ಸರ್ಕಾರದ ವಿರುದ್ಧ ಬಟ್ಟೆ ಕಳಚಿ ರೈತರ ಪ್ರತಿಭಟನೆ
ಬೆಂಗಳೂರು, ಡಿ.3: ಕರ್ನಾಟಕದ ರೈತರ ಸಮಸ್ಯೆ, ವಿನೂತನ ಪ್ರತಿಭಟನೆಗಳು ನಡೆದಿರುವ ಸಂದರ್ಭದಲ್ಲೇ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ರೈತರು ಬಟ್ಟೆ ಕಳಚಿ ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶ್ರೀಲಂಕಾದ ರೈತರು ಲಂಗೋಟಿ ಮಾದರಿ ಬಟ್ಟೆ ಧರಿಸಿ ಮೆರವಣಿಗೆ ನಡೆಸಿದ್ದಾರೆ.
ಸುಮಾರು 959,000 ರೈತರನ್ನು ಗುರುತಿಸಲಾಗಿದ್ದು, 6 ಪ್ರಮುಖ ಬೇಡಿಕೆಯನ್ನ್ ಉಸರ್ಕಾರಕ್ಕೆ ಕಳಿಸಲಾಗಿದೆ ಎಂದು ಸಿಲೋನ್ ರೈತ ಸಂಘಟನೆಯ ರಾಷ್ಟ್ರೀಯ ಸಂಚಾಲಕ ನಮಲ್ ಕರುಣರತ್ನೆ ಹೇಳಿದ್ದಾರೆ. ಕರ್ನಾಟಕದಲ್ಲಿ ಇರುವಂತೆ ಅಲ್ಲೂ ಕೂಡಾ ಬೆಂಬಲ ಬೆಲೆ ಭೂತ ಕಾಡುತ್ತಿದೆ. ಭತ್ತಕ್ಕೆ ಕನಿಷ್ಠ 40 ರು ಕಿಲೋ ದರ ನಿಗದಿ ಪಡಿಸುವಂತೆ ರೈತರು ಆಗ್ರಹಿಸಿದ್ದಾರೆ.
ಬೆಳೆ ವಿಮೆ, ನಿವೃತ್ತಿ ಪಿಂಚಣಿ, ತರಕಾರಿ, ಹಣ್ಣು ಶೇಖರಣೆಗಾಗಿ ಶಿಥಲೀಕರಣ ಘಟಕ ಸ್ಥಾಪನೆ, ಬೀಜ ಸಂಸ್ಕರಣ ಘಟಕ, ಆನೆ ಹಾವಳಿ ತಡೆಗಟ್ಟಲು ವಿದ್ಯುತ್ ಬೇಲಿ ಅಳವಡಿಕೆ ಸಿಲೋನ್ ರೈತರ ಪ್ರಮುಖ ಬೇಡಿಕೆಯಾಗಿದೆ. ಇತ್ತೀಚಿನ ಬಜೆಟ್ ನಲ್ಲಿ ಈ ಬಗ್ಗೆ ಸರ್ಕಾರ ಪ್ರಸ್ತಾಪ ಮಾಡಿಲ್ಲ. ಮುಂದಿನ ವರ್ಷದಿಂದ 63 ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ ನೀಡುವ ಭರವಸೆ ನೀಡಿದೆ.
ರೈತ ಪರಂಪರೆಯಿಂದ ಬಂದಿದ್ದೇನೆ ಎಂದು ಹೇಳಿಕೊಳ್ಳುವ ಅಧ್ಯಕ್ಷ ಕುರಹಾನ್ ಸತಾಕ ಅವರು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸಿಲೋನ್ ರೈತ ಸಂಘಟನೆ ಆರೋಪಿಸಿದೆ. ಉಳಿದಂತೆ ಹುಬ್ಬಳ್ಳಿ, ಬೆಂಗಳೂರಿನ ಕಾರ್ತಿಕ ದೀಪೋತ್ಸವ, ಮುಂಬೈನಲ್ಲಿ ಜಲಸೇನೆ ದಿನಾಚರಣೆ, ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ಪೂಜೆ ಮಾಡಿದ ಚಿತ್ರಗಳು ಇಲ್ಲಿವೆ...

ರೈತರ ಪ್ರತಿಭಟನೆ
ರೈತ ಪರಂಪರೆಯಿಂದ ಬಂದಿದ್ದೇನೆ ಎಂದು ಹೇಳಿಕೊಳ್ಳುವ ಅಧ್ಯಕ್ಷ ಕುರಹಾನ್ ಸತಾಕ ಅವರು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸಿಲೋನ್ ರೈತ ಸಂಘಟನೆ ಆರೋಪಿಸಿದೆ.

ಹುಬ್ಬಳ್ಳಿಯಲ್ಲಿ
ಕರ್ನಾಟಕದ ಹುಬ್ಬಳ್ಳಿಯ ಸಿದ್ದಾರೂಢ ಮಠದಲ್ಲಿ ಸೋಮವಾರ(ಡಿ.2) ನಡೆದ ಕಾರ್ತಿಕೋತ್ಸವದ ಚಿತ್ರ

ಬೆಂಗಳೂರಿನಲ್ಲಿ
ಬೆಂಗಳೂರಿನ ಸಂಪಗಿರಾಮನಗರದ ಶಿವನ ದೇಗುಲದಲ್ಲಿ ಕಾರ್ತಿಕ ಸೋಮವಾರದಂದು ದೀಪೋತ್ಸವ. PTI Photo by Shailendra Bhojak

ಸೋನಿಯಾ ಪೂಜೆ
ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಹರಾಜ್ ಗಂಜ್ ಅಕ್ಬರ್ ಗಂಜ್ ರೈಲ್ವೇ ಮಾರ್ಗಕ್ಕೆ ಶಂಕುಸ್ಥಾಪನೆ ಮಾಡಿ ಪೂಜೆ ಸಲ್ಲಿಸಿದರು. PTI Photo by Nand Kumar

ಮುಂಬೈನಲ್ಲಿ ನೇವಿ ಡೇ
ಮುಂಬೈನಲ್ಲಿ ಭಾರತೀಯ ಜಲಸೇನೆ ತಂಡದಿಂದ ಜಲಸೇನಾ ದಿನಾಚರಣೆ ಅಂಗವಾಗಿ ಪ್ರದರ್ಶನ. PTI Photo by Shashank Parade

ಮುಂಬೈನಲ್ಲಿ ನೇವಿ ಡೇ
ಮುಂಬೈನಲ್ಲಿ ಭಾರತೀಯ ಜಲಸೇನೆ ತಂಡದಿಂದ ಜಲಸೇನಾ ದಿನಾಚರಣೆ ಅಂಗವಾಗಿ ಪ್ರದರ್ಶನ












Click it and Unblock the Notifications