲಿ ಬಿದಿರು ಬೆಳೆಯುವ ವಿಧಾನ ಹೇಗೆ?

ದೇಶದಲ್ಲಿ ಬಿದಿರು ಬೆಳೆಯುವ ವಿಧಾನ ಹೇಗೆ?

ಬಿದಿರು ಒಂದು ಪೂರ್ಣ ಪ್ರಮಾಣದ ಬೆಳೆಯೂ ಆಗಬಹುದು, ಇಲ್ಲವೇ ನಿಮ್ಮ ಹೊಲದ ಬದುವಿನಲ್ಲಿ ಬೇಲಿಯ ರೀತಿ ರಕ್ಷಣೆಗಾಗಿಯೂ ಬೆಳೆಯುವುದಕ್ಕೆ ಸಾಧ್ಯವಿದೆ. ಪೂರ್ಣ ಪ್ರಮಾಣದ ಬೆಳೆಯಾಗಿ ಬೆಳೆಯುವ ಸಂದರ್ಭದಲ್ಲಿ ಬಿದಿರು ಬೆಳೆಯ ಪ್ರತಿ ಗಿಡದ ಮಧ್ಯೆ 6 ಅಡಿ ಅಂತರವಿರಬೇಕು ಹಾಗೂ ಪ್ರತಿ ಸಾಲಿನ ನಡುವೆ 10 ಅಡಿ ಅಂತರವನ್ನು ಕಾಯ್ದುಕೊಂಡಿರಬೇಕು. ತದನಂತರದಲ್ಲಿ ಬಿದಿರು ಬೆಳೆಯ ನಡುವಿನ ಟ್ರಂಚ್ ತೆಗೆದು ನೀರು ಹರಿಸಬೇಕು. ಮುಖ್ಯವಾಗಿ ಬೇಸಿಗೆ ಅವಧಿಯಲ್ಲಿ ಬೆಳೆಯ ಬುಡದಲ್ಲಿ ನೀರು ನಿಲ್ಲುವಂತೆ ನೋಡಿಕೊಳ್ಳಬೇಕು. ಇನ್ನು ಬಿದರಿನ ಮಧ್ಯದಲ್ಲಿ ಬೇರೆ ಯಾವುದೇ ಬೆಳೆಯನ್ನು ಬೆಳೆಯುವಂತಿಲ್ಲ.

3 ವರ್ಷ ಬಿದಿರು ಬೆಳೆದು 80 ವರ್ಷ ಲಾಭ ಸಂಪಾದಿಸಿ

3 ವರ್ಷ ಬಿದಿರು ಬೆಳೆದು 80 ವರ್ಷ ಲಾಭ ಸಂಪಾದಿಸಿ

ಸಾಮಾನ್ಯವಾಗಿ ಒಂದು ಎಕರೆ ಪ್ರದೇಶದಲ್ಲಿ 900 ರಿಂದ 1,000 ಬಿದಿರಿನ ಗಿಡಗಳನ್ನು ಬೆಳೆಯಬಹುದು. ಒಂದು ಸಾವಿರ ಬಿದಿರಿನ ಗಿಡಗಳಿಂದ 40 ಟನ್ ಬಿದಿರನ್ನು ತೆಗೆಯಬಹುದು. ಒಂದು ಬಾರಿ ನಾಟಿ ಮಾಡಿರುವ ಬಿದಿರು ಮೂರು ವರ್ಷಗಳ ನಂತರದಲ್ಲಿ ಫಲ ಕೊಡುವುದಕ್ಕೆ ಆರಂಭಿಸುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆಜಿ ಬಿದಿರಿಗೆ 100 ರೂಪಾಯಿಗಿಂತ ಹೆಚ್ಚಿದೆ. ಹಳೆಯ ಬಿದಿರು ಮತ್ತು ತಳಿಯ ಮೇಲೆ ಅದರ ಬೆಲೆ ನಿರ್ಧಾರವಾಗುತ್ತದೆ.

ಮೊದಲ ವರ್ಷದಲ್ಲಿಯೇ ಬಿದಿರು ಬೆಳೆಯಿಂದ 2 ರಿಂದ 5 ಲಕ್ಷ ರೂಪಾಯಿವರೆಗೂ ಲಾಭ ಗಳಿಸಲು ಸಾಧ್ಯವಿದೆ. ಮೂರು ವರ್ಷಗಳು ಬೆಳೆದ ಬಿದಿರು ಮುಂದಿನ 80 ವರ್ಷಗಳವರೆಗೂ ನಿರಂತರವಾಗಿ ಆದಾಯವನ್ನು ನೀಡುತ್ತದೆ. ಇನ್ನು ನೀವು ಬೆಳೆದ ಬಿದಿರು ಮಾರಾಟಕ್ಕೆ ಹೆಚ್ಚು ಕಷ್ಟಪಡಬೇಕಾಗಿಲ್ಲ, ಪೀಠೋಪಕರಣ ಕಂಪನಿಗಳು ರೈತರ ಬಳಿಗೆ ತೆರಳಿ ಬಿದಿರು ಖರೀದಿಸುತ್ತವೆ.

English summary
Haveri: Tribes Welfare Department in collaboration with Forest Department Invites Application for subsidy for bamboo cultivation. ST people can get Rs 18000/acre for 3 years. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X