ಗೋ ಹತ್ಯೆಗಿಂತ ಚರ್ಚಿಸಲು ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ - ದೇವೇಗೌಡ

"ಪರಿಸ್ಥಿತಿ ಬದಲಾಗಿದೆ. ರೈತರು, ಬಡವರು ಹಿಂದಿನಂತೆ ಪಶುಪಾಲನೆ ಮಾಡಲು ಈಗ ಸಾಧ್ಯವಿಲ್ಲ. ಹಾಗೇ ಈಗ ಅಂದಿನಂತೆ ಗೋಮಾಳಗಳಿಲ್ಲ. ಹೀಗಾಗಿ ವಯಸ್ಸಾದ ದನಗಳನ್ನ ಸಾಕುವುದು ತುಂಬಾ ಕಷ್ಟ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮುಂದುವರೆಯಬೇಕು," ದೇವೇಗೌಡ.

ಬೆಂಗಳೂರು, ಮೇ 27: ಗೋಹತ್ಯಾ ನಿಷೇಧ ಕಾನೂನು ಜಾರಿ ಸಂಬಂಧ ಮಾಜಿ ಪ್ರಧಾನಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಗೋ ಹತ್ಯೆ ಹೊರತುಪಡಿಸಿ ಚರ್ಚಿಸಲು ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಎಂದು ಹೇಳಿದ್ದಾರೆ. ಈ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸುತ್ತೇನೆ ಎಂದೂ ದೇವೇಗೌಡರು ತಿಳಿಸಿದ್ದಾರೆ.

ಈಗ ಪರಿಸ್ಥಿತಿ ಬದಲಾಗಿದೆ. ರೈತರು, ಬಡವರು ಹಿಂದಿನಂತೆ ಪಶುಪಾಲನೆ ಮಾಡಲು ಈಗ ಸಾಧ್ಯವಿಲ್ಲ. ಹಾಗೇ ಈಗ ಅಂದಿನಂತೆ ಗೋಮಾಳಗಳಿಲ್ಲ. ಹೀಗಾಗಿ ವಯಸ್ಸಾದ ದನಗಳನ್ನ ಸಾಕುವುದು ತುಂಬಾ ಕಷ್ಟ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮುಂದುವರೆಯಬೇಕು ಎಂದು ದೇವೇಗೌಡರು ಹೇಳಿದ್ದಾರೆ. [ಗೋವುಗಳಿಗೆ ಬಣ್ಣ ಹಚ್ಚುವುದು, ಪ್ರಾಣಿ ಅಲಂಕಾರ ಇನ್ನು ಅಪರಾಧ]

There are several issues to discuss rather cow slaughter -HD Deve Gowda

ಗೋ ಹತ್ಯೆ ಎನ್ನುವುದು ಸಂಕೀರ್ಣವಾದುದು. ಇಲ್ಲಿ ಮುಸಲ್ಮಾನರ ಆಹಾರ ಕ್ರಮದ ಬಗೆಗೂ ಗಮನಹರಿಸಬೇಕಾಗುತ್ತದೆ. ಇವತ್ತು ವಿದೇಶಗಳಿಗೂ ಗೋಮಾಂಸ ರಫ್ತಾಗುತ್ತದೆ ಇದನ್ನ ಹೇಗೆ ತಡೆಯುವುದು? ಗುಜಾರಾತ್ ಬಂದರಿನಿಂದಲೇ ನಿಂದಲೇ ಬಹುತೇಕ ಗೋಮಾಂಸ ರಪ್ತಾಗುತ್ತದೆ. ಹೀಗಾಗಿ ಎಲ್ಲವನ್ನೂ ಪರಿಶೀಲಿಸಿ ಮುಂದುವರೆಯಬೇಕು ಎಂದಿದ್ದಾರೆ. [ಗೋಹತ್ಯೆ ನಿಷೇಧಕ್ಕೆ ಕೇಂದ್ರ ಸರಕಾರ ಮಹತ್ವದ ನಿರ್ಧಾರ]

ನಾನೇನಿದ್ದರೂ ಕಾನೂನನ್ನ ನೋಡಿ ಮುಂದಿನ ವಿಚಾರ ಮಾತನಾಡುತ್ತೇನೆ ಎಂದು ದೇವೇಗೌಡರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+